Homeಅಂಕಣಗಳುಸಾಹಿತ್ಯ ಪ್ರಾತಿನಿಧ್ಯವನ್ನು ಗೇಲಿ ಮಾಡುವ ಪ್ರತಿಗಾಮಿತನ

ಸಾಹಿತ್ಯ ಪ್ರಾತಿನಿಧ್ಯವನ್ನು ಗೇಲಿ ಮಾಡುವ ಪ್ರತಿಗಾಮಿತನ

- Advertisement -
- Advertisement -

ಹೊಸ ವರ್ಷದ ಮೊದಲ ದಿನದಂದು ಪರಿಸರ-ವಿಜ್ಞಾನದ ಸಂಗತಿಗಳನ್ನು ಬೆರೆಸಿ ಕಥೆಗಳನ್ನು ಬರೆಯುವ ಜನಪ್ರಿಯ ಕಾದಂಬರಿಕಾರ ಗಣೇಶಯ್ಯನವರ ಪುಸ್ತಕಗಳ ಬಿಡುಗಡೆಯಲ್ಲಿ ಮತ್ತೋರ್ವ ಜನಪ್ರಿಯ ಕಥೆಗಾರ ಜೋಗಿ (ಗಿರೀಶ್ ರಾವ್) ಆಡಿದ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ. ’ಸಾಹಿತ್ಯ ಸಮ್ಮೇಳನದಂತಹ ವೇದಿಕೆಗಳಲ್ಲಿ ಜಾತಿ ಪ್ರಾತಿನಿಧ್ಯದ ಪ್ರಶ್ನೆ ವ್ಯರ್ಥ ವಾಗ್ವಾದ. ಸಾಹಿತ್ಯದಲ್ಲಿ ನಮ್ಮ ಜಾತಿಯವರು ಎಷ್ಟಿದ್ದೀವಿ ಅಂತ ನೋಡ್ತೀವಿ; ಜ್ಞಾನ ನೋಡಲ್ಲ. ಮೊದಲಿದು ರಾಜಕಾರಣದಲ್ಲಿತ್ತು. ಅಲ್ಲಿದ್ದ ಜಾತಿವಾರು ವಿಂಗಡಣೆ ಈಗ ರಾಜಕೀಯಕ್ಕೆ ಬಂದುಬಿಟ್ಟಿದೆ. ಜಾತಿ ನೆಲೆಯಿಂದ ನೋಡುವುದು ಸುಳ್ಳು ವಾಗ್ವಾದಗಳನ್ನು ಹುಟ್ಟುಹಾಕುತ್ತೆ. ಈ ವಾಗ್ವಾದಗಳಲ್ಲಿ ಹುರುಳಿರುವುದಿಲ್ಲ. ಅದರಿಂದ ನಮಗೇನೂ ಸಿಕ್ಕುವುದಿಲ್ಲ. ಕೃತಿಯ ಕಾರಣಕ್ಕೆ ಯೋಗ್ಯತೆಯನ್ನು ಅಳೆದು ನ್ಯಾಯ ಸಲ್ಲಿಸಬೇಕು. ಆಗ ಯೋಚಿಸುವವನ ಬುದ್ಧಿಶಕ್ತಿಗೆ ಕೆಲಸ ಕೊಟ್ಟಂತೆ ಆಗುತ್ತದೆ’ ಹೀಗೆಲ್ಲಾ ಮಾತಾಡ್ತಾ ಪ್ರಾತಿನಿಧ್ಯದ ಪ್ರಶ್ನೆಗಳು ಆಳದ ಚಿಂತನೆಗಳಲ್ಲ ಬದಲಾಗಿ ಮೇಲ್ಮಟ್ಟದ ಚಿಂತನೆಗಳು ಎಂದು ಹೀಗಳೆದಿದ್ದಾರೆ. ಇಡೀ ವಿಶ್ವ ಪ್ರಾತಿನಿಧ್ಯದ ಪ್ರಶ್ನೆಗಳನ್ನು ಎತ್ತಿಕೊಂಡು ಚರ್ಚಿಸುತ್ತಿರುವಾಗ, ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಪ್ರಾತಿನಿಧ್ಯದ ಸಮಸ್ಯೆಗಳನ್ನು ಸರಿಪಡಿಸಲು ಅಧ್ಯಯನಗಳನ್ನು ನಡೆಸುತ್ತಿರುವಾಗ, ಕರ್ನಾಟಕದಲ್ಲಿ ಜೋಗಿಯಂತಹ ಜನಪ್ರಿಯ ಲೇಖಕ-ಪತ್ರಕರ್ತರಿಗೆ ಇದು ವ್ಯರ್ಥ ವಾಗ್ವಾದದಂತೆ ಕಾಣುವುದು ಏಕೆ? ಪ್ರಿವಿಲೆಜ್ ಸಮುದಾಯದಿಂದ ಬಂದಂತಹ ಇಂತಹ ಬರಹಗಾರರು ಸಮಾಜದ ಸಮಸ್ಯೆಗಳಿಗೆ ಬೆನ್ನುತಿರುಗಿಸಿ ತಮ್ಮದೇ ಲೋಕದಲ್ಲಿ ಮುಳುಗಿರುವ ಸಂಗತಿ ಮಾತ್ರವೇ ಇದು?

ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಯನ ಮತ್ತು ವರದಿಗಳನ್ನು ಪ್ರಕಟಿಸುವ ಬ್ರಿಟಿಷ್ ಮೂಲದ ’ನೇಚರ್’ ಜರ್ನಲ್ ಇತ್ತೀಚೆಗೆ “ಹೇಗೆ ಭಾರತೀಯ ಜಾತಿ ವ್ಯವಸ್ಥೆ ವಿಜ್ಞಾನದಲ್ಲಿ ವೈವಿಧ್ಯತೆಯನ್ನು ನಿರ್ಬಂಧಿಸುತ್ತದೆ- ಆರು ಚಾರ್ಟ್‌ಗಳಲ್ಲಿ” ಎಂಬ ಅಧ್ಯಯನಪೂರ್ಣ ಬರಹವನ್ನು ಪ್ರಕಟಿಸಿತು. ಭಾರತದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ದಲಿತರು ಮತ್ತು ಆದಿವಾಸಿಗಳ ಪ್ರಾತಿನಿಧ್ಯದಲ್ಲಿ ಇರುವ ಕೊರತೆಯನ್ನು ಅಂಕಿಅಂಶಗಳ ಮೂಲಕ ಬಿಚ್ಚಿಟ್ಟಿತು. ಪ್ರೊಫೆಸರ್‌ಗಳು ಮತ್ತು ವಿಜ್ಞಾನಿಗಳ ಹುದ್ದೆಗಳಲ್ಲಂತೂ ದಲಿತ, ಆದಿವಾಸಿ ಮತ್ತು ಹಿಂದುಳಿದವರ ಸಂಖ್ಯೆ 2%-5% ಮಾತ್ರ. ಈ ಪ್ರಾತಿನಿಧ್ಯದ ಕೊರತೆಯಿಂದ ಈ ದೇಶದ ವಿಜ್ಞಾನ ಕ್ಷೇತ್ರದಲ್ಲಿ ಏನಾಗಿದೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ವಿಜ್ಞಾನ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದೇ ದೊಡ್ಡದಾದ ಅಥವಾ ಮನುಕುಲವನ್ನು ಬದಲಾಯಿಸಿದ ಬೆಳವಣಿಗೆ ಈ ದೇಶದ ವಿಜ್ಞಾನ ಸಂಸ್ಥೆಗಳಿಂದ ಹೊರಬಂದಿದ್ದು ಇಲ್ಲವೇಇಲ್ಲವೆನ್ನುವಷ್ಟು ವಿರಳ. ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ ವಿಭಾಗದಲ್ಲಿ ಆಯಾ ವರ್ಷ ನಡೆಯುವ ಬಹುಮುಖ್ಯ ಸಂಶೋಧನೆಗಳಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆಗೈದವರಿಗೆ ಈ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ ದೊರಕಿರುವುದನ್ನು ಎಣಿಸಲು ಬೆರೆಳೆಣಿಕೆಯ ಅಗತ್ಯವೂ ಇಲ್ಲ. ವಿವಿಧ ಜ್ಞಾನಕ್ಷೇತ್ರಗಳಲ್ಲಿ ಪರಿಣಿತರಾಗಿದ್ದ ಸಮುದಾಯಗಳನ್ನು ಕಡೆಗಣಿಸಿ ಮುಂದುವರಿದ ವಿಜ್ಞಾನ ಕ್ಷೇತ್ರದ ಬಾಳು ಇದು. ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಪಶ್ಚಿಮ ದೇಶಗಳಿಂದ ಸಿಕ್ಕುವ ಕೆಲಸಗಳಿಗೆ ಬಾಡಿಶಾಪಿಂಗ್ ಮಾಡುವ ಸಂಸ್ಥೆಗಳನ್ನು ಇಲ್ಲಿ ಕಟ್ಟಲಾಗಿದೆಯೇ ಹೊರತು, ಇಂಡಿಜೀನಸ್ ಎನ್ನುವ ತಂತ್ರಜ್ಞಾನ ಭಾರತದಿಂದ ಬೆಳೆದುಬಂದಿದೆಯೇ? ಇಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ವಿಜ್ಞಾನ ಕ್ಷೇತ್ರದಲ್ಲಿಯೂ ಜಾತಿ ಸಮುದಾಯಗಳ ಪ್ರಾತಿನಿಧ್ಯ ಏಕೆ ಬೇಕು? ಜ್ಞಾನವನ್ನು ಹುಡುಕೋಣ ಬನ್ನಿ ಎಂದು ಬೋಧನೆ ನೀಡುವ ಜೋಗಿಗಳ ಸಂಖ್ಯೆ ಇಲ್ಲಿಯೂ ಕಡಿಮೆಯೇನಿಲ್ಲ!

ಭಾರತದ ಮತ್ತು ಕರ್ನಾಟಕದ ಪತ್ರಿಕೋದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ. ಮಾಧ್ಯಮ ಕ್ಷೇತ್ರಗಳಲ್ಲಿ ಸಂಪಾದಕರು ಯಾವ ಸಮುದಾಯದಿಂದ ಬಂದವರು ಎಂದು ಹುಡುಕುತ್ತಾ ಹೋದರೆ 90%ಗಿಂತಲೂ ಹೆಚ್ಚು ಜನ 3% ಜನಸಂಖ್ಯೆಯ ಸಮುದಾಯಕ್ಕೆ ಸೇರಿದವರು ಎಂಬುದು ಅಚ್ಚರಿಯಾಗೇನೂ ಉಳಿದಿಲ್ಲ. ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರಗಳು ಒಂದಕ್ಕೊಂದು ಬೆಸೆದುಕೊಂಡಿರುವಂತಹವು. ಮಾಧ್ಯಮ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಸಮುದಾಯದ ವ್ಯಕ್ತಿಗಳಿಂದ ಸಾಹಿತ್ಯ ಕ್ಷೇತ್ರದ ಅದೇ ಸಮುದಾಯದ ವ್ಯಕ್ತಿಗಳು ವಿಜೃಂಭಿಸುವುದು ಅಲಿಖಿತ ಒಪ್ಪಂದ. ಹೀಗೆ ಕರ್ನಾಟಕದಲ್ಲಿಯೂ ಒಂದೇ ಸಮುದಾಯದ ಹೆಚ್ಚು ಸಾಹಿತಿಗಳು ಪಾರಮ್ಯ ಗಳಿಸಿದರು. ದೇವರಾಜ ಅರಸರ ಕಾಲಘಟ್ಟದಲ್ಲಿ ಆದ ರಾಜಕೀಯ ಬೆಳವಣಿಗೆ ಮಾತ್ರ ಸಾಹಿತ್ಯದಲ್ಲಿ ದಲಿತ ಮತ್ತು ಶೂದ್ರ ಸಂವೇದನೆಗೆ ಸ್ವಲ್ಪ ಅವಕಾಶ ಕೊಟ್ಟಿತು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಲಂಕೇಶ್, ತೇಜಸ್ವಿ, ಚಂಪಾ ಮುಂತಾದ ದಲಿತ ಹಾಗೂ ಶೂದ್ರ ಸಾಹಿತಿಗಳಿಂದ (ಕುವೆಂಪು ಇವರೆಲ್ಲರಿಗೂ ಪೂರ್ವದಲ್ಲಿ ಇಂತಹ ಸಂವೇದನೆಗೆ ಕಾರಣರಾಗಿದ್ದರು) ಕನ್ನಡ ಸಾಹಿತ್ಯ ವೈವಿಧ್ಯಮಯವೂ, ಜನಪರವೂ ಆಗಿದ್ದು ಇತಿಹಾಸ. ಈ ಇತಿಹಾಸದ ಬಳವಳಿ ಎಂಬಂತೆ ಇಂದಿನ ಯುವಜನತೆ ಎಲ್ಲ ಕ್ಷೇತ್ರದಲ್ಲಿಯೂ ಎಲ್ಲ ಸಮುದಾಯಗಳಿಗೂ ಸರಿಯಾದ ಪ್ರಾತಿನಿಧ್ಯದ ಬೇಡಿಕೆಯಿಡುತ್ತಿದೆ. ಇದು ಹಲವರಿಗೆ ನುಂಗಲಾರದ ತುತ್ತಾಗಿದೆ.

ಇಂದು ರಾಜಕೀಯವೂ ಬಹುಸಂಖ್ಯಾತ ಪ್ರಭುತ್ವದ ಸುಪರ್ದಿಗೆ ಹೊರಳಿರುವಾಗ, ಪ್ರತಿಗಾಮಿ ಸಾಹಿತಿಗಳು ಮತ್ತೆ ತಮ್ಮ ದನಿಯನ್ನು ಜೋರುಮಾಡುತ್ತಿದ್ದಾರೆ. ಇದು ಈ ಸಾಹಿತಿಗಳ ಅಜ್ಞಾನದ ಪ್ರದರ್ಶನ ಮಾತ್ರವಾಗಿರದೆ, ಇಲ್ಲಿಯವರೆಗೆ ಸಾಧಿಸಲಾಗಿರುವ ತುಸು ಪ್ರಗತಿಗೂ ಗೆದ್ದಲು ಹಿಡಿಸುವ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ್ಯ ಮತ್ತು ಪ್ರಾತಿನಿಧ್ಯ ಎಂಬ ಐಡಿಯಾಗಳ ನಡುವಿನ ಸಂಘರ್ಷ ದಿನೇದಿನೇ ತೀವ್ರವಾಗುತ್ತಿದೆ. ಪ್ರಗತಿಪರವಾದ ಪ್ರಾತಿನಿಧ್ಯದ ಐಡಿಯಾದ ಕೂಗು ಬ್ರಾಹ್ಮಣ್ಯದ ಪ್ರತಿಗಾಮಿಗಳಿಗೆ ಕೇಳಿಸಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...