ಪಾಟ್ನಾ: ಮಕ್ಕಳು ವಂಚಿತ ಮಹಿಳೆಯರನ್ನು ಗರ್ಭ ಧರಿಸುವಂತೆ ಮಾಡಿದರೆ ರೂ. 10 ಲಕ್ಷ ನೀಡುವ ಅಮಿಷವೊಡ್ಡಿ ಯುವಕರನ್ನು ವಂಚಿಸಿದ್ದಕ್ಕಾಗಿ ಬಿಹಾರ ಪೊಲೀಸರು ಶನಿವಾರ ಮೂವರು ಸೈಬರ್ ವಂಚಕರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಪ್ರಿನ್ಸ್ ರಾಜ್, ಭೋಲಾ ಕುಮಾರ್ ಮತ್ತು ರಾಹುಲ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಇಂತಹ ಕೊಡುಗೆಯ ಭರವಸೆಗಳನ್ನು ನೀಡಿ, ಇದನ್ನು ನಂಬಿ ಬಂದವರಿಂದಲೇ ಹಣವನ್ನು ಸುಲಿಗೆ ಮಾಡುವ ದೊಡ್ಡ ಗ್ಯಾಂಗ್‌ನ ಭಾಗವಾಗಿದ್ದಾರೆಂದು ಶಂಕಿಸಲಾಗಿದೆ. ಕೌರಾ ಗ್ರಾಮದಿಂದ ಈ ದಂಧೆಯನ್ನು ನಡೆಸುತ್ತಿದ್ದರು ಎಂದು ನವಾಡ ಡಿಎಸ್‌ಪಿ (ಪ್ರಧಾನ ಕಚೇರಿ) ಇಮ್ರಾನ್ ಪರ್ವೇಜ್ ತಿಳಿಸಿದರು.
ಸೈಬರ್ ಪೊಲೀಸ್ ಠಾಣೆಗೆ ಬಂದ ದೂರಿನ ಮೇರೆಗೆ ಬಲೆ ಬೀಸಲಾಯಿತು ಮತ್ತು ಪ್ರಿನ್ಸ್ ರಾಜ್, ಭೋಲಾ ಕುಮಾರ್ ಮತ್ತು ರಾಹುಲ್ ಕುಮಾರ್ ಎಂಬ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದು ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯನ್ನಾಗಿ ಮಾಡಿದರೆ ಗ್ರಾಹಕ ಶುಲ್ಕವಾಗಿ ಭಾರಿ ಮೊತ್ತವನ್ನು ನೀಡುವ ಭರವಸೆ ನೀಡಿ ಯುವಕರಿಗೆ ಆಮಿಷವೊಡ್ಡಿದ ಆರೋಪದ ಮೇಲೆ ಬಂಧಿಸಲಾಯಿತು. ಅವರು ನಾದ್ರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೌರಾ ಗ್ರಾಮದಿಂದ ಈ ದಂಧೆಯನ್ನು ನಡೆಸುತ್ತಿದ್ದರು” ಎಂದು ಅವರು ಹೇಳಿದರು.
ಆರೋಪಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜಾಹೀರಾತುಗಳನ್ನು ಪೋಸ್ಟ್ ಮಾಡಿ, ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯನ್ನಾಗಿ ಮಾಡಲು ದೊಡ್ಡ ಮೊತ್ತದ ಹಣವನ್ನು ನೀಡುವುದಾಗಿ ಭರವಸೆ ನೀಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ತಮ್ಮ ಈ ದಂಧೆಗೆ ಯುವಕರನ್ನು ಆಕರ್ಷಿಸಲು ಅವರು ವೆಬ್‌ಸೈಟ್ ಅನ್ನು ಸಹ ನಡೆಸುತ್ತಿದ್ದರು. ಯುವಕರಿಗೆ ಮಹಿಳೆಯರನ್ನು ಗರ್ಭಿಣಿಯನ್ನಾಗಿ ಮಾಡಲು ವಿಫಲವಾದರೂ ರೂ. 50,000 ಭರವಸೆ ನೀಡಲಾಗಿತ್ತು. ಅವರು ಮೊದಲು ತಮ್ಮ ಬಲಿಪಶುಗಳಿಂದ ಆಧಾರ್ ಕಾರ್ಡ್‌ಗೆ ಬೇಡಿಕೆ ಇಡುತ್ತಿದ್ದರು ಮತ್ತು ನಂತರ ನೋಂದಣಿ ಶುಲ್ಕವನ್ನು ಕೇಳುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಅವರು ‘All India Pregnant Job Service’ ಎಂಬ ವೆಬ್‌ಸೈಟ್ ಅನ್ನು ನಡೆಸುತ್ತಿದ್ದರು. ಅದರ ಮೂಲಕ ಅವರು ಸಂಭಾವ್ಯ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ಮಹಿಳೆಯರನ್ನು ಗರ್ಭಿಣಿಯನ್ನಾಗಿ ಮಾಡಲು ಅವರು ಜನರಿಗೆ ರೂ. 5-10 ಲಕ್ಷ ನೀಡುವ, ವಿಫಲವಾದರೂ ಗ್ರಾಹಕರಿಗೆ ರೂ. 50,000 ಭರವಸೆ ನೀಡುತ್ತಿದ್ದರು ಎಂದು ಡಿಎಸ್‌ಪಿ ಹೇಳಿದರು.
ಆರಂಭದಲ್ಲಿ ಅವರು ತಮ್ಮ ಮೋಸದ ಜಾಲಕ್ಕೆ ಸಿಲುಕಿದ ಯುವಕರರಿಂದ ಪ್ಯಾನ್ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಸಂಗ್ರಹಿಸುತ್ತಿದ್ದರು. ನಂತರ ಅವರು ನೋಂದಣಿ ಮತ್ತು ಹೋಟೆಲ್‌ಗಳ ಬುಕಿಂಗ್ ಹೆಸರಿನಲ್ಲಿ ಅವರಿಂದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಅವರು ಹೇಳಿದರು.
ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇಂಡಿಯಾ ಬಣ ವಿಸರ್ಜನೆಯಾಗಬೇಕೆಂದು ಎಂದಿಗೂ ಬಯಸಿರಲಿಲ್ಲ: ಶಿವಸೇನೆ ಸಂಸದ ಸಂಜಯ್ ರಾವತ್


