Homeಸಾಹಿತ್ಯ-ಸಂಸ್ಕೃತಿಕಥೆಎಷ್ಟು ಉಂಡರೂ ಉಟ್ಟರೂ, ಇನ್ನೂ ಬೇಕೆಂಬ ದಾಹ

ಎಷ್ಟು ಉಂಡರೂ ಉಟ್ಟರೂ, ಇನ್ನೂ ಬೇಕೆಂಬ ದಾಹ

- Advertisement -
- Advertisement -

ಆಡಿದ ಮಾತು ಕಾಲ ಕಳೆದಂತೆ ಮರೆತು ಹೋಗಬಹುದು. ಆದರೆ ಪಾಲ್ಗೊಂಡ ಚಿತ್ರ ಮಾತ್ರ ಕಾಲಾನಂತರದಲ್ಲೂ ಉಳಿದುಬಿಡುತ್ತದೆ’- ಇತ್ತೀಚಿನ ದಿನಗಳಲ್ಲಿ ನನ್ನನ್ನು ಗಾಢವಾಗಿ ಕಲಕಿದ ಮಾತಿದು. ನಾಗಪುರದ ಸಂಘ ಪರಿವಾರದ ಸಮಾವೇಶದಲ್ಲಿ ಪಾಲ್ಗೊಂಡ ತನ್ನ ತಂದೆ, ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಪ್ರಣವ ಮುಖರ್ಜಿಯವರನ್ನು ಎಚ್ಚರಿಸಲು ಅವರ ಮಗಳು ಶರ್ಮಿಷ್ಠಾ ಮುಖರ್ಜಿ ಆಡಿದ ಮಾತುಗಳಿವು. ಮತೀಯವಾದಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಮತ್ತು ಮತೀಯ ಭ್ರಷ್ಟ ವ್ಯಕ್ತಿಗಳು-ಚಿಂತನೆಗಳು ಸೇರಿಕೊಂಡ ಸಾಂಸ್ಕøತಿಕ-ಸಾಹಿತ್ಯಿಕ-ಶೈಕ್ಷಣಿಕ ವೇದಿಕೆಗಳಲ್ಲಿ ಪಾಲ್ಗೊಳ್ಳುವುದು ಎರಡೂ ಅಪಾಯಕಾರಿಯೇ. ಆದರೆ ಈ ಎರಡರ ಮಧ್ಯೆ ಕನಿಷ್ಠ ವ್ಯತ್ಯಾಸವಿದೆ. ಆ ವ್ಯತ್ಯಾಸ ಕೇಳುಗ ವರ್ಗಕ್ಕೆ ಸಂಬಂಧಿಸಿದ್ದು. ಮತೀಯ ಸಂಘಟನೆಗಳ ಕಾರ್ಯಕರ್ತರು ತಮ್ಮನ್ನು ಸಿದ್ಧಾಂತಕ್ಕೆ ಕೊಟ್ಟುಕೊಂಡವರು. ತಾವು ಸರಿ ಎಂದುಕೊಂಡಿದ್ದು ತಪ್ಪಿರಬಹುದು. ಲೋಕವನ್ನು ಕಾಣಬೇಕಾದ ಕ್ರಮ ಬೇರೆಯಿದ್ದೀತು ಎಂಬ ಉದಾರತೆ ಇರದವರು. ಇವರಿಗೆ ಜೀವ ಸಾಮರಸ್ಯದ ಚರಿತ್ರೆಯನ್ನು ನೆನಪಿಸುವುದಾಗಲಿ, ವರ್ತಮಾನದ ಬಗ್ಗೆ ನೆನಪಿಸುವುದಾಗಲಿ ವ್ಯರ್ಥ. ಹೆಚ್ಚೆಂದರೆ, ದಿನದ ಮಾತುಗಳಿಗಿಂತ ಬೇರೆಯಾದ ಮಾತುಗಳನ್ನು ಕೇಳಿಸಿಕೊಂಡ ಮುದ ಒಂದು ಗಳಿಗೆ ದೊರೆತೀತು. ಸಂಘ ಪರಿವಾರದ ಚರಿತ್ರೆಯನ್ನು ಗಮನಿಸಿದರೆ, ಅದು ತನ್ನನ್ನು ಕಟುವಾಗಿ ವಿರೋಧಿಸಿ ಎದುರು ಹಾಕಿಕೊಂಡವರನ್ನೂ ತನ್ನ ಚಹರೆಪಟ್ಟಿಗೆ ಸೇರಿಸಿಕೊಂಡು ಬೆಳೆದಿದೆ. ಬುದ್ಧ, ಬಸವ, ವಿವೇಕಾನಂದ, ಅಂಬೇಡ್ಕರ್, ಭಗತ್‍ಸಿಂಗ್ ಯಾರನ್ನು ಬೇಕಾದರೂ ನುಂಗಿ ನೊಣೆಯುತ್ತ ಬಂದಿದೆ. ಮಹಾನ್ ವ್ಯಕ್ತಿತ್ವಗಳಿಗೆ ಮರಣೋತ್ತರ ಅವಮಾನ ಮಾಡುತ್ತ ಬಂದಿದೆ. ಹಾಗಿರುವಾಗ, ಅಧಿಕಾರದಾಸೆಗೆ ಬೇರು ಸಡಿಲವಾಗಿಸಿಕೊಂಡರೆ, ತನ್ನ ಧೃತರಾಷ್ಟ್ರ ಆಲಿಂಗನದಿಂದ ಹೊರತುಪಡಿಸೀತೆ?
ಶರ್ಮಿಷ್ಠಾ ಮತ್ತು ಹಾಗೆ ಯೋಚಿಸುವವರ ಧಾಟಿ ದಿಟವಾದದ್ದೆನ್ನಲು ಕೆಲವು ಗಂಟೆಗಳಲ್ಲಿಯೇ ಪುರಾವೆಗಳೊದಗಿದ್ದವು. ಪ್ರಣವ ಮುಖರ್ಜಿ ಸಂಘ ಪರಿವಾರದ ಶೈಲಿಯಲ್ಲಿ ನಮಸ್ಕರಿಸಿ ನಿಂತ ಫೇಕ್ ಫೋಟೊ ಜಾಲತಾಣಗಳಲ್ಲಿ ಹರಿದಾಡಿದವು. ಒಂದಿಡೀ ದಿನ ದೇಶದ ಮಾಧ್ಯಮಗಳು, ಚಿಂತಕರು ಮಾಜಿ ರಾಷ್ಟ್ರಪತಿಗಳ ಭಾಷಣದಲ್ಲಿದ್ದ ದೇಶದ ಸಾಮರಸ್ಯ-ಸಹಬಾಳ್ವೆಯ ಪ್ರತಿಪಾದನೆಯ ಕುರಿತು ಚರ್ಚಿಸಿದರು. ಆದರೆ ಇಂತಹ ಮಾನವೀಯ ನುಡಿಗಳು ಮತೀಯವಾದಿಗಳನ್ನು ಅಲ್ಲಾಡಿಸಿಬಿಡುತ್ತವೆಯೇ? ಮೂಲಭೂತ ಜಡತೆಯ ಮನಸ್ಸು ಮಾನವೀಯತೆಯನ್ನು ಸ್ವೀಕರಿಸುವ ವಿಧಾನದಲ್ಲಿಯೇ ತಪ್ಪುಗಳಿವೆ. ಮತೀಯವಾದಿ ಸಂಘಟನೆಗಳು ಜನಸಮುದಾಯವನ್ನು ಸ್ವೀಕರಿಸುವ ವಿಧಾನದಲ್ಲಿಯೇ ಸ್ಪಷ್ಟ ವಿಭಾಜಕಗಳಿವೆ. ತನ್ನವರು-ಹೊರಗಿನವರು ಎಂಬ ವಿಂಗಡನೆ ಅಮಾನುಷವಾಗಿರುತ್ತದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಮಾತು ಅದೆಷ್ಟೇ ಉದಾತ್ತವಾಗಿರಲಿ, ಅಲ್ಲಿ ‘ಜನ’ ಎಂದರೆ ತನ್ನ ಧರ್ಮ ಜಾತಿ-ಕುಲ ಬಾಂಧವರು ಎಂದು ಮಾತ್ರ ಆಗುತ್ತದೆ. ‘ಸಬ್‍ಕಾ ಸಾಥ್ ಸಬ್‍ಕಾ ವಿಕಾಸ’ ಎನ್ನುವುದೂ ಹೀಗೇ. ಅದರ ಪರಿಷ್ಕøತ ರೂಪ. ಇವು ನುಡಿಯಲ್ಲಿ ಉದಾತ್ತವಾಗಿದ್ದು, ನಡೆಯಲ್ಲಿ ತನ್ನ ಜಾತಿ-ಧರ್ಮಗಳ ಚೌಕಟ್ಟಿನೊಳಗೇ ವ್ಯವಹರಿಸುತ್ತವೆ. ಇಂತಹ ನುಡಿಸೋಂಕಿಗೆ ಬಲಿಯಾದ ಜನರು, ಪ್ರಣವ ಮುಖರ್ಜಿಯವರ ಮಾತಿನ ಜೇನನ್ನು ಅರಿವಿಗೆ ತಂದುಕೊಳ್ಳಲಾರರು. ಅಲ್ಲಿಗೆ ಪ್ರಣವ ಮುಖರ್ಜಿಯವರ ನುಡಿಜೇನು ತೊಟ್ಟಿಕ್ಕಿ ಮರಳು ಸೇರಿದಂತಾಯಿತು. ಇಂಥದ್ದೊಂದು ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿ ನಡೆದದ್ದಲ್ಲ. ಇದೊಂದು ಪ್ರಜ್ಞಾಪೂರ್ವಕ ಭಾಗೀದಾರಿಕೆ. ಸಂಘಪರಿವಾರದ ಸಿದ್ಧಾಂತಗಳಿಗಿಂತ ಬೇರೆಯಾದ ಪಕ್ಷ ರಾಜಕಾರಣದಲ್ಲಿದ್ದು ರಾಷ್ಟ್ರಪತಿ ಹುದ್ದೆಯವರೆಗೆ ಏರಿದವರು, ಮತ್ತೆ ಈ ವಯಸ್ಸಿನಲ್ಲಿ ಅಧಿಕಾರ ರಾಜಕಾರಣದಲ್ಲುಳಿಯುವ ಮನಸ್ಸು ಮಾಡಿದರು- ಎನ್ನುವ ವಿಶ್ಲೇಷಣೆಯೂ ಇದೆ.
ಇದು ನಿಜವಾಗಿದ್ದರೆ, ಸ್ವತಂತ್ರ ಭಾರತ, ರಾಜಕಾರಣಿಗಳ ಅನೈತಿಕ ಲೂಟಿಯ ಕಥನವಾಗಿ ಪ್ರಸಿದ್ಧಿ ಪಡೆದಂತಾಯಿತು. ಎಷ್ಟು ಉಂಡರೂ ಉಟ್ಟರೂ ತೊಟ್ಟರೂ ಇನ್ನೂ ಬೇಕು ಎಂಬ ಯಮ ಹಸಿವು ಇದು. ಅಪರೂಪದ ಅತ್ಯುನ್ನತ ಪದವಿಗಳನ್ನು ಪಡೆದ ಮೇಲೂ ಅತೃಪ್ತಿ, ಪಕ್ಷಾಂತರ, ಸ್ವ ಪಕ್ಷದ್ವೇಷ… ಮುಂತಾದ ಚಟುವಟಿಕೆಗಳು ನಡೆದೇ ಇವೆ. ಸದ್ಯದ ವಿಧಾನಸಭೆ ಚುನಾವಣೆಯ ಆಚೀಚೆ ಕರ್ನಾಟಕದ ರಾಜಕಾರಣಿಗಳು ನಡೆದುಕೊಂಡ ಬಗೆಯೂ ಅವಕಾಶವಾದದ ಮಾದರಿಯಂತಿತ್ತು. ಇಂತಹ ಭ್ರಷ್ಟ ರಾಜಕಾರಣವನ್ನು ಉಪೇಕ್ಷಿಸಲಾಗುತ್ತಿಲ್ಲ. ಯಾಕೆಂದರೆ ಇದು ವ್ಯವಸ್ಥೆಯನ್ನು ಸತತವಾಗಿ ಭ್ರಷ್ಟಗೊಳಿಸುತ್ತಿರುತ್ತದೆ.
