- Advertisement -
- Advertisement -
ಜಿಎಸ್‌ಟಿ ಪಾಲು ಮತ್ತು ಅನುದಾನ ಸೇರಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಅನುದಾನದಲ್ಲಿ ಅಂದಾಜು 19 ಸಾವಿರ ಕೋಟಿ ಕಡಿತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬಜೆಟ್ ಭಾಷಣದ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ತೆರಿಗೆ, ಮಾಹಿತಿ ತಂತ್ರಜ್ಞಾನ ಆಧರಿತ ಉತ್ಪನ್ನಗಳು ಸೇರಿದಂತೆ ಹಲವಾರು ವಿಚಾರದಲ್ಲಿ ಕರ್ನಾಟಕ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಸಲ್ಲಿಸುತ್ತಿದೆ. ಆದರೆ ಕೇಂದ್ರದಿಂದ ಕರ್ನಾಟಕಕ್ಕೆ ಅನುದಾನ ಬರುವಲ್ಲಿ ಕಡಿತವಾಗುತ್ತಿದೆ ಎಂದಿದ್ದಾರೆ.
ಹಾಗಾಗಿ ಕರ್ನಾಟಕದ ಹಲವು ಇಲಾಖೆಗಳ ವೆಚ್ಚ ಕಡಿತ ಮಾಡಿತ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ.
2020-21 ನೇ ಸಾಲಿನ ಬಜೆಟ್‌ನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
- ಬಜೆಟ್ ಶೇಕಡಾ 6 ರಷ್ಟು ಅಬಕಾರಿ ಸುಂಕ ಹೆಚ್ಚಳ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ. ಬೆಂಗಳೂರು ಕೆರೆಗಳ ಅಭಿವೃದ್ಧಿ ಗೆ 100 ಕೋಟಿ.
- ಶುಭ್ರ ಬೆಂಗಳೂರು ಯೋಜನೆಗೆ 900 ಕೋಟಿ ಮೀಸಲು, ಮಹಾದಾಯಿ ಯೋಜನೆಗೆ 500 ಕೋಟಿ ಘೋಷಣೆ,
- ಎತ್ತಿನಹೊಳೆ ನೀರಾವರಿ ಯೋಜನೆಗೆ 1500 ಕೋಟಿ ಮೊದಲ ಬಾರಿಗೆ ಮಕ್ಕಳ ಬಜೆಟ್ ಮಂಡನೆ.
- ಕಿಸಾನ್ ಸಮ್ಮಾನ್ ಯೋಜನೆಗೆ 2600 ಕೋಟಿ, ಮನೆ ಖರೀದಿ ನೋಂದಣಿ ಶುಲ್ಕ 5 ರಿಂದ 2ಕ್ಕೆ ಇಳಿಕೆ.
- ಶನಿವಾರ ಮಕ್ಕಳು ಶಾಲೆಗೆ ಬ್ಯಾಗ್ ತರುವಂತಿಲ್ಲ. ಶಿಕ್ಷಕ ಮಿತ್ರ ಮೊಬೈಲ್ ಆಪ್ 10 ಲಕ್ಷ ಮನೆಗಳಿಗೆ ಮನೆ ಮನೆಗೆ ಗಂಗೆ ಜಲಭಾಗ್ಯ ಯೋಜನೆ ಜಾರಿ.
- ರಾಜ್ಯದಲ್ಲಿ 2450 ಹೊಸ ಬಸ್ ಖರೀದಿ, ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್. ಒಂದು ಲಕ್ಷ ಮಹಿಳೆಯರಿಗೆ ಉಚಿತ ಬಿಎಂಟಿಸಿ ಪಾಸ್..
- ಬೆಂಗಳೂರಿಗೆ 90 ಎಲೆಕ್ಟ್ರಿಕ್ ಬಸ್ ಖರೀದಿ, ಬೆಂಗಳೂರು ನಗರ ಅಭಿವೃದ್ದಿಗೆ 8772 ಕೋಟಿ ರೂ. 60 ವರ್ಷ ಮಿರಿದವರಿಗೆ ಹೊಸ ಯೋಜನೆ ಜಾರಿ.
