Homeಮುಖಪುಟಸುಳ್ಳು ಮತ್ತು ಸತ್ಯದ ಸಂಘರ್ಷ | ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಕುರಿತು...

ಸುಳ್ಳು ಮತ್ತು ಸತ್ಯದ ಸಂಘರ್ಷ | ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಕುರಿತು ‘ನ್ಯಾಯಪಥ’ ವಿಶೇಷ ಸಂಚಿಕೆ

- Advertisement -
- Advertisement -

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಇತ್ತೀಚೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಾಡಿನ ಆತ್ಮಸಾಕ್ಷಿಯಾಗಿರುವ ಗಾಂಧಿವಾದಿ ಎಚ್ ಎಸ್ ದೊರೆಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ವಿವಾದ ಹುಟ್ಟು ಹಾಕಿದ್ದರು.

ಶತಾಯುಷಿ ದೊರೆಸ್ವಾಮಿ, ಬೆಂಗಳೂರಿನ ಕಸದ ಸಮಸ್ಯೆಯಿಂದ ಹಿಡಿದು, ನಾಡಿನ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟಕ್ಕೆ ಇಳಿದವರು. ಭ್ರಷ್ಟಚಾರ, ಅನೈತಿಕ ರಾಜಕಾರಣ, ಕೋಮುವಾದಗಳ ವಿರುದ್ಧ ಹೋರಾಟ ನಡೆಸುತ್ತಿರುವ ಇವರ ವಿರುದ್ಧ ಕೋಮುವಾದಿ ಶಕ್ತಿಗಳು, ಬಿಜೆಪಿ ರಾಜಕೀಯ ನಾಯಕರು ದೊರೆಸ್ವಾಮಿ ಅನುಭವ ಮತ್ತು ವ್ಯಕ್ತಿತ್ವವನ್ನು ಅರಿತೊ ಅರಿಯದೆಯೊ ಅವಹೇಳನಕಾರಿಯಾಗಿ ಮಾತನಾಡುತ್ತಲೇ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ನ್ಯಾಯಪಥ ಈ ವಾರದ ಸಂಚಿಕೆಯನ್ನು ವಿಶೇಷವಾಗಿ ರೂಪಿಸಿದ್ದು, ದೊರೆಸ್ವಾಮಿಯವರ ಜೀವನ ಮತ್ತು ಹೋರಾಟವನ್ನು ಕಟ್ಟಿಕೊಟ್ಟಿದೆ. ಖಾದಿ, ಗಾಂಧಿ ಟೋಪಿ ಹಾಕಿ, ಉಪವಾಸ ಮಾಡಿ ಮರೆಯಾದವರ ನಡುವೆ, ಗಾಂಧಿ ತತ್ವಗಳನ್ನು ನಮ್ಮ ಕಾಲಕ್ಕೂ ಜೀವಂತಾಗಿಸಿ ಸ್ಫೂರ್ತಿಯಾಗಿರುವ ದೊರೆಸ್ವಾಮಿಯವರ ಬಗ್ಗೆ ವಿವಿಧ ಲೇಖನಗಳಿವೆ.

ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಅವರು ಬರೆದ ‘ದೊರೆಸ್ವಾಮಿ ಎಂಬ ರಾಕ್‌ಸ್ಟಾರ್’, 103ರ ಹೊಸ್ತಿಲಲ್ಲಿರುವ ದೊರೆಸ್ವಾಮಿ ಸಾರ್ಥಕ ಬದುಕಿನ ಮೈಲುಗಳನ್ನು ಪರಿಚಯಿಸುವ ಲೇಖನ, ಸಂಘಪರಿವಾರ ದೊರೆಸ್ವಾಮಿಯವರನ್ನು ಟಾರ್ಗೆಟ್‌ ಮಾಡುತ್ತಿರೋದೇಕೆ? ಸಾವರ್ಕರ್‌ ಸ್ವಾತಂತ್ರ್ಯ ಹೋರಾಟಗಾರರಾಗಿಬಿಟ್ಟರೆ, ಗಾಂಧೀವಾದಿಗಳನ್ನು ಜರಿಯಲೇಬೇಕಲ್ಲವೇ ಎಂಬ ಯೋಗೇಶ್‌ ಮಾಸ್ಟರ್‌ ಅವರ ವಿಶ್ಲೇಷಣೆ, ಚಾರಿತ್ರ್ಯವಧೆ ಮಾಡುವುದನ್ನು ತಂತ್ರವಾಗಿಸಿಕೊಂಡಿರು ಸಂಘ ಪರಿವಾರ ಇದುವರೆಗೂ ದೇಶದ ಗಣ್ಯ ನಾಯಕರು ವರ್ಚಸ್ಸು, ವ್ಯಕ್ತಿತ್ವಕ್ಕೆ ಘಾಸಿ ಮಾಡುವ ಪ್ರಯತ್ನ ನಡೆಸಿದ ಇತಿಹಾಸವನ್ನು ಕಟ್ಟಿಕೊಡುವ ಲೇಖನವಿದೆ. ಚಂದಾದಾರರಾಗಲು ಸಂಪರ್ಕಿಸಿ: 9353666821

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...