Homeಅಂಕಣಗಳುಸ್ಮಾರ್ಟ್ ಸಿಟಿ ಕಿಷ್ಣ ಮೋದಿಗೆ ಪತ್ರ ಬರೆದರಂತಲ್ಲಾ

ಸ್ಮಾರ್ಟ್ ಸಿಟಿ ಕಿಷ್ಣ ಮೋದಿಗೆ ಪತ್ರ ಬರೆದರಂತಲ್ಲಾ

- Advertisement -

| ಯಾಹೂ |

ನೋಡಿದ ಕೂಡಲೆ ಅಖಿಲ ಭಾರತ ಮಟ್ಟದ ಮುಠ್ಠಾಳನಂತೆ ಕಾಣುವ ಅಮಿತ್ ಶಾ ಎಂಬ ಭಾಷಾ ಬೃಹಸ್ಪತಿ ಹಿಂದಿ ಭಾಷೆಯನ್ನು ಇಂಡಿಯಾದ ಮೇಲೆ ಹೇರುವ ಮಾತನಾಡಿದ್ದಾನಲ್ಲಾ. ಯಾವ ಭಾಷೆಯೂ ಸರಿಯಾಗಿ ಬರದ ಈತನ ಹಿಂದಿ ಹೇರಿಕೆ ಮಾತಿಗೆ ಕರ್ನಾಟಕದ ಕನ್ನಡ ಸಂಘಗಳು ಜೇನುಗೂಡಿಗೆ ಕಲ್ಲು ಬೀರಿದಂತೆ ರ್ವಯ್ಯನೆ ಬೀದಿಗೆ ಬರುತ್ತವೆಂದು ನಿರೀಕ್ಷಿಸಿದ್ದ ಕನ್ನಡಿಗರಿಗೆ ಆಘಾತವಾಗಿದೆಯಂತಲ್ಲಾ. ಹಾಗಾದರೆ ಎಲ್ಲಿ ಹೋದವು? ಬೆಂಗಳೂರಿನ ಆದಾಯ ಹಂಚಿಕೊಳ್ಳುವಲ್ಲಿ ಹೊಡೆದಾಡಿ ಇಬ್ಬಾಗವಾದ ಬಣಗಳು ಅದ್ಯಾವಾಗ ಉಸಿರೆಳೆದವು ಎಂದು ಹುಡುಕಲಾಗಿ ಅವೆಲ್ಲಾ ಉಂಡ ಉಬ್ಬಸದಲ್ಲಿ ನರಳುತ್ತಿವೆಯೇ ಹೊರತು, ಉಸಿರೆಳೆದಿಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಈ ನಡುವೆ ಬಹುಭಾಷೆ ನಟ ಕಮಲ್‍ಹಾಸನ್ ಶಾ ಎಂಬ ಸುಲ್ತಾನನ ಕರೆಗೆ ಸೆಡ್ಡು ಹೊಡೆದಿರುವುದಲ್ಲದೆ ಮತ್ತೊಮ್ಮೆ ಇಂತಹ ಹೇಳಿಕೆ ಕೊಟ್ಟರೆ ಜಲ್ಲಿಕಲ್ಲು ಬೀರಬೇಕಾಗುತ್ತದೆಂದು ಎಚ್ಚರಿಕೆ ಕೊಟ್ಟಿದ್ದಾರಲ್ಲಾ. ಶಾ ಮಾತಿಗೆ ಹ್ವಟ್ಯಾಳ ನಾಗರಾಜ, ನಾರಾಯಣಗೌಡ, ಪ್ರವೀಣ ಶೆಟ್ಟಿ ತಕ್ಕ ಉತ್ತರ ಕೊಡುತ್ತಾರೆಂದು ಕಾದ ಮುಖ್ಯಮಂತ್ರಿ ಎಡೂರಪ್ಪನವರೆ ಮುಂದಾಗಿ ಕನ್ನಡಪರ ದನಿ ಎತ್ತಿ ಮಯೂರನಂತೆ ಘರ್ಜಿಸಿದ್ದಾರಲ್ಲಾ, ಥೂತ್ತೇರಿ….!

