Homeಮುಖಪುಟ’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ...

’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ…

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
- Advertisement -

ಸ್ಯಾಮುಯಲ್ ಬೆಕೆಟ್ ಐರಿಷ್ ಕವಿ. ಅವನೊಬ್ಬ ಶ್ರೇಷ್ಟ ಕಾದಂಬರಿಕಾರ. ಕಥೆಗಾರ ಹಾಗೆಯೇ ನಾಟಕಕಾರ. ಅಷ್ಟೇ ಅಲ್ಲ ಭಾಷಾಂತರಕಾರ ಕೂಡ. ಫ್ರೆಂಚ್ ಮತ್ತು ಐರೀಷ್ ಎರಡು ಭಾಷೆಗಳಲ್ಲೂ ಹಲವು ಶ್ರೇಷ್ಟಮಟ್ಟದ ಕೃತಿಗಳನ್ನು ರಚಿಸಿರುವ ಬೆಕೆಟ್ 1906 ರಲ್ಲಿ ಜನಿಸಿ 1989ರಲ್ಲಿ ತೀರಿಕೊಂಡ. ಜೀವಿತದ ಅವಧಿಯಲ್ಲಿ ಮರ್ಫಿ, ವಾಲ್, ಮಲೋನೆ ಡೈಸ್, ವೈಟಿಂಗ್ ಫಾರ್ ಗಾಡೋ, ಎಂಡ್ ಗೇಮ್ ಹೀಗೆ ಹತ್ತಾರು ಪ್ರಮುಖ ಕೃತಿಗಳನ್ನು ರಚಿಸಿದ್ದು ಈತನಿಗೆ 1969ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಕೆಟ್ ನ ‘ವೇಟಿಂಗ್ ಫಾರ್ ಗಾಡೋ ನಾಟಕ ‘ಸುಖದುಃಖಾಂತ್ಯ’ ನಾಟಕ. ಕೇವಲ ಐದೇ ಐದು ಪಾತ್ರಗಳು ಮನುಷ್ಯನ ದುಖಃ, ಸುಖ, ನೋವಿಗೆ ತಾವಾಗಿಯೇ ತೆರೆದುಕೊಳ್ಳುತ್ತವೆ. ತಮ್ಮೊಳಗಿನ ಗೊಂದಲಗಳನ್ನು ಪ್ರೇಕ್ಷಕರ ಮುಂದೆ ಇಡುತ್ತವೆ. ನಾಳೆಗಳ ಕನಸುಗಳನ್ನು ಕಟ್ಟಿಕೊಳ್ಳುತ್ತಲೇ ಆ ಕನಸುಗಳನ್ನು ಕೊಂದುಕೊಳ್ಳುತ್ತವೆ. ಇಂಥದ್ದೊಂದು ನಾಟಕವನ್ನು ತುಮಕೂರಿನಲ್ಲಿ ಪ್ರದರ್ಶಿಸಲಾಯಿತು. ಲೋಕಚರಿತ ರಂಗ ಕೇಂದ್ರ ಎಂಬ ಚಿಕ್ಕದಾಳವಟ್ಟದ ಗ್ರಾಮೀಣ ಸಂಘಟನೆ ಬೆಕೆಟ್ ನ ವೇಟಿಂಗ್ ಫಾರ್ ಗಾಡೋ ನಾಟಕ ಪ್ರದರ್ಶನಕ್ಕೆ ವೇದಿಕೆ ಒದಗಿಸಿತ್ತು. ರಂಗ ತಂಡದ ಕಲಾವಿದರು ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದರೂ ಅವು ದೃಢವಾಗಿದ್ದವು. ಅವರು ಪ್ರತಿಯೊಂದು ಸನ್ನಿವೇಶದಲ್ಲೂ ಸಭಿಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಬರಡುಭೂಮಿ, ಬೆಟ್ಟಗುಡ್ಡಗಳು, ಎಲೆಗಳೇ ಇಲ್ಲದ ಮರಗಳು. ಅಂಥ ಪ್ರದೇಶದಲ್ಲಿ ಇಬ್ಬರು ದಿಕ್ಕುದೆಸ (ಬೇವರ್ಸಿಗಳು) ಇಲ್ಲದ ಅಬ್ಬೇಪಾರಿಗಳು. ಮೊದಲಿಗೆ ಗುಡ್ಡವೊಂದರ ಮೇಲೆ ಕುಳಿತು ತನ್ನ ಎಡಗಾಲಿನ ಬೂಟು ಬಿಚ್ಚುವ ದೃಶ್ಯದಿಂದ ಆರಂಭವಾಗುವ ನಾಟಕ ಮುಂದೆ ತನ್ನ ಕಥಾಹಂದರವನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೊದಲು ಗುಡ್ಡದ ಮೇಲೆ ಕುಳಿತ ವ್ಯಕ್ತಿಯ ಜೊತೆಗೆ ಮತ್ತೊಬ್ಬ ವ್ಯಕ್ತಿ ಸೇರಿಕೊಂಡು ಅಮೂರ್ತ ರೂಪದ ಗಾಡೋನಿಗಾಗಿ ಕಾಯುವುದು. ಕಾಲದೂಡಲು, ಬೇಸರ ನಿವಾರಣೆಗೆ ಮತ್ತು ಮೌನ ವಾತಾವರಣ ಮುರಿದು ಹಾಕಲು ಇಬ್ಬರು ಬೇವರ್ಸಿಗಳು ಮಾತಿಗೆ ಆರಂಭಿಸುತ್ತಾರೆ. ಅವರ ಮಾತುಗಳು ಎಲ್ಲೆಲ್ಲೋ ಹೋಗುತ್ತವೆ. ಇಬ್ಬರು ಅಬ್ಬೇಪಾರಿಗಳ ನಡುವಿನ ಸಂಭಾಷಣೆ ಅಸಂಬದ್ದವಾಗಿರುತ್ತದೆ. ತಾಳತಪ್ಪುತ್ತದೆ. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಆಗುತ್ತದೆ. ಇದು ಎರಡು ಮಹಾಯುದ್ದದ ಸಮಯದಲ್ಲಾದ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ನಾಟಕ ಸಂಪೂರ್ಣವಾಗಿ ಸಂಗತವೂ ಅಲ್ಲದ, ಅಸಂಗತವೂ ಅಲ್ಲದ ಸ್ಥಿತಿಯಲ್ಲಿ ಮುಂದುವರಿಯುತ್ತದೆ. ಶಬರಿ ರಾಮನಿಗಾಗಿ ವರ್ಷಾನುಗಟ್ಟಲೆ ಕಾಯುವಂತೆ (ಕೊನೆಗೂ ಶಬರಿಗೆ ರಾಮನ ದರ್ಶನವಾಗುತ್ತದೆ.) ಈ ಇಬ್ಬರು ಬೇವರ್ಸಿಗಳು ತಾವೂ ನೋಡಿಯೇ ಇಲ್ಲದ, ಪರಿಚಯವೇ ಇಲ್ಲದ ಗಾಡೋನಿಗಾಗಿ ಕಾಯುತ್ತಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಈ ಪಾತ್ರಗಳು ಪ್ರತಿಯೊಬ್ಬ ವ್ಯಕ್ತಿಯ ಮನದಾಳದ ಗೊಂದಲಗಳಿಗೆ ಮುಖಾಮುಖಿಯಾಗುತ್ತಾರೆ. ಇಂದಿನ ಸಮಾಜದಲ್ಲೂ ವ್ಯಕ್ತಿ ಯಾರನ್ನೋ ಕಾಯುತ್ತಾ, ನಿರೀಕ್ಷೆ ಮಾಡುತ್ತ, ಅವರು ಸಿಗದೇ, ಬೇಸರ, ನೋವು ತಡೆಯಲಾರದೆ ಆತ್ಮಹತ್ಯೆಗೆ ಯತ್ನಿಸುವ ಸನ್ನಿವೇಶಕ್ಕೂ ಈ ಪಾತ್ರಗಳು ಮುಖಾಮುಖಿಯಾಗುತ್ತವೆ. ಯುದ್ದದಂತಹ ಸನ್ನಿವೇಶದಲ್ಲಿ ಮನುಷ್ಯನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ಪಾತ್ರಗಳು ಕಟ್ಟಿಕೊಡುತ್ತವೆ.

