Homeಅಂಕಣಗಳುಸಿದ್ರಾಮಯ್ಯ-ಕುಮಾರಸ್ವಾಮಿಯವರೇ, ನಮ್ಮ ಜನರೀಗ ಯಾವ ನಿರೀಕ್ಷೆಯಲ್ಲಿದ್ದಾರೆ ಗೊತ್ತಾ....?

ಸಿದ್ರಾಮಯ್ಯ-ಕುಮಾರಸ್ವಾಮಿಯವರೇ, ನಮ್ಮ ಜನರೀಗ ಯಾವ ನಿರೀಕ್ಷೆಯಲ್ಲಿದ್ದಾರೆ ಗೊತ್ತಾ….?

- Advertisement -
- Advertisement -

ಬಸನಗೌಡ ಪಾಟೀಲ್ ಯತ್ನಾಳ್‍ರವರು ನನ್ನನ್ನು ಖೋಟಾ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ಗುರುತರ ಆರೋಪ ಮಾಡಿ ನನ್ನನ್ನು ನೋಯಿಸಿದ್ದಾರೆ. ನಾನು ಸಾರ್ವಜನಿಕ ಜೀವನವನ್ನು ಆರಂಭಿಸಿ 60 ವರ್ಷಗಳ ಮೇಲಾಗಿದೆ. ಅಪಾರ ಸಂಖ್ಯೆಯಲ್ಲಿ ಸ್ನೇಹಿತರ, ಸಾಮಾಜಿಕ ಕಾರ್ಯಕರ್ತರ, ಸಾಮಾಜಿಕ ಹೋರಾಟಗಾರರ ಒಡನಾಟ ನನಗಿದೆ. ಹೀಗಾಗಿ ಸಮಾಜದ ಎಲ್ಲ ಸ್ತರದ ಜನ ನನ್ನನ್ನು ವಿನಾಕಾರಣ ಅಪಮಾನಕ್ಕೀಡುಮಾಡಿದ ಬಸನಗೌಡ ಯತ್ನಾಳ್ ವಿರುದ್ಧವಾಗಿ ಧ್ವನಿ ಎತ್ತುತ್ತಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿ.

ಅಷ್ಟೇಅಲ್ಲದೆ ವಿಧಾನಸಭೆಯಲ್ಲೂ ಮಾನ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕ ಯತ್ನಾಳರವರ ಆಧಾರರಹಿತ ನಿಂದನೆಗಳನ್ನು ಗಂಭೀರವಾಗಿ ಪರಿಗಣಿಸಿ ಅಸೆಂಬ್ಲಿಯಲ್ಲಿ ಈ ಕುರಿತು ಪ್ರಸ್ತಾಪಿಸುವುದಾಗಿಯೂ ಯತ್ನಾಳರಿಗೆ ಅಧಿವೇಶನಕ್ಕೆ ಭಾಗವಹಿಸಲು ಅನುಮತಿ ನೀಡಬಾರದೆಂದು ಸ್ಪೀಕರ್‍ಗೆ ಮನವಿ ಮಾಡುವುದಾಗಿಯೂ ಪ್ರಸ್ತಾಪ ಮಾಡಿದ್ದಾರೆ. ಅಷ್ಟೇಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಇದರ ಜೊತೆಜೊತೆಗೇ ಬೀದಿಗಿಳಿದು ಪ್ರತಿಭಟಿಸುವುದಾಗಿಯೂ ತಿಳಿಸಿದ್ದರು. ಅಸೆಂಬ್ಲಿ ಸ್ಪೀಕರ್ ಸಿದ್ದರಾಮಯ್ಯನವರಿಗೆ ಈ ಕುರಿತು ಮಾತನಾಡಲು ಅವಕಾಶ ಕೊಡಲಿಲ್ಲವಾಗಿ ಕಾಂಗ್ರೆಸ್ ಶಾಸಕರೆಲ್ಲರೂ ಅಸೆಂಬ್ಲಿ ಬಾವಿಯೊಳಗೆ ಕುಳಿತು ಸಿದ್ದರಾಮಯ್ಯನವರಿಗೆ ಯತ್ನಾಳರ ವರ್ತನೆ ಬಗೆಗೆ ಮಾತನಾಡಲು ಅವಕಾಶ ನೀಡಬೇಕೆಂದೂ, ಯತ್ನಾಳರನ್ನು ಅಧಿವೇಶನಕ್ಕೆ ಬರಗೊಡಬಾರದೆಂದೂ ಸ್ಪೀಕರನ್ನು ಒತ್ತಾಯಿಸುತ್ತಿದ್ದಾರೆ.

ನಾನು ಅಸೆಂಬ್ಲಿ ಪಾರ್ಲಿಮೆಂಟುಗಳು ಸುವ್ಯವಸ್ಥೆಯಿಂದ ನಡೆಯಬೇಕೆಂದೂ, ವಿರೋಧಪಕ್ಷಗಳು ಅದಕ್ಕೆ ನೆರವಾಗಬೇಕೆಂದೂ ಅಷ್ಟು ವರ್ಷಗಳಿಂದ ಹೇಳುತ್ತಾ ಬಂದಿದ್ದೇನೆ. ಯಾವುದಾದರೂ ಗಹನ ವಿಚಾರವನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಲೇಬೇಕೆಂದು ವಿರೋಧ ಪಕ್ಷ ಬಯಸಿ, ಅದಕ್ಕೆ ಆಡಳಿತ ಪಕ್ಷ ಅವಕಾಶ ಕೊಡದಿದ್ದಾಗ, ಒಂದು ದಿನ ಪೂರ್ತಿ ಸರ್ಕಾರದ ವಿರುದ್ಧ ಅಸೆಂಬ್ಲಿಯಲ್ಲೇ ಹೋರಾಡಬೇಕು. ಸರ್ಕಾರ ಅದಕ್ಕೂ ಬಗ್ಗದಿದ್ದರೆ ಈ ಹೋರಾಟವನ್ನು ನಡುಬೀದಿಯಲ್ಲಿ ಮತದಾರರ ಬೆಂಬಲದೊಂದಿಗೆ ಮುಂದುವರೆಸಬೇಕು ಎಂಬುದು ನನ್ನ ಖಚಿತ ಅಭಿಪ್ರಾಯ. ಸಿದ್ದರಾಮಯ್ಯನವರೂ ಈ ನನ್ನ ನಿಲುವನ್ನು ಒಪ್ಪಬೇಕೆಂದು ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ.

