Homeಅಂತರಾಷ್ಟ್ರೀಯದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು 'ಟ್ರಂಪ್ ಗೋಲ್ಡ್ ಕಾರ್ಡ್'

ದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು ‘ಟ್ರಂಪ್ ಗೋಲ್ಡ್ ಕಾರ್ಡ್’

- Advertisement -
- Advertisement -

ಟ್ರಂಪ್ ಆಡಳಿತವು ಬುಧವಾರ (ಡಿಸೆಂಬರ್ 10) ಔಪಚಾರಿಕವಾಗಿ ‘ಟ್ರಂಪ್ ಗೋಲ್ಡ್ ಕಾರ್ಡ್’ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದನ್ನು ಅಮೆರಿಕ ಸರ್ಕಾರ ಕನಿಷ್ಠ 1 ಮಿಲಿಯನ್ ಡಾಲರ್ ಪಾವತಿಸುವ ಜನರಿಗೆ ನೀಡಲು ಯೋಜಿಸಿದೆ.

‘ಟ್ರಂಪ್ ಗೋಲ್ಡ್ ಕಾರ್ಡ್’ ಅನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ EB-5 ವೀಸಾ ಕಾರ್ಯಕ್ರಮಕ್ಕೆ ಬದಲಾಗಿ ಪರಿಚಯಿಸಲಾಗಿದೆ. ಕಳೆದ ವರ್ಷ 14,000 EB-5 ವೀಸಾಗಳನ್ನು ನೀಡಲಾಗಿದೆ ಎಂದು EB-5ನ ವ್ಯಾಪಾರ ಸಂಘವಾದ ಇನ್‌ವೆಸ್ಟ್ ಇನ್‌ ದಿ ಯುಎಸ್‌ಎ ತಿಳಿಸಿದೆ.

ಈ ವರ್ಷದ ಜೂನ್‌ನಲ್ಲಿ ಯುಎಸ್‌ ವಾಣಿಜ್ಯ ಇಲಾಖೆಯು trumpcard.gov ವೆಬ್‌ಸೈಟ್ ಪ್ರಾರಂಭಿಸಿತ್ತು. ಈ ಮೂಲಕ ಅರ್ಜಿದಾರರು ತಮ್ಮ ಹೆಸರು, ಪ್ರದೇಶ ಮತ್ತು ಇಮೇಲ್ ವಿಳಾಸವನ್ನು ಸಲ್ಲಿಸಲು ಅವಕಾಶ ನೀಡಿತ್ತು. ವೆಬ್‌ಸೈಟ್‌ ಅಧಿಕೃತವಾಗಿ ನೋಂದಣಿಗೆ ತೆರೆದಾಗ ತಿಳಿಸುವುದಾಗಿ ಹೇಳಿತ್ತು. ಈ ವಾರ ವೆಬ್‌ಸೈಟ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಈಗ ಕೇವಲ ನೋಂದಣಿ ಮಾಡಿಕೊಳ್ಳುವುದು ಮಾತ್ರವಲ್ಲ, ನೇರವಾಗಿ ಪೂರ್ತಿ ಅರ್ಜಿ ಸಲ್ಲಿಸುವ ಸೌಲಭ್ಯವೂ ತೆರೆಯಲಾಗಿದೆ.

ವೆಬ್‌ಸೈಟ್‌ನಲ್ಲಿ ಗೋಲ್ಡ್ ಕಾರ್ಡ್ ಪೋಟೋ ಚಿನ್ನದ ಬಣ್ಣದಲ್ಲಿದೆ. ಅದರದಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ ಎಂದು ಬರೆಯಲಾಗಿದೆ. ಟ್ರಂಪ್ ಫೋಟೋ, ಸಹಿ, ಸ್ಟಾಚ್ಯೂ ಆಫ್ ಲಿಬರ್ಟಿ, ಅಮೆರಿಕದ ರಾಷ್ಟ್ರ ಧ್ವಜ ಮತ್ತು ಹದ್ದಿನ ಚಿತ್ರವಿದೆ.

ಟ್ರಂಪ್ ಈ ವರ್ಷದ ಫೆಬ್ರವರಿಯಲ್ಲಿ ಈ ಯೋಜನೆಯನ್ನು ಮೊದಲು ಘೋಷಿಸಿದ್ದರು. ನಂತರ ಏಪ್ರಿಲ್‌ನಲ್ಲಿ, ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರಿಗೆ ತಮ್ಮ ಫೋಟೋ ಇರುವ ಚಿನ್ನದ ಬಣ್ಣದ ಕಾರ್ಡ್‌ನ ಮಾದರಿಯನ್ನು ತೋರಿಸಿದ್ದರು.

ಏನಿದು EB-5 ವೀಸಾ?

ಉದ್ಯೋಗ ಆಧಾರಿತ ವೀಸಾ ವ್ಯವಸ್ಥೆಯ ಭಾಗವಾಗಿರುವ EB-5 ಕಾರ್ಯಕ್ರಮವನ್ನು 1990ರಲ್ಲಿ ಅಮೆರಿಕ ಕಾಂಗ್ರೆಸ್ ರಚಿಸಿತು. ಇದನ್ನು ಯುಎಸ್‌ ಪೌರತ್ವ ಮತ್ತು ವಲಸೆ ಸೇವೆಗಳು (USCIS) ನಿರ್ವಹಿಸುತ್ತದೆ.

ಇದು ಅಮೆರಿಕದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ವಿದೇಶಿಯರಿಗೆ ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ನೀಡುತ್ತದೆ. ಹೂಡಿಕೆದಾರರು ಕನಿಷ್ಠ 1.05 ಮಿಲಿಯನ್ ಡಾಲರ್ (ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ 800,000 ಡಾಲರ್) ಹೂಡಿಕೆ ಮಾಡಬೇಕು ಮತ್ತು ಅಮೆರಿಕನ್ನರಿಗೆ ಕನಿಷ್ಠ 10 ಉದ್ಯೋಗಗಳನ್ನು ಸೃಷ್ಟಿಸಬೇಕು.

ಈ ಕಾರ್ಯಕ್ರಮದಡಿಯಲ್ಲಿ, ಹೂಡಿಕೆದಾರರು (ಮತ್ತು ಅವರ ಸಂಗಾತಿಗಳು ಮತ್ತು 21 ವರ್ಷದೊಳಗಿನ ಅವಿವಾಹಿತ ಮಕ್ಕಳು) ಅಮೆರಿಕದಲ್ಲಿ ವಾಣಿಜ್ಯ ಉದ್ಯಮದಲ್ಲಿ ಅಗತ್ಯವಾದ ಹೂಡಿಕೆ ಮಾಡಿದರೆ ಅಥವಾ ಅರ್ಹ ಅಮೆರಿಕನ್ನರಿಗೆ 10 ಶಾಶ್ವತ ಪೂರ್ಣ ಸಮಯದ ಉದ್ಯೋಗ ನೀಡುವುದಾದರೆ ಕಾನೂನುಬದ್ಧ ಶಾಶ್ವತ ನಿವಾಸಕ್ಕೆ (ಗ್ರೀನ್ ಕಾರ್ಡ್ ಹೊಂದಿರುವವರಾಗಲು) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಟ್ರಂಪ್ ಗೋಲ್ಡ್ ಕಾರ್ಡ್ ಎಂದರೇನು?

ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ಕಾರ್ಯಕ್ರಮವು ವಿದೇಶಿಯರಿಗೆ ಅಮೆರಿಕದಲ್ಲಿ ನಿವಾಸ ಮತ್ತು ಕೆಲಸದ ಹಕ್ಕುಗಳನ್ನು ನೀಡುತ್ತದೆ. ಅಲ್ಲದೆ, ಆಡಳಿತದ ತೊಂದರೆಗಳನ್ನು ಎದುರಿಸದೆ ಪೌರತ್ವವನ್ನು ಪಡೆಯುವ ಮಾರ್ಗವನ್ನು ಒದಗಿಸುತ್ತದೆ.