- ಬಡವರ ಜೀವನ ಚೈತ್ರಯಾತ್ರೆ ಯೋಜನೆಗೆ 20 ಕೋಟಿ ಮೀಸಲು. ಕೆ.ಸಿ.ಜನರಲ್, ಸಿವಿ ರಾಮನ್ ಆಸ್ಪತ್ರೆಯಲ್ಲಿ ನೂತನ ಲ್ಯಾಬ್ ಸ್ಥಾಪನೆ.
- ಎಸ್ ಎಸ್ ಎಲ್ ಸಿಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ ನಗದು ಬಹುಮಾನ.
- ಎಸ್ಸಿ ಎಸ್ಪಿ ನಿರುದ್ಯೋಗಿ ಯುವಕರಿಗೆ ಉಚಿತ ಉದ್ಯೋಗ ತರಬೇತಿ.
- ಅಡಿಕೆ ಬೆಳೆಗಾರರಿಗೆ 2 ಲಕ್ಷ ರೂವರೆಗೆ ಸಾಲಕ್ಕೆ ಶೇಕಡ 5 ರಷ್ಟು ಬಡ್ಡಿ ವಿನಾಯಿತಿ.
- ಪೊಲೀಸ್ ಸಿಬ್ಬಂದಿಗೆ ಗೃಹ ಭಾಗ್ಯ ಯೋಜನೆಗೆ 200 ಕೋಟಿ.
- ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 5 ಕೋಟಿ ಮೀಸಲು
- ಗೊಲ್ಲ ಸಮುದಾಯದ ಅಭಿವೃದ್ಧಿಗೆ 10 ಕೋಟಿ
- ಮಂಗಳೂರು ಹಾಗೂ ಉಡುಪಿಯಲ್ಲಿ ಹೊಸ ಮೀನುಗಾರಿಕಾ ಬಂದರು.
- ಬಸವ ಕಲ್ಯಾಣದಲ್ಲಿ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ.
- ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನಕ್ಕೆ ಐದು ಕೋಟಿ ಮೀಸಲು.
- ಕೈಸ್ತ ಸಮುದಾಯ ಅಭಿವೃದ್ಧಿಗೆ 200 ಕೋಟಿ ರೂ. ಮೀಸಲು.
- ವಿಶ್ವಕರ್ಮ ಸಮುದಾಯ ಅಭಿವೃದ್ಧಿಗೆ 25 ಕೋಟಿ ರೂ ಮೀಸಲು.
- ಹನಿ ನೀರಾವರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಇಸ್ರೇಲ್ ಮಾದರಿಯಲ್ಲಿ ನೀರಿನ ರಕ್ಷಣೆಗೆ ಕ್ರಮ ಕಯಗೊಳ್ಳಲಾಗುವುದು.
- 10 ಲಕ್ಷ ಮನೆಗಳಿಗೆ ಮನೆ ಮನೆಗೆ ಗಂಗೆ ನೀರು ಯೋಜನ.
- ಚಿತ್ರದುರ್ಗದ ಮುರುಘಾಮಠದಲ್ಲಿ 325 ಅಡಿ ಎತ್ತರದ ಬಸವಣ್ಣ ಪ್ರತಿಮೆ ಸ್ಥಾಪನೆ,
- ಎಸ್.ಎಲ್.ಭೈರಪ್ಪ ಹುಟ್ಟೂರು ಅಭಿವೃದ್ಧಿ ಗೆ 5 ಕೋಟಿ.
- ಇತರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದ ಆದಾಯ ಹೆಚ್ಚಾಗಿದೆ. ಜಿಡಿಪಿಯಲ್ಲಿ ಶೇ. 6- 8 ವೃದ್ಧಿ ನಿರೀಕ್ಷೆಯಿದೆ.
- 1 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ.
- ರೂ. 100 ಕೋಟಿ ಅನುದಾನದಲ್ಲಿ 278 ಪಬ್ಲಿಕ್ ಶಾಲೆಗಳ ಆರಂಭಕ್ಕೆ ಚಿಂತನೆ.
- ಮಹದಾಯಿ ಯೋಜನೆಗೆ ರೂ. 500 ಕೋಟಿ ಕೇಂದ್ರ ಸರ್ಕಾರ ನೀಡಿದೆ.
- ಭಾಗ್ಯಲಕ್ಷ್ಮೀ ಯೋಜನೆ, ಶಾಲಾ ಮಕ್ಕಳಿಗೆ ನೀಡುವ ಸೈಕಲ್ ಯೋಜನೆ ಮುಂದುವರಿಕೆ.
- ಬಾದಾಮಿ ಕ್ಷೇತ್ರದ ಅಭಿವೃದ್ದಿಗೆ 25 ಕೋಟಿ ರೂ.
- ಸರ್ಕಾರದಿಂದಲೇ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ, ಯೋಜನೆ ಆರಂಭ.
- ನೇಕಾರರ ಸಾಲ ಮನ್ನಾ ಯೋಜನೆಗೆ 79.57 ಕೋಟಿ.
- ರಾಜೀವ್ ಗಾಂಧಿ ವಸತಿ ನಿಗಮಕ್ಕೆ 1 ಸಾವಿರ ಕೋಟಿ.
- ಪ್ರತಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಮೂರು ಶಾಲೆಗಳನ್ನು ದತ್ತು ಪಡೆಯುವ ಆದೇಶ,
- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1500 ಕೋಟಿ.
- ಆಟೋ ಚಾಲಕರ ಮಕ್ಕಳಿಗೆ ಪ್ರತಿ ವರ್ಷ 2 ಸಾವಿರ. ಇದಕ್ಕಾಗಿ 40 ಕೋಟಿ ಮೀಸಲು.
- ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು ಅಭಿವೃದ್ಧಿಗೆ 10 ಕೋಟಿ.
- ಹೂಸ ಏತ ನೀರಾವರಿ ಯೋಜನೆಗಳ ಜಾರಿಗೆ 5 ಸಾವಿರ ಕೋಟಿ.
- ನೋಂದಾಯಿತ 1 ಲಕ್ಷ ಕಟ್ಟಡ ಕಾರ್ಮಿಕರಿಗೆ ಹೆಲ್ತ್ ಕಾರ್ಡ್ ವಿತರಣೆ.
- ಬೆಂಗಳೂರು ಕೆರೆ ಅಭಿವೃದ್ಧಿಗೆ ರೂ. 100 ಕೋಟಿ ಬಿಡುಗಡೆ.
- ಸಾವಯವ ಕೃಷಿ ಪ್ರೋತ್ಸಾಹಕ್ಕೆ ರೂ. 200 ಕೋಟಿ.
- ಕೆರೆಗಳ ಅಭಿವೃದ್ಧಿಯ ಕ್ರೀಯಾಯೋಜನೆಗೆ ರೂ. 100 ಕೋಟಿ ಮೀಸಲು.
- ಮಳೆಯಿಂದ ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಲು ರೂ. 200 ಕೋಟಿ ನಿಗದಿ.
- ರಾಜ ಕಾಲುವೆಗಳ ಅಭಿವೃದ್ಧಿಗೆ ರೂ. 200 ಕೋಟಿ.
- ಹಳ್ಳಿಗಳಲ್ಲಿ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಒಳ ಚರಂಡಿ ಅಭಿವೃದ್ಧಿಗೆ ರೂ. 1 ಸಾವಿರ ಕೋಟಿ ಮೀಸಲು,
- ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷ ಶಿಷ್ಯವೇತನ.
- ಸಣ್ಣ ಮಧ್ಯಮ ಕಾಫಿ ಬೆಳೆಗಾರರ ಪಂಪ್ ಸೆಟ್ ಗಳ ವಿದ್ಯುತ್ ಶುಲ್ಕ ವಾಪಾಸ್,
- ಹೆಬ್ಬಾಳದಿಂದ ಜೆಪಿ ನಗರವರೆಗೆ ಮೆಟ್ರೋ ಸೇವೆ ವಿಸ್ತರಣೆ.
- ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಆಯವ್ಯಯ ಮಂಡನೆ.
- “ಪ್ರಧಾನ ಮಂತ್ರಿ ಕಿಸಾನ್ ಸಮಾನ್ ನಿಧಿ ಯೋಜನೆ” ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂ, ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂ. ಅನುದಾನ
- ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ.
- ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ಕೋಟಿ ರೂ.
- ರೈತ ಸಿರಿ ಯೋಜನೆಯಡಿ ಟೆಫ್, ಚಿಯಾ ಮತ್ತು ಕೈನೋವಾ ಸಿರಿಧಾನ್ಯಗಳ ಸೇರ್ಪಡೆ.


