Homeಮುಖಪುಟಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ...

- Advertisement -
- Advertisement -

ಇತ್ತೀಚೆಗೆ “ಪ್ರಾಕೃತಿಕ ಗ್ಯಾಸ್ ಬೆಲೆಯಲ್ಲಿ 40% ಹೆಚ್ಚಳ” ಎಂಬ ಸುದ್ದಿ ನೀವೆಲ್ಲರೂ ದೃಶ್ಯಮಾಧ್ಯಮದಲ್ಲಿ ಕೇಳಿರುತ್ತೀರಿ ಅಥವಾ ವೃತ್ತಪತ್ರಿಕೆಗಳಲ್ಲಿ ಓದಿರುತ್ತೀರಿ. ಗ್ಯಾಸ್ ಬೆಲೆ ಯೂನಿಟ್ಟಿಗೆ 6.10 ಡಾಲರ್ ನಿಂದ 8.57 ಡಾಲರ್ ಆಗಲಿದೆ ಅಂದರೆ ಸುಮಾರು 40% ಹೆಚ್ಚಳ ಆಗಲಿದೆ ಮತ್ತು ಅದರಿಂದ ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಗ್ರಾಹಕರಿಗೆ ಅದರ ಬಿಸಿ ತಟ್ಟಲಿದೆ ಎಂಬ ವಿವರ ಸುದ್ದಿಯಲ್ಲಿತ್ತು. ಇದರಲ್ಲಿ ಗಮನಿಸಬೇಕಾದ ವಿಷಯ ಅಥವಾ ಕೇಳಬೇಕಾದ ಪ್ರಶ್ನೆ: ಮೊದಲನೆಯದು, ಭಾರತದಲ್ಲಿ ಇರುವ ತೈಲನಿಕ್ಷೇಪದಿಂದ ಭಾರತದ ಕಂಪನಿಗಳೇ ಉತ್ಪಾದಿಸುತ್ತಿರುವ ಗ್ಯಾಸ್ ಬೆಲೆ “ಡಾಲರ್”ನಲ್ಲಿ ಏಕಿದೆ ಮತ್ತು  ಎರಡನೆಯದು, ಉತ್ಪಾದನಾ ವೆಚ್ಚಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಬೆಲೆಗೆ ಖಾಸಗಿ ಕಂಪನಿಗಳು ಭಾರತದ ಗ್ರಾಹಕರಿಗೆ ಗ್ಯಾಸ್ ಮಾರಾಟ ಮಾಡಲು ಸರಕಾರ ಏಕೆ ಅನುವು ಮಾಡಿಕೊಟ್ಟಿದೆ ಎಂಬುದು. ಗ್ಯಾಸ್ ಉತ್ಪಾದನೆ ಮತ್ತು ಮಾರಾಟವನ್ನು  ಅಂಬಾನಿ ಮತ್ತು ಅದಾನಿ ಅವರಿಗೆ ಗುತ್ತಿಗೆ ನೀಡಿರುವುದರಿಂದ ಎರಡನೆಯ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದುಕೊಂಡಿದ್ದೇನೆ. ಮೊದಲನೆಯ ಪ್ರಶ್ನೆಯ ಉತ್ತರಕ್ಕೆ ನಂತರ ಬರೋಣ.