ವೆಬ್‌ಸೈಟ್ ಪ್ರಕಾರ, ಅನುಮೋದಿತ ಅರ್ಜಿದಾರರು EB-1 ಅಥವಾ EB-2 ವೀಸಾ ಹೊಂದಿರುವವರಾಗಿ ಕಾನೂನು ಸ್ಥಾನಮಾನವನ್ನು ಪಡೆಯುತ್ತಾರೆ. ಈ ವಿಭಾಗಗಳು ಆದ್ಯತೆಯ ಉನ್ನತ ಶ್ರೇಣಿಯ ವರ್ಗಗಳಾಗಿದ್ದು, ಅಸಾಧಾರಣ ಸಾಮರ್ಥ್ಯ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುತ್ತವೆ.

ಗೋಲ್ಡ್ ಕಾರ್ಡ್‌ಗೆ ಯಾರು ಅರ್ಹರು?

ಟ್ರಂಪ್ ಗೋಲ್ಡ್ ಕಾರ್ಡ್ ತೆಗೆದುಕೊಳ್ಳಲು 3 ಮುಖ್ಯ ಷರತ್ತುಗಳನ್ನು ಪೂರೈಸಬೇಕು.

  1. ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯಲು ಅರ್ಹರಾಗಿರಬೇಕು (ಅಂದರೆ ಕ್ರಿಮಿನಲ್ ರೆಕಾರ್ಡ್, ಭಯೋತ್ಪಾದನೆ ಸಂಬಂಧ ಇರಬಾರದು)
  2. ದೇಶದ ಒಳಗೆ ಬಿಡಲು ಅಮೆರಿಕ ಸರ್ಕಾರದ ಒಪ್ಪಿಗೆ ಇರಬೇಕು (ಯಾವುದೇ ದೊಡ್ಡ ತಪ್ಪು ಮಾಡಿರಬಾರದು, ಗಂಭೀರ ರೋಗಗಳಿರಬಾರದು)
  3. ಅರ್ಜಿ ಸಲ್ಲಿಸುವಾಗ ಅರ್ಜಿದಾರರ ದೇಶದವರಿಗೆ ವೀಸಾ ಖಾಲಿ ಇರಬೇಕು

ಕೆಲವು ದೇಶದ (ಉದಾಹರಣೆಗೆ : ಭಾರತ, ಚೀನಾ, ಮೆಕ್ಸಿಕೋ) ಬಹಳ ಜನರು ಈಗಾಗಲೇ ಅರ್ಜಿ ಹಾಕಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು 10 ಲಕ್ಷ ಡಾಲರ್ ಕೊಟ್ಟರೂ ಕೂಡ ಗೋಲ್ಡ್ ಕಾರ್ಡ್ ಪಡೆಯಲು 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಕಾಯಬೇಕಾಗುತ್ತದೆ.

ಟ್ರಂಪ್ ಗೋಲ್ಡ್ ಕಾರ್ಡ್ ಅಡಿ ಬರುವ ವಿವಿಧ ವೀಸಾಗಳು ಯಾವುವು?

