Homeಮುಖಪುಟಮೋದಿ ತನ್ನ ತಪ್ಪು ಒಪ್ಪಿಕೊಂಡರೆ ದೇಶದ ಪುನರ್‌‌ನಿರ್ಮಾಣ ಪ್ರಾರಂಭ: ರಾಹುಲ್ ಗಾಂಧಿ

ಮೋದಿ ತನ್ನ ತಪ್ಪು ಒಪ್ಪಿಕೊಂಡರೆ ದೇಶದ ಪುನರ್‌‌ನಿರ್ಮಾಣ ಪ್ರಾರಂಭ: ರಾಹುಲ್ ಗಾಂಧಿ

ಕೊರೊನಾ ಸಾಂಕ್ರಾಮಿಕ ಸಮಯ ಜಾಗತಿಕ ಬಡತನದ ಹೆಚ್ಚಳದಲ್ಲಿ ಭಾರತವು 57.3% ರಷ್ಟು ಪಾಲನ್ನು ಹೊಂದಿದೆ ಎಂದು ವಿಶ್ವ ಬ್ಯಾಂಕ್‌ ವರದಿ ನೀಡಿತ್ತು.

- Advertisement -

ಪ್ರಧಾನಿ ಮೋದಿ ಕೊರೊನಾ ಸಾಂಕ್ರಮಿಕವನ್ನು ನಿರ್ವಹಿಸುವಲ್ಲಿ ಆಗಿರುವ ತನ್ನ ತಪ್ಪುಗಳನ್ನು ಒಪ್ಪಿಕೊಂಡು, ತಜ್ಞರ ಸಹಾಯವನ್ನು ಪಡೆದಾಗ ನಮ್ಮ ದೇಶದ ಪುನರ್‌‌ನಿರ್ಮಾಣ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಸಮಯ ಜಾಗತಿಕ ಬಡತನದ ಹೆಚ್ಚಳದಲ್ಲಿ ಭಾರತವು 57.3% ರಷ್ಟು ಪಾಲನ್ನು ಹೊಂದಿದೆ ಎಂದು ವಿಶ್ವ ಬ್ಯಾಂಕ್‌ ವರದಿ ನೀಡಿತ್ತು. ಈ ಅಂಕಿ ಅಂಶಗಳನ್ನು ಅವರು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಭ್ರಷ್ಟಾಚಾರಿಗಳ ಮೇಲೆ ನಂಬಿಕೆಯೆ ಹೊರತು ರಾಮನ ಮೇಲಲ್ಲ: AAP ಸಂಸದ

ತನ್ನ ಟ್ವೀಟ್‌ನಲ್ಲಿ, ವಿಶ್ವಬ್ಯಾಂಕ್‌ ಬಡನದ ಕುರಿತು ನೀಡಿದ್ದ ವರದಿಯ ಚಿತ್ರವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, “ಇದು ಭಾರತ ಸರ್ಕಾರವು ಸಾಂಕ್ರಮಿಕವನ್ನು ಕೆಟ್ಟದಾಗಿ ನಿರ್ವಹಿಸಿರುವುದರ ಫಲಿತಾಂಶವಾಗಿದೆ. ಆದರೆ ನಾವೀಗ ಭವಿಷ್ಯದತ್ತ ಗಮನ ಹರಿಸಬೇಕಾಗಿದೆ. ಪ್ರಧಾನಿ ತನ್ನ ತಪ್ಪುಗಳನ್ನು ಒಪ್ಪಿಕೊಂಡು, ತಜ್ಞರ ಸಹಾಯವನ್ನು ಪಡೆದಾಗ ನಮ್ಮ ದೇಶದ ಪುನರ್‌‌ನಿರ್ಮಾಣ ಪ್ರಾರಂಭವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

ರಾಹುಲ್ ಗಾಂಧಿ, “ಎಲ್ಲವನ್ನೂ ನಿರಾಕರಿಸಿ ಬದುಕುವುದರಿಂದ ಯಾವ ಸಮಸ್ಯೆಯು ಪರಿಹಾರವಾಗುವುದಿಲ್ಲ” ಎಂದು ಹೇಳಿದ್ದಾರೆ.

ವಿಶ್ವಬ್ಯಾಂಕ್‌ ತನ್ನ ವರದಿಯಲ್ಲಿ, ಜಾಗತಿಕವಾಗಿ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಮಧ್ಯಮ ಆದಾಯದ ಗುಂಪಿನಿಂದ ಹೊರಗುಳಿದ ಜನರ ಅಂದಾಜು ಅಂಕಿ ಅಂಶವನ್ನು ನೀಡಿದೆ. ಇದರಲ್ಲಿ ಹೆಚ್ಚಿನ ಕೊಡುಗೆ ಭಾರತದ್ದೆ ಆಗಿದೆ ಎಂದು ಅದು ಉಲ್ಲೇಖಿಸಿದೆ.

ವರದಿಯ ಪ್ರಕಾರ ಸಾಂಕ್ರಮಿಕದ ಸಮಯದಲ್ಲಿ ಜಗತ್ತಿನ 13.1 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದು, ಇದರಲ್ಲಿ 7.5 ಕೋಟಿ ಜನರು ಭಾರತದ ಜನರೆ ಆಗಿದ್ದಾರೆ(57.3%). ಹಾಗೆಯೆ ಸಾಂಕ್ರಮಿಕದ ಸಮಯದಲ್ಲಿ ಜಗತ್ತಿನ 5.4 ಕೋಟಿ ಜನರು ಮಧ್ಯಮ ಆದಾಯದ ಗುಂಪಿನಿಂದ ಹೊರಹೋಗಿದ್ದಾರೆ. ಇದರಲ್ಲಿ 3.5 ಕೋಟಿ ಜನರು ಭಾರತೀಯರಾಗಿದ್ದಾರೆ(59.3%).

ಇದನ್ನೂ ಓದಿ: ಕೋವಿಡ್ 2ನೇ ಅಲೆಯಿಂದ ಆರ್ಥಿಕತೆಗೆ 2 ಲಕ್ಷ ಕೋಟಿ ರೂ ನಷ್ಟ: RBI ವರದಿ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial