Homeಕರ್ನಾಟಕಸಂತ ಸೇವಾಲಾಲ್‌ರ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್‌ ಶಿಬಿರ ಆಯೋಜನೆ: ಬಂಜಾರ ಮುಖಂಡರ ಆಕ್ರೋಶ

ಸಂತ ಸೇವಾಲಾಲ್‌ರ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್‌ ಶಿಬಿರ ಆಯೋಜನೆ: ಬಂಜಾರ ಮುಖಂಡರ ಆಕ್ರೋಶ

ಸೇವಾಲಾಲ್‌ರ ವಿಚಾರಗಳಿಗೂ ಆರ್‌ಎಸ್‌ಎಸ್‌ ಚಿಂತನೆಗೂ ಯಾವುದೇ ಸಂಬಂಧವಿಲ್ಲ ಎಂದು ಬಂಜಾರ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
- Advertisement -

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಸೇವಾಲಾಲ್ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್ ಶಿಬಿರ ನಡೆಸಲು ಮುಂದಾಗಿರುವುದಕ್ಕೆ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್ ಚಿಂತನೆಗಳಿಗೂ ಸಂತ ಸೇವಾಲಾಲರ ವಿಚಾರಗಳಿಗೂ ಯಾವುದೇ ಸಂಬಂಧವಿಲ್ಲ. ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಆರ್‌ಎಸ್‌ಎಸ್‌ಗೆ ಸೇರಿದವನು. ಮಕ್ಕಳಿಗೆ ಬಂದೂಕು ನೀಡಿ ತರಬೇತಿ ಕೊಡುವ ಕೆಲಸವನ್ನು ಸಂಘಪರಿವಾರ ಮಾಡುತ್ತಿದೆ. ಸೇವಾಲಲ್‌ರ ಚಿಂತನೆಗಳು, ಆರ್‌ಎಸ್‌ಎಸ್‌ ಚಿಂತನೆಗಳಿಗೂ ಯಾವುದೇ ಸಂಬಂಧವಿಲ್ಲ. ಅವರ ಜನ್ಮಸ್ಥಳದಲ್ಲಿ ಶಿಬಿರ ನಡೆಸಬಾರದು ಎಂದು ಆಗ್ರಹಿಸಲಾಗುತ್ತಿದೆ.

ಸೆಪ್ಟೆಂಬರ್‌ 11ರಿಂದ 19ರವರೆಗೆ ಆರ್‌ಎಸ್‌ಎಸ್, ‘ಉದ್ಯೋಗಿ ಪ್ರಾಥಮಿಕ ಶಿಕ್ಷಣ ವರ್ಗ’ ಎಂಬ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಂಡಿದೆ. ಬಂಜಾರ ಮಹಾಮಠದಲ್ಲಿ ಆರ್‌ಎಸ್ಎಸ್ ಶಿಬಿರ ಆಯೋಜನೆ‌ ಮಾಡಬಾರದು ಎಂದು ಸೇವಾಲಾಲ್ ಸಮಿತಿಯವರು ಒತ್ತಾಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೇಶದಲ್ಲಿ ಕೋಮುವಾದ ಹರಡುತ್ತಿರುವ ಆರ್‌ಎಸ್ಎಸ್ ಎನ್ನುವ ಸಂಘಟನೆ ದಲಿತ, ಬಂಜಾರರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದೆ‌. ಆರ್‌ಎಸ್‌ಎಸ್ ಶಿಬಿರ ಆಯೋಜನೆಗೆ ಅವಕಾಶ ಮಾಡಿಕೊಡಬಾರದು ಎಂದು ಕರುನಾಡು ಬಂಜಾರ ಸೇವಾ ಸೇನೆಯ ರಾಜ್ಯಾಧ್ಯಕ್ಷ ಲಕ್ಷ್ಮಣ್ ರಾಮಾವತ್ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ದಲಿತರಿಗೆ, ಬಂಜಾರರಿಗೆ ಮೀಸಲಾತಿ ನೀಡಿರುವುದನ್ನು, ಭಾರತದ ಸಂವಿಧಾನವನ್ನು ಒಪ್ಪದಿರುವ ಆರ್‌ಎಸ್‌ಎಸ್‌ನ ಶಿಬಿರ ಏರ್ಪಡಿಸಿರುವುದು ನ್ಯಾಯ ಸಮ್ಮತವಲ್ಲ. ಸಮುದಾಯದಲ್ಲಿ ತಾವೇ ನಾಯಕರೆಂದು ಬಿಂಬಿಸಿಕೊಂಡು ಆರ್‌ಎಸ್‌ಎಸ್ ಓಲೈಕೆ ಮಾಡಲು ಶಾಸಕ ಪಿ.ರಾಜೀವ್‌ ಏಕಪಕ್ಷೀಯವಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಸಮುದಾಯವನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ” ಎಂದು ದೂರಿದರು.

