ಆರೆಸ್ಸೆಸ್ ಕುರಿತು ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿರುವ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಆರೆಸ್ಸೆಸ್ ದೇಶದ ಆರ್ಥಿಕತೆಗೆ ವಂಚಿಸುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಟ್ವೀಟ್
“ಭಾರತೀಯ ಮಾಧ್ಯಮಗಳು ಎಂದಿಗೂ ಮುಟ್ಟದ ಒಂದು ನಿರ್ಣಾಯಕ ಕಥೆ ಇಲ್ಲಿದೆ.
ಈ “ವ್ಯಕ್ತಿಗಳ ಸಂಘ” ಎಂದು ಕರೆಯಲ್ಪಡುವ ಸಂಸ್ಥೆಯು 2,500 ಕ್ಕೂ ಹೆಚ್ಚು ಅಂಗಸಂಸ್ಥೆಗಳ ಜಾಗತಿಕ ಜಾಲವನ್ನು ನಿರ್ಮಿಸಿದೆ. ಈ ರಂಗಗಳ ಮೂಲಕ, ಆರ್‌ಎಸ್‌ಎಸ್ ತನ್ನ ವಿಭಜಕ ಕಾರ್ಯಸೂಚಿಗೆ ಇಂಧನ ನೀಡಲು “ಗುರು ದಕ್ಷಿಣೆ” ಸಂಗ್ರಹಿಸುತ್ತದೆ.
ವಿಶ್ವದ ಅತಿದೊಡ್ಡ ಎನ್‌ಜಿಒ ಹುಚ್ಚನಂತೆ ಓಡುತ್ತಿದೆ, ಹಣವನ್ನು ಅಕ್ರಮವಾಗಿ ವರ್ಗಾಯಿಸುತ್ತಿದೆ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ.”
ಭಾರತ ಸೇರಿದಂತೆ ವಿಶ್ವದಾದ್ಯಂತ 2500ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿರುವ ಆರೆಸ್ಸೆಸ್ ಎಂಬ ಜನರ ಗುಂಪು ತನ್ನ ದೇಶವಿರೋಧಿ ಕೃತ್ಯಗಳಿಗೆ ಈ ಅಂಗಸಂಸ್ಥೆಗಳ ಮೂಲಕ ಹಣಕಾಸನ್ನು ಒದಗಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಆರೆಸ್ಸೆಸ್ ನೋಂದಣಿ ಕುರಿತು ಪ್ರಶ್ನೆ ಎತ್ತುವ ಮೂಲಕ ದೇಶದಾದ್ಯಂತ ಆರೆಸ್ಸೆಸ್ ಕುರಿತು ಚರ್ಚೆಯಾಗಲು ಕಾರಣವಾಗಿದ್ದರು. ಅಲ್ಲದೇ ಆರೆಸ್ಸೆಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ “ನಾವು ನೋಂದಣಿಯಾಗಬೇಕಿಲ್ಲ, ನಾವು ಕೇವಲ ಜನರ ಗುಂಪು ಅಷ್ಟೆ, ನಮಗೆ ಗುರುದಕ್ಷಿಣೆ ಮೂಲಕ ಹಣ ಸಂಗ್ರಹ ಮಾಡಿಕೊಳ್ಳಲಾಗುತ್ತದೆ” ಎಂದು ಉತ್ತರಿಸಿದ್ದರು.


ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಆರೆಸ್ಸೆಸ್ ನೋಂದಣಿ, ಹಣಕಾಸ ಅವ್ಯವಹಾರ ಸೇರಿದಂತೆ ಚಟುವಟಿಕೆಗಳ ಕುರಿತು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


