Homeಮುಖಪುಟನಿಮಗಿದು ಗೊತ್ತೆ? ಸಿಖ್ ನರಮೇಧವನ್ನು RSSನ ನಾನಾ ದೇಶ್ ಮುಖ್ ಸಮರ್ಥಿಸಿಕೊಂಡಿದ್ದರು

ನಿಮಗಿದು ಗೊತ್ತೆ? ಸಿಖ್ ನರಮೇಧವನ್ನು RSSನ ನಾನಾ ದೇಶ್ ಮುಖ್ ಸಮರ್ಥಿಸಿಕೊಂಡಿದ್ದರು

1984ರ ಸಿಖ್ ನರಮೇಧದಲ್ಲಿ RSS ನ ಪಾತ್ರ : ಮುಚ್ಚಿಹೋದ ಇತಿಹಾಸದ ಕರಾಳ ಪುಟಗಳು

- Advertisement -
- Advertisement -

| ಶಿವಸುಂದರ್ |

2002ರ ಗುಜರಾತ್ ನರಮೇಧದ ವಿಚಾರ ಬಂದಾಗಲೆಲ್ಲಾ, ಬಿಜೆಪಿಯು 1984ರ ಸಿಖ್ ನರಮೇಧದ ವಿಚಾರವನ್ನು ಎತ್ತುತ್ತದೆ. ಕಾಂಗ್ರೆಸ್ ಅದಕ್ಕೆ ಉತ್ತರ ಕೊಡಲೇಬೇಕು. ಆದರೆ, 1984ರ ನರಮೇಧದಲ್ಲೂ ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ ನ ಪಾತ್ರ ಬಹಳಷ್ಟು ಜನರಿಗೆ ಗೊತ್ತಿಲ್ಲ.  ಇದರ ಬಗ್ಗೆ ಗೌರಿಲಂಕೇಶ್ ಪತ್ರಿಕೆಯಲ್ಲಿ ಶಿವಸುಂದರ್ ಅವರು 2009ರ  ಏಪ್ರಿಲ್ 29ರಂದು ಬರೆದ ಮಹತ್ವದ ಲೇಖನವನ್ನು ನಾನುಗೌರಿ.ಕಾಂನ  ಓದುಗರಿಗಾಗಿ ಪುನರ್ ಪ್ರಕಟಿಸುತ್ತಿದ್ದೇವೆ.

ಚಪ್ಪಲಿ ಪೂಜೆಯಾಗದ ಹೊರತು ನಮ್ಮ ರಾಜಕಾರಣಿಗಳು ಪಾಠ ಕಲಿಯುವುದಿಲ್ಲವೆಂಬುದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 1984ರಲ್ಲಿ ನಡೆದ ಘನಘೋರ ಸಿಖ್ ನರಮೇಧಕ್ಕೆ ನೇತೃತ್ವ ಕೊಟ್ಟು ಹಲವಾರು ಸಿಖ್ಖರನ್ನು ಕಡಿದುರುಳಿಸಿದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್‍ಗೆ ಈ ಬಾರಿಯೂ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿತ್ತು. ಗಾಯಕ್ಕೆ ಬರೆ ಎಳೆಯುವಂತೆ ಸಿಬಿಐ ಎಂಬ ಕೇಂದ್ರ ಸರ್ಕಾರದ ಕೈಗೊಂಬೆ ತನಿಖಾ ಸಂಸ್ಥೆ ಸಿಖ್ ನರಮೇಧದಲ್ಲಿ ಟೈಟ್ಲರ್ ಭಾಗವಹಿಸಿದ್ದು ಸೂರ್ಯನ ಬೆಳಕಷ್ಟೆ ಸತ್ಯವಾಗಿದ್ದರೂ ಆತನ ವಿರುದ್ಧ ಯಾವುದೇ ಸಾಕ್ಷಿ ಇಲ್ಲವೆಂದು  ಕ್ಲೀನ್ ಚಿಟ್ ಕೊತ್ತುಬಿಟ್ಟಿತು. ಇದು ದೇಶದೆಲ್ಲೆಡೆ ಸಿಖ್ಖರ ಅಪಾರ ಪ್ರತಿಭಟನೆಗೆ ಕಾರಣವಾಯಿತು.

