Homeಮುಖಪುಟಅಮಿತ್ ಶಾ ನೇತೃತ್ವದಲ್ಲಿ ಪೊಲೀಸ್ ಸಮ್ಮೇಳನ: ಹೆಚ್ಚಿನ ನಿರಾಶ್ರಿತ ಬಂಧೀಖಾನೆ ತೆರೆಯಲು ಚಿಂತನೆ

ಅಮಿತ್ ಶಾ ನೇತೃತ್ವದಲ್ಲಿ ಪೊಲೀಸ್ ಸಮ್ಮೇಳನ: ಹೆಚ್ಚಿನ ನಿರಾಶ್ರಿತ ಬಂಧೀಖಾನೆ ತೆರೆಯಲು ಚಿಂತನೆ

- Advertisement -
- Advertisement -

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ವಾರ್ಷಿಕ ಪೊಲೀಸ್ ಸಮ್ಮೇಳನ ನಡೆಯುತ್ತಿದ್ದು, “ಹೆಚ್ಚಿನ ಸಂಖ್ಯೆಯ ನಿರಾಶ್ರಿತ ಬಂಧೀಖಾನೆಗಳನ್ನು ಸ್ಥಾಪಿಸುವುದು, ಅವಧಿ ಮೀರಿ ಉಳಿದುಕೊಂಡಿರುವ ವಿದೇಶಿಯರನ್ನು ಗುರುತಿಸಿ ಗಡೀಪಾರು ಮಾಡಲು ಬಯೋಮೆಟ್ರಿಕ್ಸ್ ಅನ್ನು ಬಳಸುವುದು” ಸೇರಿದಂತೆ ಕೆಲವು ಕ್ರಮಗಳ ಕುರಿತು ಚರ್ಚಿಸಲಾಗಿದೆ.

1951ರ ವಿಶ್ವಸಂಸ್ಥೆಯ ನಿರಾಶ್ರಿತರ ಸಮಾವೇಶ ಮತ್ತು ಅದರ 1967ರ ಶಿಷ್ಟಾಚಾರಕ್ಕೆ ಭಾರತವು ಸಹಿ ಹಾಕಿಲ್ಲ ಎಂದು, ರೋಹಿಂಗ್ಯಾ ಅಥವಾ ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ನಿರಾಶ್ರಿತರ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸರ್ಕಾರದ ನೀತಿಯ ಬಗ್ಗೆ ಸ್ಪಷ್ಟತೆಯನ್ನು ಕೋರಿದ್ದಾರೆ.

ಜನವರಿ 20ರಂದು ಇಂಟೆಲಿಜೆನ್ಸ್ ಬ್ಯೂರೋ (IB) ಆಯೋಜಿಸಿದ 57ನೇ ‘ಡಿಜಿಪಿ (ಡೈರಕ್ಟರ್‌ ಜನರಲ್ಸ್‌ ಆಫ್‌ ಪೊಲೀಸ್‌) ಮತ್ತು ಐಜಿಪಿ (ಇನ್‌ಸ್ಪೆಕ್ಟರ್‌ ಜನರಲ್ ಆಫ್ ಪೊಲೀಸ್‌) ಸಮಾವೇಶ’ದ ಮೊದಲ ದಿನ ಈ ಕುರಿತು ಚರ್ಚೆಯಾಗಿದೆ. ಭಾರತದಲ್ಲಿ ಅತಿಯಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸಲು ಮತ್ತು ಗಡಿಪಾರು ಮಾಡಲು ಸಂಘಟಿತ ಕಾರ್ಯತಂತ್ರದ ಕುರಿತು ಪ್ರಸ್ತಾಪಿಸಲಾಗಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಸರ್ಕಾರಿ ಅಧಿಕಾರಿಯೊಬ್ಬರು  ಮಾತನಾಡಿ, “ವಲಸೆ ಡೇಟಾಬೇಸ್‌ನ ಪ್ರಕಾರ, 2019, 2020 ಮತ್ತು 2021 ವರ್ಷಗಳಲ್ಲಿ ಅವಧಿ ಮೀರಿ ಉಳಿದುಕೊಂಡಿರುವ ವಿದೇಶಿಯರ ಸಂಖ್ಯೆ ಕ್ರಮವಾಗಿ 54,576, 40,239 ಮತ್ತು 25,143ರಷ್ಟಿದೆ” ಎಂದಿದ್ದಾರೆ.

ಅಧಿಕಾರಿಗಳು ಹಲವು ಸವಾಲುಗಳನ್ನು ತಿಳಿಸಿದ್ದಾರೆ. ಪ್ರವಾಸಿ ವೀಸಾ ಮತ್ತು ವಿದ್ಯಾರ್ಥಿ ವೀಸಾವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಅಂತಹ ಅಪರಾಧಿಗಳನ್ನು ಪತ್ತೆಹಚ್ಚಲು ಬಯೋಮೆಟ್ರಿಕ್ಸ್ ಅನ್ನು ವ್ಯಾಪಕವಾಗಿ ಬಳಸಬಹುದು ಎಂದು ಪ್ರತಿಪಾದಿಸಲಾಗಿದೆ.

ಭಾರತದಲ್ಲಿ 180 ದಿನಗಳವರೆಗೆ ಉಳಿಯಲು ಅನುಮತಿಸುವ ಪ್ರವಾಸಿ ವೀಸಾಗಳಿಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಯಲ್ಲಿ ವರದಿ ಮಾಡುವ ಅಗತ್ಯವಿಲ್ಲ. ಅಂತಹ ವಿದೇಶಿಯರನ್ನು ಪತ್ತೆಹಚ್ಚಲು ಇರುವ ಏಕೈಕ ಮಾರ್ಗವೆಂದರೆ ಸಿ-ಫಾರ್ಮ್‌ಗಳು. ಹೋಟೆಲ್ ಮತ್ತು ಲಾಡ್ಜ್‌ಗಳು ವಸತಿ ಒದಗಿಸುವಾಗ ರೆಕಾರ್ಡ್ ಮಾಡಬೇಕಾಗುತ್ತದೆ. ಅನೇಕ ಬಾಡಿಗೆ ವಸತಿ ಅಥವಾ ಹೋಮ್ ಸ್ಟೇಗಳು ಅವಶ್ಯಕತೆಗಳನ್ನು ಅನುಸರಿಸದ ಕಾರಣ ಅನೇಕ ಬಾರಿ ಇವು ದುಷ್ಪರಿಣಾಮ ಬೀರುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿದೇಶಿಯರ ಉಪಸ್ಥಿತಿಯನ್ನು ವರದಿ ಮಾಡದಿರುವ ಸೇವಾ ಪೂರೈಕೆದಾರರ ಹೋಟೆಲ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಹೊಣೆಗಾರಿಕೆಯನ್ನು ನಿಗದಿಪಡಿಸುವ ಬಗ್ಗೆಯೂ ಸಮ್ಮೇಳನವು ಚರ್ಚಿಸಿದೆ.

ಗಡಿಪಾರು ವಿಳಂಬಕ್ಕೆ ಕಾರಣವಾಗುವ ಕೆಲವು ದೇಶಗಳ ಅಸಹಕಾರದ ಸಮಸ್ಯೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಚರ್ಚಿಸುವಂತೆಯೂ ಸೂಚಿಸಲಾಗಿದೆ. ಪಾಸ್‌ಪೋರ್ಟ್‌ಗಳು, ಆಧಾರ್ ಕಾರ್ಡ್‌ಗಳಂತಹ ಭಾರತೀಯ ಗುರುತಿನ ದಾಖಲೆಗಳ ದುರುಪಯೋಗವಾಗುತ್ತಿರುವ ಕುರಿತೂ ಚರ್ಚಿಸಲಾಗಿದೆ.

ನೇಪಾಳ ಮತ್ತು ಮ್ಯಾನ್ಮಾರ್‌ನಲ್ಲಿ ಬೇಲಿಯಿಲ್ಲದ ಗಡಿಯಿಂದಾಗಿ ಎದುರಾಗಿರುವ ಸವಾಲುಗಳ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಮುಕ್ತ ಚಲನೆಯು ಭದ್ರತಾ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೇಪಾಳ ಗಡಿಯಲ್ಲಿ ವಿವಿಧ ವಸ್ತುಗಳ ಕಳ್ಳಸಾಗಣೆಯನ್ನು ಹೊರತುಪಡಿಸಿ, ಜನರು ಅತ್ತಿಂದಿತ್ತ ತಿರುಗಾಡುವುದು ಮತ್ತು ವಿದೇಶಿ ಏಜೆನ್ಸಿಗಳ ಚಟುವಟಿಕೆಗಳು ಪ್ರಮುಖ ಸಮಸ್ಯೆಗಳಾಗಿವೆ.

ಗಡಿ ಪ್ರದೇಶಗಳಲ್ಲಿ ಭಾರತದ ಹಿತಾಸಕ್ತಿಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಮತ್ತು ಸರ್ಕಾರದ ನೀತಿಯ ಮೇಲೆ ಪ್ರಭಾವ ಬೀರಲು ವಿದೇಶಿ ಏಜೆನ್ಸಿಗಳು ಪ್ರಯತ್ನಿಸುತ್ತಿವೆ ಎಂದು ಹೇಳಲಾಗಿದೆ. “ಇದರೊಂದಿಗೆ ವಿಶೇಷ ಗಡಿ ಆಡಳಿತದ ಲಾಭವನ್ನು ಪಡೆದುಕೊಳ್ಳುವ ಮೂರನೇ ದೇಶದ ಪ್ರಜೆಗಳ ಅಕ್ರಮ ಸಾಗಣೆಯು ಕಳವಳಕ್ಕೆ ಕಾರಣವಾಗಿದೆ” ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮ್ಯಾನ್ಮಾರ್ ಗಡಿಯುದ್ದಕ್ಕೂ, ಎರಡೂ ದೇಶಗಳಲ್ಲಿ 16 ಕಿಮೀ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಮುಕ್ತ ಚಲನೆಗೆ ಆಡಳಿತ ವ್ಯವಸ್ಥೆ ಅನುವು ಮಾಡಿಕೊಟ್ಟಿದೆ. ಎರಡು ವರ್ಷಗಳ ಹಿಂದೆ ಮ್ಯಾನ್ಮಾರ್‌ನಲ್ಲಿ ನಡೆದ ದಂಗೆಯ ನಂತರ ಮಿಜೋರಾಂಗೆ ನಿರಾಶ್ರಿತರ ಒಳಹರಿವು  ಹೆಚ್ಚಾಗಿದ್ದು, ಕಳವಳಕಾರಿಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್-ಯುಜಿ ಪರಿಷ್ಕೃತ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ, ಹಳೆಯ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತಿದೆ: ಕೇಂದ್ರ

0
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯು ಇಂದು ಪರಿಷ್ಕೃತ ನೀಟ್ ಯುಜಿ 2024 ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ ಎಂಬ ಊಹಾಪೋಹದ ನಂತರ, ಆರಂಭದಲ್ಲಿ ನೀಡಲಾದ ಪರಿಹಾರದ ಅಂಕಗಳನ್ನು ಹಿಂತೆಗೆದುಕೊಳ್ಳುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ,...