Homeಅಂಕಣಗಳುಸರ್ಕಾರದ ಸಂವಹನಕ್ಕೆ ಸಚಿವರ ಚರ್ಚೆಯ ವರದಿ; ಕಳೆ ಕೀಳುವ ನೆಪದಲ್ಲಿ ತೆನೆ ಚಿವುಟುವ ಹುನ್ನಾರ

ಸರ್ಕಾರದ ಸಂವಹನಕ್ಕೆ ಸಚಿವರ ಚರ್ಚೆಯ ವರದಿ; ಕಳೆ ಕೀಳುವ ನೆಪದಲ್ಲಿ ತೆನೆ ಚಿವುಟುವ ಹುನ್ನಾರ

- Advertisement -
- Advertisement -

ಇತ್ತೀಚಿಗೆ ಕೇಂದ್ರ ಸರ್ಕಾರದ ಕೆಲವು ಮಂತ್ರಿಗಳು ಮತ್ತು ಸರ್ಕಾರದ ಸಂಸ್ಥೆಗಳ ಕೆಲವು ಅಧಿಕಾರಿಗಳ ತಂಡವೊಂದು ಹಲವು ಬಾರಿ ಭೇಟಿಯಾಗಿ, ಮಾಧ್ಯಮಗಳಲ್ಲಿ ಸರ್ಕಾರದ ಪರವಾದ ನರೆಟಿವ್ ತಳ್ಳಲು ಮಾಡಬೇಕಾದ ಕೆಲಸ ಮತ್ತು ಅನುಸರಿಸಬೇಕಾದ ತಂತ್ರಗಳನ್ನು ಚರ್ಚಿಸಿ ಅದನ್ನು ದಾಖಲಿಸಿದ ಟೂಲ್‌ಕಿಟ್ ಒಂದು ಸೋರಿಕೆಯಾಗಿ ಕಾರವಾನ್, ದ ವೈರ್ ಸೇರಿದಂತೆ ಹಲವು ಮಾಧ್ಯಮಗಳು ಸುದ್ದಿ ಮಾಡಿದವು. ಸರ್ಕಾರದ ನೀತಿ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ಪ್ರಚಾರ ಮಾಡುವುದಷ್ಟೇ ಅದರ ಉದ್ದೇಶವಾಗಿದ್ದರೆ ಅಥವಾ ಅದೇ ದಾಖಲೆಯಲ್ಲಿ ಒಂದು ಕಡೆ ಕೇಂದ್ರ ಸಚಿವರೊಬ್ಬರು ಹೇಳುವಂತೆ “ದಾಖಲೆಗಳಿಲ್ಲದೆ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿರುವ ಜನರ ವಿರುದ್ಧ ಮತ್ತು ನಕಲಿ ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ನಾವು ತಂತ್ರಗಳನ್ನು ರೂಪಿಸಿಕೊಳ್ಳಬೇಕು” ಎನ್ನುವದಷ್ಟೇ ಆಗಿದ್ದರೆ ಇದು ಸಮಸ್ಯಾತ್ಮಕವಾಗಿರಬೇಕಿರಲಿಲ್ಲ. ಆದರೆ ಈ ದಾಖಲೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸರ್ಕಾರದ ತಪ್ಪುಗಳನ್ನು ಜನಕ್ಕೆ ತಿಳಿಸುವ, ರಚನಾತ್ಮಕವಲ್ಲದ ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸುವ ಮಾಧ್ಯಮಗಳನ್ನು ಹೇಗೆ ಮಟ್ಟ ಹಾಕಬೇಕು ಎನ್ನುವುದೂ ಚರ್ಚೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದು ಆತಂಕಕ್ಕೆ ಎಡೆಮಾಡುತ್ತದಷ್ಟೇ ಅಲ್ಲದೆ, ಈ ಸಭೆಗಳಲ್ಲಿ ಕೆಲವು ಪ್ರತಿಷ್ಠಿತ ಪತ್ರಿಕೆಗಳ ಪತ್ರಕರ್ತರೂ ಭಾಗಿಯಾಗಿರುವುದು, ಭಾರತದ ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡಿದಂತಾಗಿದೆ.

ಈ ಟೂಲ್‌ಕಿಟ್‌ನ ಕೆಲವು ಸಂಗತಿಗಳನ್ನು ಚರ್ಚಿಸುವುದಕ್ಕೂ ಮೊದಲು ಒಂದು ವಿಷಯ. ಫ್ರೀಡಂ ಹೌಸ್ ಎಂಬ ಒಂದು ಸಂಸ್ಥೆ ಪ್ರತಿ ವರ್ಷ ವಿಶ್ವದೆಲ್ಲೆಡೆ ಹಲವು ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿ, ಆ ದೇಶದ ಪ್ರಜಾಪ್ರಭುತ್ವದ ಸ್ಟೇಟಸ್ ಎತ್ತ ಸಾಗಿದೆ, ಆ ದೇಶದಲ್ಲಿ ಮುಕ್ತತೆಯ-ಸ್ವಾತಂತ್ರ್ಯದ ವಾತಾವರಣ ಎಷ್ಟಿದೆ ಎಂಬುದನ್ನು ಅಂಕಿಅಂಶಗಳ ಮೂಲಕ ವರದಿ ಬಿಡುಗಡೆ ಮಾಡಿ, ಕ್ರಮಾಂಕ ನೀಡುತ್ತದೆ. ಆ ವರದಿಯಲ್ಲಿ ಭಾರತವನ್ನು ಮುಕ್ತ ದರ್ಜೆಯಿಂದ (ಫ್ರೀ ಸ್ಟೇಟಸ್), ಭಾಗಶಃ ಮುಕ್ತ ದರ್ಜೆಗೆ (ಪಾರ್‍ಟ್ಲಿ ಫ್ರೀ ಸ್ಟೇಟಸ್) ಇಳಿಸಿದೆ. ಕೋವಿಡ್ ಸಮಯದ ಲಾಕ್‌ಡೌನ್‌ನಿಂದ ಉಂಟಾದ ವಲಸೆ, ಎಗ್ಗಿಲ್ಲದೆ ಮುಂದುವರೆಯುತ್ತಿರುವ ಹಿಂದೂ ರಾಷ್ಟ್ರೀಯವಾದ, ವೈರಸ್ ಹಬ್ಬಲು ಮುಸ್ಲಿಮರು ಕಾರಣ ಎಂದು ಮಾಡಿದ ಸುಳ್ಳು ಪ್ರಚಾರ ಇಂತಹ ಕಾರಣಗಳನ್ನೆಲ್ಲಾ ಪಟ್ಟಿ ಮಾಡಿ, ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಭಾರತ ಜಾರುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಮೇಲಿನ ವರದಿಗೂ, ಮಾಧ್ಯಮಗಳನ್ನು ಪ್ರಭಾವಿಸುವ ಟೂಲ್‌ಕಿಟ್ ಚರ್ಚೆಯಾದ ಸಮಯಕ್ಕೂ ಸಂಬಂಧ ಇದೆ. ಈ ಟೂಲ್‌ಕಿಟ್ ಚರ್ಚೆ ಆಗಿರುವುದು 2020ರ ಮಧ್ಯ ಭಾಗದಲ್ಲಿಯೇ. ಫ್ರೀಡಂ ಹೌಸ್ ಅವಲೋಕಿಸಿರುವುದು ಕೂಡ 2020ರ ಭಾರತದ ಪರಿಸ್ಥಿತಿಯನ್ನೇ. 14.06.20ರಿಂದ 09.07.20ರ ನಡುವೆ ನಡೆಯುವ ಆರು ಸಭೆಗಳಲ್ಲಿ ಭಾಗವಹಿಸಿರುವ ’ಸಚಿವರ ಗುಂಪು’ ಮುಖ್ತಾರ್ ಅಬ್ಬಾಸ್ ನಖ್ವಿ, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇರ್, ಎಸ್ ಜೈಶಂಕರ್ ಕ್ಯಾಬಿನೆಟ್ ದರ್ಜೆಯ ಸಚಿವರಾದರೆ, ಕಿರೆನ್ ರಿಜೆಜು, ಹರ್ದೀಪ್ ಸಿಂಗ್ ಪೂರಿ, ಅನುರಾಗ್ ಠಾಕೂರ್, ಬಾಬುಲಾಲ್ ಸುಪ್ರಿಯೋ ರಾಜ್ಯ ದರ್ಜೆ ಸಚಿವರು.

ಒಂದು ಕಡೆ ಸ್ಮೃತಿ ಇರಾನಿಯವರು “ನಾವು ಋಣಾತ್ಮಕ ಮತ್ತು ಧನಾತ್ಮಕ ಪ್ರಭಾವಿಗಳನ್ನು ಗುರುತಿಸಬೇಕು” ಅಂದರೆ, ಮತ್ತೊಂದು ಕಡೆ ಅನುರಾಗ್ ಠಾಕೂರ್ ಅವರು ನಾವು ಇತರ ದೇಶದ ಬಲಪಂಥೀಯ ರಾಜಕೀಯ ಪಕ್ಷಗಳೊಂದಿಗೆ ಜೊತೆಗೂಡಿ ಒಂದು ಸಾಮಾನ್ಯ ನೆಲೆ ಕಂಡುಕೊಳ್ಳಬೇಕು ಎನ್ನುತ್ತಾರೆ. ರವಿಶಂಕರ್ ಪ್ರಸಾದ್ ಅವರು, ತಮ್ಮ ಪಕ್ಷದ ಉನ್ನತ ಸಮಿತಿಯ ಮಾಧ್ಯಮ ಹಸ್ತಕ್ಷೇಪ ದೊಡ್ಡದಾಗಿ ಬೆಳೆಯುತ್ತಿಲ್ಲ ಎನ್ನುತ್ತಾರೆ ಮತ್ತು ಸರ್ಕಾರದ ಪರವಾಗಿ ಬರೆಯಬಲ್ಲ ಅಕಾಡೆಮಿಕ್‌ಗಳು, ವಿಶ್ವವಿದ್ಯಾಲಯದ ಕುಲಪತಿಗಳು, ಮಾಜಿ ಐಎಫ್‌ಎಸ್ ಅಧಿಕಾರಿಗಳನ್ನು ಗುರುತಿಸಬೇಕೆಂದು ಕೂಡ ಸಲಹೆ ನೀಡುತ್ತಾರೆ.

ಮುಂದುವರೆದು, ಇದು ಕೇವಲ ಸಚಿವರ ಗುಂಪಿನ ಚರ್ಚೆ ಮಾತ್ರ ಆಗಿರದೆ, ಆರ್‌ಎಸ್‌ಎಸ್‌ನ ಗುರುಮೂರ್ತಿ, ಪ್ರಸಾರ ಭಾರತಿ ಅಧ್ಯಕ್ಷ ಸೂರ್ಯ ಪ್ರಕಾಶ್ ಮುಂತಾದವರು ಸೇರಿದಂತೆ, ದ ಹಿಂದೂ, ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಂತಹ ಪತ್ರಕರ್ತರೂ ಕೆಲವು ಸಭೆಗಳಲ್ಲಿ ಭಾಗಿಯಾಗಿರುವುದನ್ನು ದಾಖಲಿಸಲಾಗಿದೆ. ಗುರುಮೂರ್ತಿ ಒಂದು ಕಡೆ ಮಾತನಾಡುತ್ತಾ, ರಿಪಬ್ಲಿಕ್ ಟಿವಿ ವಾಹಿನಿ ಸರ್ಕಾರದ ಬಗ್ಗೆ ಪ್ರಚಾರ ಮಾಡುತ್ತಿದ್ದರೂ, ಅದನ್ನು ಹೊಗಳುಭಟ್ಟ ಎಂದು ಜನರು ಗುರುತಿಸಿದ್ದಾರೆ. ನಮ್ಮ ನರೆಟಿವ್‌ಗಾಗಿ ಪೋಖ್ರಾನ್ ಬೇಕಾಗಿದೆ ಎನ್ನುತ್ತಾರೆ.

ಅಂದರೆ ಮೀಡಿಯಾ ನಿಯಂತ್ರಣದ ಈ ಯೋಜನೆಯ ಹೆಸರನ್ನು ’ಪೋಖ್ರಾನ್ ಎಫೆಕ್ಟ್’ ಎಂದು ಕರೆದಿರುವುದು ಇಲ್ಲಿ ಮುಖ್ಯ. ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರುಗಳು ಪ್ರಧಾನಮಂತ್ರಿಯಾಗಿದ್ದಾಗ ಪೋಖ್ರಾನ್‌ನಲ್ಲಿ ನಡೆಸಿದ್ದ ಅಣು ಪರೀಕ್ಷೆ ಅಂದಿನ ಸರ್ಕಾರಗಳಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತ್ತು. ಈಗ ಅದೇ ಹೆಸರಿನಲ್ಲಿ ಮಾಧ್ಯಮಗಳ ಮೂಲಕ ಜನಪ್ರಿಯತೆಯನ್ನು ಕಂಡುಕೊಳ್ಳಲು ಈ ಸರ್ಕಾರ ತಂತ್ರ ರಚಿಸುತ್ತಿದೆ.

ಇವೆಲ್ಲ ತಂತ್ರಗಾರಿಕೆಯ ನಡುವೆಯೂ, ರಿಪಬ್ಲಿಕ್ ಟಿವಿ ಢೋಲು ಹೊಡೆಯುತ್ತಿರುವುದು ಅಷ್ಟು ಮುಖ್ಯವಲ್ಲ ಅನ್ನುವ ಅಭಿಪ್ರಾಯವಾಗಲೀ, ಖಾಸಗಿ ಸಂಸ್ಥೆಯೊಂದರ ಪ್ರತಿನಿಧಿ ಕಾಂಚನ ಗುಪ್ತ ಅನ್ನುವವರು ’ಗೂಗಲ್ ಸಂಸ್ಥೆ ವೈರ್, ಸ್ಕ್ರಾಲ್, ಪ್ರಿಂಟ್, ಹಿಂದೂ ಮಾಧ್ಯಮ ಸಂಸ್ಥೆಗಳ ಸುದ್ದಿಗಳನ್ನು ಪ್ರಚಾರ ಮಾಡುತ್ತದೆ, ಇದಕ್ಕೆ ಕಡಿವಾಣ ಹಾಕಬೇಕು’ ಅನ್ನುವ ಮಾತಾಗಲೀ, ಚುನಾವಣಾ ಸಮಯದಲ್ಲಿ ಪಕ್ಷ ಮಾಧ್ಯಮಗಳನ್ನು ಬಹಳ ಚೆನ್ನಾಗಿ ನಿರ್ವಹಿಸುತ್ತದೆ, ಬೇರೆ ಸಮಯದಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಅಶೋಕ ಟಂಡನ್ ಕೇಳಿಕೊಳ್ಳುವ ಪ್ರಶ್ನೆಯಾಗಲೀ, ಸಚಿವರು ಮತ್ತು ಅಧಿಕಾರಿಗಳು ಬರೆಯುವ ಓಪ್-ಎಡ್‌ಗಳನ್ನು (ಅಭಿಪ್ರಾಯ ಸೂಚಿಸುವ ಸಂಪಾದಕೀಯ ಲೇಖನಗಳು) ನಿಲ್ಲಿಸಿ, ಅವು ಸಾಂಕ್ರಾಮಿಕವಾಗಿವೆ ಮತ್ತು ಅವನ್ನು ಜನ ಪ್ರಪೋಗಾಂಡ ಎನ್ನುತ್ತಿದ್ದಾರೆ, ಅವುಗಳಿಂದ ಹೆಚ್ಚು ಉಪಯೋಗವಿಲ್ಲ ಎನ್ನುವ ಅಶೋಕ್ ಮಲಿಕ್ ಅವರ ಮಾತುಗಳಾಗಲೀ ಬೇರೆಯದೇ ಕಥೆಯನ್ನು ಹೇಳುತ್ತಿವೆ. ತಾವು ಹತ್ತಾರು ವರ್ಷ ನಡೆಸಿಕೊಂಡು ಬಂದಿರುವ ಪ್ರಪೋಗಾಂಡದ ವಿರುದ್ಧ ಬೆರಳೆಣಿಕೆಯ ಮಾಧ್ಯಮಗಳಾದರೂ ಸತ್ಯದ ಕಥೆಗಳನ್ನು ಹೇಳುತ್ತಿರುವುದರ ಬಗ್ಗೆ ಸರ್ಕಾರ ಆಂತಕಿತಗೊಂಡಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ.

ಅದೇ ಟೂಲ್‌ಕಿಟ್‌ನಲ್ಲಿ, ಪತ್ರಕರ್ತರನ್ನು ಹಸಿರು (ತಂತಿಯ ಮೇಲೆ ಕುಂತವರು), ಕಪ್ಪು (ವಿರುದ್ಧ ಇರುವವರು), ಬಿಳಿ (ಪರವಾಗಿರುವವರು) ಬಣ್ಣಗಳಿಂದ ಗುರುತಿಸಿ, ಸರ್ಕಾರದ ಪರವಾಗಿ ಇರುವವರನ್ನು ಹೆಚ್ಚು ಪ್ರಮೋಟ್ ಮಾಡಬೇಕು ಎಂದು ಸಲಹೆ ನೀಡುವ ಮಾಜಿ ಪತ್ರಕರ್ತ ನಿತಿನ್ ಗೋಖಲೆ ಅವರ ಮಾತುಗಳು ಇಂದಿನ ಪತ್ರಿಕೋದ್ಯಮದ ಸ್ಥಿತಿಯನ್ನು ನೆನಪಿಸಿದರೂ, ಸರ್ಕಾರ ಇಂತಹ ಸಚಿವರ ಗುಂಪೊಂದನ್ನು ರಚಿಸಿ ಇಷ್ಟು ಗಂಭೀರವಾಗಿ ಆರು ಸುತ್ತಿನ ಚರ್ಚೆ ನಡೆಸಿರುವುದು ಮತ್ತು ನಕಲಿ ಸುದ್ದಿಗಳನ್ನು ಪತ್ತೆಹಚ್ಚಿ ಓದುಗರಿಗೆ ನಿಜ ತಿಳಿಸುವ ತಾಣಗಳಾದ ಆಲ್ಟ್ ನ್ಯೂಸ್‌ನಂತಹ ಮಾಧ್ಯಮಗಳ ಬಗ್ಗೆ ಆತಂಕಿತಗೊಂಡಿರುವುದು, ಇವೆಲ್ಲವೂ ಎಲ್ಲೋ ಮೂಲೆಯಲ್ಲಿ ಚಿಗುರುತ್ತಿರುವ ಭರವಸೆಯನ್ನು ನೆನಪಿಸುತ್ತದೆ.

ಕಳೆ ತೆಗೆಯುವ ನೆಪದಲ್ಲಿ ತೆನೆಯನ್ನೆ ಚಿವುಟುಹಾಕಲು ಹೊರಟಿರುವ ಸರ್ಕಾರದ ಹುನ್ನಾರವನ್ನು ತಡೆಯಲು ಇರುವುದು ಒಂದೇ ದಾರಿ: ಉತ್ತಮ ಪತ್ರಿಕೋದ್ಯಮವನ್ನು ಉಳಿಸುವುದು ಮತ್ತು ಬೆಳೆಸುವುದು ಮತ್ತು ಹೆಚ್ಚೆಚ್ಚು ನೆಲದ ಬಾಷೆಗಳಲ್ಲಿ ಪ್ರಭುತ್ವದ ಸುಳ್ಳು ನರೆಟಿವ್‌ಗಳಿಗೆ ಸೋಲುಣಿಸುವುದು.

ಟೂಲ್‍ಕಿಟ್‍ನ ವರದಿಯನ್ನು ಇಲ್ಲಿ ಓದಿ..

..


ಇದನ್ನೂ ಓದಿ: ‘ಶರ್ಟ್, ಪ್ಯಾಂಟ್ ಬಿಚ್ಚಲು ಕಾಂಗ್ರೆಸ್‌ನವರು ಹೇಳಿ ಕೊಟ್ಟಿದ್ರಾ?’ – ಡಿ.ಕೆ. ಶಿವಕುಮಾರ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...