Homeಮುಖಪುಟರಿಪೋ ರೇಟ್ ದರ ಕಡಿತ ಮತ್ತು ಅದರಿಂದ ನಮಗೇನು ಪ್ರಯೋಜನ?

ರಿಪೋ ರೇಟ್ ದರ ಕಡಿತ ಮತ್ತು ಅದರಿಂದ ನಮಗೇನು ಪ್ರಯೋಜನ?

ನಮಗೆ ತಿಳಿದಂತೆ, ಮತ್ತು ಇತ್ತೀಚೆಗೆ ಸರಕಾರ ಒಪ್ಪಿಕೊಂಡಂತೆ, ನಿರುದ್ಯೋಗಿಗಳ ಸಂಖ್ಯೆ ಸತತವಾಗಿ ಹೆಚ್ಚುತ್ತಲೇ ಇದೆ ಮತ್ತು ಕಳೆದ 45 ವರ್ಷಗಳ ಕೆಳ ಹಂತ ತಲುಪಿದೆ.

- Advertisement -
- Advertisement -

| ಜಿ.ಆರ್.ವಿದ್ಯಾರಣ್ಯ |

ಭಾರತೀಯ ರಿಜರ್ವ್ ಬ್ಯಾಂಕ್ ಇಂದು ತನ್ನ ಹಣಕಾಸು ನೀತಿಯ ಅಡಿಯಲ್ಲಿ  ಮರುಖರೀದಿ (ರಿಪೊ) ದರವನ್ನು 25  ಅಂಕದಷ್ಟು (ಅಂದರೆ ¼%) ಕಡಿತಗೊಳಿಸಿದೆ. ಇದರಿಂದ ನೆನೆಗುದಿಗೆ ಬಿದ್ದಿರುವ ದೇಶದ ಆರ್ಥಿಕ ಪ್ರಗತಿಯ ಬಂಡಿ ಮತ್ತೆ ಹೆದ್ದಾರಿ ಹಿಡಿಯಬಹುದೆಂಬ ಆಶಯ ವ್ಯಕ್ತಪಡಿಸಿದೆ. ಭಾರತೀಯ ರಿಜರ್ವ್ ಬ್ಯಾಂಕ್  ಈ ವರ್ಷ ಆಗಲೇ ರಿಪೊ ದರವನ್ನು ಎರಡು ಬಾರಿ (ಫಬ್ರುವರಿ ಮತ್ತು ಏಪ್ರಿಲ್ ತಿಂಗಳಲ್ಲಿ) ¼% ಕಡಿಮೆ ಮಾಡಿದೆ. ಕಡಿತದಿಂದ ಬ್ಯಾಂಕುಗಳಿಗೆ ಉಪಯೋಗಿಸಲು ಕಡಿಮೆ ದರದಲ್ಲಿ ಹಣವೇನೋ ಲಭಿಸುತ್ತದೆ. ಕಡಿತದಿಂದ ಸಾಮಾನ್ಯವಾಗಿ ಎಲ್ಲಾ ರೀತಿಯ ಸಾಲದ ಮೇಲಿನ ಬಡ್ಡಿದರವೂ ಕಡಿಮೆಯಾಗಬೇಕು. ಆದರೆ ಕೇವಲ ಕಾಲು ಪ್ರತಿಶತ ಈ ಬಾರಿಯ ಇಳಿತದ ಲಾಭವನ್ನು ಬ್ಯಾಂಕುಗಳು ತನ್ನ ಗ್ರಾಹಕರಿಗೆ ಹಸ್ತಾಂತರಿಸುವುದು ಸಂದೇಹ.