ರಾಜಕಾರಣ ಮತ್ತು ಪ್ರಭುತ್ವ ತನ್ನ ನಾಗರಿಕರಿಗೆ ಅನ್ಯಾಯ ಮಾಡಿದಷ್ಟು ಇನ್ಯಾವುದೂ ಮಾಡಲು ಸಾಧ್ಯವಿಲ್ಲವೇನೋ. ತನ್ನ ರಾಜಕೀಯ ಲಾಭಕ್ಕಾಗಿ ಜನರನ್ನು ಮತ-ಧರ್ಮದ ಹೆಸರಿನಲ್ಲಿ ವಿಭಜಿಸುವ ರಾಜಕಾರಣಿ, ಸಮುದಾಯದ ಬದುಕನ್ನು ಮೂರು ರೀತಿಯಲ್ಲಿ ಈಡಾಡುತ್ತಾನೆ. ಮೊದಲನೆಯದು, ಒಂದು ಧರ್ಮದ, ಜಾತಿಯ ಜನರನ್ನು ಅಡ್ರೆಸ್ ಮಾಡಿ; ನೀವು ವೋಟ್ ಹಾಕಬೇಡಿ ಎಂದೋ ವೋಟ್ ಹಾಕಿ ಎಂದೋ ದಬಾಯಿಸುವುದು. ಸದ್ಯ, ಯತ್ನಾಳ ಎಂಬ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಶಾಸಕರು, ತಮ್ಮ ಕ್ಷೇತ್ರದ ಕಾರ್ಪೊರೇಟರ್‍ಗಳಿಗೆ ‘ನೀವು ಹಿಂದೂಗಳ ಪರವಾಗಿ ಕೆಲಸ ಮಾಡಿ, ಮುಸ್ಲಿಮರ ಪರವಾಗಿ ಅಲ್ಲ’- ಎಂದು ಫರ್ಮಾನು ಕೊಡಲೂ ಹೇಸಲಿಲ್ಲ. ಅವರ ಮಾತು ಅನಂತಕುಮಾರ್ ಹೆಗಡೆಯವರಿಗೆ ಸರಿದೊರೆಯಾಗಿತ್ತು. ಇಂತಹ ಸಂವಿಧಾನ ವಿರೋಧಿಯಾದ ಉಡಾಫೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಯುವಕರು ಶಿಳ್ಳೆ ಹಾಕಿ, ಚಪ್ಪಾಳೆ ಹಾಕಿ, ಬಹು ಜೋಷ್‍ನಿಂದ ಆ ಮಾತುಗಳನ್ನು ಬರಮಾಡಿಕೊಂಡರು. ಅಲ್ಲಿಗೆ ಸಾಮಾಜಿಕ ಬದುಕಿನ ನೆಮ್ಮದಿಗೆ ಪೆಟ್ರೋಲ್ ಸುರಿಯಲಾಯಿತು ಎಂದೇ ಅರ್ಥ. ಪರಿಣಾಮವಾಗಿ ನೈತಿಕ ಭ್ರಷ್ಟತೆಯ ಪ್ರಜಾತಂತ್ರ ವಿರೋಧಿಯಾದ ಅಧಿಕಾರಶಾಹಿ ವರ್ಗವು ನಿರ್ಮಾಣಗೊಳ್ಳುತ್ತದೆ. ಇದರಿಂದ ಮತೀಯವಾದದ ಬೇರು ಭದ್ರಗೊಳ್ಳುತ್ತದೆ. ಕೋಮುಹಿಂಸೆ ವಿಜೃಂಭಿಸಿದಾಗೆಲ್ಲ ಅದರ ಪೋಷಕ ಸ್ಥಾನದಲ್ಲಿ ಅಧಿಕಾರಶಾಹಿಗಳಿರುವುದು ಪ್ರಜಾಪ್ರಭುತ್ವದ ಕರಾಳ ಸತ್ಯ. ಇತ್ತೀಚೆಗೆ ಕರಾವಳಿಯಲ್ಲಿ ಹುಸೇನಬ್ಬ ಎಂಬ ದನದ ವ್ಯಾಪಾರಿಯನ್ನು ಅಕಾರಣ ಮುಗಿಸಿದ ಕ್ರೌರ್ಯ ಪೊಲೀಸ್ ವ್ಯವಸ್ಥೆಗೂ ಇದೆ ಎನ್ನಲಾಗುತ್ತಿರುವ ಸಂಬಂಧ ಗಾಬರಿ ಬೀಳಿಸುವಂಥದ್ದು. ಈ ನೆಲ ಬದುಕಿಗೆ ಯೋಗ್ಯವಾಗುಳಿ ಯುವುದು ಇನ್ನೆಷ್ಟು ಕಾಲ? ಎನಿಸುತ್ತಿದೆ. ಕೋಮುವಾದ-ಮತೀಯವಾದದ ದುಷ್ಟ ವೈರಸ್‍ಗಳು ಅತ್ಯಂತ ಸುಸಂಪನ್ನ ಸ್ವಸಂಪೂರ್ಣ ವ್ಯವಸ್ಥೆಯಲ್ಲಿ ಬೆಳೆಯುತ್ತಿವೆ ಅಥವಾ ಬೆಳೆಸಲಾಗುತ್ತಿದೆ. ಇತ್ತೀಚೆಗೆ ನಾನು ಪರೀಕ್ಷಾ ಕೆಲಸಕ್ಕಾಗಿ ಒಂದು ಅನ್‍ಏಡೆಡ್ ಕಾಲೇಜಿನಲ್ಲಿ ಕೆಲ ದಿನಗಳನ್ನು ಕಳೆಯಬೇಕಾಯಿತು.
ಅಂತಾರಾಷ್ಟ್ರೀಯ ಗುಣಮಟ್ಟ ಎಂದು ಘೋಷಿಸಿಕೊಂಡಿರುವ ವ್ಯವಸ್ಥೆಯನ್ನು ಹೊಂದಿರುವ ಕಾಲೇಜದು. ಹೊರಗಣ್ಣಿಗೆ ತುಂಬಾ ಸಂಪನ್ನವೆನಿಸುತ್ತದೆ. ಒಳಗಿಳಿದರೆ ಅಧಃಪತನದ ಕೊರಕಲುಗಳೇ ಇವೆ. ಕಾಲೇಜಿನ ಮ್ಯಾನೇಜ್‍ಮೆಂಟ, ಕಚೇರಿ ಸಿಬ್ಬಂದಿಗಳು, ಪ್ರಾಧ್ಯಾಪಕರು ಮತ್ತು ಬಹುತೇಕ ವಿದ್ಯಾರ್ಥಿಗಳು ಮೇಲ್ಜಾತಿಯ ಒಂದು ಕಮ್ಯುನಿಟಿಗೆ ಸೇರಿದವರು. ಅಗತ್ಯವಿದ್ದರೆ ಜಾತಿಯಲ್ಲಿ ತಮಗಿಂತ ಉತ್ತಮರೆಂದು ಭಾವಿಸಿದ ಇನ್ನೊಂದು ಜಾತಿಯವರನ್ನು ಸೇರಿಸಿಕೊಳ್ಳಲಾಗಿದೆ ಅಷ್ಟೇ. ಶಿಕ್ಷಣ ವ್ಯವಸ್ಥೆಯ ಸಿಬ್ಬಂದಿಗಳಲ್ಲಿ ಇರಬೇಕಾದ ಪರಸ್ಪರ ಗೌರವಾದರಗಳಿಗಿಂತ, ಒಂದು ಮನೆಯ ಸದಸ್ಯರಂತಹ ಸಲುಗೆ; ಶಿಕ್ಷಕರು-ವಿದ್ಯಾರ್ಥಿಗಳ ಸಂಬಂಧವೂ ಹಾಗೇ. ಸರ್ಕಾರಿ ಸೆಕ್ಟರ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ವಿಶೇಷ ಸೌಲಭ್ಯಗಳನ್ನು ಕೊಡಮಾಡಲಾಗುತ್ತದೆಂಬ ತಕರಾರು. ಶಿಕ್ಷಣದ ಗುಣಮಟ್ಟ ಕುಸಿಯಲು, ದೇಹದಿಂದ ದುಡಿಯಲು ಹುಟ್ಟಿದವರೂ ಕಲಿಯಲು ಬರುತ್ತಿರುವುದು ಕಾರಣ ಎಂಬ ತೀರ್ಮಾನ. ಸತತ ಏಳನೇ ಬಾರಿ ಪರೀಕ್ಷೆಗೆ ಕಟ್ಟಿದ ವಿದ್ಯಾರ್ಥಿಗಳೂ ಇದ್ದರು. ಅವರ ಧಿಮಾಕು, ನಿರ್ಲಕ್ಷ್ಯ ಹೇಳತೀರದ್ದು. ಕ್ರಮೇಣ ತಿಳಿದದ್ದೇನೆಂದರೆ, ಅದು ಒಂದು ರೀತಿಯಲ್ಲಿ ಮರಿ ರಾಜಕೀಯ ಪುಢಾರಿಗಳನ್ನು ತಯಾರು ಮಾಡುವ ಸೆಂಟರ್‍ನಂತಿತ್ತು. ತಮ್ಮ ಶಿಷ್ಯನೊಬ್ಬನಿಗೆ ಈ ಬಾರಿ ಟಿಕೆಟ್ ಸಿಕ್ಕಿದೆ- ಎಂಬ ಸಂಭ್ರಮದಲ್ಲಿದ್ದರು. ಯು.ಜಿ.ಸಿ.ಯ ಯಾವ ನಿಯಮವೂ ಅವರಿಗೆ ಅನ್ವಯವಾಗಬೇಕಿರಲಿಲ್ಲ. ಅವರು ಸರ್ಕಾರದಿಂದ ‘ಅನುದಾನ’ ತೆಗೆದುಕೊಳ್ತಿರಲಿಲ್ಲ. ಒಂದು ವಾರ ಕಳೆಯುವಷ್ಟರಲ್ಲಿ ದಣಿದುಬಿಟ್ಟಿದ್ದೆ. ನಾಗರಿಕ ಸಮಾಜದಲ್ಲಿ ಮೇಲ್ಜಾತಿ ವರ್ಗಗಳು ಪ್ರತ್ಯೇಕ ಅಪಾರ್ಟಮೆಂಟು, ಲೇಔಟು, ಶಾಪಿಂಗ್ ಮಾಲ್‍ಗಳು, ಆಸ್ಪತ್ರೆಗಳ ಸೌಲಭ್ಯಗಳನ್ನು ಮಾತ್ರವಲ್ಲದೆ; ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನೂ ಕಟ್ಟಿಕೊಂಡು, ತಮ್ಮನ್ನು ಇನ್ನಿತರರಿಗಿಂತ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳುತ್ತಿವೆ. ಮತೀಯವಾದದ ಗರಡಿಮನೆ ತುಂಬ ಸುಂದರವಾಗಿ ಕಂಗೊಳಿಸುತ್ತಿದೆ. ಇವುಗಳ ವಾರಸುದಾರರು ರಾಜಕಾರಣಿಗಳು ಅಥವಾ ರಾಜಕಾರಣಿಗಳ ಬಂಧುಗಳು. ಮತೀಯ ದ್ವೇಷದಿಂದ ಸಿಡಿವ ಬಾಂಬರ್‍ಗಳಾಗಿ ಯುವ ಸಮುದಾಯವನ್ನು ತಯಾರು ಮಾಡಿದ ಮೇಲೆ ಸಾಮಾಜಿಕ ಸ್ವಾಸ್ಥ್ಯದ ಮಾತೆಲ್ಲಿ? ಕೋಮುವಾದ ಆರ್ಭಟಿಸುತ್ತಲೇ ಇದೆ- ರಾಜಕಾರಣಿಗಳ ಸಾಕುನಾಯಿಯಂತೆ.

– ವಿನಯಾ ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...