Homeಅಂತರಾಷ್ಟ್ರೀಯಇಬ್ಬರು ಇಸ್ರೇಲ್ ಪ್ರಜೆಗಳನ್ನು ಬಿಡುಗಡೆಗೊಳಿಸಿದ ಹಮಾಸ್‌

ಇಬ್ಬರು ಇಸ್ರೇಲ್ ಪ್ರಜೆಗಳನ್ನು ಬಿಡುಗಡೆಗೊಳಿಸಿದ ಹಮಾಸ್‌

- Advertisement -
- Advertisement -

ಹಮಾಸ್ ಸಶಸ್ತ್ರ ಗುಂಪು ಒತ್ತಾಯಾಳಾಗಿಟ್ಟುಕೊಂಡಿದ್ದ ಇಬ್ಬರು ಇಸ್ರೇಲ್‌ ಮಹಿಳೆಯರನ್ನು ಗಾಝಾ ಪಟ್ಟಿಯಿಂದ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ಇಬ್ಬರು ಅಮೆರಿಕನ್‌ ಪ್ರಜೆಗಳನ್ನು ಬಿಡುಗಡೆ ಮಾಡಿತ್ತು.

ನುರಿತ್‌ ಕೂಪರ್(85) ಮತ್ತು ಯೋಚೆವೆಡ್ ಲಿಫ್‌ಶಿಟ್ಜ್(79) ಎಂಬ ಇಸ್ರೇಲ್ ಮೂಲದ ಮಹಿಳೆಯರನ್ನು ಬಿಡುಗಡೆ ಮಾಡಿರುವ ಬಗ್ಗೆ ಇಸ್ರೇಲ್ ಪ್ರಧಾನಿ ಕಚೇರಿ ದೃಢಪಡಿಸಿದೆ. ಮಹಿಳೆಯರ ಕುಟುಂಬ ಇಸ್ರೇಲ್‌ನ ನಿರ್ ಓಜ್ ಕಿಬ್ಬುತ್ಜ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅ.7ರಂದು ನಡೆದ ದಾಳಿಯ ವೇಳೆ ಇವರನ್ನು ಒತ್ತೆಯಾಳಾಗಿ ಕರೆದುಕೊಂಡು ಹೋಗಲಾಗಿತ್ತು.

ಒತ್ತೆಯಾಳುಗಳನ್ನು ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ಒಪ್ಪಿಸಿದ್ದು, ಅವರು ಇದೀಗ ಮನೆಗೆ ತೆರಳುತ್ತಿದ್ದಾರೆ ಎಂದು ಐಸಿಆರ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅ.7ರಂದು ಇಸ್ರೇಲ್‌ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,400 ಜನರು ಮೃತಪಟ್ಟಿದ್ದರು. ಇಸ್ರೇಲ್‌ ಮೇಲಿನ ದಾಳಿ ವೇಳೆ ಹಮಾಸ್‌ ಸಶಸ್ತ್ರ ಗುಂಪು  200ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಇಬ್ಬರು ಇಸ್ರೇಲ್ ಪ್ರಜೆಗಳ ಬಿಡುಗಡೆ ಉಳಿದ ಒತ್ತೆಯಾಳುಗಳ ಕುಟುಂಬಗಳಲ್ಲಿ ಭರವಸೆಯನ್ನು ಹುಟ್ಟುಹಾಕಿದೆ.

ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗೆ ಸುಮಾರು 5,000 ಪ್ಯಾಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. ಇಸ್ರೇಲ್ ಯುದ್ಧ ಘೋಷಣೆ ಬಳಿಕ ಲಕ್ಷಾಂತರ ಜನರು ಗಾಝಾ ಪಟ್ಟಿಯಿಂದ ದಕ್ಷಿಣಕ್ಕೆ ಪಲಾಯನ ಮಾಡಿದ್ದಾರೆ.

ಶುಕ್ರವಾರ  ಹಮಾಸ್ ಇಬ್ಬರು ಅಮೆರಿಕ ಪ್ರಜೆಗಳಾದ ಜುಡಿತ್ ಮತ್ತು ನಟಾಲಿ ರಾನನ್ ಅವರನ್ನು ಬಿಡುಗಡೆ ಮಾಡಿತ್ತು. ಇವರನ್ನು ಕಿಬ್ಬುಟ್ಜ್ ನಹಾಲ್ ಓಜ್‌ನಿಂದ ಒತ್ತಾಯಾಳುಗಳಾಗಿ ಕರೆದುಕೊಂಡು ಹೋಗಲಾಗಿತ್ತು.

ಇದನ್ನು ಓದಿ: ದೆಹಲಿ: ಜಂತರ್ ಮಂತರ್‌ನಲ್ಲಿ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ: ಹಲವರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿರೀಕ್ಷಣಾ ಜಾಮೀನು ಕೋರಿ ಹೆಚ್‌.ಡಿ ರೇವಣ್ಣ ಅರ್ಜಿ: ಎಸ್‌ಐಟಿಗೆ ಕೋರ್ಟ್‌ ನೋಟಿಸ್

0
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಆರೋಪಿ, ಶಾಸಕ ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ನೋಟಿಸ್ ಜಾರಿ ಮಾಡಿದೆ...