Homeಅಂತರಾಷ್ಟ್ರೀಯರಾಯ್ಟರ್ಸ್‌‌ನ ಖ್ಯಾತ ಫೋಟೋಗ್ರಾಫರ್‌ ದಾನಿಶ್ ಸಿದ್ದೀಕಿ ಅಫ್ಘಾನ್‌ ಘರ್ಷಣೆಯಲ್ಲಿ ಮೃತ

ರಾಯ್ಟರ್ಸ್‌‌ನ ಖ್ಯಾತ ಫೋಟೋಗ್ರಾಫರ್‌ ದಾನಿಶ್ ಸಿದ್ದೀಕಿ ಅಫ್ಘಾನ್‌ ಘರ್ಷಣೆಯಲ್ಲಿ ಮೃತ

- Advertisement -
- Advertisement -

ರಾಯ್ಟರ್ಸ್‌ನ ಮುಖ್ಯ ಫೋಟೋಗ್ರಾಫರ್‌ ಆಗಿದ್ದ ದಾನಿಶ್ ಸಿದ್ದೀಕಿ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ‌ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೋಲೋ ನ್ಯೂಸ್‌‌ ಶುಕ್ರವಾರ ವರದಿ ಮಾಡಿದೆ. ಅವರು ಅಫ್ಘಾನ್‌‌‌‌ ವಿಶೇಷ ಪಡೆಯೊಂದಿಗೆ ವರದಿಗಾಗಿ ಅಲ್ಲಿ ನಿಯೋಜನೆಗೊಂಡಿದ್ದರು ಎನ್ನಲಾಗಿದೆ.

ಪಾಕಿಸ್ತಾನ ಮತ್ತು ಅಫ್ಘಾನ್‌‌ನ ಪ್ರಮುಖ ಗಡಿಯಾಗಿರುವ ‘ಸ್ಪಿನ್ ಬೋಲ್ಡಾಕ್‌’ನ ಬಾರ್ಡರ್‌ ಕ್ರಾಸಿಂಗ್‌‌ ಅನ್ನು ತಾಲಿಬಾನ್‌‌ ವಶಪಡಿಸಿಕೊಂಡಿತ್ತು. ಈ ಪ್ರಮುಖ ಗಡಿಯನ್ನು ಹಿಂಪಡೆಯಲು ಕಾರ್ಯಾಚರಣೆ ಪ್ರಾರಂಭಿಸಿದ್ದ ಅಫ್ಘಾನ್ ಪಡೆಗಳು ಸ್ಪಿನ್ ಬೋಲ್ಡಾಕ್‌ನಲ್ಲಿ ತಾಲಿಬಾನ್‌ ಬಂಡುಕೋರರೊಂದಿಗೆ ಘರ್ಷಣೆ ನಡೆಸಿದ್ದವು ಎಂದು ಎಎಫ್ಪಿ ವರದಿ ಮಾಡಿದೆ.

ಇದನ್ನೂ ಓದಿ: 2020ರ ಪ್ರತಿಷ್ಟಿತ ಪುಲಿಟ್ಜೆರ್ ಪ್ರಶಸ್ತಿ ಗೆದ್ದ ಕಾಶ್ಮೀರದ ಪತ್ರಕರ್ತರು ಸೆರೆಹಿಡಿದ ಫೋಟೊಗಳು

ದಾನಿಶ್ ಕಳೆದ ಕೆಲವು ದಿನಗಳಿಂದ ಕಂದಹಾರ್‌ನ ಪರಿಸ್ಥಿತಿಯನ್ನು ವರದಿ ಮಾಡುತ್ತಿದ್ದರು.

ಜುಲೈ 13 ರಂದು, ಅವರು ಮತ್ತು ಇತರ ವಿಶೇಷ ಪಡೆಗಳು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ಕನಿಷ್ಠ ಮೂರು ಸುತ್ತಿನ ಗುಂಡಿನ ಚಕಮಕಿ ನಡೆದಿದ್ದವು ಎಂದು ಅವರು ವಿಡಿಯೊ ಸಮೇತ ವರದಿ ಮಾಡಿದ್ದರು.

ಪುಲಿಟ್ಜೆರ್ ಪ್ರಶಸ್ತಿ ವಿಜೇತ ಪತ್ರಕರ್ತ

2018 ರಲ್ಲಿ ತನ್ನ ‘ಫೀಚರ್‌ ಫೋಟೋಗ್ರಾಫಿ’ ಸರಣಿಗಾಗಿ ಪ್ರತಿಷ್ಠಿತ ಪುಲಿಟ್ಜೆರ್‌‌ ಪ್ರಶಸ್ತಿಯನ್ನು ಅವರು ಪಡೆದಿದ್ದರು. ಆ ವರ್ಷ ರಾಯ್ಟರ್ಸ್‌ನ ಒಟ್ಟು ಏಳು ಪತ್ರಕರ್ತರಿಗೆ ಪ್ರಶಸ್ತಿ ಬಂದಿದ್ದು, ಅದರಲ್ಲಿನ ಇಬ್ಬರು ಭಾರತೀಯರಲ್ಲಿ ದಾನಿಶ್ ಸಿದ್ದೀಕಿ ಒಬ್ಬರಾಗಿದ್ದಾರೆ. ಅಂದಿನ ಅವರ ಫೋಟೊ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿತ್ತು.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಸುಳ್ಳು ವಾಟ್ಸಾಪ್ ಫಾರ್ವಾಡ್ ಸಂದೇಶವನ್ನು ಉಲ್ಲೇಖಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಫೋಟೊ ಜರ್ನಲಿಸ್ಟ್ ಆಗಿದ್ದ ಸಮಯದಲ್ಲಿ ದಾನಿಶ್, ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್ ಪ್ರತಿಭಟನೆಗಳು, ನೇಪಾಳ ಭೂಕಂಪಗಳು, ಉತ್ತರ ಕೊರಿಯಾದಲ್ಲಿ ನಡೆದ ಕ್ರೀಡಾಕೂಟಗಳ ವರದಿಗಳ ಸಹಿತ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ವರದಿಗಳನ್ನು ಮಾಡಿದ್ದರು.

ಅವರ ಫೋಟೋಗಳು ಹಲವಾರು ನಿಯತಕಾಲಿಕೆಗಳು, ಪತ್ರಿಕೆಗಳು, ಸ್ಲೈಡ್‌ಶೋಗಳು ಮತ್ತು ಗ್ಯಾಲರಿಗಳಲ್ಲಿ ವ್ಯಾಪಕವಾಗಿ ಪ್ರಕಟಗೊಂಡಿವೆ.

ದಾನಿಶ್ ಸಿದ್ದೀಕಿ ಅವರ ನಿಧನವನ್ನು ಖಂಡಿಸಿ, ಅಫ್ಘಾನಿಸ್ತಾನದ ಭಾರತದ ರಾಯಭಾರಿ ಟ್ವೀಟ್ ಮಾಡಿದ್ದು, “ನಿನ್ನೆ ರಾತ್ರಿ ಕಂದಹಾರ್‌ನಲ್ಲಿ ಸ್ನೇಹಿತ ದಾನಿಶ್ ಸಿದ್ದೀಕಿ ಹತ್ಯೆಯ ದುಃಖದ ಸುದ್ದಿ ತಿಳಿದು ತೀವ್ರವಾಗಿ ವಿಚಲಿತರಾಗಿದ್ದೇನೆ. ಭಾರತೀಯ ಪತ್ರಕರ್ತ ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತ ಅಫಘಾನ್ ಭದ್ರತಾ ಪಡೆಗಳೊಂದಿಗೆ ಇದ್ದರು. 2 ವಾರಗಳ ಹಿಂದೆ ಅವರು ಕಾಬೂಲ್‌ಗೆ ತೆರಳುವ ಮೊದಲು ನಾನು ಅವರನ್ನು ಭೇಟಿಯಾಗಿದ್ದೆ. ಅವರ ಕುಟುಂಬ ಮತ್ತು ರಾಯಿಟರ್ಸ್‌ಗೆ ಸಂತಾಪ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕನ್ವರ್‌ ಯಾತ್ರೆಗೆ ಒಪ್ಪಿಗೆ ನೀಡಿದ ಯೋಗಿ ಸರ್ಕಾರ: ಜನರ ಜೀವನ, ಆರೋಗ್ಯ ಮುಖ್ಯ ಎಂದ ಸುಪ್ರಿಂ

ಇಷ್ಟೇ ಅಲ್ಲದೆ ದಾನಿಶ್ ಸಿದ್ದೀಕಿ ಅವರ ನಿಧನಕ್ಕೆ ಹಲವಾರು ಪತ್ರಕರ್ತರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...