Homeಮುಖಪುಟಉಕ್ರೇನ್ ಮೇಲೆ ರಷ್ಯಾ ದಾಳಿ: 137 ಸಾವುಗಳಾಗಿವೆ ಎಂದು ಉಕ್ರೇನ್

ಉಕ್ರೇನ್ ಮೇಲೆ ರಷ್ಯಾ ದಾಳಿ: 137 ಸಾವುಗಳಾಗಿವೆ ಎಂದು ಉಕ್ರೇನ್

- Advertisement -
- Advertisement -

ಉಕ್ರೇನ್ ಮೇಲೆ ರಷ್ಯಾವು ಎರಡನೇ ದಿನವೂ ಮಿಲಿಟರಿ ಕಾರ್ಯಾಚರಣೆ ಮುಂದುವರೆಸಿದ್ದು ರಾಜಧಾನಿ ಕೈವ್‌ವರೆಗೂ ತಲುಪಿದೆ ಎನ್ನಲಾಗಿದೆ. ರಾಜಧಾನಿಯಲ್ಲಿ ಎರಡು ಸ್ಫೋಟಗಳಾದ ವರದಿಯಾಗಿದ್ದು,  ಗುರುವಾರದಿಂದ ಕನಿಷ್ಠ 137 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿದೆ

ಶುಕ್ರವಾರ ಮುಂಜಾನೆ ಕೇಂದ್ರ ಕೈವ್‌ನಲ್ಲಿ ಎರಡು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಕೈವ್‌ನ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಗುಂಡು ಹಾರಿಸಿದೆ ಆದರೆ ಉಕ್ರೇನ್‌ನ ವಾಯುಸೇನೆಯು ತಿರುಗೇಟು ನೀಡಿದೆ ಎಂದು ಉಕ್ರೇನ್ ಸೇನೆಯು ಹೇಳಿಕೊಂಡಿದೆ.

“ಕೈವ್ ಮೇಲೆ ಭಯಾನಕ ರಷ್ಯಾದ ರಾಕೆಟ್ ದಾಳಿಗಳು ನಡೆಯುತ್ತಿವೆ. ಕಳೆದ ಬಾರಿ ನಮ್ಮ ರಾಜಧಾನಿಯು 1941 ರಲ್ಲಿ ನಾಜಿ ಜರ್ಮನಿಯಿಂದ ದಾಳಿಗೊಳಗಾದಾಗ ಈ ರೀತಿಯ ಪರಿಸ್ಥಿತಿಯನ್ನು ಅನುಭವಿಸಿತು. ಉಕ್ರೇನ್ ಆ ದುಷ್ಟರನ್ನು ಸೋಲಿಸಿತು ಮತ್ತು ಇದನ್ನೂ ಸೋಲಿಸುತ್ತದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎರಡನೆಯ ಮಹಾಯುದ್ಧದ ನಂತರ ಯುರೋಪಿಯನ್ ರಾಜ್ಯದ ಮೇಲೆ ನಡೆದ ಅತಿದೊಡ್ಡ ದಾಳಿಯಲ್ಲಿ ರಷ್ಯಾದ ಆಕ್ರಮಣಕಾರರ ವಿರುದ್ಧ ತನ್ನ ಪಡೆಗಳು ಹೋರಾಡುತ್ತಿರುವಾಗ ತಾನು ಸಹ ರಾಜಧಾನಿ ಕೈವ್‌ನಲ್ಲಿ ಉಳಿಯುವುದಾಗಿ ಪ್ರತಿಜ್ಞೆ ಮಾಡಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.  ಶತ್ರುಗಳು ನನ್ನನ್ನು ನಂಬರ್ ಒನ್ ಗುರಿ, ನನ್ನ ಕುಟುಂಬ ಎರಡನೇ ಗುರಿ ಎಂದು ಪರಿಗಣಿಸಿದ್ದಾರೆ” ಎಂದು ಝೆಲೆನ್ಸ್ಕಿ ವೀಡಿಯೊ ಸಂದೇಶದಲ್ಲಿ ಎಚ್ಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಡರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿ, “ತಕ್ಷಣ ಹಿಂಸಾಚಾರವನ್ನು ನಿಲ್ಲಿಸುವಂತೆ” ಮನವಿ ಮಾಡಿದರು ಎಂದು ವರದಿಯಾಗಿದೆ.

ಉಕ್ರೇನ್‌ನಲ್ಲಿ ಜನಾಂಗೀಯ ಹತ್ಯೆಗೆ ಒಳಗಾದ ರಷ್ಯಾದ ನಾಗರಿಕರು ಸೇರಿದಂತೆ ಜನರನ್ನು ರಕ್ಷಿಸಲು ರಷ್ಯಾ “ವಿಶೇಷ ಮಿಲಿಟರಿ ಕಾರ್ಯಾಚರಣೆ” ನಡೆಸುತ್ತಿದೆ ಎಂದು ಪುಟಿನ್ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಸೈನ್ಯವನ್ನು ಕಳುಹಿಸಿದ ನಂತರ ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ಬಿರುಸುಪಡೆದಿದೆ. ರಷ್ಯಾದ ಪೊಲೀಸರು ಹಲವು ನಗರಗಳಲ್ಲಿ 700ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ಸ್ವತಂತ್ರ ಮಾಧ್ಯಮಗಳು ವರದಿ ಮಾಡಿವೆ.

ಮಧ್ಯ ಮಾಸ್ಕೋದ ಪುಷ್ಕಿನ್ ಚೌಕದ ಬಳಿ ಸುಮಾರು 2,000 ಜನರು ಜಮಾಯಿಸಿದ್ದರು. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 1,000 ಜನರು ಸೇರಿದ್ದರು ಎಂದು ಸ್ಥಳದಲ್ಲಿದ್ದ ಎಎಫ್‌ಪಿ ವರದಿಗಾರರು ತಿಳಿಸಿದ್ದಾರೆ.

ರಷ್ಯಾ ಜನತೆಯ ವಿರೋಧದ ನಡುವೆ ಉಕ್ರೇನ್‌ ಮೇಲೆ ಆಕ್ರಮಣ ನಡೆಯುತ್ತಿದೆ. ಹೆಚ್ಚಿನ ಪ್ರತಿಭಟನಾ ನಿರತ ನಾಯಕರನ್ನು ಹತ್ಯೆ ಮಾಡಲಾಗಿದೆ, ಜೈಲಿನಲ್ಲಿಡಲಾಗಿದೆ ಅಥವಾ ದೇಶದಿಂದ ಹೊರದೂಡಲಾಗಿದೆ ಎಂದು ವರದಿಗಳಾಗಿವೆ.


ಇದನ್ನೂ ಓದಿ: ಉಕ್ರೇನ್‌ ವಿರುದ್ಧ ಯುದ್ಧ ವಿರೋಧಿಸಿ ರಷ್ಯಾ ಪ್ರಜೆಗಳ ಪ್ರತಿಭಟನೆ; 700 ಜನರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...