Homeಮುಖಪುಟಮಮತಾ ಬ್ಯಾನರ್ಜಿ-ಅಭಿಷೇಕ್ ಬ್ಯಾನರ್ಜಿ ನಡುವೆ ಬಿರುಕು : ಮಧ್ಯದಲ್ಲಿ ಸಿಕ್ಕಿಕೊಂಡ ಪ್ರಶಾಂತ್ ಕಿಶೋರ್!

ಮಮತಾ ಬ್ಯಾನರ್ಜಿ-ಅಭಿಷೇಕ್ ಬ್ಯಾನರ್ಜಿ ನಡುವೆ ಬಿರುಕು : ಮಧ್ಯದಲ್ಲಿ ಸಿಕ್ಕಿಕೊಂಡ ಪ್ರಶಾಂತ್ ಕಿಶೋರ್!

- Advertisement -
- Advertisement -

ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಟಿಎಂಸಿಯಲ್ಲಿಗ ಭಿನ್ನಾಭಿಪ್ರಾಯದ ಬಿರುಕು ಕಾಣಿಸಿಕೊಂಡಿದೆ. ಸರ್ಕಾರದಲ್ಲಿನ ಹಲವು ಹುದ್ದೆಗಳಲ್ಲಿ ಪಕ್ಷದ ಹಿರಿಯ ಮುಖಂಡರೆ ತುಂಬಿಕೊಂಡಿದ್ದು, ಕೆಲವರು ಎರಡು ಮೂರು ಹುದ್ದೆಗಳನ್ನು ನಿರ್ವಹಿಸುವ ಮೂಲಕ ಉಳಿದವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ (ಒನ್ ಮ್ಯಾನ್ ಒನ್ ಪೋಸ್ಟ್) ಎಂಬ ಪ್ರಚಾರಾಂದೋಲನ ಸಹ ಆರಂಭಿಸಿದ್ದು, ಇದು ಮಮತಾ ಬ್ಯಾನರ್ಜಿಗೆ ಇರಿಸುಮುರಿಸು ತಂದಿದೆ. ಈ ವಿಚಾರವನ್ನು ಬಗೆಹರಿಸಲು ಇಂದು ಟಿಎಂಸಿ ಹಿರಿಯ ನಾಯಕರ ಸಭೆ ಕರೆಯಲಾಗಿದೆ.

ಅಭಿಷೇಕ್ ಬ್ಯಾನರ್ಜಿ ಪಕ್ಷದ ಎರಡನೇ ಉನ್ನತ ಸ್ಥಾನದಲ್ಲಿದ್ದಾರೆ. ಪ್ರಶಾಂತ್ ಕಿಶೋರ್‌ರವರ ಐ ಪ್ಯಾಕ್ ಅನ್ನು ಪಕ್ಷಕ್ಕೆ ಪರಿಚಯಿಸಿದ್ದೆ ಅವರು. ಆ ಮೂಲಕ ಪಕ್ಷ ಪ್ರಚಂಡ ಬಹುಮತ ಸಹ ಗಳಿಸಿತು. ಆದರೆ ಈಗ ಅದೇ ಐ ಪ್ಯಾಕ್ ಬಳಸಿಕೊಂಡು ಹಿರಿಯ ನಾಯಕರ ವಿರುದ್ಧ ಪ್ರಚಾರಾಂದೋಲನ ನಡೆಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಟಿಎಂಸಿ ನಾಯಕಿ ಚಂದ್ರಿಮ ಭಟ್ಟಾಚಾರ್ಯರವರು ನನ್ನ ಸಾಮಾಜಿಕ ಜಾಲತಾಣ ಖಾತೆಗಳ್ನು ಐ ಪ್ಯಾಕ್ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರೆ. ಚುನಾವಣೆ ಸಮಯದಲ್ಲಿ ಐ ಪ್ಯಾಕ್ ನನ್ನ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದಿತ್ತು. ಇಂದು ಅದರಲ್ಲಿ ನನ್ನ ಗಮನಕ್ಕೆ ತಾರದೆ ‘ಒನ್ ಮ್ಯಾನ್ ಒನ್ ಪೋಸ್ಟ್’ ಎಂಬುದಾಗಿ ಪೋಸ್ಟ್ ಮಾಡಲಾಗಿದೆ. ಇದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಐ ಪ್ಯಾಕ್, “ಟಿಎಂಸಿ ಅಥವಾ ಅದರ ಯಾವುದೇ ನಾಯಕರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಂಡಲ್ ಮಾಡುವುದಿಲ್ಲ. ಈ ರೀತಿಯ ಆರೋಪ ಮಾಡುತ್ತಿರುವುದು ಸಂಪೂರ್ಣ ಸುಳ್ಳಾಗಿದೆ” ಎಂದಿದೆ.

ಅಲ್ಲದೆ ಟಿಎಂಸಿ ನಾಯಕಿ ಚಂದ್ರಿಮ ಭಟ್ಟಾಚಾರ್ಯರವರು ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸಹ ಕಿಡಿಕಾರಿದ್ದಾರೆ. ನೀವು ಗೋವಾಗೆ ಪ್ರಚಾರ ಮಾಡಲು ಹೋಗುವುದಿಲ್ಲವೇ ಎಂಬ ಪ್ರಶ್ನೆಗೆ, “ಇಲ್ಲ ಅಲ್ಲಿ ಕೆಲವರು ಪ್ರಚಾರ ಮಾಡುತ್ತಿದ್ದಾರೆ. ನಾನು ಸಮಾಜವಾದಿ ಪಕ್ಷಕ್ಕೆ ಬೆಂಬಲ ಸೂಚಿಸಲು ಉತ್ತರ ಪ್ರದೇಶಕ್ಕೆ ಹೋಗುತ್ತೇನೆ” ಎಂದು ಅಭಿಷೇಕ್ ಹೆಸರು ಹೇಳದೆ ಕಮೆಂಟ್ ಮಾಡಿದ್ದಾರೆ.

ಮಮತಾ ಬ್ಯಾನರ್ಜಿಯವರು ಪಕ್ಷದ ಹಿರಿಯ ನಾಯಕರ ಪರವಾಗಿದ್ದಾರೆ. ಆದರೆ ಅಭಿಷೇಕ್ ಅದರ ವಿರುದ್ಧ ದನಿಯೆತ್ತಿದ್ದು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಆದರೆ ಐ ಪ್ಯಾಕ್ ಆ ರೀತಿಯ ಭಿನ್ನಾಭಿಪ್ರಾಯ ಇಲ್ಲವೆಂದು ಹೇಳಿದೆ.


ಇದನ್ನೂ ಓದಿ: ಹಿಜಾಬ್‌ಗೆ ಬೆಂಬಲ; ರಾಜ್ಯ ಸರ್ಕಾರವನ್ನು ‘ಸರ್ವಾಧಿಕಾರಿ’ ಎಂದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...