ಆರು ವರ್ಷಗಳ ನಂತರ ಜಮ್ಮು ಕಾಶ್ಮೀರದ ವಿಧಾನಸಭೆಯ ಮೊದಲ ಅಧಿವೇಶನವು ಗದ್ದಲದೊಂದಿಗೆ ಸೋಮವಾರ ಆರಂಭವಾಗಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಶಾಸಕ ವಹೀದ್ ಪಾರಾ ಅವರು ಆರ್ಟಿಕಲ್ 370 ರದ್ದತಿಯನ್ನು ವಿರೋಧಿಸಿ ಮತ್ತು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ನಿರ್ಣಯವನ್ನು ಮಂಡಿಸಿದ್ದು, ಸದನವು ತೀವ್ರ ಗೊಂದಲಕ್ಕೆ ಸಾಕ್ಷಿಯಾಯಿತು. 370 ವಿಧಿ ರದ್ದತಿ
ಪುಲ್ವಾಮಾ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಪಾರಾ ಅವರು ಹೊಸದಾಗಿ ಆಯ್ಕೆಯಾದ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರಿಗೆ ನಿರ್ಣಯವನ್ನು ಸಲ್ಲಿಸಿದರು. ಐದು ದಿನಗಳ ಅಧಿವೇಶನದಲ್ಲಿ, ಅವರು ಮಂಡಿಸಿದ ವಿಷಯವು ಅಂಜೆಂಡಾದ ಭಾಗವಲ್ಲದಿದ್ದರೂ, ಈ ವಿಷಯದ ಬಗ್ಗೆ ಚರ್ಚೆ ನಡೆಸುವಂತೆ ಅವರು ವಿನಂತಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸದನದ ಕಾರ್ಯಸೂಚಿಯನ್ನು ಅಂತಿಮಗೊಳಿಸಲಾಗಿದದೆ. ಆದರೂ, ಸ್ಪೀಕರ್ ಆಗಿ ನಿರ್ಣಯವನ್ನು ಸೇರಿಸಲು ನಿಮಗೆ ಅಧಿಕಾರ ಇದೆ ಎಂದು ನಾವು ನಂಬುತ್ತೇವೆ. ಏಕೆಂದರೆ ಇದು ಜನರ ಭಾವನೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ.
ನಿರ್ಣಯವನ್ನು ಸಲ್ಲಿಸಿದ ಸ್ವಲ್ಪ ಸಮಯದ ನಂತರ, ಬಿಜೆಪಿಯ ಎಲ್ಲಾ 28 ಶಾಸಕರು ಈ ಕ್ರಮವನ್ನು ವಿರೋಧಿಸಲು ಎದ್ದು ನಿಂತರು. ಇದು ವಿಧಾನಸಭೆಯೊಳಗೆ ಗದ್ದಲದ ಘಟನೆಗೆ ಕಾರಣವಾಯಿತು. ವಿಧಾನಸಭೆ ನಿಯಮಗಳನ್ನು ಉಲ್ಲಂಘಿಸಿ ನಿರ್ಣಯ ತಂದಿದ್ದಕ್ಕಾಗಿ ಪಾರಾ ಅವರನ್ನು ಅಮಾನತುಗೊಳಿಸುವಂತೆ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಒತ್ತಾಯಿಸಿದ್ದಾರೆ.
ಪ್ರತಿಭಟನಾ ನಿರತ ಸದಸ್ಯರಿಗೆ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ ಅವರು ಧರಣಿ ಮುಂದುವರಿಸಿದರು. ನಿರ್ಣಯ ಇನ್ನೂ ತಮ್ಮ ಪೀಠಕ್ಕೆ ಬಂದಿಲ್ಲ ಎಂದ ಅವರು, ಅದು ಬಂದಾಗ ಪರಿಶೀಲಿಸುವುದಾಗಿ ಹೇಳಿದ್ದಾರೆ. 370 ವಿಧಿ ರದ್ದತಿ
ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ನಿರಾಕರಿಸಿದಾಗ, ಆಡಳಿತರೂಢ ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಬಿಜೆಪಿ ಶಾಕಸರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಈ ನಿರ್ಣಯಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ. ಇದು ಕ್ಯಾಮೆರಾಗಳಿಗೆ ಮಾತ್ರ ಸೀಮಿತ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 5, 2019 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಜಮ್ಮು ಕಾಶ್ಮೀರದ ಜನರು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ.
ನಿರ್ಣಯವನ್ನು ಸಲ್ಲಿಸಿದ್ದಕ್ಕಾಗಿ ವಹೀದ್ ಪಾರಾ ಬಗ್ಗೆ “ಹೆಮ್ಮೆಯಿದೆ” ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಹೇಳಿದ್ದಾರೆ. “ಜಮ್ಮು ಕಾಶ್ಮೀರದ ಅಸೆಂಬ್ಲಿಯಲ್ಲಿ ಆರ್ಟಿಕಲ್ 370 ರದ್ದತಿಯನ್ನು ವಿರೋಧಿಸಿ ಮತ್ತು ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ನಿರ್ಣಯವನ್ನು ಮಂಡಿಸಿದ ವಹೀದ್ ಪಾರಾ ಬಗ್ಗೆ ಹೆಮ್ಮೆಯಿದೆ. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಕ್ಷಪಾತ ಆರೋಪ : ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ
ಪಕ್ಷಪಾತ ಆರೋಪ : ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ


