Homeಚಳವಳಿಹೊಸ ವರ್ಷದಿಂದ ಕಾರ್ಪೊರೇಟ್ ಸರಕುಗಳನ್ನು ತಿರಸ್ಕರಿಸಿ - ರೈತರ ಉತ್ಪನ್ನ ಬೆಂಬಲಿಸಿ: ಮೇಧಾ ಪಾಟ್ಕರ್‌ ಕರೆ

ಹೊಸ ವರ್ಷದಿಂದ ಕಾರ್ಪೊರೇಟ್ ಸರಕುಗಳನ್ನು ತಿರಸ್ಕರಿಸಿ – ರೈತರ ಉತ್ಪನ್ನ ಬೆಂಬಲಿಸಿ: ಮೇಧಾ ಪಾಟ್ಕರ್‌ ಕರೆ

2021 ರಲ್ಲಿ ಕಾರ್ಪೊರೇಟ್ ಸರಕುಗಳನ್ನು ಹೊರಹಾಕಿ, ಅದನ್ನು 'A' (ಅದಾನಿ&ಅಂಬಾನಿ)ಯಿಂದಲೇ ಪ್ರಾರಂಭಿಸಿ. ರೈತರೊಂದಿಗೆ ಪ್ರಕೃತಿ ಮತ್ತು ಶ್ರಮಜೀವಿಗಳನ್ನು ಗೌರವಿಸಿ ಮತ್ತು ರಕ್ಷಿಸಿ.

- Advertisement -
- Advertisement -

ಇನ್ನೇನು ಹೊಸ ವರ್ಷಕ್ಕೆ ಕಾಲಿಡುವ ಹೊತ್ತಿಗೆ ಭಾರತದಲ್ಲಿ ಐತಿಹಾಸಿಕ ರೈತರ ಹೋರಾಟ ನಡೆಯುತ್ತಿದೆ. ಹೊಸ ಕೃಷಿಕಾನೂನುಗಳು ದೇಶದ ಅತೀ ದೊಡ್ಡ ಕಾರ್ಪೊರೇಟ್‌‌ ಧಣಿಗಳಾದ, ಅಂಬಾನಿ ಮತ್ತು ಅದಾನಿಗಳ ಲಾಭಕ್ಕಷ್ಟೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಈಗಾಗಲೇ ಹಲವಾರು ರೈತ ಹೋರಾಟಗಾರರು ಆರೋಪಿಸಿದ್ದಾರೆ. ಇದೀಗ ಖ್ಯಾತ ಪರಿಸರ ಹೋರಾಟಗಾರ್ತಿ ’ನರ್ಮದಾ ಬಚಾವ್’ ಆಂದೋಲನದ ಮುಂದಾಳು ಮೇಧಾ ಪಾಟ್ಕರ್‌ ಅವರು ಪತ್ರವೊಂದು ಬರೆದಿದ್ದಾರೆ.

ಪತ್ರದಲ್ಲಿ, “2021 ರಲ್ಲಿ ನಿಜವಾದ ಸಮೃದ್ಧ ಜೀವನವನ್ನು ನಡೆಸಲು, ಕಾರ್ಪೊರೇಟ್ ಸರಕುಗಳನ್ನು ತಿರಸ್ಕರಿಸಿ ಮತ್ತು ಹೊರಹಾಕಿ, ಅದನ್ನು ‘A'(ಅದಾನಿ&ಅಂಬಾನಿ)ಯಿಂದಲೇ ಪ್ರಾರಂಭಿಸಿ. ರೈತರೊಂದಿಗೆ ಪ್ರಕೃತಿ ಮತ್ತು ಶ್ರಮಜೀವಿಗಳನ್ನು ಗೌರವಿಸಿ ಮತ್ತು ರಕ್ಷಿಸಿ” ಎಂದು ಮೇಧಾ ಪಾಟ್ಕರ್‌ ಕರೆ ನೀಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: Jio ಇಂದ Airtel ಗೆ ಸಾಮೂಹಿಕವಾಗಿ ಪೋರ್ಟ್ ಆದ ರೈತ ಹೋರಾಟಗಾರರು!

“ಸಮೃದ್ಧಿಯು ಆಸ್ತಿಯ ಮೂಲಕ ಬರುವುದಿಲ್ಲ. ಇದನ್ನು ಸರಳತೆ ಮತ್ತು ಸ್ವಾವಲಂಬನೆಯ ಮೂಲಕ ಸಾಧಿಸಬಹುದು. ಈ ಎರಡು ಗುಣಗಳೂ ಕಳೆದುಹೋಗಿರುವುದರಿಂದ, ಕೊಳ್ಳುಬಾಕತನವು ನಮ್ಮನ್ನು ಆಕರ್ಷಿಸುವುದಲ್ಲದೆ ನಮ್ಮ ಜೀವನವನ್ನು ಸೆರೆಹಿಡಿದಿದೆ. ಈ ಕಾರ್ಪೊರೇಟ್‌‌‌ಗಳಿಂದ ಅಲಕೃತಗೊಂಡಿರುವ ಜೀವನಶೈಲಿಯು, ಒಂದು ಕಡೆ ಸುಂದರವಾಗಿ ಕಂಡರೆ, ಇನ್ನೊಂದು ಕಡೆ ರೈತರು, ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನರ ಅಸಮಾನತೆ ಮತ್ತು ನಿರ್ಗತಿಕತನಕ್ಕೆ ಕಾರಣವಾಗುತ್ತಿದೆ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

“ನಮಗೆ ಶ್ರಮ ಜೀವಿ ರೈತರು ಮತ್ತು ಕಾರ್ಮಿಕರು ಅನ್ನ ನೀಡುತ್ತಿದ್ದಾರೆ. ಅವರು ಈ ಸೇವೆಯನ್ನು ನಮಗೆ ನೀಡುತ್ತಿರುವಾಗ, ಅವರ ಹಕ್ಕುಗಳಿಗಾಗಿ, ಘನತೆಯ ಬದುಕಿಗಾಗಿ, ಅವರು ಅನೇಕ ಹೋರಾಟವನ್ನು ನಡೆಸುತ್ತಿದ್ದಾರೆ. ಇಂದು ಅವರು ಕೊರೆಯುವ ಚಳಿಯೊಂದಿಗೆ ರಸ್ತೆಯಲ್ಲಿ ಹುತಾತ್ಮರಾಗುತ್ತಿದ್ದಾರೆ” ಎಂದು ಬರೆದಿದ್ದಾರೆ.

“ಹೊಸ ವರ್ಷ ನಮ್ಮ ಮನೆ ಬಾಗಿಲು ತಟ್ಟುತ್ತಿರುವಾಗ, ಇದು ಸ್ವಯಂ ಆಲೋಚನೆಯೊಂದಿಗೆ ಮುಂದುವರೆಯಲು ಸರಿಯಾದ ಸಮಯವಲ್ಲವೇ? ನಮ್ಮ ಕೈಯ್ಯಲ್ಲಿರುವ ಪ್ರತಿ ಒಳ್ಳೆಯದನ್ನು ನೋಡಲು ಹಾಗೂ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲವೆ? ದಿನಕ್ಕೆ 384 ಕೋಟಿಯಿಂದ 1085 ಕೋಟಿಗೆ ಏರುತ್ತಿರುವ ದೊಡ್ಡ ಕಾರ್ಪೊರೇಟ್‌ಗಳ ಉತ್ಪನ್ನಗಳನ್ನು, ಅದರಲ್ಲೂ ಅದಾನಿ, ಅಂಬಾನಿಗಳ ಅಶ್ಲೀಲ ಮತ್ತು ಶೋಷಣೆಯ ಸಂಪತ್ತನ್ನು ಪ್ರಶ್ನಿಸಿ, ಅದನ್ನು ನಮ್ಮ ಜೀವನದಿಂದ ಹೊರಗಿಡಲು ಸಾಧ್ಯವಿಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜಿಯೋ ಟವರ್‌ಗಳ ಮೇಲಿನ ರೈತರ ದಾಳಿಯನ್ನು ಪರೋಕ್ಷವಾಗಿ ಖಂಡಿಸಿದ ಪ್ರಧಾನಿ

“ಹೊಸ ವರ್ಷದ ದಿನ, ಸತ್ಯ ಮತ್ತು ಪರಿವರ್ತನೆಗಾಗಿ ನಿಮ್ಮ ಸ್ವಂತ ಪ್ರತಿಜ್ಞೆಯೊಂದಿಗೆ ‘ಸತ್ಯಾಗ್ರಹ’ದ ಒಂದು ದಿನವಾಗಬಹುದು. ‘A’ ಗಳೊಂದಿಗೆ ಪ್ರಾರಂಭವಾಗುವ ದೊಡ್ಡ ಕಾರ್ಪೊರೇಟ್‌ಗಳ ಉತ್ಪನ್ನಗಳನ್ನು ಹೊರಹಾಕಲು ಪ್ರಾರಂಭಿಸಿ, ಮುಂದೆ ಸಾಗಬಹುದು. ಅದಕ್ಕಾಗಿ ನಿಮ್ಮ ಜಿಯೋ ಸಿಮ್ ಅನ್ನು ಬಿಎಸ್‌ಎನ್‌ಎಲ್ ಗೆ‌‌ ಬದಲಾಯಿಸಬಹುದು. ಅಲ್ಲದೆ ತೈಲ ಮತ್ತು ಅನಿಲವನ್ನು ತಮ್ಮಲ್ಲಿಟ್ಟುಕೊಂಡು ಶೋಷಿಸುತ್ತಿರುವ, ಅದಾನಿಯ ಫಾರ್ಚೂನ್ ಅಗ್ರೊಲೊಜಿಸ್ಟಿಕ್ಸ್ ಬಳಸುವುದನ್ನು, ರಿಲಾಯನ್ಸ್ ಅವರ ಮಾಲ್ ಹಾಗೂ ಪೆಟ್ರೋಲ್ ಬಂಕ್‌ಗೆ ಹೋಗುವುದನ್ನು ಬಿಟ್ಟುಬಿಡಬೇಕು. ಕೈಮಗ್ಗ ಮತ್ತು ಸಣ್ಣ ಪವರ್‌ಲೂಮ್‌‌ಗಳು ತಯಾರಿಸಿದ ಬಟ್ಟೆಗಳನ್ನು ಖರೀದಿಸಲು ನಿರ್ಧರಿಸಿ” ಎಂದು ಅವರು ಕರೆ ನೀಡಿದ್ದಾರೆ.

“ಗಾಂಧಿ, ಟ್ಯಾಗೋರ್ ಮಾರ್ಗದರ್ಶನದ ಹಾದಿಯಲ್ಲಿ ಸಾಗಲು ಇದೊಂದು ಮನವಿ, ಇದು ಮಾರ್ಕ್ಸ್‌ನ ಕನಸನ್ನು, ಅಧಿಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕ್ರಿಯೆಯಾಗಿದೆ. ಇದುವೆ ನಮ್ಮ ಸಂವಿಧಾನವನ್ನು ಅನುಸರಿಸುವ ನಿಜವಾದ ಪ್ರತಿಜ್ಞೆಯಾಗಿದೆ. ಇದುವೆ ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ದೃಷ್ಟಿಯನ್ನು ಹೊಂದಿದ್ದ, ಬಾಬಾಸಾಹೇಬ್ ಮತ್ತು ಭಾರತ ಸಂವಿಧಾನದ ಎಲ್ಲ ಪಿತಾಮಹಾರಿಗೆ ಸಲ್ಲಿಸುವ ಗೌರವ” ಎಂದು ಅವರು ಬರೆದಿದ್ದಾರೆ. ಪತ್ರದ ಪೂರ್ಣಪಾಠಕ್ಕೆ ಇಲ್ಲಿಕ್ಲಿಕ್‌ ಮಾಡಿ

ಇದನ್ನೂ ಓದಿ: ರೈತರ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ: ಭಾವನಾತ್ಮಕ ಟ್ವೀಟ್ ಮಾಡಿದ ರೈತ ಒಕ್ಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...