ಗೃಹಬಳಕೆಯ 14.2 ಕೆಜಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ರೂ.1050 ದಾಟಿದೆ ಮತ್ತು 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು ರೂ.1900 ಇದೆ. ಅಂದರೆ ಗೃಹಬಳಕೆ ಗ್ಯಾಸ್ ರೂ.75/ಕೆಜಿ ಮತ್ತು ವಾಣಿಜ್ಯ ಗ್ಯಾಸ್ ರೂ.100/ಕೆಜಿ ಎಂದಾಯಿತು. ಗೃಹಬಳಕೆಯ ಸಿಲಿಂಡರ್ ಮೇಲೆ ಸರಕಾರ ಈಗಲೂ ಸಬ್ಸಿಡಿ ನೀಡುತ್ತಿದೆ ಎಂದು ಅವರ ವಾದ. ಆದರೆ ನಿಮ್ಮ ಖಾತೆಗೆ ಯಾವುದೇ ಹಣ ಬರುತ್ತಿಲ್ಲ ಎಂಬುದೂ ಸಹ  ಸತ್ಯ. ಸಿ.ಎನ್.ಜಿ. ಬೆಲೆ ರೂ.86/ಕೆಜಿ ಇದೆ. ಸರಕಾರ ಎಲ್ಲ ರೀತಿಯ ಸಬ್ಸಿಡಿ ನಿಲ್ಲಿಸಬೇಕೆಂದು ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಭಾರತದ ಮಹಾನಗರಗಳಲ್ಲಿ ಈಗಾಗಲೇ ಹೆಚ್ಚಿನ ಮನೆಗಳಿಗೆ ಪೈಪ್-ಗ್ಯಾಸ್ (ಪಿ.ಎನ್.ಜಿ.) ಸಂಪರ್ಕ ಬಂದಾಗಿದೆ. ಕರ್ನಾಟಕದಲ್ಲೂ ತುಮಕೂರು, ಮೈಸೂರು ನಗರಗಲ್ಲಿ ಪೈಪ್ ಜೋಡಣೆ ಕಾರ್ಯ ಪ್ರಾರಂಭವಾಗಿದೆ. ಈ ಪೈಪ್ ಡ್ರೀಂ ಮಾರಾಟಗಾರರ ವಾದ ಏನೆಂದರೆ ನಿಮ್ಮ ಗೃಹಬಳಕೆಯ ಸಿಲಿಂಡರ್ ಬೆಲೆಗಿಂತ ಪೈಪ್ ಗ್ಯಾಸ್ ಬೆಲೆ ಸುಮಾರು 20-30% ಕಡಿಮೆ ಆಗುತ್ತದೆ, ನಿಮಗೆ 24 ಗಂಟೆ ಗ್ಯಾಸ್ ಬರುತ್ತದೆ, ಮೀಟರ್ ಪಾರದರ್ಶಕವಾಗಿ ನಿಮ್ಮ ಮುಂದೆ ಕಾಣುವಂತೆ ಇರುತ್ತದೆ ಮತ್ತು ನಿಮ್ಮ ಶಕ್ತ್ಯಾನುಸಾರ ಗ್ಯಾಸ್ ಬಳಕೆ ಮಾಡಬಹುದು ಹಾಗೂ ಮುಖ್ಯವಾಗಿ ಸಿಲಿಂಡರ್ ನಂತೆ ಪೈಪ್ ಬ್ಲಾಸ್ಟ್ ಆಗುವ ಸಂಭವ ತೀರ ಕಡಿಮೆ, ಇತ್ಯಾದಿ ಇತ್ಯಾದಿ.. ಪಿ.ಎನ್.ಜಿ. ಬೆಲೆ ಯೂನಿಟ್ಟಿಗೆ ರೂ.55 ಇದೆ ಅಂದರೆ ಗೃಹಬಳಕೆ ಸಿಲಿಂಡರ್ ಬೆಲೆಗೆ (ರೂ. 75/ಕೆಜಿ) ಹೋಲಿಸಿದರೆ ನಿಮಗೆ 20-30% ಉಳಿತಾಯ ಎಂದು ನಿಮ್ಮನ್ನು ನಂಬಿಸಲು ಮುಂದಾಗಿದ್ದಾರೆ.

