ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣ ಯೋಜನೆಗಳು “ಕಾನೂನುಬದ್ಧವಾಗಿ ಮಾನ್ಯ” ವಾಗಿದ್ದು, ಇದು ಅಸಮಾನತೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆಯೆ ಹೊರತು, ಹಿಂದೂಗಳು ಅಥವಾ ಇತರ ಸಮುದಾಯಗಳ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಒಕ್ಕೂಟ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.
‘ಕಲ್ಯಾಣ ಯೋಜನೆಗಳು ಧರ್ಮದ ಆಧಾರದ ಮೇಲೆ ಇರಬಾರದು’ ಎಂದು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಒಕ್ಕೂಟ ಸರ್ಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಹೇಳಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ: ದಿವಂಗತ ಮುಮ್ತಾಜ್ ಬೇಗಂ ಅವರ ‘ಸ್ವಾತಂತ್ರ್ಯದ ಕಹಳೆ’ ಕೃತಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ
ನೀರಜ್ ಶಂಕರ್ ಸಕ್ಸೇನಾ ಮತ್ತು ಇತರ ಐವರು ಈ ಅರ್ಜಿಯನ್ನು ಸಲ್ಲಿಸಿದ್ದು, ತಾವು ಅಸಂವಿಧಾನಿಕವಾಗಿ ಸವಲತ್ತುಗಳಿಂದ ವಂಚಿತರಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರು ಪಡೆಯುವ ಪ್ರಯೋಜನಗಳನ್ನು ಪಡೆಯಲಾಗುತ್ತಿಲ್ಲ. ಆದ್ದರಿಂದ ತಮಗೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದರು.
“ಸಚಿವಾಲಯವು ಜಾರಿಗೆ ತರುತ್ತಿರುವ ಯೋಜನೆಗಳು ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡುವುದು ಮತ್ತು ಶಿಕ್ಷಣದ ಮಟ್ಟವನ್ನು ಸುಧಾರಿಸುವುದು, ಉದ್ಯೋಗ, ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ಭಾಗವಹಿಸುವುದು, ನಾಗರಿಕ ಸೌಲಭ್ಯಗಳು ಅಥವಾ ಮೂಲಸೌಕರ್ಯಗಳ ಕೊರತೆಯನ್ನು ಕಡಿಮೆ ಮಾಡುವುದಾಗಿದೆ” ಎಂದು ಒಕ್ಕೂಟ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
“ಈ ಯೋಜನೆಗಳು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿಲ್ಲ. ಯೋಜನೆಗಳು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ” ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಹಿಂದೂ ಯುವತಿ ಮುಸ್ಲಿಂ ಉಗ್ರನನ್ನು ಕೊಂದಳೇ? ಇಲ್ಲ, ವೆಬ್ ಸೀರಿಸ್ ಪಾತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
“ಕಲ್ಯಾಣ ಯೋಜನೆಗಳು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಆರ್ಥಿಕವಾಗಿ ದುರ್ಬಲವಾಗರುವ ವರ್ಗಕ್ಕೆ, ಸಮುದಾಯದ ಹಿಂದುಳಿದ ವರ್ಗದ ಮಕ್ಕಳಿಗೆ, ಅಭ್ಯರ್ಥಿಗಳಿಗೆ, ಮಹಿಳೆಯರಿಗೆ ಮಾತ್ರವಾಗಿದೆ. ಅದರ ಹೊರತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಎಲ್ಲರಿಗೂ ಅಲ್ಲ” ಎಂದು ಒಕ್ಕೂಟ ಸರ್ಕಾರ ಹೇಳಿದೆ.
ಇದಲ್ಲದೆ, ವಿದ್ಯಾರ್ಥಿವೇತನ ಯೋಜನೆ, ತರಬೇತಿ ಯೋಜನೆ ಇತ್ಯಾದಿಗಳು ಶೈಕ್ಷಣಿಕ ಅರ್ಹತೆಯನ್ನು ಹೊಂದಿವೆ, ಜೊತೆಗೆ ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲು ಇವೆ ಎಂದು ತನ್ನ ಅಫಿಡೆವಿಟ್‌ನಲ್ಲಿ ಹೇಳಲಾಗಿದೆ.
“ಅನಗತ್ಯ ಲಾಭ” ನೀಡುವ ಮೂಲಕ ಸರ್ಕಾರವು ಮುಸ್ಲಿಂ ಸಮುದಾಯವನ್ನು ಕಾನೂನು ಮತ್ತು ಸಂವಿಧಾನಕ್ಕಿಂತ ಮೇಲಿರಿಸುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ನೆರವು ಅಗತ್ಯವಿರುವ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಕಂಡುಹಿಡಿಯಲು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗವಿದೆ ಎಂದು ಹೇಳಿದ್ದ ಅವರು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ 1992 ಅನ್ನು ರದ್ದುಗೊಳಿಸುವಂತೆ ಕೋರಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ ದಲಿತ ಮುಸ್ಲಿಂ ಸಮುದಾಯಗಳಿಗೆ ಸಿಕ್ಕ ರಾಜಕೀಯ ಅಧಿಕಾರವೆಷ್ಟು? ಸಿಗಬೇಕಾದುದೆಷ್ಟುಕಾ
ಇದನ್ನೂ ಓದಿ: ಕೊರೊನಾ ಲಾಕ್‌ಡೌನು, ಯಡಿಯೂರಪ್ಪನವರ ಪ್ಯಾಕೇಜು: ನೇಕಾರರಿಗೆ ಸಿಕ್ಕಿದ್ದೆಷ್ಟು?