1.ಟ್ರಂಪ್ ಗೋಲ್ಡ್ ಕಾರ್ಡ್

ಟ್ರಂಪ್ ಗೋಲ್ಡ್ ಕಾರ್ಡ್ ಬೇಕಾದರೆ ಮೊದಲು ಯುಎಸ್‌ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಗೆ (ಡಿಹೆಚ್ಎಸ್‌) 15,000 ಡಾಲರ್ (ಸುಮಾರು 12.5 ಲಕ್ಷ ರೂ.) ಪ್ರಾಸೆಸಿಂಗ್ ಶುಲ್ಕ ಕಟ್ಟಬೇಕು. ಈ ಹಣ ಮರುಪಾವತಿ ಆಗುವುದಿಲ್ಲ. ಏಕೆಂದರೆ, ಇದನ್ನು ಬ್ಯಾಕ್‌ಗ್ರೌಂಡ್ ಚೆಕ್ ಮತ್ತು ಆರಂಭದ ಪರಿಶೀಲನೆಗೆ ಬಳಸುತ್ತಾರೆ. ಈ ಶುಲ್ಕ ಕಟ್ಟಿದ ಕೂಡಲೇ ಅರ್ಜಿ ಅನುಮೋದನೆ ಮತ್ತು ವೀಸಾ ನೀಡುವ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ. ಆದರೆ, ಅರ್ಜಿ ಹಾಕಿದವರು ಎಲ್ಲಾ ಅಗತ್ಯ ದಾಖಲೆಗಳನ್ನು ಮತ್ತು ಇತರ ಶುಲ್ಕಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿರಬೇಕು.

ಗೋಲ್ಡ್ ಕಾರ್ಡ್‌ ಪಡೆಯಲು ಅರ್ಜಿ ಹಾಕಿದವರು ಕೊಡುವ 1 ಮಿಲಿಯನ್ ಡಾಲರ್ (8.5 ಕೋಟಿ ರೂ.) ಹಣವನ್ನು ‘ಗಿಫ್ಟ್’ ಅಥವಾ ನೀವು ಅಮೆರಿಕಕ್ಕೆ ದೊಡ್ಡ ಪ್ರಯೋಜನ ಕೊಡುತ್ತೀರಿ ಎಂಬ ಸಾಕ್ಷ್ಯ ಎಂದು ಪರಿಗಣಿಸುವುದಾಗಿ ವೆಬ್‌ಸೈಟ್‌ ಹೇಳುತ್ತದೆ. ಅಂದರೆ, ಅರ್ಜಿದಾರರು ಕೊಡುವ ಹಣ ನಿಜವಾಗಿಯೂ ‘ಹೂಡಿಕೆ’ ಅಲ್ಲ, ಬದಲಿಗೆ ಅದು ಸರ್ಕಾರಕ್ಕೆ ನೇರ ದಾನ ಕೊಟ್ಟಂತೆ.

ಇವಿಷ್ಟೇ ಅಲ್ಲದೆ, ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ಗೆ ಹೆಚ್ಚುವರಿ ಶುಲ್ಕವನ್ನೂ ಕಟ್ಟಬೇಕಾಗಬಹುದು (ಉದಾ: ಮೆಡಿಕಲ್ ಚೆಕ್‌ಅಪ್, ಇಂಟರ್ವ್ಯೂ ಫೀಗಳು). ಇದು ಅರ್ಜಿದಾರರ ದೇಶ ಮತ್ತು ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ.

2. ಟ್ರಂಪ್ ಕಾರ್ಪೊರೇಟ್ ಗೋಲ್ಡ್ ಕಾರ್ಡ್

ಈ ಕಾರ್ಪೊರೇಟ್ ಗೋಲ್ಡ್ ಕಾರ್ಡ್ ಕಂಪನಿ (ಸ್ಪಾನ್ಸರ್) ತನ್ನ ಒಬ್ಬ ಅಥವಾ ಹೆಚ್ಚು ಉದ್ಯೋಗಿಗಳಿಗೆ ನೀಡಬಹುದು. ಆದರೆ, ಕಂಪನಿ ಯುಎಸ್‌ ಹೋಮ್‌ಲ್ಯಾಂಡ್ ಸೆಕ್ಯೂರಿಟಿ (ಡಿಹೆಚ್‌ಎಸ್‌)ಗೆ 15,000 ಡಾಲರ್ (ಸುಮಾರು 12.5 ಲಕ್ಷ ರೂ.) ಕಟ್ಟಬೇಕು. ಇದು ಮರುಪಾವತಿ ಆಗದು. ಇದನ್ನು ಉದ್ಯೋಗಿಯ ಬ್ಯಾಕ್‌ಗ್ರೌಂಡ್ ಚೆಕ್‌ಗೆ ಬಳಸುತ್ತಾರೆ.