ಈಗ ಇತ್ತೀಚಿನ ಪಿ.ಎನ್.ಜಿ. ಬೆಲೆ 40% ಏರಿಕೆ ಬಗ್ಗೆ ಬರೋಣ ಅಂದರೆ. ಈಗಿರುವ ರೂ.55/ಕೆಜಿ ಏನಾಗುತ್ತದೆ? ಅದು ರೂ.77/ಕೆಜಿ ಆಗುತ್ತದೆ. ಅಂದರೆ ಈಗಿರುವ ಗೃಹಬಳಕೆ ಸಿಲಿಂಡರ್ ಸಮಸಮಕ್ಕೆ ಬರುತ್ತದೆ ಅಥವಾ ಇನ್ನೂ ಸ್ವಲ್ಪ ಹೆಚ್ಚು ಅನ್ನಬಹುದು. ಮೇಲೆ ಹೇಳಿದಂತೆ ಗೃಹ ಬಳಕೆ ಸಿಲಿಂಡರ್ ಮಾಯವಾದರೆ ನೀವು ಯಾವುದಕ್ಕೆ ಬೆಲೆ ಹೋಲಿಸುತ್ತೀರಿ, ವಾಣಿಜ್ಯ ಸಿಲಿಂಡರ್ (ರೂ.100/ಕೆಜಿ) ತಾನೇ? ಇನ್ನು ಹೊಸ ಪೈಪ್ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು, ಅದಕ್ಕೆ ನೀಡಬೇಕಾದ ಮುಂಗಡ, ಇನ್ಸ್ಟಲೇಷನ್ ವೆಚ್ಚ, ಸೆಕ್ಯುರಿಟಿ ಡಿಪಾಸಿಟ್, ಎಲ್ಲಾ ಸೇರಿ ಸುಮಾರು ರೂ.6000/-ದಷ್ಟು ಎಲ್ಲಾ ನಿಮ್ಮ ಜೇಬಿನಿಂದ ಹೋಗುತ್ತದೆ. ಗ್ಯಾಸ್ ಸಂಪರ್ಕ ಖಾಸಗಿ ಕಂಪನಿಯಾಗಿರುವುದರಿಂದ ನಿಮಗೆ ಯಾವುದೇ ರೀತಿಯ ಸಬ್ಸಿಡಿ ಇರುವುದಿಲ್ಲ. ಮುಂದೆ ಅವರು ಆಡಿದ್ದೇ ಆಟ. ಈಗಲಾದರೂ ಅರ್ಥವಾಯಿತೇ ಸರಕಾರ ಹೇಗೆ ನಿಮ್ಮ ಕಿವಿಗೆ ಹೂವು ಮುಡಿಸುತ್ತಿದೆ ಎಂದು.

ಇನ್ನು ನಮ್ಮ ಮೊದಲನೆಯ ಪ್ರಶ್ನೆಗೆ ಬರೋಣ. ಗ್ಯಾಸ್ ಉತ್ಪಾದನೆ ದೇಶದ ಕೆ.ಜಿ.ಬೇಸಿನ್ ಹಳೆಯ ಬಾವಿಗಳಿಂದ ಆಗುತ್ತಿದೆ. ಇದರಲ್ಲಿ ಸಿಗುವ ಗ್ಯಾಸ್ ನಮ್ಮ ದೇಶದ ಸೊತ್ತು, ಯಾವುದೇ ವಿದೇಶದಿಂದ ಆಮದು ಮಾಡಿಕೊಂಡಂತಹ ಅನಿಲವಲ್ಲ. ಕೆಜಿ ಬೇಸಿನ್ ಗ್ಯಾಸ್ ಅನ್ವೇಷಣೆಗೆ ಭಾರತ ಸರಕಾರ ರಿಲಯನ್ಸ್ ಕಂಪನಿಗೆ ಗುತ್ತಿಗೆ ನೀಡಿತ್ತು ಅದರ ಖರ್ಚನ್ನು ಭಾರತ ಸರಕಾರ ಭರಿಸಿತ್ತು. ರಿಲಯನ್ಸ್ ಕಂಪನಿ ಈ ಖರ್ಚನ್ನು ಎರಡು ಬಿಲಿಯನ್ ಡಾಲರ್ ಎಂದು ಹೇಳಿತ್ತು. ಆದರೆ ವೆಚ್ಚ ಒಂದು ಬಿಲಿಯನ್ ಡಾಲರ್ ಸಹ ಆಗಲಿಲ್ಲ ಎಂಬುದು ಹಲವು ತೈಲ-ತಜ್ಞರ ವಾದ. ಭಾರತ ಸರಕಾರವಾಗಲೀ, ರಿಲಯನ್ಸ್ ಕಂಪನಿಯಾಗಲೀ ವೆಚ್ಚದ ಸಿ.ಎ.ಜಿ. ಆಡಿಟ್ಟಿಗೆ ಒಪ್ಪಲೇ ಇಲ್ಲ. ಇನ್ನು ತೈಲವನ್ನು ಹೊರಗೆ ಎಳೆಯುವ ವೆಚ್ಚ ಒಂದು ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಟಿಗೆ ಎರಡು ಡಾಲರ್ ಸಹ ಆಗುವುದಿಲ್ಲ ಎಂಬುದು ತೈಲ-ತಜ್ಞರ ವಾದ. ಆದರೆ ಭಾರತ ಸರಕಾರ ಇದಕ್ಕೆ 6.10 ಡಾಲರ್ ನಿಗದಿ ಮಾಡಿತ್ತು ಮತ್ತು ಇದನ್ನು ಈಗ 8.57 ಡಾಲರ್ ಪ್ರತಿ ಎಂಬಿಟಿಯುಗೆ ಏರಿಸಲಾಗಿದೆ. ಏಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿಲದ ಬೆಲೆ, ಯುಕ್ರೇನ್ ಯುದ್ಧ ಪ್ರಾರಂಭವಾದಾಗ ಇದಕ್ಕಿಂತ ಹೆಚ್ಚಾಗಿತ್ತು. (9.34ಡಾಲರ್/ಪ್ರತಿ ಯೂನಿಟ್ ವರೆಗೂ ಹೋಗಿತ್ತು) ಆದರೆ ಇಂದು ಬೆಲೆ 6.67ಡಾಲರ್/ಪ್ರತಿ ಯೂನಿಟ್ ಇದೆ. ಇಷ್ಟೇ ಅಲ್ಲ ಹಳೆಯ ಬಾವಿಗಳನ್ನು ಬಿಟ್ಟು, ಉತ್ಪಾದನೆ ಸ್ವಲ್ಪ ಕಷ್ಟಕರವಾದ ಸಮುದ್ರ ಮಧ್ಯದಲ್ಲಿರುವ ಡಿ6 ಬಾವಿಗಳಿಂದ ತೆಗೆಯುವ ಅನಿಲಕ್ಕೆ ಬೆಲೆಯನ್ನು 9.92ಡಾಲರ್/ಪ್ರತಿ ಎಂಬಿಟಿಯುಗೆ ನಿಂದ 12.6ಡಾಲರ್/ಪ್ರತಿ ಎಂಬಿಟಿಯುಗೆ ಹೆಚ್ಚಿಸಿದೆ. ಅನಿಲ ಬೆಲೆ ಏರಿಕೆ 2019ರಿಂದ ಇದು ಮೂರನೆಯದಾಗಿರುತ್ತದೆ. ರುಪಾಯಿ ಬೆಲೆ ಡಾಲರ್ ವಿರುದ್ಧ ಕುಸಿದಂತೆ ಡಾಲರ್ ಪಡೆಯುತ್ತಿರುವ ಕಂಪನಿಯ ಮಾಲೀಕರ ನಗು ಬಾಯಿ ತುಂಬಿ ಹೊರಸೂಸುತ್ತಿದೆ. ಮೋದಿಯವರು ತಮ್ಮ ಆಪ್ತಮಿತ್ರರಿಗೆ ಸಹಾಯ ಮಾಡಲು ಹೇಗೆ ಸರಕಾರದಿಂದ ಅನುವು ಮಾಡಿಕೊಡುತ್ತಿದ್ದಾರೆ ಎಂಬುದು ಬಹುಶಃ ಈಗಲಾದರೂ ತಮಗೆ ಅರ್ಥವಾಗಿರಬಹುದು.

ಜಿ.ಆರ್. ವಿದ್ಯಾರಣ್ಯ

(ಜಿ.ಆರ್ ವಿದ್ಯಾರಣ್ಯರವರು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ. ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ)

ಇದನ್ನೂ ಓದಿ; ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬರೀ ರೈಲು ಬಿಟ್ಟಿದ್ದಾರೆ… ಜನಪರ ಕಾಳಜಿ ಅನ್ನೋ ಪದದಡಿ ಜನರನ್ನು ಹಾದಿತಾಪ್ಪಿಸುವ ಪ್ರಯತ್ನ…

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...