Homeಮುಖಪುಟಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

ಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

- Advertisement -
- Advertisement -

ಒಂದೇ ಸಮನೆ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಇನ್ನೊಂದು ದಶಕದಲ್ಲಿ ಅಂದಾಜು ಮಟ್ಟಕ್ಕಿಂತ ಹೆಚ್ಚಾಗಲಿದೆ. ಇದರಿಂದ ಪ್ರಕೃತಿ ವಿಕೋಪವಾಗಿ ಜೀವ ಜಾಲಕ್ಕೆ ಗಂಡಾಂತರ ಎದುರಾಗಲಿದೆಯೆಂದು ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ವರದಿ ಆಘಾತಕಾರಿ ಎಚ್ಚರಿಕೆ ಈಚೆಗಷ್ಟೆ ನೀಡಿತ್ತು. ವಿಶ್ವ ಸಂಸ್ಥೆಯ ಈ ಸಮಿತಿ 1988ರಿಂದ 5-7 ವರ್ಷಕ್ಕೊಮ್ಮೆ ತಾಪಮಾನ ಏರಿಕೆ, ಹಸಿರು ಮನೆ ಅನಿಲ ಪರಿಣಾಮ, ಸಮುದ್ರ ಮಟ್ಟ, ಮಂಜು ಕರಗುವಿಕೆ ಬಗ್ಗೆ ವರದಿ ಕೊಡುತ್ತಿದೆ.

ವಿಶ್ವ ಸಂಸ್ಥೆಯ ಭೂ ತಾಪಮಾನದ ವರದಿ ಆಧರಿಸಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಟಿಸಿರುವ ತನ್ನ 6ನೇ ಮೌಲ್ಯ ಮಾಪನ ವರದಿಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳಿವೆ! ಜಾಗತಿಕ ತಾಪಮಾನ ಏರು ಗತಿಯಲ್ಲಿರುವುದರಿಂದ ಸಮುದ್ರ ಮಟ್ಟದಲ್ಲೂ ದೊಡ್ಡ ಏರಿಕೆಯಾಗುತ್ತಿದೆ. ಹೀಗಾಗಿ ಕಡಲಂಚಿನ ಊರೂರುಗಳನ್ನು ಸಮುದ್ರ ಆಪೋಷನ ಪಡೆಯಲಿದೆ. ಭಾರತದ ಮಂಗಳೂರು, ಮುಂಬೈ, ಕೊಚ್ಚಿ, ವಿಶಾಖಪಟ್ಟಣಂ… ಮುಂತಾದ 12ಕ್ಕಿಂತ ಹೆಚ್ಚು ಮಹಾನಗರಗಳು 2100ರ ಒಳಗಾಗಿ ಸಮುದ್ರ ಪಾಲಾಗಲಿದೆಯೆಂದು ನಾಸಾ ಸ್ಪಷ್ಟವಾಗಿ ಹೇಳಿದೆ.

ಜಗತ್ತಿನಾದ್ಯಂತ ಸಮುದ್ರದಲ್ಲಾಗತ್ತಿರುವ ಏರುಪೇರಿನ ಆಧಾರದಲ್ಲಿ ವರದಿ ಸಿದ್ಧಪಡಿಸಿರುವ ನಾಸಾ, ಸಮುದ್ರದ ಈಗಿನ ಸ್ಥಿತಿ-ಗತಿ ಪ್ರಕಾರ ಸಮುದ್ರ ಏರಿದರೆ ಇನ್ನೆರಡು ಅಡಿ ಏರುತ್ತದೆ ಎಂದಿದೆ. ಶತಮಾನದ ಅಂತ್ಯದೊಳಗೆ ಇದು ಇನ್ನಷ್ಟು ತೀವ್ರಗೊಂಡರೆ 2100ರ ಕೊನೆಗೆ 3 ಅಡಿಯಷ್ಟು ಉಕ್ಕೇರುತ್ತದೆ. ಆಗ ಮಂಗಳೂರು, ಮಂಬೈ, ಮರ್ಮಗೋವಾ, ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್, ಖದೀರ್ಪುರ್, ಚೆನ್ನೈ, ತೂತ್ತುಕುಡಿ, ಕಂಡ್ಲಾ, ಒಖಾ, ಭಾವನಗರ್ ಕಡಲಲ್ಲಿ ಕರಗಲಿವೆ ಎಂಬುದು ನಾಸಾ ಲೆಕ್ಕಾಚಾರವಾಗಿದೆ.

ಏಷ್ಯಾದ ಸುತ್ತಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಏರುತ್ತಿದೆ. ಈ ರೀತಿಯ ಸಮುದ್ರ ಮಟ್ಟ ಬದಲಾವಣೆ ಸಾಮನ್ಯವಾಗಿ 100 ವರ್ಷಕ್ಕೊಮ್ಮೆ ಆಗುತ್ತಿತ್ತು. ಇನ್ನು ಮುಂದೆ 2050ರ ತನಕ 6ರಿಂದ 9ವರ್ಷಕ್ಕೊಮ್ಮೆ ಸಂಭವಿಸಬಹುದು. 2006ರಿಂದ 2018ರ ತನಕ ನಡೆಸಿದ ಅಧ್ಯಯನ ಅಂದಾಜಿನಂತೆ ಸಮುದ್ರದ ಜಾಗತಿಕ ಸರಾಸರಿ ಮಟ್ಟ ಪ್ರತಿ ವರ್ಷ ಸುಮಾರು 3.7 ಮಿಲಿ ಮೀಟರ್ ನಷ್ಟು ಏರಿಕೆಯಾಗುತ್ತಿದೆ ಎಂದು ನಾಸಾ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ.

ನಾಸಾ ಪ್ರಕಟಪಡಿಸಿರುವ ವರದಿಯಂತೆ ಕರ್ನಾಟಕದ ಬರಿ ಮಂಗಳೂರು ಮಾತ್ರವಲ್ಲ, ಕಡಲಂಚಿನ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಮತ್ತು ಉಡುಪಿ ಜಿಲ್ಲೆಯ ಹಲವು ಪ್ರದೇಶಗಳು ಸಮುದ್ರದಲ್ಲಿ ಲೀನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ! ಸಾರ್ವಜನಿಕರಿಗಾಗಿ ನಾಸಾ ಸ್ಥಳೀಯ ಸಮುದ್ರ ಮಟ್ಟವನ್ನು ತಿಳಿಯುವ ಆನ್‌ಲೈನ್ ಸಾಧನ ಕಂಡುಹಿಡಿದಿದೆ. 2020 ರಿಂದ 2150ರ ಒಳಗಿನ ದಶಕಗಳನ್ನು ಆಯ್ದುಕೊಂಡು ನಮಗೆ ಬೇಕಾದ ಪ್ರದೇಶದ ಸಮುದ್ರ ಮಟ್ಟ ತಿಳಿಯಬಹುದಾಗಿದೆ. ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.

ಮಂಗಳೂರಿನ ಸಮುದ್ರ ಮಟ್ಟ 2100ರ ಒಳಗೆ 1.87 ಅಡಿ ಏರಿಕೆಯಾಗಲಿದೆಯೆಂಬ ಎಚ್ಚರಿಕೆ ಕೊಟ್ಟಿದೆ. ಅಂದರೆ ಕಡಲು ಕ್ರಮೇಣ ಮಂಗಳೂರನ್ನು ಕಬಳಿಸಲಿದೆ ಎಂದರ್ಥ. ನಾಸಾ ವಿಜ್ಞಾನಿಗಳ ಮುಳುಗಡೆ ವರದಿ ಬಗ್ಗೆ ನಾನಾ ನಮೂನೆಯ ಜಿಜ್ಞಾಸೆ ಶುರುವಾಗಿದೆ. ಇದೆಲ್ಲ ಬರಿ ಸುಳ್ಳು; ಹಿಂದೆ ಜಗತ್ತೆ ಮುಳುಗುತ್ತದೆಂದು ಬೊಬ್ಬೆ ಎಬ್ಬಿಸಲಾಗಿತ್ತಲ್ಲ ಹಾಗೇ ಇದೆಂಬ ಅಭಿಪಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಟ್ರೋಲ್‌ಗಳೂ ನಡೆದಿದೆ. ಇನ್ನೊಂದೆಡೆ ನಾಸಾ ವಿಜ್ಞಾನಿಗಳೇಕೆ ಸುಳ್ಳು ಹೇಳುತ್ತಾರೆ; ಇಂಥ ಗಂಭೀರ ವಿಷಯ ಆಳವಾದ ಅಧ್ಯಯನವಿಲ್ಲದೆ ಹೇಳಲು ಸಾಧ್ಯವೇ ಇಲ್ಲ; ನಾಸಾ ವಿಜ್ಞಾನಿಗಳ ಅಭಿಪ್ರಾಯ ಕರಾರುವಾಕ್ ಆಗಿದೆ ಎನ್ನುವ ಚರ್ಚೆ ನಡೆದಿದೆ.

ನಾಸಾ ವಿಜ್ಞಾನಿಗಳು ಕೊಟ್ಟಿರುವ ಮಾಹಿತಿ ಸರಿಯಾದದ್ದು; ಮುಂದಿನ ದಿನಗಳ ಸಂಭವನೀಯ ಘಟನೆ ಎಂದು ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ-ಸಂಶೋಧಕ ಪ್ರೊ.ಕೆವಿ.ರಾವ್ ಹೇಳುತ್ತಾರೆ. ನಿತ್ಯ ನಗರೀಕರಣ, ಕಾರ್ಖಾನೆಗಳ ಹೆಚ್ಚಳವೇ ಮುಂತಾದ ಕಾರಣದಿಂದ ಜಾಗತಿಕ ಮಾಲಿನ್ಯ ವಿಪರೀತವಾಗುತ್ತಿದೆ. ಇದೇ ಗತಿಯಲ್ಲಿ ಮಾಲಿನ್ಯ ಹೆಚ್ಚಳವಾದರೆ ಮನುಷ್ಯನ ಕೈತಪ್ಪಿ ಜಗತ್ತಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲವೆಂದು ಪ್ರೊ.ರಾವ್ ಅಭಿಪ್ರಾಯ.

ಪ್ರೊ.ಕೆವಿ.ರಾವ್

ಪ್ರಕೃತಿ ನಮಗೆ ಆಕ್ಸಿಜನ್, ನೈಟ್ರೋಜನ್ ಮತ್ತಿತರ ಅನಿಲವನ್ನು ಸಾಕಷ್ಟು ನೀಡುತ್ತಿದೆ. ಪ್ರಕೃತಿ ನೀಡಿರುವ ಪೂರಕ ವಾತಾವರಣವನ್ನು ನಾವೇ ಹಾಳುಮಾಡುತ್ತಿದ್ದೇವೆ; ಕಾಡು ನಾಶವಾಗಿ ನಗರಗಳಾಗಿವೆ; ಇದರಿಂದ ಜಾಗತಿಕ ತಾಪಮಾನ ಹದಗೆಟ್ಟಿ ಪರಿಸರ ಸಂರಕ್ಷಿಸದೇ ಇರುವುದರಿಂದ ಸಾಗರದ ಹಿಮ ಗಡ್ಡೆಗಳು ನಿರೀಕ್ಷೆಗಿಂತ ವೇಗವಾಗಿ ಕರಗುತ್ತಿವೆ. ನಮ್ಮ ಸುತ್ತಲಿನ ಜಾಗವನ್ನು ಕಾಳಜಿಯಿಂದ ಕಾಪಾಡಿಕೊಳ್ಳದಿದ್ದರೆ ವಾತಾವರಣದ ಉಷ್ಣತೆ ಏರಿಕೆಯಾಗಿ ನೀರ್ಗಲ್ಲುಗಳು ಕರಗಿ ಸಮುದ್ರ ಉಕ್ಕೇರುವುದು ಸಹಜ ಪ್ರಕ್ರಿಯೆ; ಆಗ ಕಡಲ ತಡಿಯ ಪ್ರದೇಶ ಸಮುದ್ರದ ಪಾಲಾಗುತ್ತದೆ. ಇದನ್ನೆ ನಾಸಾ ಅಧ್ಯಯನದ ಮೂಲಕ ತಿಳಿಸಿದೆಯೆಂದು ಪ್ರೊ.ರಾವ್ ಹೇಳಿದ್ದಾರೆ.

ಹಾಲಿ ವೇಗದಲ್ಲೇ ನೀರ್ಗಲ್ಲುಗಳು ಕರಗುತ್ತ ಹೋದರೆ ಸಮಸ್ಯೆ ಏನಾಗಬಹುದೆಂದು ನಾಸಾ ವಿಜ್ಞಾನಿಗಳು ಲೆಕ್ಕ ಹಾಕಿದಾಗ ನಿರೀಕ್ಷಗಿಂತಲೂ ಆಘಾತಕಾರಿ ಅಂಶಗಳು ಗೋಚರಿಸಿದೆ. ದಕ್ಷಿಣದ ಮಹಾನಗರಗಳಾದ ಮುಂಬೈ, ಮಂಗಳೂರು ಸಮುದ್ರಕ್ಕೆ ಹತ್ತಿರದಲ್ಲಿದೆ. ಸಮುದ್ರದಲ್ಲಿ ಒಂದು ಮೀಟರ್ ನೀರು ಜಾಸ್ತಿಯಾದರೂ ಬಹಳಷ್ಟು ನಗರಗಳು ಮುಳುಗುತ್ತವೆ. ಈ ಕುರಿತು ವಿಶ್ವ ಸಂಸ್ಥೆ, ಜಾಗತಿಕ ಸಂಸ್ಥೆಗಳಲ್ಲಿ ತುಂಬ ಚರ್ಚೆಯಾಗಿದೆ.

ಸಮುದ್ರ ಒಮ್ಮೆ ಮುನ್ನುಗ್ಗಿದರೆ ಮತ್ತೆ ಹಿಂದಕ್ಕೆ ಬರಲಾರದು. ವಾತಾವರಣ, ಪ್ರಕೃತಿಯನ್ನು ಮನುಷ್ಯ ಕಾಪಾಡಿಕೊಳ್ಳದಿದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ. ಈಗಾಗಲೆ ವಾತಾವರಣ ಇದ್ದಕ್ಕಿದ್ದಂತೆ ಅನಾಹುತಕಾರಿಯಾಗಿ ಬದಲಾಗುತ್ತಿದೆ. ಅತಿವೃಷ್ಟಿಯಾಗುತ್ತಿದೆ; ಮೇಘ ಸ್ಪೋಟದಿಂದ ನರೆಯೇರುತ್ತಿದೆ; ಸಮುದ್ರದ ನೀರು ತಂತಾನೆ ಉಕ್ಕಿ ಹರಿಯುವುದು, ಸುನಾಮಿ, ಸೈಕ್ಲೋನ್ ಅಪ್ಪಳಿಸುತ್ತಿರುವುದೆಲ್ಲ ವಾತಾವರಣ ಕಲುಷಿತಗೊಂಡಿರುವುದಕ್ಕೆ ಸಂಕೇತ ಎಂದು ವಾತಾವರಣದ ಅನಾಹುತ ವಿವರಿಸುವ ಪ್ರೊ.ರಾವ್, ಮನು ಕುಲ-ಜೀವ ಸಂಕುಲ ಉಳಿಯಬೇಕೆಂದರೆ ಪರಿಸರ ಸಂರಕ್ಷಣೆ ಆಗಲೇಬೇಕೆನ್ನುತ್ತಾರೆ.

ಜಾಗತಿಕ ತಾಪಮಾನ ಬದಲಾವಣೆಯಿಂದ ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿವೆ; ಕಾರ್ಬನ್ ಡೈಆಕ್ಸೈಡ್‌ ಉಷ್ಣತೆ ಹೆಚ್ಚುತ್ತಿದೆ. ಉಷ್ಣತೆಯಿಂದ ನೀರಾವಿ ಹೆಚ್ಚುತ್ತದೆ. ನೀರಾವಿ ಏರಿಕೆಯಾದರೆ ಹಸಿರು ಮನೆ ಅನಿಲದ ಮೇಲೆ ಪರಿಣಾವಾಗುತ್ತದೆ. ದೇಶದ ಬೆನ್ನೆಲುಬಾದ ಕೃಷಿಯನ್ನು ನಿರ್ಧರಿಸುವ ಮಾನ್ಸೂನ್ ಮಾರುತದ ದಿಕ್ಕನ್ನೇ ತಪ್ಪಿಸಲಿದೆ ಜಾಗತಿಕ ತಾಪಮಾನ ಹೆಚ್ಚಳ. ಇದೆಲ್ಲದರ ಒಟ್ಟೂ ಪರಿಣಾಮವೇ ಹವಾಮಾನ ವೈಪರಿತ್ಯ. ಹೀಗಾಗಿ ಕಡಲಂಚಿನ ಹಲವು ನಗರಗಳು ಮುಳುಗುವ ಆತಂಕ ಎದುರಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ!


ಇದನ್ನೂ ಓದಿ: ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...