Homeರಂಜನೆಕ್ರೀಡೆಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಿಶನ್‌ ಸಿಂಗ್‌ ಬೇಡಿ ನಿಧನ: ಲೆಜೆಂಡರಿ ಸ್ಪಿನ್ನರ್‌ ಅಗಲಿಕೆಗೆ...

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಿಶನ್‌ ಸಿಂಗ್‌ ಬೇಡಿ ನಿಧನ: ಲೆಜೆಂಡರಿ ಸ್ಪಿನ್ನರ್‌ ಅಗಲಿಕೆಗೆ ಬಿಸಿಸಿಐ ಸಂತಾಪ

- Advertisement -
- Advertisement -

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಲೆಜೆಂಡರಿ ಸ್ಪಿನ್ನರ್‌ ಬಿಶನ್‌ ಸಿಂಗ್‌ ಬೇಡಿ ನಿಧನರಾಗಿದ್ದಾರೆ.

77 ವರ್ಷದ ಬಿಶನ್‌ ಸಿಂಗ್‌ ಬೇಡಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರು ಪತ್ನಿ ಅಂಜು, ಪುತ್ರ ಅಂಗದ್ ಮತ್ತು ಪುತ್ರಿ ನೇಹಾ ಅವರನ್ನು ಅಗಲಿದ್ದಾರೆ.

 

ಅಮೃತಸರ ಮೂಲದವರಾದ ಇವರು ಭಾರತದ ಮೊದಲ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ ಪಂದ್ಯದ  ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1975ರಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಈಸ್ಟ್‌ ಆಫ್ರಿಕಾ ಎದುರು ಅದ್ಭುತ ಬೌಲಿಂಗ್‌ ಮೂಲಕ ಒಡಿಐನಲ್ಲಿ ಭಾರತಕ್ಕೆ ಮೊತ್ತ ಮೊದಲ ಜಯ ತರುವಲ್ಲಿ ನೆರವಾಗಿದ್ದರು.

1977-78ರಲ್ಲಿ ಆಸ್ಟ್ರೇಲಿಯಾದಲ್ಲಿ ಬಿಷನ್‌ ಸಿಂಗ್‌ ಬೇಡಿ ಸಾರಥ್ಯದ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಕಾಂಗರೂ ಪಡೆಯ ಎದುರು 5 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಭಾರಿ ಸದ್ದು ಮಾಡಿತ್ತು. ಆ ಸರಣಿಯಲ್ಲಿ ಬಾಬ್ ಸಿಂಪ್ಸನ್ ಸಾರಥ್ಯದ ಆಸ್ಟ್ರೇಲಿಯಾ ತಂಡ 3-2 ಅಂತರದ ಜಯ ದಾಖಲಿಸಿದರೂ, ಬೇಡಿ ಸಾರಥ್ಯದ ಭಾರತ ತಂಡ ನೀಡಿದ ಕೆಚ್ಚೆದೆಯ ಹೋರಾಟವನ್ನು ಈಗಲೂ ಸ್ಮರಿಸಲಾಗುತ್ತದೆ. ಮೆಲ್ಬೋರ್ನ್‌ ಮತ್ತು ಸಿಡ್ನಿಯಲ್ಲಿ ನಡೆದ ಸರಣಿಯ 3ನೇ ಮತ್ತು 4ನೇ ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡ ಅವಿಸ್ಮರಣೀಯ ಜಯ ದಾಖಲಿಸಿತ್ತು.

ಕ್ರಿಕೆಟ್‌ನಲ್ಲಿ ಯಶಸ್ಸು ಕಂಡ ಭಾರತೀಯ ಬೌಲರ್‌ಗಳ ಪೈಕಿ ಬಿಷನ್‌ ಸಿಂಗ್‌ ಬೇಡಿ ಕೂಡ ಒಬ್ಬರು. ನಾರ್ತ್‌ಹ್ಯಾಂಪ್ಟನ್‌ಶೈರ್‌ ತಂಡದ ಪರ 1972ರಿಂದ 1977ರವರೆಗೆ ಒಟ್ಟಾರೆ 102 ಪಂದ್ಯಗಳನ್ನು ಆಡಿ ಬರೊಬ್ಬರಿ 434 ವಿಕೆಟ್‌ಗಳನ್ನು ಪಡೆದಿದ್ದಾರೆ.

1990ರಲ್ಲಿ ಭಾರತ ತಂಡಕ್ಕೆ ಮೊತ್ತ ಮೊದಲ ವೃತ್ತಿಪರ ಕೋಚ್‌ ಆಗಿಯೂ ಬಿಷನ್‌ ಸಿಂಗ್‌ ಬೇಡಿ ಆಯ್ಕೆಯಾಗಿದ್ದರು. ತಮ್ಮ ಕೋಚಿಂಗ್‌ ಅವಧಿಯಲ್ಲಿ ಟೀಮ್ ಇಂಡಿಯಾ ಆಟಗಾರರ ಫಿಟ್ನೆಸ್‌ ಕಡೆಗೆ ಹೆಚ್ಚು ಒತ್ತು ನೀಡಿದ್ದರು.

ಬಿಶನ್‌ ಸಿಂಗ್‌ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿದ್ದು, ಭಾರತದ ಮಾಜಿ ಟೆಸ್ಟ್ ನಾಯಕ ಮತ್ತು ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಅವರ ನಿಧನಕ್ಕೆ ಬಿಸಿಸಿಐ ಸಂತಾಪ ವ್ಯಕ್ತಪಡಿಸಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...