Election Results 2021 Live Updates | Assembly election 2021 result | latest election results | latest election news | NaanuGauri
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಆಡಳಿತ ಪಕ್ಷಗಳ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದರೂ, ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆ. ಬಿಜೆಪಿ ಮೈತ್ರಿಕೂಟ ಇದುವರೆಗೂ 72 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಮೈತ್ರಿ ಕೂಟದ ಕಳೆದ ಬಾರಿಗಿಂತ ಒಂದು ಸ್ಥಾನವು ಕಡಿಮೆಯಾಗಿದೆ. ಕಾಂಗ್ರೆಸ್ ಮೈತ್ರಿಕೂಟ 52 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮೈತ್ರಿಕೂಟದಲ್ಲಿ ಬಿಜೆಪಿಯೊಂದೆ 57 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಕಾಂಗ್ರೆಸ್ ಈ ಬಾರಿ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಪಕ್ಷವು 26 ಸ್ಥಾನಗಳನ್ನು ಪಡೆದಿತ್ತು.
ರಾಜ್ಯದಲ್ಲಿ ಇದುವರೆಗೂ ಬಿಜೆಪಿ ಮೈತ್ರಿಕೂಟದಲ್ಲಿ ಬಿಜೆಪಿ ಪಕ್ಷವೊಂದೆ 57 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಅದರ ಮೈತ್ರಿ ಪಕ್ಷಗಳಾದ
AGP ► 10 ಮುನ್ನಡೆ
UPPL ►5 ಮುನ್ನಡೆ ಸಾಧಿಸಿದೆ.
ಕಾಂಗ್ರಸ್ ಮೈತ್ರಿಕೂಟದಲ್ಲಿ ಪಕ್ಷವು 30 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮೈತ್ರಿಪಕ್ಷಗಳಾದ
AIUDF ► 17 ಮುನ್ನಡೆ.
BPF ► 4 ಮುನ್ನಡೆ.
CPIM ► 1 ಮುನ್ನಡೆ ಸಾಧಿಸಿದೆ.
ಇದುವರೆಗೂ ರಾಜ್ಯದ ಫಲಿತಾಂಶ ಹೀಗಿದೆ.
ಅಸ್ಸಾಂ
126 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಪ್ರಾರಂಭವಾಗಿದೆ.
BJP ಮೈತ್ರಿ ► 72 ಮುನ್ನಡೆ. Wins ► 19
ಕಾಂಗ್ರೆಸ್ ಮೈತ್ರಿ ► 52 ಮುನ್ನಡೆ. Wins ► 7
ಇತರೆ ► 2 ಮುನ್ನಡೆ.
ಕೇರಳ
ಕೇರಳದ ಇದುವರೆಗಿನ ರಾಜಕೀಯ ಇತಿಹಾಸವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಬದಲಾಯಿಸುವತ್ತ ಹೊರಟಿದೆ. ರಾಜ್ಯದಲ್ಲಿ ಸತತವಾಗಿ ಅಧಿಕಾರ ಹಿಡಿಯುವತ್ತ ಎಡರಂಗ ಸರ್ಕಾರ ಮುನ್ನುಗ್ಗುತ್ತಿದೆ. ಆದರೆ ಈ ಹಿಂದೆ ಇದ್ದ ಒಂದು ಕ್ಷೇತ್ರವನ್ನು ಕೂಡಾ ಬಿಜೆಪಿ ಕಳೆದುಕೊಂಡಿದೆ.
ಆರಂಭದಲ್ಲಿ ಕೇರಳದ ಪಾಲಕ್ಕಾಡ್, ಕಾಸರಗೋಡ್, ನೇಮಂನಲ್ಲಿ ಬಿಜೆಪಿ ಮುನ್ನಡೆಯಲ್ಲಿತ್ತು. ಇದೀಗ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಮುಗ್ಗರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ಈ ಹಿಂದೆ ಬಿಜೆಪಿಗೆ ಇರುವ ಒಂದು ಕ್ಷೇತ್ರವನ್ನು ಕೂಡಾ ‘ಕ್ಲೋಸ್’ ಮಾಡುವುದಾಗಿ ಹೇಳಿದ್ದರು.
ಈ ವರೆಗೆ ಕೇರಳದಲ್ಲಿ ಸಿಪಿಐ(ಎಂ) 62, ಸಿಪಿಐ 17, ಕಾಂಗ್ರೆಸ್ 21, ಮುಸ್ಲಿಂ ಲೀಗ್ 14, ಜೆಡಿ(ಎಸ್) 2 ಸ್ಥಾನಗಳಲ್ಲಿ ಮತ್ತು ಇತರೆ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಜ್ಯದ 140 ಸ್ಥಾನಗಳ ಮತ ಎಣಿಕೆ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಪ್ರಾರಂಭವಾಗಿದೆ.