ಸುಮಾರು ಎಲ್ಲಾ ಬ್ಯಾಂಕುಗಳು ತಾವೇ ಸ್ವತಃ ಸಂಕಷ್ಟದಲ್ಲಿರುವಾಗ ತಮ್ಮ ಲಾಭಾಂಶ ಹೆಚ್ಚಿಸಿಕೊಳ್ಳುವತ್ತ ಅವರ ಗಮನ ಇರುತ್ತದೇ ವಿನಃ ಜನಸಾಮಾನ್ಯರ ಸಾಲಕ್ಕೆ ಬಡ್ಡಿದರ ಕಡಿಮೆ ಮಾಡುವುದು ಅವರ ಪ್ರಾಥಮಿಕತೆ ಆಗುವುದಿಲ್ಲ. ಹಣ ಸುಲಭವಾಗಿ ದೊರೆತ ಮಾತ್ರಕ್ಕೆ ಜನರು ಸಾಲ ಪಡೆದು ಹೊಸ ಉದ್ಯೋಗ ಪ್ರಾರಂಭಿಸುತ್ತಾರೆ ಅಥವಾ ಅವರ ಈಗಿರುವ ವಹಿವಾಟನ್ನು ವಿಸ್ತರಿಸಿಕೊಳ್ಳುತ್ತಾರೆ, ಅದರಿಂದ ದೇಶದ ಆರ್ಥಿಕ ಪ್ರಗತಿ ವೇಗ ಹಿಡಿಯುತ್ತದೆ, ಜನರಿಗೆ ಹೆಚ್ಚಿನ ಉದ್ಯೋಗವಾಕಾಶ ದೊರೆಯುತ್ತದೆ ಎಂದು ನಂಬಿದರೆ ಅದು ಶೇಖ್ ಮೊಹಮ್ಮದನ ಕನಸು.

ನಮಗೆ ತಿಳಿದಂತೆ, ಮತ್ತು ಇತ್ತೀಚೆಗೆ ಸರಕಾರ ಒಪ್ಪಿಕೊಂಡಂತೆ, ನಿರುದ್ಯೋಗಿಗಳ ಸಂಖ್ಯೆ ಸತತವಾಗಿ ಹೆಚ್ಚುತ್ತಲೇ ಇದೆ ಮತ್ತು ಕಳೆದ 45 ವರ್ಷಗಳ ಕೆಳ ಹಂತ ತಲುಪಿದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯತ್ತಿರುವ ದೊಡ್ಡ ಆರ್ಥಿಕ ಶಕ್ತಿ ಭಾರತ ಎಂದು ಬಿಂಬಿಸಲು ಮಾಧ್ಯಮಗಳು ಪೈಪೋಟಿ ನಡೆಸುತ್ತಿವೆ. ಭಾರತದ ಆರ್ಥಿಕತೆ ಔದ್ಯೋಗಿಕ ಕ್ಷೇತ್ರದ ಶಕ್ತಿಯಿಂದ ಮೇಲೇರುತ್ತಿಲ್ಲ, ಅದು ಮೇಲೇರುತ್ತಿರುವುದು ಕೇವಲ ಸೇವಾ ಕ್ಷೇತ್ರದ ಬಲದ ಮೇಲೆ. ಕೃಷಿ ವಲಯ 15% ಕೊಡುಗೆ ನೀಡಿದರೆ ಔದ್ಯೋಗಿಕ ಕ್ಷೇತ್ರದ ಕಾಣಿಕೆ 30% ಸಹ ಇಲ್ಲ.

ನಿರುದ್ಯೋಗ ಸಮಸ್ಯೆ ಸೇವಾ ಕ್ಷೇತ್ರಕ್ಕೆ ಬಲವಾದ ಅಡ್ಡಗಲ್ಲು. ಹಣ ಹೂಡಿಕೆ ಸ್ತರ ಸತತವಾಗಿ ಕಡಿಮೆಯಾಗುತ್ತಿದೆ. ಸರಕಾರದ ಖರ್ಚು ಹೆಚ್ಚುತ್ತಿದೆ. ಆಂತರಿಕ ವ್ಯಯ ಶಕ್ತಿ ಕಡಿಮೆಯಾಗುತ್ತಿದೆ. ಭಾರತಕ್ಕಿಂತ ಚೀನಾ ದೇಶದ ಜಿಡಿಪಿ ವೃದ್ಧಿ ದರ 2018-19ರಲ್ಲಿ ಸ್ವಲ್ಪ ಕಡಿಮೆ ಇದ್ದರೂ ಸಹ, ಅದರ ಗಾತ್ರ ಅಗಾಧವಾದದು. ಚೀನಾ ದೇಶ ಪ್ರತಿ ವರ್ಷ ಒಂದು ಆಸ್ಟ್ರೇಲಿಯಾದಷ್ಟು ಆರ್ಥಿಕ ಶಕ್ತಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಸಾಮರ್ಥ್ಯ ಇಟ್ಟುಕೊಂಡಿದೆ, ಆದರೆ ಕಳೆದ ವರ್ಷ ಅದು ಸೃಷ್ಟಿಸಿದ ಹೊಸ ಉದ್ಯೋಗವಕಾಶ ಕೇವಲ 1.2 ಕೋಟಿ. ಚೀನಾ ದೇಶದ ಕಾಲು ಭಾಗದಷ್ಟು ಶಕ್ತಿ ಇರುವ ಭಾರತ ಪ್ರತಿವರ್ಷ ಎರಡು ಕೋಟಿ ಹೊಸ ಉದ್ಯೋಗ ಎಲ್ಲಿಂದ ಸೃಷ್ಟಿಸಬಲ್ಲದೋ ಆ ದೇವರೇ ಬಲ್ಲ.

ಬ್ಯಾಂಕಿನಿಂದ ದೊಡ್ಡ ಮೊತ್ತದ ಸಾಲ ಪಡೆದ ಹಲವಾರು ದೊಡ್ಡ ಉದ್ಯೋಗಪತಿಗಳು ಈಗಾಗಲೇ ಪರಾರಿಯಾಗಿದ್ದಾರೆ. ಸಣ್ಣ ಪುಟ್ಟ ಸಾಲ ಪಡೆದ ಬಡವರು ಯಾರಿಗೆ ಮತ್ತು ಎಷ್ಟರ ಮಟ್ಟಿಗೆ ಕೆಲಸ ಕೊಡಬಲ್ಲರೋ ತಿಳಿಯದು. ಈಗಾಗಲೇ ಸಾಲದ ಭಾರಕ್ಕೆ ಸಿಲುಕಿರುವ ಜನರು ಆದಷ್ಟು ಬೇಗ ಋಣಮುಕ್ತವಾಗುವದನ್ನು ಚಿಂತಿಸುತ್ತಾರೆಯೇ ವಿನಃ ಹೊಸ ಸಾಲಕ್ಕೆ ಬ್ಯಾಂಕಿನ ಮುಂದೆ ಮರುದಿನ ಸರದಿಯಲ್ಲಿ ನಿಲ್ಲುವುದಿಲ್ಲ.

ಜನರ ಬ್ಯಾಂಕ್ ಠೇವಣಿ ಹಣಕ್ಕೆ ದರ ಕಡಿಮೆಯಾಗಿ, ನಿತ್ಯೋಪಯೋಗಿ ವಸ್ತುಗಳ ಬೆಲೆ ಸತತವಾಗಿ ಮೇಲೇರುತ್ತಿದ್ದರೆ ಜನರು ಹಣ ಠೇವಣಿ ಇಟ್ಟು ಪ್ರಯೋಜನವಿಲ್ಲ. ಖರ್ಚು ಮಾಡೋಣ ಎಂದು ಮುಂದಾದರೆ ಹಣದ ಮೌಲ್ಯ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಉಬ್ಬರ ಮೇಲೇರುವ ಭೀತಿಯೂ ಇರುತ್ತದೆ. ಒಟ್ಟಿನಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ಮಾಡುತ್ತಿರುವ ದರ ಕಡಿತ-ಏರಿಕೆ ಪ್ರಯೋಗಗಳು ಆರ್ಥಿಕ ಪ್ರಚೋದನೆ ನೀಡಲಿ, ದೇಶ ಮುಂದೆ ಸಾಗಲಿ ಎಂದು ಆಶಿಸೋಣ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...