Homeನಿಜವೋ ಸುಳ್ಳೋ‘ನ್ಯಾಯಾಧೀಶರೇ ಆರೋಪಿಯಾದರೆ... ವಿಚಾರಣಾ ಪೀಠದಲ್ಲಿ ಸ್ವತಃ ನ್ಯಾಯಮೂರ್ತಿಯಾಗಿ ಕುಳಿತರೇ?’

‘ನ್ಯಾಯಾಧೀಶರೇ ಆರೋಪಿಯಾದರೆ… ವಿಚಾರಣಾ ಪೀಠದಲ್ಲಿ ಸ್ವತಃ ನ್ಯಾಯಮೂರ್ತಿಯಾಗಿ ಕುಳಿತರೇ?’

- Advertisement -
- Advertisement -
| ಮಲ್ಲಿಗೆ ಸಿರಿಮನೆ |
ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ವರದಿಗಳೊಂದಿಗೆ ಭಾರತದ ಪ್ರಜ್ಞಾವಂತ ನಾಗರೀಕರು ಆತಂಕದೊಂದಿಗೇನೆ ಇಂದಿನ ದಿನಕ್ಕೆ ಕಣ್ಣು ತೆರೆದರು. ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆ ಶಾಕ್‍ಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲೇ ಈ ಪ್ರಕರಣ ಬೆಳಕಿಗೆ ಬಂದಿರುವುದು ಆಘಾತಕಾರಿಯಾಗಿದೆ; ದೇಶದ ಅತ್ಯುಚ್ಛ ನ್ಯಾಯದಾನ ಸಂಸ್ಥೆಯನ್ನೂ ಸೇರಿದಂತೆ ಎಲ್ಲವನ್ನೂ ಜನರು ಅನುಮಾನದಿಂದ ನೋಡುವಂತಹ ಸಂದರ್ಭ ಸೃಷ್ಟಿಯಾಗಿದೆ.
ಪ್ರಕರಣದ ಹಿನ್ನೆಲೆ: ಸುಪ್ರೀಂ ಕೋರ್ಟ್‍ನ ಮಾಜಿ ಮಹಿಳಾ ನೌಕರರೊಬ್ಬರು ಸಿಜೆಐ (ಭಾರತದ ಮುಖ್ಯ ನ್ಯಾಯಮೂರ್ತಿಗಳು) ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 35 ವರ್ಷದ ಈ ಮಹಿಳಾ ಉದ್ಯೋಗಿಯು ಸುಪ್ರೀಂ ಕೋರ್ಟ್‍ನ 22 ಮಂದಿ ಜಡ್ಜ್‍ಗಳಿಗೆ ಬರೆದಿರುವ ಪತ್ರದಲ್ಲಿ ‘ಅಕ್ಟೋಬರ್ 2018ರಲ್ಲಿ ತಾನು ಸಿಜೆಐ ಅವರ ಗೃಹ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರು ತನ್ನ ಜೊತೆ ಲೈಂಗಿಕ ವರ್ತನೆ ತೋರಿದ್ದರು ಮತ್ತು ಇದನ್ನು ವಿರೋಧಿಸಿದ್ದಕ್ಕಾಗಿ ತನ್ನನ್ನು ಗೃಹ ಕಛೇರಿಯ ಕೆಲಸದಿಂದ ಬದಲಾಯಿಸಲಾಯಿತು ಮತ್ತು ನಂತರ 2 ತಿಂಗಳಲ್ಲಿ ಕೆಲಸದಿಂದ ವಜಾಗೊಳಿಸಲಾಯಿತು’ ಎಂದು ಹೇಳಿದ್ದಾರೆ. ವಜಾಗೊಳಿಸಲು ನೀಡಲಾದ 3 ಕಾರಣಗಳಲ್ಲಿ ಒಂದು ದಿನ ಅನುಮತಿ ಪಡೆಯದೆ ಕ್ಯಾಶುಯಲ್ ಲೀವ್ ಹಾಕಿದ್ದನ್ನೂ ಒಂದು ಕಾರಣವಾಗಿ ನೀಡಲಾಗಿದೆ ಎಂದು ಕೂಡಾ ಈ ಉದ್ಯೋಗಿ ಹೇಳಿದ್ದಾರೆ.
ಈ ಬಗ್ಗೆ ಹಲವು ಆಯಾಮಗಳಲ್ಲಿ ಪ್ರತಿಕ್ರಿಯೆಗಳು ಈಗಾಗಲೇ ಹೊರಬಂದಿದ್ದು, ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ ಈ ‘ಇಡೀ ಪ್ರಕರಣ ಸುಳ್ಳು ಮತ್ತು ಕಥೆ ಕಟ್ಟಲಾಗಿರುವಂಥದ್ದು’ ಎಂದು ಹೇಳಿಕೆ ನೀಡಿದರೆ, ‘ಕ್ರಿಮಿನಲ್ ಕಾನೂನಿನಲ್ಲಿ ಮಹಿಳೆಯರು ಅಸೋಸಿಯೇಶನ್’ ಈ ಬಗ್ಗೆ ಕೂಡಲೇ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ಅಲ್ಲಿಯವರೆಗೆ ಸಿಜೆಐ ಆ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬಾರದು ಎಂದು ಹೇಳಿದೆ.
ಅದೇ ಸಂದರ್ಭದಲ್ಲಿ ಈ ಪ್ರಕರಣದ ವಿಚಾರಣೆಗಾಗಿ ರಚಿಸಲಾದ ಪೀಠದಲ್ಲಿ ಸ್ವತಃ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರೇ ಮೂರು ಮಂದಿ ನ್ಯಾಯಾಧೀಶರಲ್ಲಿ ಒಬ್ಬರಾಗಿ ಕುಳಿತು ವಿಚಾರಣೆ ನಡೆಸಿರುವುದು, ಮಾಧ್ಯಮಗಳು ಈ ಪ್ರಕರಣದ ವರದಿ ಮಾಡುವಾಗ ಸ್ವನಿಯಂತ್ರಣವನ್ನು ಪಾಲಿಸಬೇಕೆಂದು ನ್ಯಾಯಾಧೀಶರಲ್ಲೊಬ್ಬರು ಅಭಿಪ್ರಾಯ ಪಟ್ಟಿರುವುದು, ಕೊನೆಗೆ ನೀಡಲಾದ ತೀರ್ಪಿನಲ್ಲಿ ನ್ಯಾಯಾಧೀಶರ ಸಹಿ ಇರಬೇಕಾದಲ್ಲಿ ರಂಜನ್ ಗೊಗೊಯ್ ಅವರ ಹೆಸರು ದಾಖಲಾಗದೇ ಇರುವುದು, ಎಲ್ಲವೂ ಹಲವು ಹಿರಿಯ ಘನತೆವೆತ್ತ ನ್ಯಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವಯಂ ವಿಚಾರಣೆ-ಆಕ್ರೋಶಕ್ಕೆ ಕಾರಣ!

ಸಿಜೆಐ ರಂಜನ್ ಗೊಗೊಯ್ ಅವರು ತಮ್ಮ ಮೇಲಿನ ಆರೋಪದ ವಿಚಾರಣೆಯನ್ನು ಸವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಲು ರಚಿಸಲಾದ ಪೀಠದಲ್ಲಿ ಸ್ವತಃ ತಾವೂ ಒಬ್ಬ ನ್ಯಾಯಾಧೀಶರಾಗಿ ಕೂತಿದ್ದರು. ಇದು ಆಕ್ಷೇಪಾರ್ಹವಾದುದು! ಭಾರತದ ಮೊಟ್ಟಮೊದಲ ಮಹಿಳಾ ಉಪ ಸಾಲಿಸಿಟರ್ ಜನರಲ್ ಆಗಿದ್ದ ಮತ್ತು ಹಿರಿಯ ನ್ಯಾಯವಾದಿಯಾಗಿರುವ ಇಂದಿರಾ ಜೈಸಿಂಗ್ ಅವರು “ಸುಪ್ರೀಂ ಕೋರ್ಟ್‍ನ ಈ ವರ್ತನೆ ಅತ್ಯಂತ ಅಸ್ವಾಭಾವಿಕವಾಗಿದೆ. ದುರಂತವೆಂದರೆ ಸ್ವತಃ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಲೈಂಗಿಕ ಕಿರುಕುಳದ ಆರೋಪ ಬಂದರೆ ಏನು ಮಾಡಬೇಕೆಂಬ ಸ್ಪಷ್ಟ ನಿರ್ದೇಶನ ‘ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ (ತಡೆ ಮತ್ತು ನಿರ್ವಹಣಾ ಕಾಯ್ದೆ) 2013’ರಲ್ಲೂ ದಾಖಲಾಗಿಲ್ಲ. ಸುಪ್ರೀಂ ಕೋರ್ಟ್‍ನ ‘ಆಂತರಿಕ ದೂರು ಸಮಿತಿ’ಯನ್ನು ರಚಿಸುವವರು, ರಾಜ್ಯ ಕೋರ್ಟ್‍ಗಳ ನ್ಯಾಯಮೂರ್ತಿಗಳ ಮೇಲೆ ಆರೋಪ ಬಂದರೆ ಅದನ್ನು ವಿಚಾರಣೆ ನಡೆಸುವವರು ಎಲ್ಲವೂ ಸಿಜೆಐ ಆಗಿರುತ್ತಾರೆ. ಆದರೆ, ಅವರೇ ಆರೋಪಿ ಸ್ಥಾನದಲ್ಲಿರುವಾಗ ಏನು ಮಾಡಬೇಕು ಎಂಬ ಬಗ್ಗೆ ಸರಿಯಾದ ಮಾರ್ಗದರ್ಶಿ ಸೂತ್ರಗಳಿಲ್ಲ; ಅದೇನೇ ಆದರೂ ಶನಿವಾರ ಬೆಳಿಗ್ಗೆ ನಡೆದ ವಿಚಾರಣೆಯ ಪ್ರಹಸನ ನಮ್ಮ ಕಾನೂನು ವ್ಯವಸ್ಥೆಯನ್ನು ಅಪಹಾಸ್ಯ ಮಾಡುವಂತಿತ್ತು” ಎನ್ನುತ್ತಾರೆ. ಮತ್ತೊಬ್ಬ ಖ್ಯಾತ ಮಹಿಳಾವಾದಿ ವಕೀಲೆ ವೃಂದಾ ಗ್ರೋವರ್ ಅವರು “ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಆರೋಪ ಬಂದ ತಕ್ಷಣ ಸುಪ್ರೀಂ ಕೋರ್ಟ್ ಇದನ್ನೊಂದು ಸುವೋ ಮೋಟೋ ಪ್ರಕರಣವಾಗಿ ತೆಗದುಕೊಂಡಿದ್ದಾಗಲೀ, ವಿಚಾರಣೆಗೆ ವಿಶೇಷ ಪೀಠ ರಚಿಸಿ ಸ್ವತಃ ಆರೋಪಿತರಾದ ನ್ಯಾಯಮೂರ್ತಿಯೂ ಇನ್ನಿಬ್ಬರೊಂದಿಗೆ ಅಲ್ಲಿ ಕೂತದ್ದಾಗಲೀ, ಆ ಬಗ್ಗೆ ತೆರೆದ ಕೋರ್ಟ್‍ನಲ್ಲಿ ವಿಚಾರಣೆಗೆ ಅವಕಾಶ ನೀಡಿದ್ದಾಗಲೀ, ದೂರುದಾರರಿಗೆ ಸಾಕಷ್ಟು ಪೂರ್ವಮಾಹಿತಿ ಇಲ್ಲದೆ ವಿಚಾರಣೆ ನಡೆಸಿದ್ದಾಗಲೀ, ಆ ‘ವಿಚಾರಣೆ’ಯಲ್ಲಿ ದೂರುದಾರ ಮಹಿಳೆಯ ಬಗ್ಗೆ ಆಕ್ಷೇಪಣೆಗಳನ್ನು ಸಿಜೆಐ ಅವರು ಎತ್ತಿದ್ದಾಗಲೀ-ಯಾವುದೂ ಅಗತ್ಯವಾಗಿತ್ತೆಂದು ಅನಿಸುವುದಿಲ್ಲ. ‘ಭಾರತದ ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆಗೆ ಗಂಭೀರ ಸವಾಲೊಡ್ಡುವ ಪ್ರಕರಣ’ ಎಂದು ಸ್ವತಃ ಸುಪ್ರೀಕೋರ್ಟ್ ಇದನ್ನು ಕರೆದುಕೊಂಡು ತಾನೇ ವಿಚಾರಣೆಗೆ ಮುಂದಾಗಿರುವುದು ಸೂಕ್ತವಾದುದಲ್ಲ” ಎಂದು ವೃಂದಾ ಗ್ರೋವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ವೃಂದಾ ಗ್ರೋವರ್
ಮತ್ತೊಬ್ಬ ಹಿರಿಯ ವಕೀಲರೂ ಮತ್ತು ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ದ ಹಿಂದಿನ ಮುಖ್ಯಸ್ಥರಲ್ಲೊಬ್ಬರೂ ಆಗಿದ್ದ ದುಷ್ಯಂತ್ ದವೆ ಅವರು ‘ದ ಹಿಂದೂ’ ಪತ್ರಿಕೆಗೆ ಬರೆಯುತ್ತಾ, “ಈ ಪ್ರಕರಣವು ಭಾರತದ ನ್ಯಾಯಾಂಗ ವ್ಯವಸ್ಥೆಗಾಗಲೀ ಅಥವಾ ಅದರ ವಿಶ್ವಾಸಾರ್ಹತೆ, ಸ್ವಾಯತ್ತತೆಗಾಗಲೀ ಸವಾಲೊಡ್ಡುವಂಥದ್ದಾಗಿರಲಿಲ್ಲ; ಬದಲಿಗೆ ಆ ದೂರಿನ ವಿಚಾರಣೆಯ ಹೆಸರಿನಲ್ಲಿ ಶನಿವಾರ ಬೆಳಿಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ನಡೆದ ಘಟನೆ ಖಂಡಿತವಾಗಿ ದೇಶದ ಅತ್ಯಚ್ಛ ನ್ಯಾಯದಾನ ಸಂಸ್ಥೆಯ ಘನತೆ ಮತ್ತು ವಿಶ್ವಾಸಾರ್ಹತೆಗೆ ಚ್ಯುತಿ ತಂದಿದೆ. ನಾನು ಈ ಪ್ರಕರಣದ ಬಗ್ಗೆ ತೀವ್ರ ವಿಚಾರಣೆ ನಡೆಯಲಿ ಮತ್ತು ಸಿಜೆಐ ಅವರು ಆರೋಪಮುಕ್ತರಾಗಲೀ ಎಂದು ಬಯಸುತ್ತೇನೆ ಆದರೆ ಅದು ಈ ಮಾದರಿಯಲ್ಲಲ್ಲ” ಎಂದು ಕಟುವಾದ ಮಾತುಗಳಲ್ಲಿ ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ ಖ್ಯಾತನಾಮರನ್ನೂ ಒಳಗೊಂಡಂತೆ ಅನೇಕರ ವ್ಯಕ್ತಿತ್ವದ ಮತ್ತೊಂದು ಕರಾಳ ಮುಖವನ್ನು ಬಹಿರಂಗಕ್ಕೆ ತಂದ ‘ಮೀಟೂ’ ಆಂದೋಲನದಂತಹವು ಇನ್ನೂ ಜನರ ನೆನಪಿನಲ್ಲಿರುವಾಗಲೇ, ಭಾರತದ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮೇಲೆಯೇ ಬಂದ ಇಂತಹ ಒಂದು ಆರೋಪವನ್ನು ಘನತೆಯಿಂದ ನಿಭಾಯಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ, ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ವೃದ್ಧಿಸಬೇಕಾದ ತಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಎಡವಿದರೇ? ಇನ್ನಾದರೂ ಈ ಪ್ರಕರಣದಲ್ಲಿ ಖಡಕ್ಕಾದ ನಿಷ್ಪಕ್ಷಪಾತ ತನಿಖೆ ನಡೆಸುವ ಬದ್ಧತೆಯನ್ನು ಭಾರತದ ಅತ್ಯುಚ್ಛ ನ್ಯಾಯಾಲಯ ತೋರಬೇಕಿದೆ.
ರಂಜನ್ ಗೊಗೊಯ್ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣಕ್ಕೊಂದು ಆತಂಕಕಾರಿ ಟ್ವಿಸ್ಟ್-ಉತ್ಸವ್ ಬೈನ್ಸ್ ಫೇಸ್‍ಬುಕ್ ಪೋಸ್ಟ್!
ಉತ್ಸವ್ ಬೈನ್ಸ್ ಎಂಬ ಯುವ ವಕೀಲ ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಸಂಬಂಧ ಪ್ರಕಟಿಸಿರುವ ತನ್ನ ಫೇಸ್‍ಬುಕ್ ಮತ್ತು ಟ್ವಿಟರ್ ಪೋಸ್ಟ್‍ಗಳು ಬೇರೆಯದೇ ಆದ ಆಯಾಮವೊಂದರ ಸಾಧ್ಯತೆಯನ್ನು ತೆರೆದಿಡುತ್ತಿವೆ!
ಉತ್ಸವ್ ಬೈನ್ಸ್‍ರವರು, ಅಸಾರಾಂ ಬಾಪು ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ನೊಂದ ಬಾಲಕಿಯ ಪರ ವಾದಿಸಿದ ಮತ್ತು ಇಂದಿನ ಸಂದರ್ಭದಲ್ಲಿ ಯುಕ್ತಾಯುಕ್ತ ವಿವೇಚನೆಯೊಂದಿಗೆ ಪ್ರಜ್ಞಾವಂತಿಕೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಭಾರತದ ಯುವ ವಕೀಲರಲ್ಲೊಬ್ಬರು. ತಮ್ಮ ಫೇಸ್‍ಬುಕ್ ಪೋಸ್ಟ್‍ನಲ್ಲಿ ಅವರು ವಿವರವಾಗಿ ತನ್ನ ಅನುಭವವನ್ನು ಬರೆದುಕೊಂಡಿದ್ದಾರೆ. ಈ ಪ್ರಕರಣದ ಹಿಂದೆ ಭಾರತದ ಸರ್ವೋಚ್ಛ ನ್ಯಾಯಾಲಯದ ಒಳಗಡೆಯೇ ಇರುವ ಭ್ರಷ್ಟ ನ್ಯಾಯಾಧೀಶರು ಮತ್ತಿತರ ಪ್ರಭಾವಿಗಳ ಜಾಲವೊಂದರ ಕರಾಳ ಹಸ್ತಗಳು ಕೆಲಸ ಮಾಡುತ್ತಿರಬಹುದೇ ಎಂಬ ಅನುಮಾನ ಅದನ್ನು ಓದಿದಾಗ ಹುಟ್ಟುತ್ತದೆ.
