Homeಮುಖಪುಟಸುಪ್ರೀಂ ಕೋರ್ಟ್‌ನಲ್ಲಿ ಸುಳ್ಳು ವಾಟ್ಸಾಪ್ ಫಾರ್ವಾಡ್ ಸಂದೇಶವನ್ನು ಉಲ್ಲೇಖಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಸುಪ್ರೀಂ ಕೋರ್ಟ್‌ನಲ್ಲಿ ಸುಳ್ಳು ವಾಟ್ಸಾಪ್ ಫಾರ್ವಾಡ್ ಸಂದೇಶವನ್ನು ಉಲ್ಲೇಖಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

"ಕೊಲೆಗಳು ಮತ್ತು ಹೆಣಗಳು ಮತ್ತು ಸಿಟ್ಟು ಮತ್ತು ನೋವು.... ಹಸಿದ ಅಥವಾ ಗಾಯಗೊಂಡ ಮಕ್ಕಳು... ಗುಂಡಿಕ್ಕಲು ತಹತಹಿಸುತ್ತಿರುವ ಹುಚ್ಚರು. ಹೆಚ್ಚಾಗಿ ಪೊಲೀಸರು, ಹಂತಕರು, ಕೊಲೆಗಡುಕರು ಇವೆಲ್ಲವುಗಳ ನೆನಪುಗಳು ನನ್ನನ್ನು ದೆವ್ವಗಳಂತೆ ಕಾಡುತ್ತಿವೆ" ಎಂದ ಕಾರ್ಟರ್‌ ಬರೆದಿದ್ದರು.

- Advertisement -
- Advertisement -

ಲಾಕ್‌ಡೌನ್ ಕಾರಣಕ್ಕೆ ಸಿಕ್ಕಿಕೊಂಡ ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ಸ್ಥಳಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು. ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಮೂರು ನ್ಯಾಯಾಧೀಶರ ಪೀಠದಿಂದ ಕನಿಷ್ಠ 50 ಪ್ರಶ್ನೆಗಳನ್ನು ಕೇಳಿದ್ದು ವಲಸೆ ಕಾಮಿಕರ ವಿಚಾರದಲ್ಲಿ ಸರ್ಕಾರಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಇದಕ್ಕೆ ಉತ್ತರಿಸಿದ ಅವರು, ರೈಲುಗಳು ಓಡುತ್ತವೆ, ವಲಸಿಗರನ್ನು ಸಾಗಿಸುತ್ತವೆ ಮತ್ತು ಊಟವನ್ನು ಒದಗಿಸಲಾಗಿದೆ. ಕೇಂದ್ರವು “ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ. “ವಿನಾಶವಾದಿಗಳು ಈ ವಿಷಯವನ್ನು ರಾಜಕೀಯ ಭಾಷಣಗಳಿಗೆ ವೇದಿಕೆಯನ್ನಾಗಿ ಮಾಡಿಕೊಳ್ಳಲು ಅವಕಾಶ ನೀಡಬಾರದು”. ಅವರು ಆರಾಮ ಕುರ್ಚಿಗಳಲ್ಲಿ ಕುಳಿತು ಟೀಕಿಸುವುದನ್ನು ಬಿಟ್ಟು ತಾವೇನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದ್ದರು.

ಮುಂದುವರಿದು ತುಷಾರ್ ಮೆಹ್ತಾರವರು ರಣಹದ್ದು ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತ ಪತ್ರಕರ್ತ ಕೆವಿನ್ ಕಾರ್ಟರ್ ಅವರು ಸುಡಾನ್‌ನಲ್ಲಿನ ಕ್ಷಾಮದ ಸಮಯದಲ್ಲಿ ತೆಗೆದ ಛಾಯಾಚಿತ್ರದ ಕಥೆಯನ್ನು ನಿರೂಪಿಸಲು ಹೋದರು.

“1983 ರಲ್ಲಿ ಸುಡಾನ್‌ಗೆ ಕೆವಿನ್ ಕಾರ್ಟರ್ ಎಂಬ ಛಾಯಾಗ್ರಾಹಕ ಹೋದರು. ತೀವ್ರ ಬರಗಾಲವಾದ್ದರಿಂದ ಅಲ್ಲೊಂದು ಅಪೌಷ್ಠಿಕತೆ, ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಇತ್ತು. ಅದರ ಹಿಂದೆ ಮಗು ಸಾಯುವುದನ್ನೇ ರಣಹದ್ದು ಕಾಯುತ್ತಿತ್ತು. ಅವರು ಆ ಫೋಟೊ ತೆಗೆದರು ಮತ್ತು ಅದನ್ನು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಿಸಲಾಯಿತು. ಅವನಿಗೆ ಪುಲಿಟ್ಜೆರ್ ಪ್ರಶಸ್ತಿ ನೀಡಲಾಯಿತು. ಆತ 4 ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡ. ಅದಕ್ಕೂ ಮೊದಲು ಪತ್ರಕರ್ತರೊಬ್ಬರು ಮಗುವಿಗೆ ಏನಾಯಿತು ಎಂದು ಕೆವಿನ್ನನ್ನು ಕೇಳಿದರು? ನನಗೆ ಗೊತ್ತಿಲ್ಲ, ನಾನು ಮನೆಗೆ ಮರಳಿದೆ ಎಂದು ಆತ ಹೇಳಿದನು. ನಂತರ ಆ ಪತ್ರಕತ್ರ ಎಷ್ಟು ರಣಹದ್ದುಗಳಿದ್ದವು ಎಂದು ಕೇಳಿದನು. ಕೆವಿನ್ ಒಂದು ಎಂದನು. ಆಗ ಪತ್ರಕರ್ತ ಇಲ್ಲ, ಎರಡು ರಣಹದ್ದುಗಳಿದ್ದವು, ಅದರಲ್ಲಿ ಒಂದು ಕ್ಯಾಮೆರಾವನ್ನು ಹಿಡಿದಿತ್ತು ಎಂದನು” ಎಂಬ ಕತೆಯನ್ನು ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ.

ಸಾಲಿಸಿಟರ್ ಜನರಲ್ ನಿರೂಪಿಸಿದ ಈ ಕಥೆಯು ಪ್ರಧಾನಿ ಮೋದಿ ಬೆಂಬಲಿಗರು ಹರಡಿದ ಸುಳ್ಳು ವಾಟ್ಸಾಪ್ ಸಂದೇಶವಾಗಿದೆ. ಯಾರಾದರೂ ವಲಸೆ ಕಾರ್ಮಿಕರಿಗಾಗಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರೆ ಈ ಕಥೆಯನ್ನು ಹೇಳಿ ನೀವೇನು ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ.

ಸೂಡಾನ್‌ನಲ್ಲಿ ನಿಜವಾಗಿ ನಡೆದಿದ್ದೇನು?

1993ರಲ್ಲಿ ಆಹಾರ ಕ್ಯಾಂಪನ್ನು ತಲುಪಲು ತೆವಳುತ್ತಿರುವ ಸುಡಾನಿನ ನಿಶ್ಶಕ್ತ ಮಗುವೊಂದರ ಹತ್ತಿರ ರಣಹದ್ದು ಕಾಯುತ್ತಿರುವ ಚಿತ್ರ ತೆಗೆದ ಕೆವಿನ್ ನಂತರ ಆ ರಣಹದ್ದನ್ನು ಓಡಿಸಿದ್ದಾನೆ. ಆತ 20 ನಿಮಿಷ ಅಲ್ಲೆ ಕಾದಿದ್ದಾನೆ. ಆತನಿಗೆ ರೋಗದ ಕಾರಣಕ್ಕಾಗಿ ಮಗುವನ್ನು ಮುಟ್ಟಬಾರದೆಂದು ಸೂಚಿಸಲಾಗಿತ್ತು. ಆ ಮಗು ಕೋಂಗ್ ಎನ್‌ಯೋಂಗ್ ಈ ಘಟನೆ ನಡೆದ ಬಳಿಕ ಬದುಕುಳಿಯಿತು. 14 ವರ್ಷಗಳ ನಂತರ ಜ್ವರದಿಂದ ಸಾವಿಗೀಡಾಯಿತು.

ಆದರೆ ಎಲ್ಲಿಯೂ ಆ ಸಮಯದಲ್ಲಿ ಇನ್ನೊಬ್ಬ ಪತ್ರಕರ್ತ ಕೆವಿನ್‌ನನ್ನು ಪ್ರಶ್ನಿಸಿದ್ದರ ಉಲ್ಲೇಖವಿಲ್ಲ.
ಕಾರ್ಟರ್ ಆತ್ಮಹತ್ಯೆಯು ಆಘಾತದ ಬಳಿಕದ ಅಸ್ವಸ್ಥತೆ (post traumatic disorders)ಗಳಿಂದ ಉಂಟಾಗಿತ್ತೆಂದು ಅವರ ಅಂತಿಮ ಪತ್ರದಿಂದ ಗೊತ್ತಾಗುತ್ತದೆ. ಅವರು ತುಂಬಾ ನೊಂದಿದ್ದರು.

ಅವರ ಪತ್ರದ ಮುಖ್ಯಾಂಶ ಹೀಗಿದೆ: “ಕೊಲೆಗಳು ಮತ್ತು ಹೆಣಗಳು ಮತ್ತು ಸಿಟ್ಟು ಮತ್ತು ನೋವು…. ಹಸಿದ ಅಥವಾ ಗಾಯಗೊಂಡ ಮಕ್ಕಳು… ಗುಂಡಿಕ್ಕಲು ತಹತಹಿಸುತ್ತಿರುವ ಹುಚ್ಚರು. ಹೆಚ್ಚಾಗಿ ಪೊಲೀಸರು, ಹಂತಕರು, ಕೊಲೆಗಡುಕರು ಇವೆಲ್ಲವುಗಳ ನೆನಪುಗಳು ನನ್ನನ್ನು ದೆವ್ವಗಳಂತೆ ಕಾಡುತ್ತಿವೆ”.

ಅವರ ಈ ಚಿತ್ರವು ಸುಡಾನಿನ ಭಯಂಕರ ಬರಗಾಲದ ಬಗ್ಗೆ ವಿಶ್ವಾದ್ಯಂತ ಗಮನ ಸೆಳೆದಿತ್ತು. ಕಾರ್ಟರ್ ಅವರನ್ನು ಇಂದಿಗೂ ಅವರ ವೃತ್ತಿಯಲ್ಲಿ ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಅಂತವರ ಮೇಲೆ ಮತ್ತು ವಲಸಿಗರ ಪರವಾಗಿ ಧ್ವನಿ ಎತ್ತಿರುವವರ ಮೇಲೆ ಹಿಂಸಾಸಂತೋಷ, ಅವಕಾಶವಾದ, ಅಸಹಾನುಭೂತಿ ಇಂತಹಾ ಆರೋಪ ಮಾಡಿ ಇಂತಹಾ ವರದಿಗಳ ಮೇಲೆಯೇ ಅವಲಂಬಿಸಿದ್ದಾರೆ ಎಂದು ತುಷಾರ್ ಮೆಹ್ತಾ ಆರೋಪಣೆ ಮಾಡುವುದು ಕೆಟ್ಟ ಅಭಿರುಚಿ ಮಾತ್ರವಲ್ಲ ನೈತಿಕವಾಗಿಯೂ ತಪ್ಪು.

ಒಂದು ನಿರ್ಭೀತ, ಸ್ವತಂತ್ರ ಮಾಧ್ಯಮವು ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ನಿರ್ಣಾಯಕವಾದುದು. ಅಂತವರ ಜವಾಬ್ದಾರಿಯುತ ವರದಿಗಾರಿಕೆಯೇ ವಲಸೆ ಕಾರ್ಮಿಕರ ಘೋರ ಸಂಕಷ್ಟಗಳನ್ನು ಬೆಳಕಿಗೆ ತಂದಿರುವುದು ಎಂಬುದನ್ನು ಮರೆಯಬಾರದು.


ಇದನ್ನೂ ಓದಿ: ಪತ್ರಕರ್ತರು, ರಣಹದ್ದುಗಳು ಹಾಗೂ ಮತ್ತೊಬ್ಬ ಸಾಲಿಸಿಟರ್ ಜನರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....