Homeಮುಖಪುಟಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ ಈಸ್ ಬ್ಯಾಕ್

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ ಈಸ್ ಬ್ಯಾಕ್

- Advertisement -
- Advertisement -

ಪದ್ಮಾವತಿ ಈಸ್ ಬ್ಯಾಕ್

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ. ಸ್ಯಾಂಡಲ್‍ವುಡ್ ಅಂಗಳಲ್ಲಿ ಒಳ್ಳೆ ನೇಮು ಫೇಮು ಗಿಟ್ಟಿಸಿಕೊಂಡಿದ್ದ ರಮ್ಯಾ, ರಾಜ್ಯಭಾರ ಮಾಡೋ ಮನಸ್ಸಾಗಿ ಚಿತ್ರರಂಗಕ್ಕೆ ಗುಡ್‍ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಎಂಟ್ರಿಯಲ್ಲೇ ಜಯಭೇರಿ ಬಾರಿಸಿದ ರಮ್ಯಾಗೆ ಆರು ತಿಂಗಳಷ್ಟೇ ರಾಜಕೀಯ ಅಧಿಕಾರ ಅನುಭವಿಸೋ ಚಾನ್ಸ್ ಸಿಕ್ಕಿದ್ದು. ಎರಡನೇ ಇನ್ನಿಂಗ್ಸ್‍ನಲ್ಲಿ ಸೋಲುಂಡ ಮೋಹಕ ತಾರೆ ರಾತ್ರೋರಾತ್ರಿ ಲಂಡನ್‍ಗೆ ಹಾರಿದರು. ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷೆ ಪಟ್ಟ ಗಿಟ್ಟಿಸಿಕೊಂಡು ಕಾಂಟ್ರೋವರ್ಸಿ ಪೋಸ್ಟ್ ಮೂಲಕ ಆಗಾಗ್ಗೆ ಟ್ರೋಲ್ ಆಗುತ್ತಿದ್ದ ರಮ್ಯಾ ‘ಅಲ್ಲಿ ಸಲ್ಲದವರು ಎಲ್ಲಿಯೂ ಸಲ್ಲರು’ ಎಂಬಂತೆ ಐಟಿ ಸೆಲ್‍ಗೂ ಗುಡ್‍ಬೈ ಹೇಳಿ ನಾಪತ್ತೆಯಾಗಿದ್ದರು. ರಾಜಕೀಯ ಜಂಜಾಟಕ್ಕಿಂತ ಸಿನಿಮಾ ಮಾಡ್ಕೊಂಡ್, ಅಭಿಮಾನಿಗಳಿಗೆ ಆಟೋಗ್ರಾಫ್ ಹಾಕೊಂಡ್ ಇರೋದೆ ವಾಸಿ ಅನ್ನೋದನ್ನ ಅರಿತುಕೊಂಡು ಈಗಲೂ ಸಿನಿಮಾ ಆಫರ್ ಬರ್ತಾಯಿವೆ, ಸಿನಿಮಾ ಮಾಡ್ತಿನಿ ಅಂತ ಹೇಳ್ತಿದ್ದಾರೆ. ಸದ್ಯಕ್ಕೆ ಈಗಾಗಲೇ ಸುಮಾರು ವರ್ಷಗಳ ಹಿಂದೆ ಚಿತ್ರೀಕರಣಗೊಂಡಿದ್ದ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರೋ ‘ದಿಲ್ ಕಾ ರಾಜಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಂತೂ ಆಫ್ಟರ್ ಲಾಂಗ್ ಟೈಮ್ ಸಿನಿಮಾ ರಂಗಕ್ಕೆ ರಮ್ಯಾ ಅಭಿನಯದ ಸಿನಿಮಾ ರಿಲೀಸ್ ಆಗ್ತಿದೆ. ಆದರೆ ಮೋದಿ, ಬಿಜೆಪಿಗಳ ವಿರುದ್ಧ ಟೀಕಿಸಿ ಭಾಜಪಾ ಭಜನಾ ಮಂಡಳಿಯ ವಿರೋಧ ಕಟ್ಟಿಕೊಂಡಿರೋ ಕೆಂಪೇಗೌಡ ಕಟ್ಟಿದ್ ಊರಿನ ಪದ್ಮಾವತಿಯನ್ನ ಅಭಿಮಾನಿಗಳು ಅದ್ಯಾವ ರೀತಿ ವೆಲ್‍ಕಮ್ ಮಾಡ್ತಾರೋ ನೋಡಬೇಕು.

ಹಿರಿಯರನ್ನು ಮರೀತಿದ್ಯಾ ಸ್ಯಾಂಡಲ್‍ವುಡ್

ಕನ್ನಡ ಚಿತ್ರರಂಗದಲ್ಲಿ ಒಂದೆಡೆ ನಾಯಕ ನಟರು ಸ್ಟಾರ್‍ಗಳಾದ್ರೆ, ಮತ್ತೊಂದೆಡೆ ಕಾಮಿಡಿ ನಟರೇ ಹೀರೋಗಳಿಗಿಂತ ಸ್ಟಾರ್‍ಗಳಾಗಿ ಮಿಂಚುತ್ತಿದ್ದರು. ಅಭಿಮಾನಿಗಳು ಎಷ್ಟೋ ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ಕಾಮಿಡಿ ನಟರಿದ್ದಾರೆಂಬ ಕಾರಣಕ್ಕೆ ಸಿನಿಮಾ ನೋಡಲು ಹೋಗುತ್ತಿದ್ದರು. ಈಗಲೂ ಆ ಟ್ರೆಂಡ್ ಹಾಗೇ ಉಳಿದಿದೆ. ಇಂತಹ ಟ್ರೆಂಡ್ ಕ್ರಿಯೇಟ್ ಮಾಡಿದವರಲ್ಲಿ ಹಾಸ್ಯ ನಟ ದೊಡ್ಡಣ್ಣ, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ ಮೊದಲಿಗರು. ಸ್ಯಾಂಡಲ್‍ವುಡ್ ಸಿನಿಮಾಗಳಲ್ಲಿ ಹಾಸ್ಯದ ಔತಣ ನೀಡಿದ್ದ ಇಂತಹ ಪ್ರತಿಭೆಗಳು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದು ಹೋಗಿವೆ. ಹಾಗೊಮ್ಮೆ ಹೀಗೊಮ್ಮೆ ಕಾಣಸಿಗುವ ನಟನೆಂದರೆ ಅದು ದೊಡ್ಡಣ್ಣ ಮಾತ್ರ. ಉಳಿದವರು ಇದ್ದಾರೆ ಎಂಬುದಕ್ಕೆ ಕುರುಹೂ ಇಲ್ಲದಷ್ಟು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅಂದಹಾಗೆ ‘ರಾಜಲಕ್ಷ್ಮೀ’ ಟೈಟಲ್‍ನ ಸಿನಿಮಾದಲ್ಲಿ ನಟಿಸುತ್ತಿರುವ ಟೆನ್ನಿಸ್ ಕೃಷ್ಣರದ್ದೂ ಇದೇ ಮಾತು. ಕನ್ನಡ ಇಂಡಸ್ಟ್ರಿಯಲ್ಲಿ ಹಳಬರಿಗೆ ಅವಕಾಶವಿಲ್ಲ. ವಯಸ್ಸಾಗ್ತಿದ್ದಂತೆ ಮೂಲೆಗೆ ತಳ್ಳಿಬಿಡುತ್ತಾರೆ. ಅಭಿಮಾನಿಗಳೇ ನೀವು ಸಿನಿಮಾದಲ್ಲಿ ಕಾಣಸಿಗುತ್ತಿಲ್ಲವಲ್ಲಾ, ಯಾಕೆ ಎಂದು ಕೇಳುತ್ತಾರೆ. ಆದರೆ ಸಿನಿಮಾ ಮಾಡೋರಿಗೆ ಹಿರಿಯರ ಅವಶ್ಯಕತೆ ಇಲ್ಲದಂತಾಗಿದೆ ಅಂತಾರೆ ಟೆನ್ನಿಸ್.

ಲತಾ ಮಂಗೇಶ್ಕರ್ ಆರೋಗ್ಯಸ್ಥಿತಿ ಗಂಭೀರ

ಗಾಯನ ಕ್ಷೇತ್ರದಲ್ಲಿ ಖ್ಯಾತಿ ಪಡೆದು ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಗಾಯಕಿ ಲತಾ ಮಂಗೇಶ್ಕರ್.
90 ವಸಂತಗಳನ್ನು ದಾಟಿರುವ ಲತಾ ಮಂಗೇಶ್ಕರ್ ಉಸಿರಾಟದ ಸಮಸ್ಯೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ರೂಲರ್ ಈಸ್ ದ ಮಾಡೆಲ್

ಈಗಿನ ಜನರೇಷನ್ ಹೈಕ್ಳಿಗೆ ಸಿನಿಮಾ ಸ್ಟಾರ್‍ಗಳೇ ಯೂತ್ ಐಕಾನ್‍ಗಳು. ಯಾವುದೇ ಹುಡಗನ್ನ ಕೇಳಿದ್ರು ಅವರು ಯಾವುದಾದ್ರು ಒಬ್ಬ ನಟನ ಹೆಸರೇಳಿ ಅವನೇ ನಮ್ಮ ರೋಲ್ ಮಾಡಲ್ ಅಂತ ಹೇಳ್ತಾರೆ. ಹಂಗೇನೇ ಸಿನಿಮಾ ಸ್ಟಾರ್‍ಗಳಿಗೂ ಯಾರಾದ್ರು ಒಬ್ರು ರೋಲ್ ಮಾಡಲ್‍ಗಳು ಇದ್ದೇಯಿರ್ತಾರೆ. ಸದ್ಯಕ್ಕೆ ಮ್ಯಾಟ್ರು ಏನಪ್ಪಾ ಅಂದ್ರೆ. ತನ್ನ ಪ್ರತಿ ಸಿನಿಮಾದಲ್ಲೂ ಒಬ್ಬೊಬ್ಬರ ಹೆಸರೇಳ್ಕಂಡು ಬೆಳೆದು ಬಂದ ರಾಕಿಂಗ್ ಸ್ಟಾರ್ ಯಶ್‍ನ ರೋಲ್ ಮಾಡೆಲ್ ಯಾರು ಅನ್ನೋದು. ರಾಮಾಚಾರಿ ಸಿನಿಮಾದಲ್ಲಿ ವಿಷ್ಣು ಟ್ಯಾಟೂ ಹಾಕಂಡ್ ವಿಷ್ಣು ಅಭಿಮಾನಿಗಳನ್ನೂ, ಗಜಕೇಸರಿಯಲ್ಲಿ ರಾಜ್‍ಕುಮಾರ್ ಅಭಿಮಾನಿಗಳನ್ನೂ, ಡ್ರಾಮಾ ಸಿನಿಮಾದಲ್ಲಿ ಅಂಬಿ ಜೊತೆ ಆ್ಯಕ್ಟ್ ಮಾಡಿದ ನಂತರ ಅಂಬಿ ಅಣ್ಣ ಅಂತ ಅಂಬಿಯ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡ ಯಶ್ ಅಂಬಿ ಇರುವವರೆಗೂ ಅಂಬಿಯೇ ತನ್ನ ರೋಲ್ ಮಾಡೆಲ್ ಎಂಬಂತೆ ಹೇಳಿಕೊಳ್ಳುತ್ತಿದ್ದರು. ಇವಾಗ ಇದ್ದಕ್ಕಿದ್ದಂಗೆ ರೋಲ್ ಮಾಡಲ್ ಚೇಂಜ್ ಮಾಡ್ಕಂಡಿರೋ ಯಶ್, ನಿಮ್ಮ ಸ್ಫೂರ್ತಿ ಯಾರು ಅಂದ್ರೆ ಮೋದಿ ಅಂದ್ಬುಟ್ಟಿದ್ದಾರೆ. ಅಂದಹಾಗೆ 2014ರಲ್ಲಿ ಮೋದಿ ಅಧಿಕಾರಕ್ಕೆ ಬರೋಕಿಂತ ಮುಂಚೆ ಮೋದಿ ಗೊತ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಸದ್ಯಕ್ಕೆ ಎಲ್ಲರನ್ನೂ ಸೆಳೀತಿರೋ ಮೋದಿನೇ ನನ್ನ ರೋಲ್ ಮಾಡ್ಲು ಅಂತ ಯಶ್ ಹೊಗುಳ್ತಾಯಿರೋದು ನೋಡಿದ್ರೆ ಅಂಬಿ ಮೇಲಿನ ಅಭಿಮಾನ ಕಡ್ಮೆ ಆಗೋಯ್ತಾ ಅನ್ನುಸ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...