ಇದನ್ನೂ ಓದಿರಿ: ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

“ಸಚಿವ ಪ್ರಭು ಚೌವ್ಹಾಣ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಪ್ಲಾನ್‌ ಮಾಡಿದ್ದಾರೆ. ಸಚಿವ ಸ್ಥಾನ ಪಡೆಯಲು ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ಆರೋಪಿಸಿದರು.

“ಆರ್‌ಎಸ್‌ಎಸ್ ಓಲೈಕೆಗಾಗಿ ಪಿ. ರಾಜೀವ್ ಶಿಬಿರ ಆಯೋಜನೆ ಮಾಡಿಕೊಟ್ಟಿರುವುದು ಅಕ್ಷಮ್ಯ ಅಪರಾಧ. ರಾಜೀವ್ ಅವರನ್ನು ಬಹಿಷ್ಕರಿಸಬೇಕು. ಕೋಮುವಾದಿ ಸಂಘಟನೆಗಳಿಗೆ ಮಠದಲ್ಲಿ ಅವಕಾಶ‌ ಕೊಟ್ಟರೆ ನಾವು ಸುಮ್ಮನಿರಲ್ಲ. ಸೇವಾಲಾಲ್ ಜನ್ಮಸ್ಥಳ ಮಹಾಮಠದಲ್ಲಿ ಆರ್‌ಎಸ್ಎಸ್ ಶಿಬಿರ ಆಯೋಜನೆ ಆದರೆ ಬಂಜಾರ ಅಸ್ಮಿತೆಯನ್ನು ನಾಶಪಡಿಸಿದಂತೆ” ಎಂದು ಆತಂಕ ವ್ಯಕ್ತಪಡಿಸಿದರು.

“ಮಹಾಮಠದಲ್ಲಿ ಯಾವುದೇ ರಾಜಕೀಯ ಸಂಘಟನೆಗಳಿಗೆ ಅವಕಾಶ ಕೊಡುವುದಿಲ್ಲ. ಇಲ್ಲಿಯವರೆಗೆ ಯಾವುದೇ ಪಕ್ಷದ ಸಮ್ಮೇಳನ, ಸಂಘಟನೆಗಳಿಗೆ ಅವಕಾಶ ನೀಡಿಲ್ಲ.‌ ಇಂದು ಆರ್‌ಎಸ್‌ಎಸ್‌ನವರು ಬಂದಿದ್ದಾರೆ. ನಾಳೆ ಬಿಜೆಪಿಯವರು, ನಾಡಿದ್ದು ಕಾಂಗ್ರೆಸ್‌ನವರು ಬರುತ್ತಾರೆ. ಹೀಗಾಗಲು ಬಿಡುವುದಿಲ್ಲ. ಈ ಶಿಬಿರ ನಿಲ್ಲದಿದ್ದರೆ ಸೇವಾಲಾಲ್ ಜನ್ಮಸ್ಥಳದ‌ ಎದುರು ಹೋರಾಟ ಮಾಡುವುದು ನಿಶ್ಚಿತ” ಎಂದು ಎಚ್ಚರಿಕೆ ನೀಡಿದರು.

ಸೂರಗೊಂಡನಕೊಪ್ಪ ಬಂಜಾರರ ಧಾರ್ಮಿಕ ಕ್ಷೇತ್ರ. ಇಲ್ಲಿ ನಮ್ಮ ವೃದ್ಧರಿಗೆ, ಭಕ್ತಾದಿಗಳಿಗೆ ಆಶ್ರಯ ಕೊಡಬೇಕು. ಸಮುದಾಯದ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಕೇಂದ್ರಗಳನ್ನು ಇಲ್ಲಿ ತೆರೆಯಬೇಕು ಎಂಬುದು ನಮ್ಮ ಉದ್ದೇಶ. ಇದನ್ನು ಮಾಡುವುದು ಬಿಟ್ಟು ಮತೀಯವಾದಿ ಸಂಘಟನೆಯ ಶಿಬಿರ ನಡೆಸಲು ಮುಂದಾಗಿದ್ದಾರೆ ಎಂದರು.

“ಸಮುದಾಯದ ಜನಪ್ರತಿನಿಧಿಗಳು ಈ ಕುರಿತು ಪ್ರತಿಕ್ರಿಯೆ ನೀಡಬೇಕಿದೆ. ನಾವು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಚರ್ಚೆ ಹುಟ್ಟಿಕೊಂಡಿದೆ. ಶಿಬಿರ ನಡೆಸಬೇಕೋ ಬೇಡವೋ ಎಂಬ ಚರ್ಚೆ ನಡೆಸಲು ಮಹಾಮಠ ಸಮಿತಿ ಆಗಸ್ಟ್‌ 21ರಂದು ಸಭೆ ನಡೆಸಲು ಮುಂದಾಗಿದೆ” ಎಂದು ಮಾಹಿತಿ ನೀಡಿದರು.

“ಸಂತ ಸೇವಾಲಾಲರ ಚಿಂತನೆಗೂ ಆರ್‌ಎಸ್‌ಎಸ್ ಚಿಂತನೆಗಳೂ ಯಾವುದೇ ಸಂಬಂಧವಿಲ್ಲ. ಆರ್‌ಎಸ್‌ಎಸ್‌ನವರಿಗೆ ನಮ್ಮ ಸಂಸ್ಕೃತಿಯ ಕುರಿತು ಒಂಚೂರು ಗೊತ್ತಿಲ್ಲ. ನಮ್ಮ ಸಂಸ್ಕೃತಿಯೇ ಬೇರೆ. ಅವರ ಸಂಸ್ಕೃತಿಯೇ ಬೇರೆ. ಮಕ್ಕಳ ಕೈಗೆ ಗನ್ ನೀಡಿ ಪ್ರಾಕ್ಟೀಸ್ ಮಾಡಿಸಿದ ಉದಾಹರಣೆಗಳನ್ನು ನೋಡಿದ್ದೇವೆ. ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಕೊಂದ ಗೋಡ್ಸೆ ಆರ್‌ಎಸ್‌ಎಸ್‌ನವನು. ಆರ್‌ಎಸ್‌ಎಸ್‌ ಸಂಸ್ಕೃತಿಯನ್ನು ನಮ್ಮ ಸಂಸ್ಕೃತಿಯಲ್ಲಿ ಅಳವಡಿಸಿಕೊಳ್ಳಲು ನಾವು ಸಿದ್ಧರಿಲ್ಲ” ಎಂದು ಸ್ಪಷ್ಟಪಡಿಸಿದರು. ಈ ಕುರಿತು ಪತ್ರಿಕಾಗೋಷ್ಠಿಯನ್ನು ಅವರು ನಡೆಸಿದ್ದಾರೆ.

ಇದನ್ನೂ ಓದಿರಿ: ಉಡುಪಿ: ‘ಹಿಂದೂರಾಷ್ಟ್ರ’ ಎಂದಿರುವ ಪ್ಲೆಕ್ಸ್‌ಗೆ ಪೊಲೀಸ್ ಭದ್ರತೆ; ಸಾವರ್ಕರ್‌‌ ಫೋಟೋ ವೈಭವೀಕರಣ!

ಮತ್ತೊಬ್ಬ ಬಂಜಾರ ಮುಖಂಡರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ಸೂರಗೊಂಡನಕೊಪ್ಪ ಇಡೀ ಬಂಜಾರ ಜನಾಂಗಕ್ಕೆ ಸೇರಿದ ಧಾರ್ಮಿಕ ಸ್ಥಳವೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ಸ್ಥಿರಾಸ್ತಿಯಲ್ಲ. ಸೂರಗೊಂಡನಕೊಪ್ಪದಲ್ಲಿ ರೆಜಿಸ್ಟರ್ಡ್ ಮಹಾಮಠ ಸಮಿತಿಯಿದೆ. ಈ ರೀತಿಯ ಶಿಭಿರವನ್ನು ನಡೆಸುವುದಾದರೆ ಆ ಸಮಿತಿಗೆ ಮನವಿ ಮಾಡಬೇಕು, ಈ ಶಿಬಿರದ ಅಜೆಂಡಾ ಏನೆಂದು ತಿಳಿಸಬೇಕು. ಆಗ ಇದಕ್ಕೆ ಅನುಮತಿ ಕೊಡಬೇಕೋ ಬೇಡವೋ ಎನ್ನುವುದನ್ನು ಸಮಿತಿ ತೀರ್ಮಾನ ಮಾಡುತ್ತದೆ. ಅದನ್ನು ಬಿಟ್ಟು ಸಮಿತಿಯ ಅಪ್ಪಣೆಯೇ ಇಲ್ಲದೆ ಅವರ ಗಮನಕ್ಕೆ ಬಾರದೆಯೇ ಬಿತ್ತಿ ಪತ್ರಗಳನ್ನು ಪ್ರಿಂಟ್ ಮಾಡಿ ಹಂಚುತ್ತಾರೆಂದರೆ ಇದು ಅಕ್ಷಮ್ಯ ಅಪರಾಧ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಸೂರಗೊಂಡನಕೊಪ್ಪ ಮಹಾಮಠ ಸಮಿತಿಯು ಕೂಡಲೇ ಕಾನೂನು ರೀತಿ ಕ್ರಮ ಜರುಗಿಸಬೇಕು ಇಲ್ಲವಾದರೆ ಮುಂದೆ ಬೇರೆ ಬೇರೆ ಸಂಘಟನೆಗಳು ಅಲ್ಲಿ ತಮ್ಮ ಸಿದ್ಧಾಂತವನ್ನು ಹೇರುವ ಕಾರ್ಯಕ್ರಮವನ್ನು ನಡೆಸಲು ಅನುಮತಿ ಕೇಳಿಕೊಂಡು ಬಂದಾಗ ಸಮಿತಿಯು ಅದರಿಂದಾಗುವ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇಡೀ ಬಂಜಾರ ಸಮುದಾಯ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಪೇಚಿಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಈ ಹಿಂದೆ ಯಾವುದೇ ಪಕ್ಷದ ಆಡಳಿತವಿದ್ದರೂ ಅನೇಕ ಅಧ್ಯಕ್ಷರುಗಳು ಪಕ್ಷಾತೀತವಾಗಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಅಭಿವೃದ್ಧಿ ಮಾಡಿದ್ದಾರೆ. ಇಂದು ಸೂರಗೊಂಡನಕೊಪ್ಪದ ಭಾಯಾಘಡ್ ಈ ಹಂತಕ್ಕೆ ಬರಬೇಕಾದರೆ ಅನೇಕ ಅಧಿಕಾರಿಗಳ, ರಾಜಕಾರಣಿಗಳ, ಸನುದಾಯದ ಹಿರಿಯರ, ಸ್ಥಳೀಯರ ಪರಿಶ್ರಮವಿದೆ ಎನ್ನುವ ಅರಿವು ಎಲ್ಲರಲ್ಲೂ ಇರಲಿ ಎಂದು ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

9 COMMENTS

  1. ಬ್ರಾಹ್ಮಣರಲ್ಲದ, ಬೇರೆಲ್ಲಾ ಸಾದುಸಂತರ, ಸ್ವಾಮೀಜಿಗಳ, ಮಟಾದೀಶರ ಹೆಸರು ಮತ್ತು ಕೊಡುಗೆಯನ್ನು ನಿರ್ನಾಮ ಮಾಡಿ, ಮುಂದಿನ ಪೀಳಿಗೆಗೆ ಅವರ ಹೆಸರೂ ಸಹ ದಕ್ಕಬಾರದು, ಎಂಬುದು ಮನುವಾದಿಗಳ ಹಿಡನ್ ಅಜೆಂಡಾ. ಇದನ್ನು ಅವರು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.

