HomeUncategorizedದಿಕ್ಕು ತಪ್ಪಿದ ಮಾತುಗಳು ಮತ್ತು ಅಡ್ಡ ಹಾದಿ ಹಿಡಿದ ಚುನಾವಣಾ ಕಥನ

ದಿಕ್ಕು ತಪ್ಪಿದ ಮಾತುಗಳು ಮತ್ತು ಅಡ್ಡ ಹಾದಿ ಹಿಡಿದ ಚುನಾವಣಾ ಕಥನ

- Advertisement -
- Advertisement -

ಪ್ರಜಾತಂತ್ರದ ಹಬ್ಬಗಳೆಂದು ಕರೆಯುವ ಚುನಾವಣೆಗಳು ಬಂದಿವೆ. ಜನರ ಬೇಕುಬೇಡಗಳನ್ನು ನಿರ್ಧರಿಸುವ ಸಮಯವಿದು. ಹಾಗಾಗಿ ಜನರ ದನಿಗಳು ಜೋರಾದರೆ ಮಾತ್ರ ಆಳಲು ಹೋಗುವವರಿಗೆ ಕೇಳಿಸಲು ಸಾಧ್ಯ. ಏಕೆಂದರೆ ಈಗ ಮಾತ್ರ ರಾಜಕೀಯ ಪಕ್ಷಗಳ ನಾಯಕರುಗಳು ಜನರ ಮನೆ ಮುಂದೆ ಬರುತ್ತಾರೆ. ಹೀಗೆ ಬರುವುದು ಅವರಿಗೆ ಅನಿವಾರ್ಯವಾಗಿರುತ್ತದೆ. ಇದನ್ನೆ ನಾವು ಪ್ರಜಾತಂತ್ರ ಎಂದು ಕರೆಯುವುದು. ಈ ಸಂದರ್ಭದಲ್ಲಿ ಮಾಧ್ಯಮಗಳು ಜನರ ದನಿಯಾಗಿ ಜನ ಮತ್ತು ರಾಜಕೀಯ ಪಕ್ಷಗಳ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ಪ್ರಜಾತಂತ್ರದ ಯಶಸ್ಸಿಗೆ ಇದು ಅಗತ್ಯ.
ಕರ್ನಾಟಕದಲ್ಲಿ ಚುನಾವಣೆ ಎರಡು ಹಂತಗಳಲ್ಲಿ ನಡೆಯುತ್ತಿದ್ದು ದಿನೇ ದಿನೇ ಕಾವೇರುತ್ತಿದೆ. ಆದರೆ ಬಹುತೇಕ ಮಾಧ್ಯಮಗಳು ಮಂಡ್ಯ ಕ್ಷೇತ್ರದ ಮೇಲೆ ಮಾತ್ರ ಗಮನ ಹರಿಸುತ್ತಿದ್ದಾರೆ, ಉಳಿದ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂಬ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿವೆ. ಮಂಡ್ಯ ಅಂದ್ರೆ ಇಂಡ್ಯ ಇದ್ದ ಹಾಗೆ ಎಂದು ತಮಾಷೆಗೆ ಹೇಳುತ್ತಿದ್ದುದ್ದನ್ನು ನಿಜ ಮಾಡಲು ಹೊರಟಂತಿದೆ ಮಾಧ್ಯಮಗಳ ನಡೆ. ಚಿತ್ರನಟರು ಇದ್ದರೆ ಟಿಆರ್‍ಪಿ ಸಿಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಸಮಯ ಅದಕ್ಕೆ ಮೀಸಲಿಡುವುದು ಎಷ್ಟು ಸರಿ?
ಕರ್ನಾಟಕದಲ್ಲಿರುವ ಚಾಮರಾಜನಗರದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತಿವೆಯೇ ಇಲ್ಲವೇ? ಬೀದರ್‍ನ ಜನಗಳ ಪರಿಸ್ಥಿತಿ ಏನು? ರಾಜ್ಯದ ಜನರಿಗೆ ವಿದ್ಯುತ್ ಕೊಡುವುದಕ್ಕೋಸ್ಕರ ನೆಲೆ ಕಳೆದುಕೊಂಡ ಉತ್ತರ ಕನ್ನಡದ ಜನ ಈಗ ಹೇಗಿದ್ದಾರೆ? ಅಲ್ಲಿನ ಸಂಸದನ ಬೆಂಕಿಯುಗುಳುವ, ತೇಜೋವಧೆಯ ಭಾಷಣಗಳಿಂದ ಅಲ್ಲಿನ ಜನಕ್ಕೇನಾದರೂ ಉಪಯೋಗವಿದೆಯೇ? ಚಿತ್ರದುರ್ಗದ ಜನರು ಬರದಿಂದ ಬೇಯುತ್ತಿರುವುದಕ್ಕೆ ಪರಿಹಾರಗಳೇನು? ಕೋಲಾರ ಚಿಕ್ಕಬಳ್ಳಾಪುರದ ಜನರಿಗೆ ಕುಡಿಯಲು ಉತ್ತಮ ನೀರು ಸಿಗುತ್ತಿದೆಯೇ? ಈ ಯಾವ ವಿಷಯಗಳ ಕುರಿತು ಚುನಾವಣಾ ಸಂದರ್ಭದಲ್ಲಾದರೂ ಮಾಧ್ಯಮಗಳು ಗಮನಹರಿಸುತ್ತಿಲ್ಲ ಎಂಬುದನ್ನು ನಾವು ಮರೆಯಬಾರದು.
ಇನ್ನು ಚುನಾವಣಾ ಸಮಯದಲ್ಲಿ ಕೆಲ ರಾಜಕಾರಣಿಗಳು ಮನಸ್ಸಿಗೆ ಬಂದಹಾಗೆ ಮಾತಾಡುವುದು, ಕೆಟ್ಟ ಕೊಳಕು ಬೈಯ್ಯುವುದನ್ನು ತಮ್ಮ ಕಾಯಕ ಮಾಡಿಕೊಂಡಿರುತ್ತಾರೆ. ಎದುರಾಳಿಗಳನ್ನು ಹಣಿಯಲು ಈ ಕುತಂತ್ರವನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಈ ಹಿಂದೆ ಉಪಚುನಾವಣೆಯೊಂದರ ಸಂದರ್ಭದಲ್ಲಿ ಬಿಜೆಪಿ ಪ್ರತಾಪ್ ಸಿಂಹ ಎಂಬ ವ್ಯಕ್ತಿ ‘ಇನ್ನೂ ಗಂಡ ಸತ್ತು ಒಂದು ವಾರ ಆಗಿಲ್ಲ, ಆಗಲೇ ಅವರಿಗೆ ಗೂಟದ ಕಾರಿನ ಮೇಲೆ ಆಸೆ’ ಎಂದಿದ್ದನು. ಇನ್ನು ಈ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅನ್ನು ಟೀಕಿಸುವ ಭರದಲ್ಲಿ ಗಂಡ ಸತ್ತು ತಿಂಗಳಾಗಿಲ್ಲ ಆಗಲೇ ಚುನಾವಣೆಗೆ ಬೇಕಾಯ್ತಾ ಎಂದು ಜೆಡಿಎಸ್‍ನ ಎಚ್.ಡಿ ರೇವಣ್ಣ ಹೇಳುವ ಮೂಲಕ ಸರಿಯಾಗಿ ಛೀಮಾರಿ ಹಾಕಿಸಿಕೊಂಡರು.
ಇಂದು ಕಾಂಗ್ರೆಸ್ ಜೊತೆಗಿರುವ ಪಕ್ಷದ ನಾಯಕಮಣಿಯೊಬ್ಬ ಉತ್ತರ ಪ್ರದೇಶದಲ್ಲಿ ತಮ್ಮ ಪ್ರತಿಸ್ಪರ್ಧಿ ಮಹಿಳಾ ಅಭ್ಯರ್ಥಿಯ ವಿರುದ್ಧ ಅವರು ಎಷ್ಟು ಅಗಲ ಬಿಂದಿ ಇಟ್ಟುಕೊಂಡಿದ್ದಾರೆ ಅಷ್ಟು ಗಂಡಂದಿರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದೇ ಉತ್ತರ ಪ್ರದೇಶದ ಬಿಜೆಪಿ ವ್ಯಕ್ತಿಯೊಬ್ಬರು ಮಾಯವತಿಯವರು ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ, ಸೌಂದರ್ಯಕ್ಕೆ ಹೆಚ್ಚಿನ ಸಮಯ ನೀಡುತ್ತಾರೆ ಅವರನ್ನು ಗೆಲ್ಲಿಸಬಾರದು ಎಂದಿದ್ದ. ಇವೆಲ್ಲಾ ಉಸಾಬರಿ ಇವರಿಗೆ ಏಕೆ ಎಂಬುದು ಸರಳ ಪ್ರಶ್ನೆ. ಆದರೆ ಇವರೆಲ್ಲರೂ ಮಹಿಳೆಯವರ ವಿರುದ್ಧವೇ ಏಕೆ ತಮ್ಮ ನಾಲಿಗೆಯನ್ನು ಹರಿಯಬಿಡುತ್ತಾರೆ ಎಂಬುದು ಬಹಳ ದೊಡ್ಡ ಪ್ರಶ್ನೆಯಾಗಿದೆ. ಇಂದಿಗೂ ನಮ್ಮನ್ನು ಆಳಲು ಹೋಗುವವರು ಮಹಿಳೆಯರ ಕುರಿತು ಎಂತಹ ಕೀಳು ಮನಸ್ಥಿತಿ ಹೊಂದಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಇದರಲ್ಲಿ ಪಕ್ಷಭೇದವೇ ಇಲ್ಲವಾದರೂ ಸಂಸ್ಕøತಿ ರಕ್ಷಕರ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿಯವರು ಬೆಂಕಿ ಹಚ್ಚುವ ಮಾತಾಡುವುದರಲ್ಲಿ, ಸಮುದಾಯಗಳನ್ನು ಅವಮಾನಿಸುವ ವಿಚಾರದಲ್ಲಿ ಅಗ್ರಗಣ್ಯರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ತಮ್ಮ ಪಕ್ಷ ಮತ್ತು ತಾನು ಏನೆಲ್ಲಾ ಮಾಡಿದ್ದೇನೆ ಎಂಬುದರ ಆಧಾರದಲ್ಲಿ ಆಡಳಿತ ಪಕ್ಷ ಮತ್ತು ಅದರ ಅಭ್ಯರ್ಥಿಗಳು ಮತ ಕೇಳಬೇಕು. ಹಾಗೆಯೇ ವಿರೋಧ ಪಕ್ಷಗಳು ಆಳುವ ಪಕ್ಷ ಹೇಗೆ ವಿಫಲವಾಗಿದೆ ಮತ್ತು ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬದರ ಮೇಲೆ ಮತಯಾಚಿಸಬೇಕು. ಆದರೆ ಇಂದು ಏನಾಗುತ್ತಿದೆ? ಆಡಳಿತ ನಡೆಸುತ್ತಿದ್ದ ಪಕ್ಷವೂ ಗಡಿಯನ್ನು, ಸೈನಿಕರನ್ನು ದೇಶದ ರಕ್ಷಣೆಯನ್ನು ಮುಂದಿಟ್ಟು ಓಟು ಕೇಳುತ್ತದೆ. ಸ್ವತಃ ಪ್ರಧಾನಿಯವರೇ ಧರ್ಮವನ್ನು ಮುಂದಿಟ್ಟು ಅತಿರೇಕದ ಮಾತುಗಳನ್ನು ಆಡುತ್ತಿದ್ದರೆ, ಮಾಧ್ಯಮಗಳು ಸಹ ರಾಷ್ಟ್ರ ಅಪಾಯದಲ್ಲಿದೆ ಎಂದು ಬಿಂಬಿಸುತ್ತವೆ. ದುರ್ಬಲ ಪ್ರತಿಪಕ್ಷಗಳು ದಿಕ್ಕು ತೋಚದೇ ಕೂರುತ್ತವೆ. ಎಲ್ಲೊ ಒಂದಿಷ್ಟು ಜನಪರವಾಗಿ ಪ್ರತಿಪಕ್ಷಗಳು ಮಾತಾಡಿದರೂ ಸಹ ಈಗಾಗಲೇ ಮಾರಿಕೊಂಡಿರುವ ಮಾಧ್ಯಮಗಳು ಅದಕ್ಕೆ ಮಹತ್ವ ಕೊಡುವುದಿಲ್ಲ.
ಇಂದು ದೊಡ್ಡ ಕಾರ್ಪೊರೇಟ್‍ಗಳು, ಯಾರು ಗೆದ್ದರೆ ನಮಗೆ ಅನುಕೂಲ ಎಂಬ ಆಧಾರದಲ್ಲಿ ಚುನಾವಣೆಗಳನ್ನು ನಿರ್ಧರಿಸಲು ಸಾವಿರಾರು ಕೋಟಿ ಫಂಡ್ ಮಾಡಲು ಚುನಾವಣಾ ಬಾಂಡ್‍ಗಳಂತಹ ಅಧಿಕೃತ ದಾರಿಗಳೂ ತೆರೆದುಕೊಂಡಿವೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಅಭಿಪ್ರಾಯ ರೂಪಿಸಲು ಅವರು ಮಾಧ್ಯಮಗಳನ್ನು ತಯಾರು ಮಾಡಿಕೊಂಡಿರುತ್ತಾರೆ. ಮಾಧ್ಯಮಗಳು ಅವರು ಹೇಳಿದಂತೆ ತುತ್ತೂರಿ ಊದುತ್ತವೆ. ಇದನ್ನು ಬದಲಿಸಬೇಕಾದ ಜವಾಬ್ದಾರಿಯನ್ನು ಇಂದು ಪರ್ಯಾಯ ಮಾಧ್ಯಮಗಳು ಹೊತ್ತಿಕೊಳ್ಳಲೇಬೇಕಿದೆ. ಇದು ಕಾಲದ ತುರ್ತಾಗಿದ್ದು ದೇಶದ ಆರೋಗ್ಯದ ದೃಷ್ಟಿಯಿಂದ, ಪ್ರಜಾತಂತ್ರದ ದೃಷ್ಟಿಯಿಂದ, ಭವಿಷ್ಯದ ದೃಷ್ಟಿಯಿಂದ ಬಹಳ ಬಹಳ ಮಹತ್ವದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...