HomeಮುಖಪುಟRupee one - Everyone: ಪ್ರತಿ ನಾಗರಿಕ-1 ರೂ. ಮತ್ತು 1 ತಿಂಗಳು ಅಭಿವ್ಯಕ್ತಿ ಸ್ವಾತಂತ್ರ್ಯದ...

Rupee one – Everyone: ಪ್ರತಿ ನಾಗರಿಕ-1 ರೂ. ಮತ್ತು 1 ತಿಂಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಆಂದೋಲನಕ್ಕೆ ಕರೆ

ಸೆಪ್ಟೆಂಬರ್ 2ರಿಂದ ಆರಂಭಿಸಿ ಅಕ್ಟೋಬರ್ 2ರವರೆಗೆ ದೇಶದಲ್ಲಿ 'ಆತ್ಮಸಾಕ್ಷಿಯ ಸ್ವಾತಂತ್ರ್ಯದ' ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಆಂದೋಲನವನ್ನು ಹಮ್ಮಿಕೊಳ್ಳಬೇಕು ಎಂದು ಭೂಷಣ್ ಮನವಿ ಮಾಡಿದ್ದಾರೆ.

- Advertisement -
- Advertisement -

‘ನಾನು ಮಾಡಿದ ಟ್ವೀಟ್‌ಗಳು ನಾಗರಿಕನ ಕರ್ತವ್ಯದ ಭಾಗವಾಗಿತ್ತು, ಆದರೆ ಸುಪ್ರೀಂಕೋರ್ಟು ದುರ್ಬಲವಾಗಬಾರದು ಎಂಬ ಕಾರಣಕ್ಕೆ ಅದನ್ನು ಗೌರವಿಸಿ 1 ರೂ ದಂಡ ಕಟ್ಟುತ್ತೇನೆ’ ಎಂದು ಘೋಷಿಸಿದ ಸುಪ್ರೀಂಕೋರ್ಟಿನ ನ್ಯಾಯವಾದಿ ಪ್ರಶಾಂತ್ ಭೂಷಣ್‌ರ ನಂತರ ಮಾತನಾಡಿದ ಅವರ ಸಹಯೋಗಿಗಳು ಪ್ರತಿ ನಾಗರಿಕ 1 ರೂ (Rupee one – everyone) ಎಂಬ ಹೊಸ ಆಂದೋಲನವನ್ನು ಘೋಷಿಸಿದ್ದಾರೆ.

ಸುಪ್ರೀಂಕೋರ್ಟು ಇಂದು ಬೆಳಿಗ್ಗೆ ಪ್ರಶಾಂತ್ ಭೂಷಣ್‌ರ ಟ್ವೀಟ್‌ಗಳ ವಿಚಾರದಿಂದ ನ್ಯಾಯಾಂಗ ನಿಂದನೆಯ ತೀರ್ಪಿನ ಭಾಗವಾಗಿ 1 ರೂ ದಂಡ ವಿಧಿಸಿತ್ತು.

ಆ ನಂತರ ಸಂಜೆ 4ಕ್ಕೆ ದೆಹಲಿಯ ಪ್ರೆಸ್‌ಕ್ಲಬ್‌ನ ಹೊರ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಶಾಂತ್ ಭೂಷಣ್ ಅವರು 1 ರೂ ದಂಡ ಕಟ್ಟುವುದಾಗಿ ಹೇಳಿದ್ದರು.

ಅವರ ಘೋಷಣೆಯ ನಂತರ ಸ್ವರಾಜ್ ಅಭಿಯಾನದ ಭಾಗವಾಗಿ ಯೋಗೇಂದ್ರ ಯಾದವ್ ಮತ್ತು ‘ನ್ಯಾಯಾಂಗದ ಉತ್ತರದಾಯಿತ್ವ ಮತ್ತು ಸುಧಾರಣೆಗಾಗಿನ ಸಮಿತಿ’ಯ ಭಾಗವಾಗಿ ಅಂಜಲಿ ಭಾರದ್ವಾಜ್ ಮಾತನಾಡಿದರು. ಪ್ರಶಾಂತ್ ಭೂಷಣ್ ಇವೆರಡರಲ್ಲೂ ಮುಖ್ಯಪಾತ್ರ ವಹಿಸಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಯೋಗೇಂದ್ರ ಯಾದವ್‌ ಅವರು ಈ ಸಂದರ್ಭದಲ್ಲಿ ದೇಶದ ಮುಂದೆ ಎರಡು ಮನವಿಗಳನ್ನು ಮುಂದಿಟ್ಟರು. ಒಂದು, ದೇಶದ ಪ್ರತಿಯೊಬ್ಬ ನಾಗರಿಕಳೂ/ನೂ ಒಂದೊಂದು ರೂಪಾಯಿ ನೀಡುವುದರ ಮೂಲಕ ಇಂತಹ ಹೋರಾಟಗಳನ್ನು ಮುಂದುವರೆಸುವುದಕ್ಕಾಗಿ ಒಂದು ನಿಧಿಯನ್ನು ಸ್ಥಾಪಿಸಬೇಕು. ಏಕೆಂದರೆ ಇದು ಪ್ರಶಾಂತ್ ಭೂಷಣ್ ಒಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಲ್ಲ. ದೇಶದಲ್ಲಿ ಜನಸಾಮಾನ್ಯರಿಂದ ಹಿಡಿದು ಚಿಂತಕರವರೆಗೆ ಹಲವರ ಪರಿಸ್ಥಿತಿ ಇದೇ ಆಗಿದೆ.

ಎರಡು, ಸೆಪ್ಟೆಂಬರ್ 2ರಿಂದ ಆರಂಭಿಸಿ ಅಕ್ಟೋಬರ್ 2ರವರೆಗೆ ದೇಶದಲ್ಲಿ ‘ಆತ್ಮಸಾಕ್ಷಿಯ ಸ್ವಾತಂತ್ರ್ಯದ’ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಒಂದು ಆಂದೋಲನವನ್ನು ಹಮ್ಮಿಕೊಳ್ಳಬೇಕು ಎಂಬ ಮನವಿಯನ್ನು ಅವರು ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಪ್ರಶಾಂತ್ ಭೂಷಣ್ ಅವರು. ತಾನು ಮೇಲ್ಮನವಿ ಅಥವಾ ತೀರ್ಪಿನ ಮರುಪರಿಶೀಲನೆಗಾಗಿನ ನನ್ನ ಹಕ್ಕನ್ನು ಕಾದಿರಿಸಿಕೊಂಡೇ ಪ್ರತಿಭಟನೆಯಾಗಿ 1 ರೂ ದಂಡ ಕಟ್ಟುತ್ತಿದ್ದೇನೆ ಎಂದು ಹೇಳಿದರು. ನೀವು 3 ತಿಂಗಳ ಜೈಲು ಅಥವಾ ಕೋರ್ಟ್’ನಿಂದ ಹೊರಹಾಕಿಸಿಕೊಳ್ಳುವುದರ ಬದಲಿಗೆ 1 ರೂ ಕಟ್ಟುವುದನ್ನೇಕೆ ಆಯ್ದುಕೊಂಡಿದ್ದೀರಿ ಎಂಬ ಇನ್ನೊಂದು ಪ್ರಶ್ನೆಗೂ ಅವರು ಉತ್ತರಿಸಿದರು. ಜೈಲಿಗೆ ಹೋಗಬೇಕೆಂಬ ತೀರ್ಪೇ ಬಂದರೆ, ನಾನು ಅದಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದ್ದೆ, ಅದರ ಅರ್ಥ ಜೈಲಿಗೆ ಹೋಗಲು ಬಯಸುತ್ತೇನೆ ಎಂದಲ್ಲ. ಸುಪ್ರೀಂಕೋರ್ಟು ಉಳಿದರೆ ಮಾತ್ರ ಗಣರಾಜ್ಯ ಉಳಿದೀತು ಎಂದು ಅವರು ತಮ್ಮ ಹೇಳಿಕೆಯಲ್ಲಿ ಹೇಳಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಆಂದೋಲನದ ರೂಪುರೇಷೆಗಳ ಕುರಿತು ಯೋಗೇಂದ್ರ ಯಾದವ್‌ ಅವರು ವಿವರಗಳನ್ನು ನೀಡಿಲ್ಲ. ಆ ಕುರಿತು ನಾನುಗೌರಿ.ಕಾಂ ಅವರನ್ನು ಮಾತನಾಡಿಸಿ ಓದುಗರಿಗೆ ತಿಳಿಸಲಿದೆ.