ಗೃಹಮಂತ್ರಿ ಚಿದಂಬರಂ ಪತ್ರಿಕಾಗೋಷ್ಠಿಯೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದಿದ್ದರಿಂದ ಕೆರಳಿದ ‘ದೈನಿಕ್ ಜಾಗರಣ್’ ಪತ್ರಿಕೆಯ ವರದಿಗಾರ ಜರ್ನೈಲ್ ಸಿಂಗ್ ಚಿದಂಬರಂ ಕಡೆಗೆ ಚಪ್ಪಲಿ ತೂರಿದ್ದು ಈ ಪ್ರತಿಭಟನೆಗಳ ಮುಂದುವರಿಕೆಯೇ ಆಗಿತ್ತು. ಪಂಜಾಬ್‍ನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತಿತ್ತು. ಆದರೆ  ಈ ಚಪ್ಪಲಿ ಪ್ರಕರಣ ಫಲಿತಾಂಶದ ಮೇಲೆ ಕೆಟ್ಟ ಪ್ರಭಾವ ಬೀರಬಹುದೆಂದು ಹೆದರಿ ಟೈಟ್ಲರ್ ಮತ್ತು ಸಜ್ಜನ್ ಕುಮಾರ್‍ರನ್ನು ಕೊನೆಗೂ ಕಾಂಗ್ರೆಸ್ ಕೈಬಿಟ್ಟಿದೆ. ಆದರೆ ಇದೂ ಸಹ ಅವಕಾಶವಾದಿ ರಾಜಕಾರಣವೇ ಹೊರತು ಪಶ್ಚಾತ್ತಾಪದ ರಾಜಕಾರಣ ವೇನಲ್ಲ ಎಂಬುದು ಎಳೆಮಕ್ಕಳಿಗೂ ಅರ್ಥವಾಗುತ್ತದೆ.

ಆದರೆ ಒಟ್ಟಾರೆ  1984ರ ಸಿಖ್ ನರಮೇಧದ ಪ್ರಕರಣದಲ್ಲಿ ಕಾಂಗ್ರೆಸ್‍ಗಿಂತ ಹೆಚ್ಚಿಗೆ ಅವಕಾಶವಾದದಿಂದ ವರ್ತಿಸುತ್ತಿರುವುದು ಆರೆಸ್ಸೆಸ್ ಮತ್ತು ಬಿಜೆಪಿ ಗಳು. ಗುಜರಾತ್‍ನಲ್ಲಿ ಸಂಘ ಪರಿವಾರ ನಡೆಸಿದ ಮುಸ್ಲಿಮರ ಮಾರಣಹೋಮದ ಬಗ್ಗೆ ಬಿಜೆಪಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದಾಗಲೆಲ್ಲ ಕಾಂಗ್ರೆಸ್‍ನವರು ಸಿಖ್ ನರಮೇಧ ನಡೆಸಲಿಲ್ಲವೇ ಎಂದು ಪ್ರತಿದಾಳಿ ನಡೆಸಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳುತ್ತಾ ಬಂದಿದ್ದಾರೆ. ಅದರಲ್ಲೂ 1999ರಿಂದ ಬಿಜೆಪಿ ಪಕ್ಷದ ಆಪ್ತಮಿತ್ರನಾಗಿದ್ದ ಮಾಜಿ ರಕ್ಷಣಾ ಸಚಿವ ಮತ್ತು ಮಾಜಿ ಸಮಾಜವಾದಿ ಜಾರ್ಜ್ ಫರ್ನಾಂಡಿಸ್‍ರವರಂತೂ ಗುಜರಾತ್ ಪಾಪದಿಂದ ಬಿಜೆಪಿ ಯನ್ನು ರಕ್ಷಿಸಲು 84ರ ಸಿಖ್ ನರಮೇಧವನ್ನು ಪ್ರತ್ಯಾಸ್ತ್ರವನ್ನಾಗಿ ಬಳಸುವುದರಲ್ಲಿ ನಿಸ್ಸೀಮರಾಗಿದ್ದರು. 2002ರಲ್ಲಿ ಸಂಸತ್‍ನಲ್ಲಿ ಪೋಟಾ ಬಗ್ಗೆ ನಡೆದ ಚರ್ಚೆ ಯಲ್ಲೂ ಜಾರ್ಜ್ ಫರ್ನಾಂಡಿಸರು   ಸಮಾಜವಾದಿಯಾಗಿದ್ದಾಗ ಕಲಿತ ವಾಕ್ಚಾ ತುರ್ಯವನ್ನೆಲ್ಲಾ ಬಳಸಿಕೊಂಡು  ಸಿಖ್  ನರಮೇಧದ ಮುಂದೆ ಗುಜರಾತ್ ನರಮೇಧ ಏನೂ ಅಲ್ಲವೆಂದು ವಾದಿಸಿದ್ದರು.