ಸಿಪಿಎಂ ನೇತೃತ್ವದ LDF ► 100 ಮುನ್ನಡೆ. Wins ► 47
ಕಾಂಗ್ರೆಸ್ ನೇತೃತ್ವದ UDF ► 40 ಮುನ್ನಡೆ. Wins ► 10
ಬಿಜೆಪಿ ನೇತೃತ್ವದ NDA ► 0
ಇತರೆ ► 0
ತಮಿಳುನಾಡು
ತಮಿಳುನಾಡಿನಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಮಾಹಿತಿಯಂತೆ ವಿರೋಧ ಪಕ್ಷವಾದ ಡಿಎಂಕೆ ದಶಕಗಳ ನಂತರ ಅಧಿಕಾರ ಹಿಡಿಯುವತ್ತ ಹೊರಟಿದೆ. ಇದುವರೆಗಿನ ಮಾಹಿತಿಯಂತೆ ಡಿಎಂಕೆ ಒಕ್ಕೂಟವು 151 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಈ ಒಕ್ಕೂಟದಲ್ಲಿ ಡಿಎಂಕೆ ಒಂದೇ ಪಕ್ಷ 118 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮೈತ್ರಿಪಕ್ಷಗಳಾದ ಕಾಂಗ್ರೆಸ್► 16
VCK► 5
DMK MDMK►4
DMK OTH►4
CPIM►2
CPI►2
ಮುಸ್ಲಿಂಲೀಗ್►0
ಆಡಳಿತ ಪಕ್ಷವಾದ AIADMK ಒಕ್ಕೂಟ 82 ಸ್ಥಾಗಳಲ್ಲಿ ಮಾತ್ರವೆ ಮುನ್ನಡೆ ಸಾಧಿಸಿದೆ. ಈ ಒಕ್ಕೂಟದಲ್ಲಿ AIADMK 73 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಮೈತ್ರಿ ಪಕ್ಷಗಳಾದ,
BJP► 3
PMK►5
AIADMK OTH► 1
ಕಮಲ ಹಾಸನ್ ಪಕ್ಷವಾದ ಮಕ್ಕಳ್ ನೀಡಿ ಮಯ್ಯಂ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರವೆ ಮುನ್ನಡೆ ಸಾಧಿಸಿದೆ.
ಇಲ್ಲಿವರೆಗಿನ ಫಲಿತಾಂಶ ಹೀಗಿದೆ.
234 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಪ್ರಾರಂಭವಾಗಿದೆ.
DMK ಒಕ್ಕೂಟ ► 151 ಮುನ್ನಡೆ. Wins ► 22
AIADMK ಒಕ್ಕೂಟ ► 82 ಮುನ್ನಡೆ.( ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ) Wins ► 6
ಕಮಲ್ ಹಾಸನ್ MNM ► 1 ಮುನ್ನಡೆ.
ಪಶ್ಚಿಮಬಂಗಾಳ
ಬಂಗಾಳದಲ್ಲಿ ಅಧಿಕಾರ ಹಿಡಿಯುವ ಭಾರಿ ನಿರೀಕ್ಷೆಯಲ್ಲಿದ್ದ ಬಿಜೆಪಿ ಮುಗ್ಗರಿಸುತ್ತಿದೆ. ಆಡಳಿತ ಪಕ್ಷ ಟಿಎಂಸಿ ಬಿಜೆಪಿಗಿಂತ ಎರಡು ಪಟ್ಟು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಂಗಳಾದಲ್ಲಿ ಎಡಪಕ್ಷಗಳು ತಮ್ಮ ಅಸ್ತಿತ್ವ ತೋರುವಲ್ಲಿ ಎಡವಿದೆ.
ರಾಜ್ಯದ ಎಲ್ಲಾ 292 ಕ್ಷೇತ್ರಗಳಲ್ಲಿ ಎಣಿಕೆ ಪ್ರಾರಂಭವಾಗಿದೆ.
TMC ► 210 ಮುನ್ನಡೆ. Wins ► 66
BJP ► 79 ಮುನ್ನಡೆ. Wins ► 16
Cong & Left ► 2 ಮುನ್ನಡೆ.
ಇತರೆ ► 2 ಮುನ್ನಡೆ. Wins ► 1
ಪುದುಚೇರಿ
30 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಇದುವರೆಗೂ 20 ಕ್ಷೇತ್ರಗಳ ಮತ ಎಣಿಕೆ ಪ್ರಾರಂಭವಾಗಿದೆ.
BJP ಮೈತ್ರಿ ► 12 ಮುನ್ನಡೆ. Wins ► 8
ಕಾಂಗ್ರೆಸ್ ಮೈತ್ರಿ ► 6 ಮುನ್ನಡೆ. Wins ► 3
ಇತರೆ ► 2 ಮುನ್ನಡೆ. Wins ► 1



refresh madalu lekhanadalle ondu option or button odagisi.