Homeಕರ್ನಾಟಕಗ್ರಾಮ ಪಂಚಾಯತ್‌‌‌‌ ಚುನಾವಣೆ: ಮತ ಎಣಿಕೆಯಲ್ಲಿ ಲೋಪ ಅಭ್ಯರ್ಥಿ ರಾಜಣ್ಣ ಅವರಿಂದ ಜಿಲ್ಲಾಧಿಕಾರಿಗೆ ದೂರು

ಗ್ರಾಮ ಪಂಚಾಯತ್‌‌‌‌ ಚುನಾವಣೆ: ಮತ ಎಣಿಕೆಯಲ್ಲಿ ಲೋಪ ಅಭ್ಯರ್ಥಿ ರಾಜಣ್ಣ ಅವರಿಂದ ಜಿಲ್ಲಾಧಿಕಾರಿಗೆ ದೂರು

ತುಮಕೂರು ಜಿಲ್ಲೆಯ 340 ಗ್ರಾಮ ಪಂಚಾಯತ್‌‌‌‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದೆ

- Advertisement -
- Advertisement -

ತುಮಕೂರು ಜಿಲ್ಲೆಯ 340 ಗ್ರಾಮ ಪಂಚಾಯತ್‌‌‌‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು ಕ್ಷೇತ್ರಗಳ ಮತ ಎಣಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಮತ ಎಣಿಕೆ ಅಧಿಕಾರಿಗಳು ಅನೂರ್ಜಿತ ಮತಪತ್ರಗಳನ್ನು ಕೂಡ ಎಣಿಕೆ ಮಾಡಿ ತಮಗೆ ಬೇಕಾದ ಅಭ್ಯರ್ಥಿಗೆ ಸಹಕರಿಸಿದ್ದಾರೆ ಎಂದು ದೂರಲಾಗಿದೆ. ಈ ಸಂಬಂಧ ಒಂದೆರಡು ಮತಗಳಿಂದ ಪರಾಭವಗೊಂಡಿರುವ ಅಭ್ಯರ್ಥಿಗಳು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ತುಮಕೂರು ತಾಲೂಕು ಕೋರಾ ಗ್ರಾಮದ 1 ನೇ ವಾರ್ಡ್ ಪರಿಶಿಷ್ಟ ಜಾತಿ ಪುರುಷ ಅಭ್ಯರ್ಥಿಗೆ ಮೀಸಲಿಟ್ಟಿತ್ತು. ಡಿಸೆಂಬರ್ 22 ರಂದು ಮೊದಲ ಹಂತದಲ್ಲಿಯೇ ಚುನಾವಣೆ ನಡೆದು ಡಿಸೆಂಬರ್ 30ರಂದು ಮತ ಎಣಿಕೆ ನಡೆದಿದೆ. ಈ ಸಂದರ್ಭದಲ್ಲಿ ಕೆಲ ಅನೂರ್ಜಿತಗೊಂಡಿದ್ದ ಮತಗಳನ್ನು ಅಭ್ಯರ್ಥಿಯೊಬ್ಬರ ಲೆಕ್ಕಕ್ಕೆ ಸೇರಿಸಿರುವ ಆರೋಪ ವ್ಯಾಪಕವಾಗಿದೆ. ಮತ ಎಣಿಕೆ ಅಧಿಕಾರಿಗಳಿಗೆ ಅನೂರ್ಜಿತ ಮತಗಳನ್ನು ಎಣಿಕೆ ಮಾಡದೆ ತಿರಸ್ಕೃತಗೊಳಿಸಬೇಕು ಎಂದು ಮನವಿ ಮಾಡಿದರೂ ಅದಕ್ಕೆ ಅಧಿಕಾರಿಗಳು ಕಿಮ್ಮತ್ತು ಕೊಡದೆ ಎಣಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಲ್ಲ ಎಂದು ದೂರಲಾಗಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತ್‌ ಚುನಾವಣೆ: ಇವರು ಸೋತರೆ ಮಾಡುವ ಕೆಲಸವೇನು ಗೊತ್ತೆ?

ಕೋರಾ 1 ನೇ ವಾರ್ಡಿಗೆ ರಾಜಣ್ಣ ಸ್ಪರ್ಧಿಸಿದ್ದರು. ಇವರಿಗೆ ಪ್ರತಿಸ್ಪರ್ಧಿಯಾಗಿ ರಾಜಕುಮಾರ್ ಚುನಾವಣಾ ಕಣದಲ್ಲಿದ್ದರು. ಪರಿಶಿಷ್ಟ ಜಾತಿ ಪುರುಷ ಅಭ್ಯರ್ಥಿಗೆ ಮೀಸಲಾದ ಈ ಕ್ಷೇತ್ರಕ್ಕೆ ಈಗ ರಾಜಕುಮಾರ್ ಆಯ್ಕೆ ಆಗಿದ್ದಾರೆಂದು ಘೋಷಣೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ರಾಜಣ್ಣ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಫಲಿತಾಂಶ ತಡೆಹಿಡಿಯಬೇಕು ಮತ್ತು ಮತ ಎಣಿಕೆಯಲ್ಲಿ ಅಕ್ರಮ ನಡೆದಿದ್ದು ಮರು ಎಣಿಕೆ ಮಾಡಬೇಕು. ಅನೂರ್ಜಿತ ಮತಗಳನ್ನು ತಿರಸ್ಕೃತಗೊಳಿಸಿ ನಂತರ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ರಾಜಣ್ಣ ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮತ ಎಣಿಕೆ ಸಮಯದಲ್ಲಿ ನನಗೆ 157 ಮತ ಹಾಗೂ ನನ್ನ ಪ್ರತಿಸ್ಪರ್ಧಿ ರಾಜ್ ಕುಮಾರ್ ಅವರಿಗೆ 159 ಮತಗಳು ಬಂದಿವೆ. ಮತ ಎಣಿಕೆ ನಡೆಯುವ ವೇಳೆ ಹಲವು ಮತಪತ್ರಗಳಲ್ಲಿ ನನಗೂ ಮತ್ತು ಪ್ರತಿಸ್ಪರ್ಧಿ ರಾಜಕುಮಾರ್ ಇಬ್ಬರಿಗೂ ಮತಗಳು ಚಲಾವಣೆಗೊಂಡಿವೆ. ಇಂತಹ ಹಲವು ಅನೂರ್ಜಿತ ಮತಪತ್ರಗಳನ್ನು ತಿರಸ್ಕರಿಸದೆ ರಾಜ್ ಕುಮಾರ್ ಅವರ ಲೆಕ್ಕಕ್ಕೆ ಸೇರಿಸಲಾಗಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ಗ್ರಾಮ ಪಂಚಾಯತ್‌ಗಳಿಗೆ ಕೇಸರಿ ಬಳಿಯಲು ಬಿಜೆಪಿ ಕರಾಮತ್ತು!

ಅನೂರ್ಜಿತ ಮತಗಳನ್ನು ತಿರಸ್ಕರಿಸುವಂತೆ ಎಣಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೇಳಲಿಲ್ಲ. ಹೀಗಾಗಿ ರಾಜಕುಮಾರ್ ಅವರು ಗೆಲ್ಲವಂತೆ ಆಗಿದೆ. ಅನೂರ್ಜಿತ ಮತಗಳನ್ನು ತಿರಸ್ಕೃತಗೊಳಿಸಿದರೆ ಗೆಲುವು ನನ್ನದೇ ಆಗುತ್ತದೆ. ಹಾಗಾಗಿ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಧಿಕಾರಿಗಳು ಮರು ಎಣಿಕೆ ನಡೆಸಲು ಕ್ರಮ ಕೈಗೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಾಜಿತ ಅಭ್ಯರ್ಥಿ ರಾಜಣ್ಣ ಒತ್ತಾಯಿಸಿದ್ದಾರೆ.

ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ರಾಜಣ್ಣ ತಿಳಿಸಿದ್ದಾರೆ. ರಾಜಕುಮಾರ್ ಪರವಾಗಿ ಮತ ಎಣಿಕೆ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಇದರಿಂದ ನನಗೆ ವಂಚನೆಯಾಗಿದೆ. ಹಾಗಾಗಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಒಂದು ಗ್ರಾಮ ಅಭಿವೃದ್ದಿಯಾಗಲು ಏನು ಮಾಡಬೇಕು?: ಇಲ್ಲಿದೆ ಅಂತಹ ಗ್ರಾ.ಪಂ ಪ್ರಣಾಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...