ಆದರೆ 84ರ ನರಮೇಧದ ಬಗ್ಗೆ ಸಂಘ ಪರಿವಾರದ ನಿಲುವು ಮತ್ತು ಪಾತ್ರವೇನಾಗಿತ್ತು ಎಂಬುದನ್ನು ಮಾತ್ರ ಈ ಜಾರ್ಜ್ ಮತ್ತು ಸಂಘಪರಿವಾರ ಎರಡೂ ಮುಚ್ಚಿಹಾಕುತ್ತಿವೆ. ವಾಸ್ತವವಾಗಿ 1984ರಲ್ಲಿ ಜಾರ್ಜ್ ಫರ್ನಾಂಡಿಸರು ಇನ್ನೂ ಸಂಘ ಪರಿವಾರದ ಸನಿಹ ಸುಳಿಯದೇ ಇದ್ದಾಗ ಪ್ರತೀಕ್ಷಾ ಎಂಬ  ಹಿಂದಿ ವಾರಪತ್ರಿಕೆಯನ್ನು ಹೊರತರುತ್ತಿದ್ದರು. ಅದರ 1984ರ ನವಂಬರ್ 25ರ ಸಂಚಿಕೆಯಲ್ಲಿ ಸಿಖ್ ಹತ್ಯಾಕಾಂಡದಲ್ಲಿ ಆರೆಸ್ಸೆಸ್‍ನ ಪಾತ್ರದ ಬಗ್ಗೆ ಫರ್ನಾಂಡಿಸರು ‘Indira Congress-RSS collusion’ (ಇಂದಿರಾ ಕಾಂಗ್ರೆಸ್ ಮತ್ತು ಆರೆಸ್ಸೆಸ್‍ಗಳ ಒಳ ಒಪ್ಪಂದ) ಎಂಬ ಲೇಖನವನ್ನು ಬರೆದಿದ್ದರು. ಅಲ್ಲದೆ ಸಿಖ್ ಹತ್ಯಾಕಾಂಡದ ಬಗ್ಗೆ ಆರೆಸ್ಸೆಸ್ ನಿಲುವೇನು ಎಂದು ಆಗಿನ ಆರೆಸ್ಸೆಸ್ ಪ್ರಮುಖರಲ್ಲಿ ಒಬ್ಬರಾದ ನಾನಾ ದೇಶಮುಖ್ ಎಂಬುವರು ಗುರು ನಾನಕ್ ದಿವಸವಾದ ನವಂಬರ್ 8, 2004ರಂದು ಎಲ್ಲಾ ರಾಜಕೀಯ ಪಕ್ಷಗಳಿಗೂ ಕಳಿಸಿದ ಪತ್ರವೊಂದನ್ನು ಯಥಾವತ್ ಪ್ರಕಟಿಸಿದ್ದರು.

ಅಷ್ಟು ಮಾತ್ರವಲ್ಲ ಆರೆಸ್ಸೆಸ್‍ನ ಆ ಪತ್ರದ ಬಗ್ಗೆ ಫರ್ನಾಂಡಿಸರು ತಮ್ಮ ಸಂಪಾದಕೀಯದಲ್ಲಿ ಹೀಗೆ ಬರೆದುಕೊಂಡಿದ್ದರು:
“ಈ ಕೆಳಗಿನ ಪತ್ರವನ್ನು ಬರೆದಿರುವವರು ಆರೆಸ್ಸೆಸ್ಸಿನ ಪ್ರಮುಖ ಸಿದ್ಧಾಂತಕರ್ತರು ಮತ್ತು ನೀತಿ ನಿರ್ಣಯ ಮಾಡುವವರೂ ಆಗಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ಅವರು ಈ ದಾಖಲೆಯನ್ನು ಎಲ್ಲಾ ಪ್ರಮುಖ ರಾಜಕಾರಣಿಗಳಿಗೂ ವಿತರಿಸಿದರು. ಇದಕ್ಕೆ ಒಂದು ಐತಿಹಾಸಿಕ ಮಹತ್ವವಿರುವುದರಿಂದ ನಾವು ನಮ್ಮ ಪತ್ರಿಕಾ ನೀತಿಯನ್ನು ಉಲ್ಲಂಘಿಸಿ ಅದರ ಪೂರ್ಣ ಪಾಠವನ್ನು ಪ್ರಕಟಿಸುತ್ತಿದ್ದೇವೆ. ಈ ದಾಖಲೆಯು ಆರೆಸ್ಸೆಸ್ಸಿಗೂ ಮತ್ತು ಇಂದಿರಾ ಕಾಂಗ್ರೆಸ್ಸಿಗೂ ಕುದುರುತ್ತಿರುವ ಗೆಳೆತನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.”
“ಈ ಕೆಳಗಿನ ಪತ್ರವನ್ನು ಬರೆದಿರುವವರು ಆರೆಸ್ಸೆಸ್ಸಿನ ಪ್ರಮುಖ ಸಿದ್ಧಾಂತಕರ್ತರು ಮತ್ತು ನೀತಿ ನಿರ್ಣಯ ಮಾಡುವವರೂ ಆಗಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ಅವರು ಈ ದಾಖಲೆಯನ್ನು ಎಲ್ಲಾ ಪ್ರಮುಖ ರಾಜಕಾರಣಿಗಳಿಗೂ ವಿತರಿಸಿದರು. ಇದಕ್ಕೆ ಒಂದು ಐತಿಹಾಸಿಕ ಮಹತ್ವವಿರುವುದರಿಂದ ನಾವು ನಮ್ಮ ಪತ್ರಿಕಾ ನೀತಿಯನ್ನು ಉಲ್ಲಂಘಿಸಿ ಅದರ ಪೂರ್ಣ ಪಾಠವನ್ನು ಪ್ರಕಟಿಸುತ್ತಿದ್ದೇವೆ. ಈ ದಾಖಲೆಯು ಆರೆಸ್ಸೆಸ್ಸಿಗೂ ಮತ್ತು ಇಂದಿರಾ ಕಾಂಗ್ರೆಸ್ಸಿಗೂ ಕುದುರುತ್ತಿರುವ ಗೆಳೆತನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.”
ಜಾರ್ಜ್ ಫರ್ನಾಂಡಿಸ್
ಆದರೆ ಫರ್ನಾಂಡಿಸರಿಗೂ ಮತ್ತು ಆರೆಸ್ಸೆಸ್ಸಿಗೂ ಗೆಳೆತನ ಕುದುರಿದ ನಂತರ ಇದರ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಈಗ ಮತ್ತೆ 1984ರ ಸಿಖ್ ನರಮೇಧ ಮತ್ತು 2002ರ ಗುಜರಾತ್ ಹತ್ಯಾಕಾಂಡಗಳನ್ನು ರಾಜಕೀಯ ಪಕ್ಷಗಳು ಅದರಲ್ಲೂ ವಿಶೇಷವಾಗಿ ಬಿಜೆಪಿ ಅಮಾನವೀಯವಾದ ಅವಕಾಶವಾದಿ ರಾಜಕಾರಣವಾದ ವಸ್ತುವನ್ನಾಗಿ ಮಾಡಿಕೊಳ್ಳುತ್ತಿರುವುದರಿಂದ ಈ ಮಹತ್ವದ ದಾಖಲೆಯ ಬಗ್ಗೆ ದೆಹಲಿ ವಿಶ್ವವಿದ್ಯಾಲಯದ ಫ್ರೋಫೆಸರ್ ಆಗಿರುವ ಶಂಸುಲ್ ಇಸ್ಲಾಂರವರು ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ನಾನಾ ದೇಶ್ ಮುಖ್
ನಾನಾ ದೇಶ್‍ಮುಖ್‍ರವರ ಆ ಸುದೀರ್ಘ ಪತ್ರದ ಪೂರ್ಣ ಪಾಠವನ್ನು ಇಲ್ಲಿ ಅಚ್ಚು ಮಾಡಲು ಸಾಧ್ಯವಿಲ್ಲವಾದ್ದರಿಂದ ಸಿಖ್ ನರಮೇಧದ ಬಗ್ಗೆ ಆರೆಸ್ಸೆಸ್ ನಿಲುವುಗಳನ್ನು ಬಯಲುಗೊಳಿಸುವ ಮುಖ್ಯಾಂಶಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ:
1. ಸಿಖ್ಖರ ನರಮೇಧವನ್ನು ಮಾಡಿದವರು ಯಾರೋ ಕಲವು ಸಮಾಜ ವಿರೋಧಿ ಪುಂಡರಲ್ಲ. ಬದಲಿಗೆ ಅದು ಭಾರತದ ಹಿಂದೂಗಳಲ್ಲಿ ಉಂಟಾಗಿದ್ದ ಸಹಜ ಆಕ್ರೋಶದ ಅಭಿವ್ಯಕ್ತಿಯಾಗಿದೆ.
2. ಇಂದಿರಾ ಗಾಂಧಿಯವರನ್ನು ಕೊಂದ ಇಬ್ಬರು ಸಿಖ್ಖರು ಮತ್ತು ಇಡೀ ಸಿಖ್ ಸಮುದಾಯದ ನಡುವೆ ನಾನಾ ದೇಶಮುಖರು ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅವರ ಪ್ರಕಾರ ಇಡೀ ಸಿಖ್ ಸಮುದಾಯದ ಆದೇಶದಂತೆಯೇ ಅವರಿಬ್ಬರೂ ಇಂದಿರಾರವರನ್ನು ಹತ್ಯೆ ಮಾಡಿದ್ದಾರೆ.
3. ‘ಆಪರೇಷನ್ ಬ್ಲೂ ಸ್ಟಾರ್’ ಅತ್ಯಂತ ರಾಷ್ಟ್ರಭಕ್ತಿಯಿಂದ ಕೂಡಿದ ಕಾರ್ಯಾಚರಣೆಯಾಗಿದೆ. ಅದನ್ನು ವಿರೋಧಿಸುವುದು ರಾಷ್ಟ್ರದ್ರೋಹ.
4. ಸಿಖ್ಖರು ತಮ್ಮ ಮೇಲೆ ರಾಷ್ಟ್ರೀಯವಾದಿ ಹಿಂದೂಗಳು ನಡೆಸುತ್ತಿರುವ ದೌರ್ಜನ್ಯಗಳನ್ನು ಸಹಿಸಬೇಕೆ ವಿನಃ ಪ್ರತಿಭಟಿಸಬಾರದು.
5. ಇಂದಿರಾ ಗಾಂಧಿಯವರು ರಾಷ್ಟ್ರದ ದೊಡ್ಡ ನಾಯಕಿಯಾಗಿದ್ದು ಅಂಥವರನ್ನು ಕೊಂದಾಗ ಇಂಥ ಹತ್ಯಾಕಾಂಡಗಳು ಸಂಭವಿಸುವುದು ಸಹಜ.
6. “ದೊಡ್ಡ ಮರವೊಂದು ಉರುಳಿದಾಗ ಸುತ್ತಮುತ್ತಲಲ್ಲಿ ಕಂಪನ ಉಂಟಾಗುವುದು ಸಹಜ” ಎಂಬ ರಾಜೀವ್ ಗಾಂಧಿ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ.
ಸಿಖ್ ನರಮೇಧವಾಗಿ 25 ವರ್ಷಗಳಾಯಿತು. ಗುಜರಾತ್ ನರಮೇಧವಾಗಿ 7 ವರ್ಷಗಳಾಯಿತು. ಹಳೆಯ ಗಾಯಗಳನ್ನು ಕೆರೆದುಕೊಳ್ಳುವ ಬದಲಿಗೆ ಎಲ್ಲವನ್ನೂ ಮರೆತು ಭವಿಷ್ಯದ ಕಡೆ ನೋಡಬೇಕಲ್ಲವೆ ಎಂದು ಸಂಘಪರಿವಾರದ ಕೆಲವು ಜಾಣ ರಾಜಕಾರಣಿಗಳು ಪ್ರಶ್ನಿಸುತ್ತಾರೆ. ಆದರೆ ಇತಿಹಾಸವನ್ನು ಮರೆತವರು ವರ್ತಮಾನವನ್ನೂ ಅರಿತುಕೊಳ್ಳಲಾರರು ಮತ್ತು ಭವಿಷ್ಯವನ್ನೂ ನಿರ್ಮಿಸಲಾರರು ಎಂಬುದು ಇತಿಹಾಸದಲ್ಲಿ ಪದೇ ಪದೇ ರುಜುವಾತಾಗಿದೆ. “ಸಿಖ್ ನರಮೇಧ ನಡೆದು 25 ವರ್ಷಗಳಾದ ಮೇಲೆ ಈಗೇಕೆ ಅದನ್ನು ಕೆದಕುತ್ತಿದ್ದೀರಿ?” ಎಂದು ಸಿಖ್ ಹತ್ಯಾಕಾಂಡದ ಬಲಿ ಪಶುಗಳಾದವರ ಪರವಾಗಿ ವಾದಿಸಿದ ವಕೀಲರಾದ ಹರ್ವಿಂದರ್ ಸಿಂಗ್ ಫೂಲ್ಕ ಅವರಿಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದರಂತೆ. ಅದಕ್ಕೆ ಅವರು ಕೊಟ್ಟ ದಾರ್ಶನಿಕ ಉತ್ತರ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವಾಗುತ್ತದೆ:
“25 ವರ್ಷಗಳ ಕೆಳಗೆ ನಡೆದದ್ದರ ಬಗ್ಗೆ ಈಗೇಕೆ ಮಾತನಾಡುತ್ತಿದ್ದೀಯಾ ಎಂದು ನನ್ನನ್ನು ಕೇಳಿದವರಿಗೆ 1984ರ ಹತ್ಯಾಕಾಂಡದ ಅರೋಪಿಗಳಿಗೆ ಶಿಕ್ಷೆ ಆಗಿದ್ದರೆ 2002ರ ಗುಜರಾತ್ ಹತ್ಯಾಕಾಂಡ ಸಂಭವಿಸುತ್ತಿರಲಿಲ್ಲ ಎಂದು ನಾನು ಉತ್ತರಿಸುತ್ತೇನೆ. ನೀವು 1984 ಮತ್ತು ಗುಜರಾತನ್ನು ಮರೆತುಬಿಟ್ಟರೆ ಮತ್ತೊಮ್ಮೆ ಅದೇ ರೀತಿಯ ಹತ್ಯಾಕಾಂಡಕ್ಕೆ ಸಿದ್ಧವಾಗಬೇಕಾಗುತ್ತದೆ. ಅಪರಾಧ ನ್ಯಾಯಸಂಹಿತೆಯ ಮೂಲ ಸಿದ್ಧಾಂತವೇ ಶಿಕ್ಷೆ ಏಕೆಂದರೆ ಅದು ಭಾವೀ ಅಪರಾಧಿಗಳು ಅಪರಾಧವನ್ನು ಮಾಡದಂತೆ ಎಚ್ಚರಿಕೆ ನೀಡುತ್ತದೆ. ಆದರೆ ಇಂಥ ಹೀನಾಯ ಅಪರಾಧವನ್ನು ಎಸಗಿದ ರಾಜಕಾರಣಿಗಳು ತಾವು ಕಾನೂನಿಗಿಂತ ದೊಡ್ಡವರು ಎಂಬಂತೆ ಯಾವುದೇ ಶಿಕ್ಷೆ ಇಲ್ಲದೆ ರಾಜಾರೋಷವಾಗಿ ಬೀದಿಗಳಲ್ಲಿ ನಡೆದಾಡುತ್ತಿದ್ದರೆ, ಮುಂದೆಯೂ ಅವರು ಓಟಿಗಾಗಿ ಮತ್ತು ಕುರ್ಚಿಗಾಗಿ ಇಂಥ ಹತ್ಯಾಕಾಂಡಗಳನ್ನು ನಡೆಸುತ್ತಲೇ ಹೋಗುತ್ತಾರೆ. ಇದು ಆಗ ಬಾರದು. ಇದರಿಂದ ಕಾನೂನಿನ ಆಡಳಿತವಾಗಲೀ ಪ್ರಜಾತಂತ್ರ ವಾಗಲೀ ಉಳಿಯುವುದಿಲ್ಲ.”
ನಾನಾ ದೇಶಮುಖರು ಮೇಲಿನ ಪತ್ರವನ್ನು ಬರೆದದ್ದು 1984ರ ನವಂಬರ್ 8ರ ಗುರುನಾನಕ್ ದಿನದಂದು. ದೆಹಲಿಯಲ್ಲಿ ಸಿಖ್ಖರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಹತ್ಯೆ ಮಾಡಿದ್ದು 1984ರ ನವಂಬರ್ 5-8ರ ನಡುವೆ. ಅಂದರೆ ಸಿಖ್ಖರ ಹತ್ಯಾಕಾಂಡ ಬೀದಿಗಳಲ್ಲಿ ನಡೆಯುತ್ತಿರುವಾಗ ಅದನ್ನು ನಿಲ್ಲಿಸಬೇಕೆಂಬ ಯಾವ ಒತ್ತಾಯವನ್ನು ಹಾಕದೆ ಅದನ್ನು ‘ಆಕ್ರೋಶ ಗೊಂಡ ಹಿಂದೂಗಳ ಸಹಜ ವರ್ತನೆ’ ಎಂದು ಸಮರ್ಥಿಸಿಕೊಂಡ ಆರೆಸ್ಸೆಸ್‍ನ ಪಾತ್ರ ಈ ಹತ್ಯಾಕಾಂಡದಲ್ಲಿ ಏನಿತ್ತೆಂಬುದನ್ನು ಕೂಲಂಕಷ ತನಿಖೆಗೆ ಒಳಪಡಿಸಲೇ ಬೇಕಾಗಿದೆ. ಅಲ್ಲದೆ ಬಿಜೆಪಿ ಮತ್ತು ಸಂಘ ಪರಿವಾರ ಸಿಖ್ ಹತ್ಯಾಕಾಂಡವನ್ನು ಗುಜರಾತ್ ನರಮೇಧಕ್ಕೆ ಗುರಾಣಿಯಾಗಿ ಬಳಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಿಖ್ ನರಮೇಧದಲ್ಲಿ ಆರೆಸ್ಸೆಸ್‍ನ ಪಾತ್ರವೇನೆಂಬುದನ್ನು ಕೇವಲ ಸಿಖ್ ಸಮುದಾಯವಲ್ಲ ಇಡೀ ಭಾರತದ ಜನತೆ  ಅರ್ಥ  ಮಾಡಿಕೊಳ್ಳುವ  ಅಗತ್ಯವಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...