ಮನುಷ್ಯನ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಒಮ್ಮೆ ಆಡಿದ ಮಾತು ಮತ್ತೊಮ್ಮೆ ಆಡುವುದಿಲ್ಲ. ಹಾಗೆಯೇ ಈ ಬೇವರ್ಸಿ ಪಾತ್ರಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ನಮ್ಮ ನಿರೀಕ್ಷೆಗಳು ಸುಳ್ಳಾಗಬಹುದು. ನೋವು, ಸಂಕಟ, ದುಃಖ ಕ್ಷಣ ಕಾಲ ಮರೆಯಾಗಬಹುದು. ಆದರೆ ದುತ್ತೆಂದು ಒಕ್ಕರಿಸುತ್ತವೆ ಎಂಬುದನ್ನು ಈ ಪಾತ್ರಗಳು ಸಾಕ್ಷೀಕರಿಸುತ್ತವೆ. ಒಮ್ಮೆ ಒಣಗಿದ ಮರವೂ ಚಿಗುರಬಹುದು. ಹಾಗೆಯೇ ಮನುಷ್ಯನಲ್ಲೂ ಬದುಕುವ ಉತ್ಸಾಹ ಮೂಡಬಹುದು. ಅದು ಹೆಚ್ಚು ದಿನ ಇರುವುದಿಲ್ಲ. ಕೊನೆಗೆ ಆ ಎರಡು ಪಾತ್ರಗಳು ಹೀಗೆ ಸಾರುತ್ತವೆ. ನಾವು ನಾಳೆ ಇಲ್ಲಿಗೆ ಮರಳಿ ಬಂದರೆ ಬದುಕಿರುತ್ತೇವೆ. ಬಾರದೆ ಇದ್ದರೆ ನಾವು ಸತ್ತಂತೆ ಎಂಬಲ್ಲಿಗೆ ನಾಟಕ ಅಂತ್ಯವಾಗುತ್ತದೆ. ಇಡೀ ನಾಟಕದ ಉದ್ದಕ್ಕೂ ಎರಡು ಬೇವರ್ಸಿ ಪಾತ್ರಗಳೇ ಪ್ರಧಾನವಾಗಿವೆ.