ಕಂಪನಿ 2 ಮಿಲಿಯನ್ ಡಾಲರ್ (ಸುಮಾರು 17 ಕೋಟಿ ರೂ.) ‘ಗಿಫ್ಟ್’ ಹಣವನ್ನು ಕೊಡಬೇಕು. ಇದು ಅಮೆರಿಕ ಸರ್ಕಾರಕ್ಕೆ ನೇರವಾಗಿ ಹೋಗುತ್ತದೆ, ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪಡೆಯಲು ಸಹಾಯ ಮಾಡುತ್ತದೆ.

ಕಂಪನಿ ಒಬ್ಬ ಉದ್ಯೋಗಿಯ ಸ್ಪಾನ್ಸರ್‌ಷಿಪ್ ನಿಲ್ಲಿಸಿ, ಅವರಿಗೆ ಕೊಟ್ಟ 2 ಮಿಲಿಯನ್ ಡಾಲರ್ ಗಿಫ್ಟ್ ಅನ್ನು ಹೊಸ ಉದ್ಯೋಗಿಯನ್ನು ಸ್ಪಾನ್ಸರ್ ಮಾಡಲು ಬಳಸಬಹುದು.

ವಾರ್ಷಿಕವಾಗಿ 2 ಮಿಲಿಯನ್‌ನ 1 ಶೇಕಡ (ಸುಮಾರು 17 ಲಕ್ಷ ರೂ.) ಸರ್ಕಾರಕ್ಕೆ ಕಟ್ಟಬೇಕು. ಇದು ಕಾರ್ಡ್ ಚಾಲೂಕರಣೆಯನ್ನು ಕಾಪಾಡಲು. ಉದ್ಯೋಗಿ ಬದಲಾಯಿಸಿದರೆ ಅಥವಾ ಹೊಸ ಬ್ಯಾಕ್‌ಗ್ರೌಂಡ್ ಮಾಡಿದರೆ 2 ಮಿಲಿಯನ್‌ನ ಶೇಕಡ 5ರಷ್ಟು (ಸುಮಾರು 85 ಲಕ್ಷ ರೂ.) ಸರ್ಕಾರಕ್ಕೆ ಕಟ್ಟಬೇಕು.

3.ಟ್ರಂಪ್ ಪ್ಲಾಟಿನಂ ಕಾರ್ಡ್‌

ಈ ಕಾರ್ಡ್ ವಿದೇಶಿ ಆದಾಯದ ಮೇಲೆ ತೆರಿಗೆ ವಿಧಿಸದೆ ವ್ಯಕ್ತಿಗಳು ವರ್ಷಕ್ಕೆ 270 ದಿನಗಳವರೆಗೆ ಅಮೆರಿಕದಲ್ಲಿ ವಾಸಿಸಲು ಅನುವು ಮಾಡಿಕೊಡುತ್ತದೆ. ಇದು ಪ್ರಯಾಣ ವೀಸಾಗಳ ಅಗತ್ಯವನ್ನು ನಿವಾರಿಸುತ್ತದೆ.

ಈ ಪ್ಲಾಟಿನಂ ಕಾರ್ಯಕ್ರಮಕ್ಕೆ ಸರ್ಕಾರ ಈಗಾಗಲೇ ವೇಟ್‌ಲಿಸ್ಟ್ (ಕಾಯುವ ಪಟ್ಟಿ) ತಯಾರಿಸಿದೆ. ಇದು ಇನ್ನೂ ಆರಂಭವಾಗಿಲ್ಲ, ಹಾಗಾಗಿ ಆಸಕ್ತರನ್ನು ನೋಂದಾಯಿಸಿಕೊಳ್ಳುವುದಕ್ಕಾಗಿ ಈ ಪಟ್ಟಿ ಇದೆ.

