ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಒಂದು ವರ್ಷದಲ್ಲಿ 100 ಶತಕೋಟಿ ಡಾಲರ್ ಆದಾಯವನ್ನು ದಾಟಿದ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದೆ.
ಕಂಪನಿಯು 2021-22ರ ಪೂರ್ಣ ಹಣಕಾಸು ವರ್ಷದಲ್ಲಿ (ಏಪ್ರಿಲ್ 2021 ರಿಂದ ಮಾರ್ಚ್ 2022) 7.92 ಲಕ್ಷ ಕೋಟಿ ರೂ (102 ಶತಕೋಟಿ ಡಾಲರ್) ಆದಾಯ ಗಳಿಸಿದ್ದು, ಇದರ ಮೇಲೆ 60,705 ಕೋಟಿ ರೂ. ನಿವ್ವಳ ಲಾಭವನ್ನು ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭದಲ್ಲಿ 22.5% ರಷ್ಟು ಏರಿಕೆಯಾಗಿದೆ. ಆಯಿಲ್ ರಿಫೈನಿಂಗ್ ಮಾರ್ಜಿನ್‌ಗಳು, ಟೆಲಿಕಾಂ ಮತ್ತು ಡಿಜಿಟಲ್ ಸೇವೆಗಳಲ್ಲಿನ ಸ್ಥಿರ ಬೆಳವಣಿಗೆ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಭಾರಿ ಹೆಚ್ಚಳದ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹಲಾಲ್ ವರ್ಸಸ್ ಸ್ಟನ್ನಿಂಗ್‌ನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆ
ರಿಲಯನ್ಸ್ ರಿಟೇಲ್ 58,019 ಕೋಟಿ ರೂ. ಆದಾಯದೊಂದಿಗೆ ತನ್ನ ಬೆಳವಣಿಗೆಯನ್ನು ಮುಂದುವರೆಸಿದೆ. ಇದರ ಜೊತೆಗೆ ಜಿಯೋ ಕೂಡಾ 20,901 ಕೋಟಿ ರೂ. ಆದಾಯ ಗಳಿಸಿದ್ದು, ಹಿಂದಿನ ವರ್ಷಕ್ಕಿಂತ 20.5% ರಷ್ಟು ತನ್ನ ಆದಾಯವನ್ನು ಹೆಚ್ಚು ಮಾಡಿದೆ.
“ಸಾಂಕ್ರಾಮಿಕ ಮತ್ತು ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳಿಂದ ಉಂಟಾಗಿರುವ ಹೆಚ್ಚಿನ ಸವಾಲುಗಳ ಹೊರತಾಗಿಯೂ, ರಿಲಯನ್ಸ್ 2021-22ರ ಹಣಕಾಸು ವರ್ಷಗಳಲ್ಲಿ ದೃಢವಾದ ಕಾರ್ಯಕ್ಷಮತೆಯನ್ನು ನೀಡಿದೆ. ನಮ್ಮ ಡಿಜಿಟಲ್ ಸೇವೆಗಳು ಮತ್ತು ಚಿಲ್ಲರೆ ವಿಭಾಗಗಳಲ್ಲಿ ತೀವ್ರ ಬೆಳವಣಿಗೆಯಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ” ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.



Good. Hardwork got rewards.