ಯಾರು ಏನೇ ಹೇಳಲಿ ಕನ್ನಡ ಭಾಷೆ ನಶಿಸುತ್ತಿದೆಯಂತಲ್ಲಾ. ಸಿಟಿಗಳಲ್ಲಿನ ನಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಅಕ್ಷರ ಮಾಯವಾಗಿದೆ. ಕರ್ನಾಟಕದ ರಸ್ತೆ ಬದಿಯ ಮೈಲಿ ಕಲ್ಲುಗಳಲ್ಲಿ ಕನ್ನಡ ಮಾಯವಾಗಿದೆ. ಹಳ್ಳಿಗಾಡಿನ ಹೊಟೇಲು ಕೂಡ ತಿಂಡಿ ಚೀಟಿಯನ್ನು ಇಂಗ್ಲಿಷ್‍ನಲ್ಲೇ ಮುದ್ರಿಸಿವೆ. ಬಸ್ಸುಗಳಲ್ಲೂ ಕೂಡ ಸೂಚನಾ ಫಲಕಗಳು ಇಂಗ್ಲಿಷ್‍ನಲ್ಲಿವೆ. ನಮ್ಮ ಅಕ್ಷರಗಳು ಕಣ್ಣಿಂದ ಮರೆಯಾದರೆ, ಮುಂದೆ ಅವನ್ನು ನಾವು ಗುರುತು ಹಿಡಿಯಲಾಗುವುದಿಲ್ಲ. ಇನ್ನ ಕಾನ್ವೆಂಟ್ ಮಕ್ಕಳು ಮನೆಯಲ್ಲಿ ಇಂಗ್ಲಿಷ್ ಕಲಿಯುತ್ತಿದ್ದರೆ ತಂದೆ ತಾಯಿಗಳಿಗೆ ಎಲ್ಲಿಲ್ಲದ ಪುಲಕ. ನಾವು ಬರೆದ ಪುಸ್ತಕ ಲೇಖನವನ್ನ ನಮ್ಮ ಮನೆ ಮಕ್ಕಳೇ ಓದುತ್ತಿಲ್ಲ. ಅದಕ್ಕೆ ಸತ್ತ ಸಾಹಿತಿಯ ಮನೆಯವರು ಆ ಪುಸ್ತಕಗಳನ್ನ ಯಾರಾದರೂ ತೆಗೆದುಕೊಂಡು ಹೋಗಿ ಎಂದು ಬೇಡುತ್ತಿರುವುದು. ಹೀಗೆ ಕನ್ನಡದ ಜೊತೆ ಸಾಹಿತಿಗಳೂ ಕೊನೆಯುಸಿರೆಳೆಯುತ್ತಿರುವ ಸಮಯ ನೋಡಿಯೇ ಅಮಿತ್ ಶಾ ಹಾಗಂದಿರುವುದು. ಅವನ ಮಾತಿಗೆ ನಾರಾಯಣಗೌಡ ಏನು ಹೇಳುತ್ತಾನೆಂದು ಹುಡುಕಿದರೆ, ಆತ ಡಿಕೆಸಿ ಅರೆಸ್ಟಾಗಿರುವುದನ್ನ ಅರಗಿಸಿಕೊಳ್ಳಲಾರದೆ ಅಳುತ್ತಾ ಕೂತಿದ್ದಾನಂತಲ್ಲಾ, ಥೂತ್ತೇರಿ!!

ಅಳಿಯನ ಆತ್ಮಹತ್ಯೆ ಸುದ್ದಿ ಕೇಳಿದಾಗಲೂ ಸಾವಧಾನವಾಗಿ ಎದ್ದ ಎಸ್ಸೆಂ ಕೃಷ್ಣರು ಕನ್ನಡಿ ಮುಂದೆ ನಿಂತು ವಿಗ್ ಧರಿಸಿಕೊಂಡು ತಮ್ಮ ಸೊಗಸಿಗೆ ಚ್ಯುತಿ ಬಾರದಂತೆ ವೇಶ ಧರಿಸಿ ನಡೆದ ದುರಂತವನ್ನು ತಾಳ್ಮೆಯಿಂದ ನಿಭಾಯಿಸಿ, ಅಳುಬುರುಕರ ಮನಗೆದ್ದ ಕೃಷ್ಣ ಸ್ಮಾರ್ಟ್ ಸಿಟಿಗಳು ಹೇಗಿರಬೇಕೆಂದು ಮೋದಿಗೆ ಎರಡು ಪುಟದ ಪತ್ರ ಬರೆದಿದ್ದಾರಂತಲ್ಲಾ. ದುಃಖದಲ್ಲೂ ಸಿಟಿಯನ್ನು ಸೊಗಸಾಗಿ ನಿರ್ಮಿಸುವ ಕನಸು ಕಾಣುತ್ತಿರುವ ಕೃಷ್ಣರು ಮೋದಿಗೆ ಎರಡು ಪುಟದ ಪತ್ರ ಬರೆಯುವ ಬದಲು ಸಿದ್ಧಾರ್ಥನಿಗೆ ಒಂದು ಪುಟದ ಧೈರ್ಯದ ಸಾಲು ಬರೆಯಬಹುದಿತ್ತೆಂಬುದು ಮಂಡ್ಯದ ಮುಗ್ದರ ಸಲಹೆಯಾಗಿದೆಯಲ್ಲಾ

ಏನೆಂದರೆ, “ಸಿದ್ಧಾರ್ಥ ಆದ್ದದ್ದಾಯ್ತು. ನನ್ನ ಸಂಪತ್ತು ಈ ಮೋದಿಯ ನೋಟು ಬ್ಯಾನು, ಜಿಎಸ್‍ಟಿ ಮತ್ತು ಬೇಟೆ ನಾಯಿಗಳಂತಹ ಇನ್‍ಕಮ್ ಟ್ಯಾಕ್ಸ್ ಸಿಬ್ಬಂದಿಯಿಂದ ಮುಳುಗಿಹೋಯ್ತು. ಹೋಗಲಿ ಬಿಡು, ಅದೇನು ನಾನು ಮದ್ದೂರಿನ ಗದ್ದೆ ಹುತ್ತು ಸಂಪಾದಿಸಿದ್ದಲ್ಲ. ನೀನು ಎಲ್ಲವನ್ನು ಮಾರಿ ಸಾಲ ತೀರಿಸಿ ನಿಮ್ಮಪ್ಪನ ಎಸ್ಟೇಟ್ ಉಳಿಸಿಕೊಂಡು ಬದುಕು. ಈ ದೇಶದಲ್ಲಿ ನಿರ್ಗತಿಕರು ಭಿಕ್ಷುಕರು, ಕುಷ್ಟ ರೋಗಿಗಳೂ ಸಹಿತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನಿನಗೆ ಕಪ್ಪು ಹಣ ಕೊಟ್ಟವರೇ ಮಾಡಿಕೊಳ್ಳಲಿ. ನೀನು ಧೈರ್ಯವಾಗಿ ಬಾ, ಮಾತನಾಡೋಣ” ಎಂದು ಬರೆದಿದ್ದರೆ ಸಿದ್ಧಾರ್ಥ ಮರಳಿ ಬರುತ್ತಿದ್ದರಂತಲ್ಲಾ, ಥೂತ್ತೇರಿ!!

ಮನುಷ್ಯನಿಗೆ ವಯಸ್ಸಾದಂತೆ ಬುದ್ಧಿ ಮಾಗುತ್ತದೆ. ಮಾತಿನಲ್ಲಿ ತೂಕ ಬರುತ್ತದೆ. ಆದರೆ ಸಿದ್ದರಾಮಯ್ಯನ ಎದುರಾಳಿಯಾದ ಈಶ್ವರಪ್ಪನ ಅವತಾರ ನೋಡಿದರೆ ಕುರುಬರು ಹೋಗಲಿ, ಕರ್ನಾಟಕದ ಮಾನವಂತರ ಜೊತೆಗೆ ಸಾಬರೂ ಕೂಡ ಹೆದರುತ್ತಿದ್ದಾರಂತಲ್ಲಾ. ಈತನ ಮಾತು ನೋಡಿದರೆ ನಿಜಕ್ಕೂ ಈಶ್ವರಪ್ಪನೇ ಪಾಕಿಸ್ತಾನಕ್ಕೆ ಯೋಗ್ಯವಾದ ಪ್ರಜೆ. ಅಲ್ಲಿ ಯಾವ ಎಗ್ಗೂ ಇಲ್ಲದೆ ಮತಾಂಧತೆಯ ಮಾತನಾಡಬಹುದು. ಅನ್ಯ ಧರ್ಮೀಯರನ್ನ ಹೀಯಾಳಿಸಬಹುದು. ತನ್ನ ಮಾತಿನ ಪರಿಣಾಮ ಗ್ರಹಿಸಿ ವೈದ್ಯರಲ್ಲಿಗೆ ಹೋಗುವುದರ ಬದಲು ತಾನು ಕೆಲಸ ಮಾಡುವ ಪಾರ್ಟಿ ಆಫೀಸಿಗೆ ಹೋಗಬಹುದು. ಆದ್ದರಿಂದ ಈಶ್ವರಪ್ಪ ಪಾಕೀಸ್ತಾನಕ್ಕೆ ಹೋಗಿ ನೆಲೆಸಲು ಬಹುಯೋಗ್ಯವಾದ ಪ್ರಜೆ ಎಂದು ಇಸ್ಮಾಯಿಲ್ ಖಾನ್ ಹೇಳುತ್ತಿದ್ದಾರಂತಲ್ಲಾ. ಶಿವಮೊಗ್ಗದ ದುರಂತ ನೋಡಿ, ಅಲ್ಲಿ ಈಗ ಪ್ರಖ್ಯಾತ ಮನೋವೈದ್ಯರಿಲ್ಲ. ಅಶೋಕ್ ಪೈ ಇದ್ದಿದ್ದರೆ ಈಶ್ವರಪ್ಪನ ಮೆದುಳು ಮತ್ತು ನಾಲಿಗೆ ನಡುವೆ ಒಂದು ನಿಷ್‍ತಂತು ಅಂಗವನ್ನು ಅಳವಡಿಸಿ ಮಾತಿಗೆ ಮಿತಿಯಿರುವಂತೆ, ತೂಕ ಬರುವಂತೆ ಮಾಡಬಹುದಿತ್ತು. ಆದರೆ ಎಲ್ಲವೂ ಕೈಮೀರಿ ಹೋಗಿದೆ. ಇವತ್ತು ಮುಸ್ಲಿಮರ ಮೇಲೆ ಕೆರಳಿರುವ ಈಶ್ವರಿ, ಮುಂದೆ ದಲಿತರು, ಅಲೆಮಾರಿಗಳು ಮತ್ತೂ ತಿರುಗಿಬಿದ್ದು ಸಾದ ಲಿಂಗಾಯಿತರ ಮೇಲೆ ಎಗರಬಹುದು. ಒಟ್ಟಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆಯಂತಲ್ಲಾ, ಥೂತ್ತೇರಿ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial