ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ, “ಜಿಯೋ ಸಿಮ್ ತಿರಸ್ಕರಿಸಿ, ಬಿಎಸ್‌ಎನ್‌ಎಲ್ ಸಿಮ್ ಪ್ರೋತ್ಸಾಹಿಸಿ” ಎಂಬ ಆಶಯದೊಂದಿಗೆ ಮಂಡ್ಯದ ಬಿಎಸ್‌ಎನ್‌ಎಲ್ ಕಚೇರಿ ಮುಂದೆ ಅಖಿಲ ಭಾರತ ವಕೀಲರ ಸಂಘ(AILU), CITU, DSS, KRRS, AUTO UNION , ಜನಶಕ್ತಿ, BSNLEU ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ರೈತ ವಿರೋಧಿಯಾಗಿರುವ ಮತ್ತು ಕಾರ್ಪೋರೇಟ್ ಪರವಿರುವ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದರು. ಅಲ್ಲದೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಯೋ ಸಿಮ್ ತಿರಸ್ಕರಿಸಿ ಮತ್ತು ಬಿಎಸ್‌ಎನ್‌ಎಲ್ ಸಿಮ್ ಪ್ರೋತ್ಸಾಹಿಸಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಂಜಾಬ್: 1500 ಕ್ಕೂ ಹೆಚ್ಚು ಜಿಯೋ ಟವರ್‌ಗಳಿಗೆ ಹಾನಿ ಮಾಡಿದ ರೈತ ಹೋರಾಟಗಾರರು
ಪ್ರತಿಭಟನೆಯ ನಂತರ, ಮಂಡ್ಯ ಟೆಲಿಕಾಂ ಜಿಲ್ಲಾ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮೂಲಕ ಕೇಂದ್ರ ಸಂಪರ್ಕ ಖಾತೆ ಸಚಿವರಿಗೆ, ಸಾರ್ವಜನಿಕರಿಗೆ ಅನುಕೂಲವಾಗವಂತೆ ಬಿಎಸ್‌ಎನ್‌ಎಲ್ ಸಂಸ್ಥೆಗೆ 4G ನೆಟ್‌ವರ್ಕ್ ಸೇರಿದಂತೆ ಹೆಚ್ಚಿನ ಸೌಕರ್ಯಗಳನ್ನು ನೀಡುವಂತೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಟಿ.ವಿಶ್ವನಾಥ್, ಜಿಲ್ಲಾ ಮುಖಂಡರಾದ ಜಗನ್ನಾಥ, ವಕೀಲರಾದ ತಿಮ್ಮೇಗೌಡ, CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, BSNLEU ಮುಖಂಡರಾದ ಎಂ.ಸಿ. ಬಾಲಕೃಷ್ಣ, ಶ್ರೀನಿವಾಸ್, ಶಿವಣ್ಣ, DSS ಮುಖಂಡರಾದ ಅಂದಾನಿ ಸೋಮನಹಳ್ಳಿ, ಪತ್ರಕರ್ತ ಎಂ.ಬಿ.ನಾಗಣ್ಣ, ನಾಗೇಶ್, ಅಂಚೆ ಸಂಘದ ಮುಖಂಡರಾದ ರಂಗಸ್ವಾಮಿ, ರೈತ ಸಂಘದ ಮುಖಂಡರಾದ ಸುಧೀರ್ ಕುಮಾರ್, ಚಿತ್ರ ನಿರ್ದೇಶಕ ಎಂ.ಜಿ.ವಿನಯ್ ಕುಮಾರ್, ಆಟೋ ಸಂಘದ ಮುಖಂಡರಾದ ಕೃಷ್ಣ, ಅಂಗವಿಕಲರ ಸಂಘದ ಮುಖಂಡರಾದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಜಿಯೋದಿಂದ ಹೊರನಡೆದ 26 ಲಕ್ಷ ಗ್ರಾಹಕರು: ರೈತರ ಬಾಯ್ಕಾಟ್ ಕರೆಗೆ Jio ಕಂಗಾಲು!