ಉತ್ಸವ್ ಬೈನ್ಸ್ ಬರೆದಿರುವಂತೆ, “ಸಿಜೆಐ ವಿರುದ್ಧ ಲೈಂಗಿಕ ಆರೋಪದ ದೂರು ದಾಖಲಿಸಿರುವ ಮಹಿಳೆಯ ಪರವಾಗಿ ವಕೀಲಿಕೆ ನಡೆಸುವಂತೆ ಮತ್ತು ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸುವಂತೆ ಕೇಳಿ, ಕೆಲವು ಸಮಯದ ಹಿಂದೆ ನನಗೆ ಒಂದೂವರೆ ಕೋಟಿಯ ಆಮಿಷವೊಡ್ಡಲಾಗಿತ್ತು…………….ನಾನು ಹಿಂದೆ ಅಸಾರಾಂ ವಿರುದ್ಧ ಪ್ರಕರಣ ನಡೆಸಿದಾಗ, ನೊಂದ ಬಾಲಕಿಯ ಸಂಬಂಧಿ ಎಂದು ಹೇಳಿಕೊಂಡು ನನ್ನನ್ನು ಬಹಳ ಹೊಗಳಿದ್ದ ವ್ಯಕ್ತಿ ನನಗೆ ಈ ಪ್ರಕರಣ ಕೈಗೆತ್ತಿಕೊಳ್ಳುವಂತೆ ಕೇಳಿಕೊಂಡ. ಆತನ ಮಾತುಕತೆ ಮತ್ತು ಈ ದೂರುದಾರ ಮಹಿಳೆಯೊಂದಿಗೆ ತನ್ನ ಸಂಬಂಧದ ಬಗ್ಗೆ ಆತನ ಸಮಜಾಯಿಷಿ ನನಗೆ ಅನುಮಾನಾಸ್ಪದವಾಗಿ ಕಂಡು ನಾನು ಪ್ರಕರಣದಲ್ಲಿ ವಾದಿಸಲು ಒಲ್ಲೆನೆಂದಕೂಡಲೇ ಆತ ನನಗೆ ನೀಡುವ ಶುಲ್ಕದ ಮೊತ್ತವನ್ನು 50 ಲಕ್ಷದಿಂದ ಒಂದೂವರೆ ಕೋಟಿಗೆ ಏರಿಸಿದ, ಜೊತೆಗೆ ಪತ್ರಿಕಾ ಗೋಷ್ಟಿ ನಡೆಸಬೇಕೆಂದೂ ಹೇಳಿದ. ಇದೆಲ್ಲ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಆರೋಪ ಹೊರಿಸಿ ಅವರ ರಾಜೀನಾಮೆ ಪಡೆಯಲು ಮಾಡುತ್ತಿರುವ ದೊಡ್ಡ ಹುನ್ನಾರದಂತೆ ಕಂಡುಬಂದುದರಿಂದ ನಾನು ಕೂಡಲೇ ಅವನನ್ನು ಕಛೇರಿಯಿಂದ ಹೊರಡಿಸಿದೆ”. ನಂತರವೂ ತಾನು ಈ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಇದೊಂದು ಸಂಚುಕೂಟದ ರಹಸ್ಯ ಕಾರ್ಯಾಚರಣೆಯಂತೆ ಕಂಡುಬಂದುದಾಗಿಯೂ, ಈ ಬಗ್ಗೆ ಮಾಹಿತಿ ನೀಡಲೇಬೇಕೆಂದು ತನಗೆ ಅನಿಸಿದ್ದರಿಂದ ಶುಕ್ರವಾರ ಸಂಜೆ ತಾನು ಸಿಜೆಐ ಅವರ ಮನೆಗೆ ಭೇಟಿ ನೀಡಿದ್ದಾಗಿಯೂ, ಆದರೆ ಅವರು ಆ ಸಮಯದಲ್ಲಿ ಮನೆಯಲ್ಲಿಲ್ಲದ ಕಾರಣ ಮಾಹಿತಿ ಕೊಡಲಾಗದೆ ಹೋದದ್ದಗಿಯೂ ಉತ್ಸವ್ ಬೈನ್ಸ್ ಬರೆದಿದ್ದಾರೆ. ತನಗೂ ಸಿಜೆಐಗೂ ಯಾವುದೇ ವ್ಯಕ್ತಿಗತ ಪೂರ್ವ ಪರಿಚಯ ಇಲ್ಲ, ಆದರೆ ಪ್ರಕರಣ ಬಹಳ ಗಂಭೀರವಾದುದರಿಂದ ಇದರ ಬಗ್ಗೆ ಎಲ್ಲ ಆಯಾಮಗಳಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದೂ ಕೂಡಾ ಬೈನ್ಸ್ ಒತ್ತಾಯಿಸುತ್ತಾರೆ.
ಅದೇ ಸಂದರ್ಭದಲ್ಲಿ, ತಾನು ‘ಈ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲಾರೆ, ಏಕೆಂದರೆ ಅದರಿಂದ ದೂರುದಾರ ಮಹಿಳೆಯನ್ನು ಮಾಧ್ಯಮಗಳು ವಿಚಾರಣೆ ನಡೆಸಲು ಆರಂಭಿಸುತ್ತವೆ. ಆಕೆಯ ದೂರಿನ ನ್ಯಾಯಯುತ ಕಾನೂನುಬದ್ಧ ತನಿಖೆಯಾಗಬೇಕೆಂದು ಬಯಸುತ್ತೇನೆಯೇ ಹೊರತು, ಮಾಧ್ಯಮಗಳು ನಡೆಸುವ ‘ಮೀಡಿಯಾ ಟ್ರಯಲ್’ ಅಲ್ಲ, ಅದಕ್ಕೆ ತಾನು ಪೂರ್ಣ ವಿರುದ್ಧ’ ಎಂದೂ ಅವರು ಬರೆದಿದ್ದಾರೆ.
ಜನಪರ ಕಾಳಜಿಯುಳ್ಳ ಈ ಯುವ ವಕೀಲನ ವರದಿಯ ಹಿಂದಿರುವ ಸತ್ಯ ಸಂಗತಿಯೇನು ಎಂಬುದನ್ನೂ ಮತ್ತು ಒಂದು ವೇಳೆ ಹಾಗೆ ರಂಜನ್ ಗೊಗೊಯ್ ಅವರ ವಿರುದ್ಧ ಸಂಚುಕೂಟವೊಂದು ಕೆಲಸ ಮಾಡುತ್ತಿರುವುದೇ ಆದರ ಅವರ ಹಿತಾಸಕ್ತಿಗಳೇನು ಎಂಬುದನ್ನೂ ಆಳವಾಗಿ ವಿಚಾರಣೆಗೊಳಪಡಿಸುವ ತುರ್ತು ಅಗತ್ಯವಿದೆ.
ಅದೇನೆ ಇದ್ದರೂ, ಸಿಜೆಐ ರಂಜನ್ ಗೊಗೊಯ್ ಅವರ ಮೇಲಿನ ಈ ಆರೋಪವನ್ನು, ‘ತಮ್ಮ ಮೇಲಿನ ಆರೋಪಕ್ಕೆ ತಾವೇ ನ್ಯಾಯಾಧೀಶರಾಗಬಾರದು’ ಎಂಬ ನ್ಯಾಯಂಗದ ವಿಚಾರಣಾ ತತ್ವಕ್ಕೆ ಧಕ್ಕೆ ಬಾರದಂತೆ, ಜನರ ನಂಬಿಕೆಗೂ ಘಾಸಿಯಾಗದಂತೆ ಘನತೆಯಿಂದ ನಿರ್ವಹಿಸುವ ಬಹುದೊಡ್ಡ ಜವಾಬ್ದಾರಿ ಇಡೀ ಸುಪ್ರೀಂ ಕೋರ್ಟ್ ಮತ್ತು ಜುಡಿಷಿಯಲ್ ಕಮ್ಯುನಿಟಿಯ ಮೇಲಿದೆ. ಅದನ್ನು ನಿರ್ವಹಿಸಲಾಗುವುದು ಎಂದು ನಂಬೋಣವೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....