ಇದನ್ನೂ ಓದಿ: ನಾನು ಟ್ವೀಟ್‌ ಮಾಡಿದ್ದು, ನಾಗರಿಕನ ಕರ್ತವ್ಯವಾಗಿತ್ತು. ಆದರೆ ಕೋರ್ಟನ್ನು ಗೌರವಿಸಿ 1 ರೂ ದಂಡ ಕಟ್ಟುತ್ತೇನೆ: ಪ್ರಶಾಂತ್ ಭೂಷಣ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮದ್ರಸಾ ನಿರ್ಮಾಣದ ವದಂತಿ : ಖಾಸಗಿ ಶಾಲಾ ಕಟ್ಟಡ ಕೆಡವಿದ ಅಧಿಕಾರಿಗಳು

ಅನಧಿಕೃತವಾಗಿ ಮದ್ರಸಾ ನಿರ್ಮಿಸಲಾಗುತ್ತಿದೆ ಎಂಬ ವದಂತಿ ಹರಡಿದ ಹಿನ್ನೆಲೆ ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡವನ್ನು ಅಧಿಕಾರಿಗಳು ಬುಲ್ಡೋಝರ್ ಬಳಸಿ ಕೆಡವಿದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್...

ಭೋಪಾಲ್‌| ಪುರಸಭೆಯ ಕಸಾಯಿಖಾನೆಯಲ್ಲಿ ಗೋಮಾಂಸ ಪತ್ತೆ; ಕಾಂಗ್ರೆಸ್‌-ಬಿಜೆಪಿ ಪ್ರತಿಭಟನೆ

ಪುರಸಭೆಯ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆದಿದೆ ಎಂಬುದನ್ನು ಅಧಿಕಾರಿಗಳು ಮತ್ತೆಹಚ್ಚಿದ ನಂತರ ದೊಡ್ಡ ವಿವಾದ ಭುಗಿಲೆದ್ದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಹಿಂದೂ ಬಲಪಂಥೀಯ ಸಂಘಟನೆಗಳು ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಕಾರ್ಯಕರ್ತರಿಂದ...

ಇರಾನ್‌ ದಂಗೆ | ಹತ್ಯೆಗಳು ನಿಂತಿವೆ ಎಂದ ಟ್ರಂಪ್ : ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ವರದಿ ತಳ್ಳಿಹಾಕಿದ ವಿದೇಶಾಂಗ ಸಚಿವ

ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನಾಕಾರರ 'ಹತ್ಯೆಗಳು ನಿಂತಿವೆ' ಎಂದು ಬುಧವಾರ (ಜ.14) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಪ್ರತಿಭಟನಾಕಾರರನ್ನು...

ಮುಂಬೈ ಬಿಎಂಸಿ ಚುನಾವಣೆ 2026: ಚುನಾವಣಾ ಆಯೋಗದ ವೆಬ್‌ಸೈಟ್ ಸ್ಥಗಿತ! ಮತದಾನ ಮಾಡಲು ಸಾಧ್ಯವಾಗದೆ ಪರದಾಡಿದ ನಾಗರಿಕರು

ಮುಂಬೈ: ಬಹು ಕುತೂಹಲಕಾರಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗೆ ಜನವರಿ 15, 2026 ರ ಗುರುವಾರ ಬೆಳಿಗ್ಗೆ 7:30 ಕ್ಕೆ ಮತದಾನ ಪ್ರಾರಂಭವಾಯಿತು, ಮುಂಬೈನಲ್ಲಿ ಚುನಾಯಿತ ನಾಗರಿಕ ಸಂಸ್ಥೆ ಇಲ್ಲದೆ ಸುಮಾರು...

ಮೀರತ್| ದಲಿತ ಮಹಿಳೆ ಕೊಲೆ-ಮಗಳ ಅಪಹರಣ; ಸಂತ್ರಸ್ತ ಕುಟುಂಬವನ್ನು ಸಾರ್ವಜನಿಕ ಸಂಪರ್ಕದಿಂದ ದೂರವಿಟ್ಟ ಪೊಲೀಸರು

ಮೀರತ್‌ನಲ್ಲಿ ಪ್ರಬಲ ಜಾತಿ ಪುರುಷರ ಗುಂಪೊಂದು ದಲಿತ ಮಹಿಳೆಯನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, "ಪೊಲೀಸರು ಮತ್ತು ಬಿಜೆಪಿ ಮುಖಂಡರು ತಮ್ಮನ್ನು ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸಲು ಪ್ರಯತ್ನಿಸುತ್ತಿದೆ, ಪ್ರಮುಖ...

ಮಸೀದಿ, ದರ್ಗಾಗಳನ್ನು ಗುರಿಯಾಗಿಸಿಕೊಂಡು ಪದೇ ಪದೇ ಪಿಐಎಲ್‌ : ಎನ್‌ಜಿಒಗೆ ಹೈಕೋರ್ಟ್ ತರಾಟೆ

ರಾಷ್ಟ್ರ ರಾಜಧಾನಿಯಲ್ಲಿ ಮಸೀದಿ ಮತ್ತು ದರ್ಗಾಗಳು ಅತಿಕ್ರಮಣ ಮಾಡುತ್ತಿವೆ ಎಂದು ಆರೋಪಿಸಿ ಪದೇ ಪದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಕ್ಕಾಗಿ ಸೇವ್ ಇಂಡಿಯಾ ಫೌಂಡೇಶನ್ ಎಂಬ ಸಂಸ್ಥೆಯನ್ನು ದೆಹಲಿ ಹೈಕೋರ್ಟ್ ಬುಧವಾರ...

ಕಾಂಗ್ರೆಸ್‌ಗೆ ಮರಳಲು ಮುಂದಾದ ಬಿಜೆಪಿ ನಾಯಕನ ಮನೆ ಮೇಲೆ ಎಸಿಬಿ ದಾಳಿ

ಕಾಂಗ್ರೆಸ್‌ಗೆ ಮರಳುವ ಇಂಗಿತ ವ್ಯಕ್ತಪಡಿಸಿದ ಎರಡು ದಿನಗಳ ಬಳಿಕ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಮಹೇಂದ್ರಜೀತ್ ಸಿಂಗ್ ಮಾಳವೀಯ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದೆ...

ಬೀದರ್: ಗಾಳಿಪಟದ ದಾರ ಕುತ್ತಿಗೆ ಸೀಳಿ ಸ್ಥಳದಲ್ಲಿ ಪ್ರಾಣ ಬಿಟ್ಟ 48 ವರ್ಷದ ಬೈಕ್ ಸವಾರ

ಬೀದರ್ ಜಿಲ್ಲೆಯ ತಲಮಡಗಿ ಸೇತುವೆ ಬಳಿಯ ರಸ್ತೆಯಲ್ಲಿ ಮಗಳನ್ನು ಕರೆತರಲು ಬೈಕ್ ನಲ್ಲಿ ತೆರಳುತ್ತಿದ್ದ 48 ವರ್ಷದ ವ್ಯಕ್ತಿ ಕೊರಳಿಗೆ ಗಾಳಿ ಪಟದ ದಾರ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.  ಮೃತ...

ಐ-ಪ್ಯಾಕ್ ಮೇಲಿನ ದಾಳಿ: ಟಿಎಂಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಐ-ಪಿಎಸಿಗೆ ಸಂಬಂಧಿಸಿದ ಇತ್ತೀಚಿನ ದಾಳಿಗಳ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪಕ್ಷದ ಫೈಲ್‌ಗಳು ಮತ್ತು ಚುನಾವಣಾ ಸಂಬಂಧಿತ ಡೇಟಾವನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್...

ತೆಲಂಗಾಣ| ಪಂಚಾಯತ್ ಚುನಾವಣೆಯ ನಂತರ 500 ಬೀದಿ ನಾಯಿಗಳ ಸಾಮೂಹಿಕ ಕೊಲೆ; ‘ನಾಯಿ ಮುಕ್ತ ಗ್ರಾಮ’ದ ಭರವಸೆ ನೀಡಿದ್ದ ಅಭ್ಯರ್ಥಿಗಳು

ತೆಲಂಗಾಣದ ಹನಮಕೊಂಡ ಮತ್ತು ಕಾಮರೆಡ್ಡಿ ಜಿಲ್ಲೆಗಳಿಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಜನವರಿಯ ಮೊದಲ ಎರಡು ವಾರಗಳಲ್ಲಿ ಸುಮಾರು 500 ನಾಯಿಗಳನ್ನು ವಿಷ ಹಾಕಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ....