Homeಅಂತರಾಷ್ಟ್ರೀಯಅಧಿಕಾರ ಕಳೆದುಕೊಂಡ ನೆತನ್ಯಾಹು: ನಫ್ತಾಲಿ ಬೆನೆಟ್ ಇಸ್ರೇಲ್‍ನ ಹೊಸ ಪ್ರಧಾನಿ

ಅಧಿಕಾರ ಕಳೆದುಕೊಂಡ ನೆತನ್ಯಾಹು: ನಫ್ತಾಲಿ ಬೆನೆಟ್ ಇಸ್ರೇಲ್‍ನ ಹೊಸ ಪ್ರಧಾನಿ

- Advertisement -
- Advertisement -

ಇಸ್ರೇಲಿನ ವಿಭಿನ್ನ ಸಿದ್ದಾಂತಗಳ ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಏರಿದೆ. ಭಾನುವಾರ ಅತಿ ಹೆಚ್ಚು ಕಾಲ ಅಧಿಕಾರ ನಡೆಸಿದ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅಧಿಕಾರ ಕಳೆದುಕೊಂಡಿದ್ದಾರೆ. ದೇಶದ ಪ್ರಕ್ಷುಬ್ಧ ರಾಜಕೀಯ ಸನ್ನಿವೇಶದಲ್ಲಿ ನಡೆದ ಈ ಭಾರಿ ಬದಲಾವಣೆಯಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಬಲಪಂಥೀಯ ಯಹೂದಿ ಜನಾಂಗೀಯವಾಗಿ ಮತ್ತು ಮಾಜಿ ಟೆಕ್ ಮಿಲಿಯನೇರ್ ಆಗಿರುವ ನಫ್ತಾಲಿ ಬೆನೆಟ್ ಅವರು ಈಗ ನೂತನ ಪ್ರಧಾನಿಯಾಗಿದ್ದಾರೆ.

71 ವರ್ಷದ ನೆತನ್ಯಾಹು ಸೋಲಿನ ಸ್ವಲ್ಪ ಸಮಯದ ಮೊದಲು, “ಪ್ರತಿಪಕ್ಷದಲ್ಲಿರುವುದು ನಮ್ಮ ಹಣೆಬರಹವಾಗಿದ್ದರೆ, ಅದನ್ನು ತಪ್ಪಿಸಲಾಗದು. ನಾವು ಈ ಕೆಟ್ಟ ಸರ್ಕಾರವನ್ನು ಕೆಳಗಿಳಿಸಿ ದೇಶವನ್ನು ನಮ್ಮ ದಾರಿಯಲ್ಲಿ ಮುನ್ನಡೆಸುವವರೆಗೆ ಹೋರಾಡುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಸೋಮವಾರದಿಂದ ಅನ್‌ಲಾಕ್‌, 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಕೆ

ಅವರ ಬಲಪಂಥೀಯ ಬೆಂಬಲಿಗರಿಂದ “ಕಿಂಗ್ ಬೀಬಿ” ಎಂದು ಹೊಗಳಲ್ಪಡುವ ಮತ್ತು ಅವರ ಟೀಕಾಕಾರರಿಂದ “ಅಪರಾಧ ಮಂತ್ರಿ” ಎಂದು ಖಂಡಿಸಲ್ಪಡುವ ನೆತನ್ಯಾಹು ಇಸ್ರೇಲಿ ರಾಜಕೀಯದಲ್ಲಿ ಬಹುಕಾಲದಿಂದ ಪ್ರಬಲ ಮತ್ತು ವಿಭಜಕ ವ್ಯಕ್ತಿ ಎನಿಸಿದ್ದಾರೆ.

ಹಲವು ವಾರಗಳ ಕಾಲ ತೀವ್ರವಾದ ರಾಜಕೀಯ ನಾಟಕದ ನಂತರ ಭಾನುವಾರ ನೆಸ್ಸೆಟ್ ಶಾಸಕಾಂಗದಲ್ಲಿ ಮತದಾನ ನಡೆಯಿತು. ಒಟ್ಟು 120 ಸ್ಥಾನಗಳಲ್ಲಿ 60-59 ಮತಗಳ ತೀವ್ರ ಪೈಪೋಟಿ ನಡೆಯಿತು. ನೆತನ್ಯಾಹು 59 ಮತಗಳೊಂದಿಗೆ ಅಧಿಕಾರ ಕಳೆದುಕೊಂಡರು.

ಟೆಲ್ ಅವೀವ್‌ನ ರಾಬಿನ್ ಚೌಕದಲ್ಲಿ “ಬೈ ಬೈ ಬೀಬಿ” ಫಲಕಗಳೊಂದಿಗೆ ರ್‍ಯಾಲಿ ಮಾಡಿದ ನೆತನ್ಯಾಹು ಅವರ ವಿರೋಧಿಗಳು ಹರ್ಷೋದ್ಗಾರಗಳ ಮೂಲಕ  ಸಂಭ್ರಮಾಚರಣೆ ಮಾಡಿದರೆ.

ಪ್ರತಿಭಟನಾಕಾರರಲ್ಲಿ ಒಬ್ಬರಾದ 19 ವರ್ಷದ ತಾಲ್ ನರ್ಕಿಸ್‍,  ಹೊಸ ಸರ್ಕಾರದ ಬಗ್ಗೆ ಮಿಶ್ರ ಭಾವನೆಗಳನ್ನು  ವ್ಯಕ್ತಪಡಿಸಿದರೂ, ಈಗ ಬದಲಾವಣೆ ಅಗತ್ಯವಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ರೌಡಿಗಳಿಗೆ ಆಯುಧ ಪೂರೈಸುತ್ತಿದ್ದ ವೆಪನ್‌ ಡೀಲರ್‌ ಬಂಧನ

49ರ ಹರೆಯದ ಬೆನೆಟ್ ಮತದಾನದ ಮೊದಲು ನೆಸ್ಸೆಟ್ ಭಾಷಣದಲ್ಲಿ, ಸೈದ್ಧಾಂತಿಕವಾಗಿ ಭಿನ್ನವಾಗಿರುವ ಪಕ್ಷಗಳ ಒಕ್ಕೂಟವಾದ ಹೊಸ ಸರ್ಕಾರ ಸಂಪೂರ್ಣ ಇಸ್ರೇಲ್‍ ಅನ್ನು  ಪ್ರತಿನಿಧಿಸಲಿದೆ ಎಂದು ಭರವಸೆ ನೀಡಿದರು.

ಎರಡು ವರ್ಷಗಳಲ್ಲಿ ನಾಲ್ಕು ಅನಿಶ್ಚಿತ ಚುನಾವಣೆಗಳ ನಂತರ ದೇಶವನ್ನು ದ್ವೇಷ ಮತ್ತು ಹೋರಾಟದ ಸುಂಟರಗಾಳಿಯಲ್ಲಿ ಎಸೆಯಲಾಗಿದೆ ಎಂದು ಅವರು ಹೇಳಿದರು.

“ಜನಸಂಖ್ಯೆಯ ಎಲ್ಲಾ ಭಾಗಗಳಳನ್ನು ಪ್ರತಿನಿಧಿಸುವ ವಿಭಿನ್ನ ನಾಯಕರು ಒಟ್ಟಾಗಿ ನಿಂತು ಈ ಹುಚ್ಚುತನವನ್ನು ತಡೆಯುವ ಸಮಯ ಬಂದಿದೆ” ಎಂದು ಅವರು ಹೇಳಿದರು,

ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ನೆತನ್ಯಾಹು, ಹಿಂದಿನ ಮೂರು  ಅವಧಿಗೆ ಪ್ರಧಾನಿಯಾಗಿದ್ದಾರೆ.

ಅವರ ಬೆಂಬಲಿಗರು ಇಸ್ರೇಲ್‍ನ ಪ್ರಬಲ ರಕ್ಷಕ ಎಂದು ಶ್ಲಾಘಿಸುತ್ತಾರೆ. ಇರಾನ್‍, ಪ್ಯಾಲಿಸ್ಟೈನ್‍ ವಿಚಾರದಲ್ಲಿ ನೆತನ್ಯಾಹು ಅವರು ಮಾನವ ಹಕ್ಕುಗಳ ಹೋರಾಟಗಾರರಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಆದರೆ ಕಳೆದ ವರ್ಷ ಹಲವಾರು ಅರಬ್ ರಾಷ್ಟ್ರಗಳೊಂದಿಗೆ ಐತಿಹಾಸಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸರೋಜಿನಿ ಮಹಿಷಿ ವರದಿ ಜಾರಿಯಾಗಲಿ, ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ: ಟ್ವಿಟರ್ ಟ್ರೆಂಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...