  2. ಸರಿಯಾಗಿ ಹೇಳಿದರಿ ಬ್ರೋ …
    ಬಂಜಾರಾ ಸಮಾಜವನ್ನು SC ST ಯಿಂದ ತೆಗದಾಕಬೇಕು ಎಂಬ ಒಳಸಂಚು ಈ ಮನೊವಾದಿಗಳದೆ ಅಲ್ಲವೇ? ..

  3. ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಆದರ್ಶ ಪುರುಷರಾಗಿದ್ದಾರೆ. ಅವರ ಚಿಂತನೆಗಳು ಸಮುದಾಯದ ಅಭಿವೃದ್ಧಿಗೆ ಕಾರಣವಾಗಿದೆ ಆದರೆ ಆರ್ ಎಸ್ ಎಸ್ ವಿಚಾರಧಾರೆಗಳು ಸಮಾಜದಲ್ಲಿ ಕೋಮುಗಲಭೆಯನ್ನು ಸೃಷ್ಟಿ ಮಾಡಿ ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ ಇಂತಹ ಸಂಘಟನೆಗಳಿಂದ ಕಿಂಚಿತ್ತು ಪ್ರಯೋಜನವಾಗುವುದಿಲ್ಲ.

  4. RSS ಬಗ್ಗೆ ಬಂಜಾರ ಸಮುದಾಯಕ್ಕೆ ಪ್ರತ್ಯೇಕವಾಗಿ ಯುವಕರಿಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ, RSS ಅದು ಒಂದು ಮನುವಾದಿ ಸಿದ್ಧಾಂತದ ಆಧಾರದಲ್ಲಿ ಸ್ಥಾಪಿಸಿಕೊಂಡ ಸಂಘಟನೆ ಅದು ಕಳೆದ 75 ವರ್ಷದಲ್ಲಿ ಈ ದೇಶದಲ್ಲಿ ಸಹೋದರತೆಯಿಂದ ಜೀವಿಸಲು ಯಾರನ್ನೂ ಬಿಡಲಿಲ್ಲ

  5. ನೂರಾರು ವರ್ಷಗಳಿಂದ ಈ ಸಮುದಾಯ ಮೇಲ್ವರ್ಗದವರಿಂದ ತುಳಿತಕ್ಕೆ ಒಳಗಾಗುತ್ತಲೇ ಬಂದಿದೆ… ಉಳುವವನೇ ಭೂಮಿಯ ಒಡೆಯ ಯೋಜನೆಯ ಫಲ ಮತ್ತು ಬಾಬಾ ಸಾಹೇಬರ ಸಂವಿಧಾನದ ಫಲವಾಗಿ ಇತ್ತೀಚಿನ ಹತ್ತರಿಂದ ಹದೈನೈದು ವರ್ಷಗಳಲ್ಲಿ ಬಂಜಾರ ಸಮುದಾಯ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ… ಅಂತಹದ್ದರಲ್ಲಿ ಗೆದ್ದ ಎತ್ತಿನ ಬಾಲ ಹಿಡಿಯುವಂತೆ ಈ ಸಮುದಾಯದ ಮಾತಲ್ಲಿ ಮೋಡಿ ಮಾಡುವ ರಾಜಕಾರಣಿಗಳ ಮಾತನ್ನು ಕೇಳಿ ಒಪ್ಪಿಗೆ ನೀಡದರೆಂದರೆ ಒಲೈಕೆಯ ರಾಜಕಾರಣಿಗಳು ಹಣ ಮತ್ತು ಪದವಿ ಪಡೆಯುತ್ತಾರೆ. ಆದರೆ ಈ ಸಮುದಾಯ ಬ್ರಾಹ್ಮಣ್ಯದ ಮತ್ತು ಬ್ರಾಹ್ಮಣರ ಗುಲಾಮರಾಗಬೇಕಾಗಬಹುದು..ಈ ಸಮುದಾಯದ ಕೆಲವರು ಈಗಾಗಲೇ ಅವರ ಸಿದ್ದಾಂತಗಳಿಗೆ ಪ್ರಭಾವಿತರಾಗಿ ಅವರ ಕಾಲ ಕಸವಾಗಿ ಬಿದ್ದಿದ್ದಾರೆ… ಮುಂದೊಂದು ದಿನ ಮನುಶಾಸ್ತ್ರವನ್ನೇ ಸಂವಿಧಾನವೆಂದು ನಂಬಿಸಿ ಬಿಡುತ್ತಾರೆ. ಮತ್ತೆ ಮನುವಿನ ಕಾಲದ ಶೋಷಣೆಗೆ ನಾವೆಲ್ಲರೂ ಒಳಗಾಗಬೇಕಾಗುತ್ತದೆ… ಎಚ್ಚರ ಈ ಹಿಂದೆ ನಮ್ಮವರಿಗೆ ಇವರಿಂದಲೇ ಶೋಷಣೆಗಳಾಗಿದ್ದನ್ನು ಮರಿಯಬೇಡಿ

  6. ನೂರಾರು ವರ್ಷಗಳಿಂದ ಈ ಸಮುದಾಯ ಮೇಲ್ವರ್ಗದವರಿಂದ ತುಳಿತಕ್ಕೆ ಒಳಗಾಗುತ್ತಲೇ ಬಂದಿದೆ… ಉಳುವವನೇ ಭೂಮಿಯ ಒಡೆಯ ಯೋಜನೆಯ ಫಲ ಮತ್ತು ಬಾಬಾ ಸಾಹೇಬರ ಸಂವಿಧಾನದ ಫಲವಾಗಿ ಇತ್ತೀಚಿನ ಹತ್ತರಿಂದ ಹದೈನೈದು ವರ್ಷಗಳಲ್ಲಿ ಬಂಜಾರ ಸಮುದಾಯ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ… ಅಂತಹದ್ದರಲ್ಲಿ ಗೆದ್ದ ಎತ್ತಿನ ಬಾಲ ಹಿಡಿಯುವಂತೆ ಈ ಸಮುದಾಯದ ಮಾತಲ್ಲಿ ಮೋಡಿ ಮಾಡುವ ರಾಜಕಾರಣಿಗಳ ಮಾತನ್ನು ಕೇಳಿ ಒಪ್ಪಿಗೆ ನೀಡದರೆಂದರೆ ಒಲೈಕೆಯ ರಾಜಕಾರಣಿಗಳು ಹಣ ಮತ್ತು ಪದವಿ ಪಡೆಯುತ್ತಾರೆ. ಆದರೆ ಈ ಸಮುದಾಯ ಬ್ರಾಹ್ಮಣ್ಯದ ಮತ್ತು ಬ್ರಾಹ್ಮಣರ ಗುಲಾಮರಾಗಬೇಕಾಗಬಹುದು..ಈ ಸಮುದಾಯದ ಕೆಲವರು ಈಗಾಗಲೇ ಅವರ ಸಿದ್ದಾಂತಗಳಿಗೆ ಪ್ರಭಾವಿತರಾಗಿ ಅವರ ಕಾಲ ಕಸವಾಗಿ ಬಿದ್ದಿದ್ದಾರೆ… ಮುಂದೊಂದು ದಿನ ಮನುಶಾಸ್ತ್ರವನ್ನೇ ಸಂವಿಧಾನವೆಂದು ನಂಬಿಸಿ ಬಿಡುತ್ತಾರೆ. ಮತ್ತೆ ಮನುವಿನ ಕಾಲದ ಶೋಷಣೆಗೆ ನಾವೆಲ್ಲರೂ ಒಳಗಾಗಬೇಕಾಗುತ್ತದೆ… ಎಚ್ಚರ ಈ ಹಿಂದೆ ನಮ್ಮವರಿಗೆ ಇವರಿಂದಲೇ ಶೋಷಣೆಗಳಾಗಿದ್ದನ್ನು ಮರೆಯಬೇಡಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...