ಹತ್ತಾರು ವರ್ಷಗಳಿಂದ ಈ ವ್ಯಾಧಿ ಕಾಡುತ್ತಿದೆ. ಪ್ರತಿ ಅಧಿವೇಶನದಲ್ಲೂ ಹತ್ತಾರು ಮಸೂದೆಗಳು ಅಂಗೀಕಾರವಾಗುತ್ತವೆ. ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡುತ್ತಾರೆ. ಆಡಳಿತ ಪಕ್ಷದವರು ಕೈಎತ್ತಿ ಅವುಗಳನ್ನು ಅಂಗೀಕರಿಸುತ್ತಾರೆ. ಇದೆಂಥ ಪ್ರಜಾಪ್ರಭುತ್ವ? ಸದನದಲ್ಲಿ ಕೂಗಾಟವೇ ಮುಖ್ಯವಾಗಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ವಿಚಾರ ಗೌಣವೆನಿಸಿದೆ. ಈ ಪರಿಸ್ಥಿತಿ ಬದಲಾಗಬೇಕೆಂಬುದು ನನ್ನ ಅನಿಸಿಕೆ. ಆದ್ದರಿಂದ ಸಿದ್ದರಾಮಯ್ಯನವರು, ಎಚ್.ಡಿ ಕುಮಾರಸ್ವಾಮಿಯವರು ಈ ಹೊಸಪದ್ಧತಿಗೆ ನಾಂದಿ ಹಾಡಬೇಕೆಂದು ನನ್ನ ವಿನಂತಿ.

ಯತ್ನಾಳರ ಬೇಜವಾಬ್ದಾರಿ ಆಧಾರರಹಿತ ಮಾತುಗಳನ್ನು ಬಿಜೆಪಿ ಸರ್ಕಾರ ಮತ್ತು ಅವರ ಶಾಸಕರು ಅನುಮೋದಿಸುವ ರೀತಿ ಮಾತನಾಡುತ್ತಿರುವುದರಿಂದ ಅವರನ್ನೂ ಒಳಗೊಂಡಂತೆ ಎಲ್ಲರ ಮೇಲು ಕಾನೂನುಕ್ರಮ ಕೈಗೊಳ್ಳಲೂ ಒತ್ತಾಯ ಬರುತ್ತಿದೆ. ಇದು ನನ್ನೊಬ್ಬನ ಮಾನ, ಅಪಮಾನದ ಪ್ರಶ್ನೆಯಲ್ಲ. ನಮ್ಮ ಸಮಾಜದಲ್ಲಿ ಸುಳ್ಳು ಮತ್ತು ಸತ್ಯದ ನಡುವಿನ ಸಂಘರ್ಷ. ಸುಳ್ಳಿಗೆ ಸೋಲಾಗುತ್ತದೆ, ಆದರೆ ಆ ಸೋಲು ನಮ್ಮ ಘನತೆಯ ಗೆಲುವಿನ ಮುಂದೆ ಬಾಗಿರುವಂತದ್ದಾಗಿರಬೇಕು. ವಿರೋಧ ಪಕ್ಷದ ಮುಖ್ಯಸ್ಥರೂ ಆದ ನೀವಿಬ್ಬರು, ಸಮಾಜದಲ್ಲಿ ದ್ವೇಷದ ರಾಜಕೀಯ ಬಿತ್ತುವ ದುಷ್ಟಶಕ್ತಿಗಳ ವಿರುದ್ಧ ಜನರ ನಡುವೆ, ಬೀದಿಯಲ್ಲಿ ಹೋರಾಟ ಸಂಘಟಿಸಿ. ನಮ್ಮ ದೇಶದ ಇತಿಹಾಸವನ್ನು ಗಮನಿಸಿದರೆ, ಎಲ್ಲವೂ ಕೈಮೀರಿಹೋದಾಗ ಜನರ ನಡುವಿನಿಂದಲೇ `ನಾಯಕತ್ವ’ ಉದ್ಭವಿಸಬೇಕಾದ ಸಂದರ್ಭಗಳು ಸೃಷ್ಟಿಯಾಗುತ್ತಾ ಬಂದಿವೆ. ಈಗ ಅಂತಹ ಸಂದರ್ಭ ಮತ್ತೆ ಬಂದಿದೆ. ವೇದಿಕೆಯ ಭಾಷಣಗಳಿಗೆ ಕಿವಿಯಾಗಿ ಬೇಸತ್ತಿರುವ ನಮ್ಮ ಜನಕ್ಕೆ ಈಗ ಬೀದಿಬೀದಿಯಲ್ಲಿ ತಮ್ಮ ಹೆಜ್ಜೆಯ ಜೊತೆಗೆ ಹೆಜ್ಜೆಹಾಕುವ `ನಾಯಕ’ ಬೇಕಾಗಿದ್ದಾರೆ. ಅವರ ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಸ್ಪಂದಿಸಿ ಎನ್ನುವುದು ನನ್ನ ಭಿನ್ನಹ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...