ಈ ನಡುವೆ ಆ ಬರಡು ಭೂಮಿಯಲ್ಲಿದ್ದ ಇಬ್ಬರು ಬೇವರ್ಸಿ ಪಾತ್ರಗಳಗಳ ಜೊತೆಗೆ ಎಷ್ಟೋ ದಿನ ಕಳೆದ ಮೇಲೆ ಅಲ್ಲಿಗೆ ಪೋಜೋ ಅಲ್ಲಿಗೆ ಲಕ್ಕಿಯೊಂದಿಗೆ ಬರುತ್ತಾನೆ. ಆತ ವಿರಾಮ ಪಡೆಯಲು ಆ ಬೇವರ್ಸಿಗಳೊಂದಿಗೆ ಕೆಲಕಾಲ ಮಾತಿಗೆ ಇಳಿಯುತ್ತಾನೆ. ಅವರ ನಡುವೆ ನಡೆಯುವ ಸಂಭಾಷಣೆ ನಗೆಯುಕ್ಕಿಸುತ್ತದೆ. ಪೋಜೋ ಬಿಸುಟ ಮೋಟು ಬೀಡಿ, ಮೂಳೆ ಚಿಕನ್ ಗಳನ್ನು ಆ ಇಬ್ಬರು ಬೇವರ್ಸಿ ಪಾತ್ರಗಳು ತೆಗೆದುಕೊಂಡು ಮೋಜು ಮಾಡುತ್ತವೆ. ಲಕ್ಕಿಯದು ಪೋಜೇನ ಸಾಮಾನುಗಳನ್ನು ಹೊರುವ ಕೆಲಸ. ಹೇಳಿದ್ದು ಮಾಡುವ ಚಾಕರಿ. ಯುದ್ದದಂತಹ ಪರಿಸ್ಥಿತಿಯಲ್ಲಿ ಶ್ರೀಮಂತರು ಬಡವರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳುತ್ತಿದ್ದರು ಎಂಬುದನ್ನು ಈ ಪಾತ್ರ ಹೇಳುತ್ತದೆ.  ಇವರ ನುಡವೆ ನಡೆಯುವ ಸಂಭಾಷಣೆಯಲ್ಲಿ ಕಪ್ಪು, ಬಿಳುಪು, ಹಸಿರು ಮೊದಲಾದ ಬಣ್ಣಗಳ ಕುರಿತು ವ್ಯಕ್ತವಾಗುವ ಮಾತುಗಳು ಅಸಂಬದ್ದತೆ ಪ್ರೇಕ್ಷಕರಲ್ಲಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

ಹುಡುಗನ ಪಾತ್ರ ಎರಡೇ ಬಾರಿ ರಂಗದ ಮೇಲೆ ಕಂಡು ಬಂದರೂ ಗಮನ ಸೆಳೆಯುತ್ತದೆ. ಬೇವರ್ಸಿಗಳ ಬಳಿ ಬರುವ ಆ ಹುಡುಗ ನಾನು ಗಾಡೋನನ್ನು ನೋಡಿದ್ದೇನೆ. ಅವನ ಬಳಿಯಿಂದಲೇ ಬಂದಿದ್ದೇನೆ ಎನ್ನುತ್ತಾನೆ. ಅದಕ್ಕೆ ಬೇವರ್ಸಿಗಳು ನಾವು ಗಾಡೋಗಾಗಿ ಕಾಯುತ್ತಿದ್ದೇವೆ ಎಂಬುದನ್ನು ತಿಳಿಸುವಂತೆ ಆ ಹುಡುಗನಿಗೆ ಹೇಳುತ್ತಾರೆ. ಆದರೆ ಆ ಹುಡುಗ ಎರಡನೇ ಬಾರಿ ಬಂದಾಗ ನಾನು ನೆನ್ನೆ ಬಂದ ಹುಡುಗನಲ್ಲ. ನಾನು ಗಾಡೋ ನೋಡಿಲ್ಲ. ನೀವು ಯಾರು? ನಿಮ್ಮನ್ನೂ ನಾನು ಭೇಟಿ ಮಾಡಿಲ್ಲ ಎಂದು ಪ್ರೇಕ್ಷಕರನ್ನು ಗೊಂದಲದಲ್ಲಿ ಕೆಡವುತ್ತಾನೆ. ಮತ್ತೆ ಆ ಬೇವರ್ಸಿಗಳು ನಿನ್ನೆ ನೀನು ಬಂದಿದ್ದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ ಆ ಹುಡುಗ. ಇಂದು ಕೂಡ ಅಂಥವೇ ಸಂಗತಿಗಳು ನಮ್ಮ ನಡುವೆ ನಡೆಯುತ್ತಿರುವುದನ್ನು ನೋಡುತ್ತೇವೆ.

ಜಗತ್ತಿನಲ್ಲಿ ಜನಾಂಗೀಯ ದಬ್ಬಾಳಿಕೆ ನಡೆಯುತ್ತಿರುವುದಕ್ಕೆ, ಸಮಾಜದಲ್ಲಿ ತಾರತಮ್ಯದ ಮನೋಭಾವ ಇಂದಿಗೂ ಇರುವ ಬಗ್ಗೆ ಮಾರ್ಮಿಕವಾಗಿ ಧ್ವನಿಸುತ್ತದೆ. ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಮನುಷ್ಯ ಕ್ಷಣ ನಿಂತು ಆಲೋಚಿಸುವುದಕ್ಕೂ ಸಮಯವಿಲ್ಲದ ಪರಿಯನ್ನು ಹೇಳುತ್ತದೆ. ಗೊಂದಲದಲ್ಲಿರುವ ಮನುಷ್ಯನ ಮಾನಸಲೋಕದ ಅಲ್ಲೋಲಕಲ್ಲೋಲಗಳಿಗೆ ಪಾತ್ರಗಳು ಜೀವ ತುಂಬುತ್ತವೆ. ವೇಟಿಂಗ್ ಪಾರ್ ಗಾಡೋ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯನಲ್ಲಾಗುವ ಬದಲಾವಣೆಗಳನ್ನು ಹೇಳುತ್ತದೆ.

ರವಿಶಂಕರ್ ಆರ್ ನೀನಾಸಂ ನಿರ್ದೇಶನದಲ್ಲಿ ನಾಟಕ ಚನ್ನಾಗಿ ಮೂಡಿಬಂತು. ಚನ್ನಕೇಶವ, ಜಿತೇಂದ್ರ, ಜಿ.ಎಸ್. ಮೋಹನ್, ಶ್ರೀಕಾಂತ್, ಸುಮಂತ್ ಜಿ.ಜಿ. ವೇಟಿಮಗ್ ಫಾರ್ ಗಾಡೋ ನಾಟಕದ ಪಾತ್ರಗಳಿಗೆ ಜೀವ ತುಂಬಿದರು. ಲೋಕಚರಿತ ರಂಗ ಕೇಂದ್ರದ ಮುಖ್ಯಸ್ಥ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...