ಪ್ಲಾಟಿನಂ ಕಾರ್ಡ್‌ಗೆ 5 ಮಿಲಿಯನ್ ಡಾಲರ್ (ಸುಮಾರು 42 ಕೋಟಿ ರೂ.) ಕೊಡುಗೆ ನೀಡಬೇಕು. ಇದು ಇನ್ನೂ ಈ ಮಟ್ಟದಲ್ಲೇ ಇರುತ್ತದೆ ಎಂಬ ಖಚಿತತೆ ಇಲ್ಲ. ಹಾಗಾಗಿ, ಈಗಲೇ ವೇಟ್‌ಲಿಸ್ಟ್‌ಗೆ ಸೇರಿಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ. ಅಂದರೆ, ಹಣದ ಮೊತ್ತ ಬದಲಾಗಬಹುದು (ಹೆಚ್ಚಾಗಬಹುದು).

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ| ‘ಬಾಂಗ್ಲಾದೇಶಿ’ ಎಂದು ಆರೋಪಿಸಿ ಮುಸ್ಲಿಂ ಕಾರ್ಮಿಕನನ್ನು ಥಳಿಸಿದ ಗುಂಪು

ಬಾಂಗ್ಲಾದೇಶಿ ಎಂದು ಸುಳ್ಳು ಆರೋಪ ಹೊರಿಸಿ ಮುಸ್ಲಿಂ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಬಲಿಪಶು ಖುರ್ಷಿದ್ ಆಲಂ, ಧಾರ್ಮಿಕ ಘೋಷಣೆಗಳನ್ನು ಪಠಿಸಲು ನಿರಾಕರಿಸಿದ ನಂತರ ಸುಮಾರು...

ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಇವಿಎಂ ಮೇಲೆ ಜನ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದ ವರದಿ : ಅಲ್ಲಗಳೆದ ಸಚಿವ ಪ್ರಿಯಾಂಕ್ ಖರ್ಗೆ

ಹೆಚ್ಚಿನ ನಾಗರಿಕರು ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತಿವೆ ಎಂದು ನಂಬುತ್ತಾರೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ ರಾಜ್ಯವ್ಯಾಪಿ ಸಮೀಕ್ಷೆಯ...

ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಫೋನ್‌ಗಳನ್ನು ಅಸ್ಸಾಂ ಸರ್ಕಾರಕ್ಕೆ ಹಿಂದಿರುಗಿಸಿದ ಪತ್ರಕರ್ತರು

ಅಸ್ಸಾಂ ಸರ್ಕಾರದಿಂದ ಹೊಸ ವರ್ಷದ ಉಡುಗೊರೆಯಾಗಿ ಪಡೆದ ಮೊಬೈಲ್ ಫೋನ್‌ಗಳನ್ನು ಕನಿಷ್ಠ ಇಬ್ಬರು ಪತ್ರಕರ್ತರು ಗುರುವಾರ ಹಿಂದಿರುಗಿಸಿದ್ದಾರೆ ಎಂದು 'ಸ್ಕ್ರೋಲ್' ವರದಿ ಮಾಡಿದೆ. ಅಸ್ಸಾಂನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದಲ್ಲಿ ನೋಂದಾಯಿಸಲಾದ 2,200...

ಕೋಗಿಲು ಬಡಾವಣೆ ಮನೆಗಳ ತೆರವು : ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರಿನ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಗಳ ಸುಮಾರು ‌300 ಮನೆಗಳನ್ನು ನೆಲಸಮ ಮಾಡಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬೀದಿಗೆ ತಳ್ಳಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ...

ರ‍್ಯಾಗಿಂಗ್ ದೈಹಿಕ ಹಿಂಸೆ; ಎರಡು ತಿಂಗಳ ಬಳಿಕ 19 ವರ್ಷದ ವಿದ್ಯಾರ್ಥಿನಿ ಸಾವು

ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಘಟನೆಯು ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. 19 ವರ್ಷದ ಬಾಲಕಿಯ ಸಾವಿನ ಗಂಭೀರ ಪ್ರಕರಣಗಳಲ್ಲಿ ಕಾಲೇಜಿನ ಅಧ್ಯಾಪಕರು ಮತ್ತು ಮೂವರು ವಿದ್ಯಾರ್ಥಿನಿಯರ ಹೆಸರಿದೆ....

ಮುಸ್ಲಿಂ ಲೀಗ್‌ ಚಂದ್ರಿಕಾದ ಸಂಪಾದಕೀಯ ಪ್ರಕಟಿಸಿದ ಜನ್ಮಭೂಮಿ ಪತ್ರಿಕೆ : ಮುಜುಗರಕ್ಕೊಳಗಾದ ಬಿಜೆಪಿಯ ಮುಖವಾಣಿ

ವರ್ಷದ ಆರಂಭದಲ್ಲಿ ಅಚ್ಚರಿ ಎಂಬಂತೆ, ಕೇರಳ ಬಿಜೆಪಿಯ ಮುಖವಾಣಿಯಾದ ಮಲಯಾಳಂ ದಿನಪತ್ರಿಕೆ 'ಜನ್ಮಭೂಮಿ', ಪ್ರತಿಸ್ಪರ್ಧಿ ಪತ್ರಿಕೆಯಾದ ಇಂಡಿಯನ್‌ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಪಕ್ಷದ ಮುಖವಾಣಿ 'ಚಂದ್ರಿಕಾ'ದ ಸಂಪಾದಕೀಯ ಪ್ರಕಟಿಸಿ ಮುಜುಗರಕ್ಕೀಡಾಗಿದೆ. 'ಜನ್ಮಭೂಮಿ' ಪತ್ರಿಕೆಯ...

ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಖರೀದಿ; ಶಾರುಖ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದ ರಾಮಭದ್ರಾಚಾರ್ಯ

ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದೂ ಆಧ್ಯಾತ್ಮಿಕ ನಾಯಕ...

“ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ”: ನ್ಯೂಯಾರ್ಕ್‌ನ ನೂತನ ಮೇಯರ್ ಝೊಹ್ರಾನ್ ಮಮ್ದಾನಿಯಿಂದ ಉಮರ್ ಖಾಲಿದ್‌ಗೆ ಪತ್ರ

ಜೈಲಿನಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್‌ ನಗರದ ನೂತನ ಮೇಯರ್ ಝೊಹ್ರಾನ್ ಮಮ್ದಾನಿ ಅವರು ಕೈಬರಹದ ಪತ್ರವೊಂದನ್ನು ಬರೆದಿದ್ದಾರೆ ಎಂದು, ಖಾಲಿದ್ ಸ್ನೇಹಿತೆ ಬನೋಜ್ಯೋತ್ಸ್ನಾ...

ಮಧ್ಯಪ್ರದೇಶ| ಹಸು ಮೇಯಿಸುವ ವಿಚಾರಕ್ಕೆ ಜಗಳ; ದಲಿತ ಕುಟುಂಬದ ಮೇಲೆ ಗುಂಡು ಹಾರಿಸಿದ ಗುಂಪು

ದಲಿತ ಕುಟುಂಬವೊಂದರ ಹೊಲದಲ್ಲಿ ಪ್ರಬಲ ಜಾತಿ ಜನರ ಹಸುಗಳು ಮೇಯಿಸುವುದನ್ನು ವಿರೋಧಿಸದ್ದಕ್ಕೆ ದಲಿತ ಕುಟುಂಬದ ಮೇಲೆ ಗುಂಡು ಹಾರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಕೋರರು ಮನಬಂದಂತೆ ಗುಂಡು ಹಾರಿಸಿ ನಂತರ ದಲಿತ...

ಬಳ್ಳಾರಿ | ರೆಡ್ಡಿ ಬಣಗಳ ನಡುವೆ ಘರ್ಷಣೆ : ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ (ಜ.1) ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ಉಂಟಾಗಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟ...