Homeಚಳವಳಿಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು...!! : ಇಸ್ಮತ್ ಪಜೀರ್

ಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು…!! : ಇಸ್ಮತ್ ಪಜೀರ್

ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು.

- Advertisement -
- Advertisement -

ಎನ್ನಾರ್ಸಿಯ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತುಂಗಕ್ಕೇರಿದ್ದಾಗ ನಾನು ಫೇಸ್‌ಬುಕ್‌ನ ನನ್ನ ಅನೇಕ ಹಿಂದೂ ಗೆಳೆಯರ ಪ್ರೊಫೈಲ್ ಮತ್ತು ಕೆಲವು ಸಜ್ಜನ ಹಿಂದೂಗಳ ಟೈಮ್‌ಲೈನ್‌ಗೆ ಆಗಾಗ ಇಣುಕುತ್ತಿದ್ದೆ. ನನಗೆ ನಿರಾಶೆಯೇ ಕಾದಿತ್ತು. ಮತಿಭ್ರಮಣೆಯಾಗುವುದೊಂದೇ ಉಳಿದಿತ್ತು.‌ ಆ ಮಟ್ಟಿಗೆ ನಾನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಬದುಕಿನ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಿದ್ದ ಮತ್ತು ಮನೆಯ ಸಂಕಷ್ಟಗಳನ್ನೆಲ್ಲಾ ನನ್ನಲ್ಲಿ ತೋಡಿಕೊಳುತ್ತಿದ್ದ ಗೆಳೆಯರಲ್ಲಿ ಬಹುತೇಕರು ಎನ್ನಾರ್ಸಿಯ ಪರವಿದ್ದರು ಮಾತ್ರವಲ್ಲಾ “ಇದು ಹಿಂದೂ ರಾಷ್ಟ್ರ, ಇಲ್ಲಿ ಹಿಂದೂಗಳಿಗಲ್ಲದೇ ಬೇರ್ಯಾರಿಗೂ ಬದುಕುವ ಹಕ್ಕಿಲ್ಲ”ಎಂಬರ್ಥದಲ್ಲಿ ಬರೆದು ಹಾಕಿದ್ದರು.

ಅವರಲ್ಲಿ ಎಂತವರೆಲ್ಲಾ ಇದ್ದರೆಂದರೆ “ನನ್ನಿಂದ ವೈಯಕ್ತಿಕವಾಗಿ ಸಹಾಯ ಪಡೆದವರು, ನನ್ನದೇ ರಕ್ತ ಪಡೆದು ಜೀವವುಳಿಸಿಕೊಂಡವ, ಸಹೋದರಿಯ ಮದುವೆಗೆ ನನ್ನವಳ ಒಡವೆಗಳನ್ನು ಕಡಪಡಕೊಂಡವರು…. ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ನನ್ನ ಆ ಗೆಳೆಯರು ಯಾರೂ ಆರೆಸ್ಸೆಸ್ ಅಥವಾ ಸಂಘಪರಿವಾರದವರೂ ಅಲ್ಲ. ನನಗೀಗಲೂ ಅವರು ನನ್ನನ್ನು ದ್ವೇಷಿಸುತ್ತಾರೆಂದೆನಿಸುವುದಿಲ್ಲ.. ಮತ್ತು ಆಂತರ್ಯದಲ್ಲಿ ಅವರಿಗೆ ನಾನು ಪಾಲಿಸುವ ಧರ್ಮದ ಬಗ್ಗೆ ದ್ವೇಷವೂ ಇಲ್ಲ. ಹಾಗಾದರೆ ಅವರು ಯಾಕೆ ಹಾಗೆಲ್ಲಾ ಬರೆದುಕೊಂಡಿದ್ದಾರೆ..? ಇದನ್ನೇ ಸಮೂಹ ಸನ್ನಿಯೆನ್ನುವುದು.

ಅವರು ಏಕಾಂಗಿಯಾಗಿದ್ದಾಗ ಅಥವಾ ನನ್ನ ಜೊತೆಗಿರುವಾಗ ಹಾಗೆ ಎಂದೂ ಯೋಚಿಸಲಾರರು ಎಂದೇ ನನ್ನ ದೃಢವಾದ ನಂಬಿಕೆ. ಅವರಿಂದ ಸಮೂಹ ಸನ್ನಿಯ ಮನೋಸ್ಥಿತಿ ಹಾಗೆ ಬರೆಯಿಸಿತ್ತು ಎಂದೇ ನಾನು ನಂಬಿರುವೆ ಮತ್ತು ಮುಂದೆಯೂ ನಂಬುತ್ತೇನೆ. ನನಗೆ ಅವರ ಬಗ್ಗೆ ಕಿಂಚಿತ್ತೂ ದ್ವೇಷವಿಲ್ಲ. ಅವರಿಗೆ ನಾನಿಲ್ಲದ ಅವರ ಬಗ್ಗೆ ಯೋಚಿಸಲೂ ಸಾಧ್ಯವಾಗದು.

ಅಂತಹ ಕೆಲವು ಗೆಳೆಯರ ಬಳಿ ನಾನು ನೇರವಾಗಿ ಮಾತನಾಡುತ್ತ ಕೇಳಿದೆ.. “ಏನು ಮಾರಾಯ.. ನಾವು ಇಲ್ಲಿರುವುದು ನಿಮಗೆ ಅಷ್ಟೂ ಇಷ್ಟವಿಲ್ಲವೇ…?
ಯಾರು ಹಾಗೆಂದರು ಮಾರಾಯ..?
ಯಾರು ಹೇಳುವುದ್ಯಾಕೆ… ನಾನೇ ನೋಡಿದೆನಲ್ಲಾ….?
ಅದುವಾ….. ಅದು ನಿನ್ನಂತವರ ಬಗೆಗಲ್ಲ ಮಾರಾಯ…
ನಾನು ಮುಸ್ಲಿಮನೇ ಮಾರಾಯ..
‌ನಾನೂ ನಮಾಜು ಮಾಡುತ್ತೇನೆ, ನಾನೂ ದನದ ಮಾಂಸ ತಿನ್ನುತ್ತೇನೆ.

ಅದೇನು ನಮಗೆ ಗೊತ್ತಿಲ್ಲದ್ದಾ…?
ಮತ್ಯಾಕೆ ಹಾಗೆ ಬರೆದಿರಿ..?
ಏ ಅದೆಲ್ಲಾ ಬಿಡು ಮಾರಾಯ.. ನಿನ್ನನ್ನು ನಾವು ದ್ವೇಷಿಸಲಾಗುತ್ತಾ…?

ಸಾದತ್ ಹಸನ್ ಮಂಟೋ ಎಂಬ ಜಗತ್ಪ್ರಸಿದ್ದ ಮತ್ತು ಅತ್ಯಂತಿಕವಾದ ವಿವಾದಾತ್ಮಕ ಉರ್ದು ಸಣ್ಣ ಕತೆಗಾರನೂ ಇಂತಹದ್ದನ್ನೇ ಅನುಭವಿಸಿದ್ದ.‌ ದೇಶ ವಿಭಜನೆಯ ಕಾಲದ ಅತಿಮಾನುಷ ಕ್ರೌರ್ಯಗಳನ್ನು ಕಂಡು ಮಾನಸಿಕ ಸ್ಥಿಮಿತವನ್ನೇ ಕಳಕೊಂಡಿದ್ದ ಮಂಟೋ ವಿಭಜನೆಯ ಕಾಲದ ಕ್ರೌರ್ಯವನ್ನು, ಹಿಂಸೆಯನ್ನು ಬರೆದಷ್ಟು ಮನೋಜ್ಞವಾಗಿ ಇನ್ಯಾವ ಲೇಖಕನೂ ಬರೆದಿಲ್ಲ. ಮಂಟೋನ ಮಾನವೀಯ ಅಂತಃಕರಣ ಆ ಕಾಲದ ಇತರೆಲ್ಲಾ ಲೇಖಕರಿಗಿಂತಲೂ‌ ಆತನನ್ನು ಭಿನ್ನವಾಗಿ ನೋಡುವಂತೆ ಮಾಡುತ್ತದೆ. ಆತ ಜನರನ್ನು ಹಿಂದೂ ಮುಸಲ್ಮಾನರೆಂದು ಪ್ರತ್ಯೇಕಿಸಿ ನೋಡಲಿಲ್ಲ.‌ ಅದಕ್ಕೆ ಆತ ಬರೆದ ಸುಮಾರು ಇನ್ನೂರೈವತ್ತಕ್ಕೂ ಮಿಕ್ಕಿದ ಸಣ್ಣ ಕತೆಗಳಲ್ಲಿ ನೂರರಷ್ಟು ಕತೆಗಳು ಸಾಕ್ಷ್ಯವೊದಗಿಸುತ್ತದೆ. ಆತನ ಕೇವಲ ಎರಡು ಗೆರೆಯ ಕತೆ “ಮಿಸ್ಟೇಕ್” ಒಂದನ್ನೇ ನೋಡಿದರೆ ಸಾಕು.

“ಹೊಟ್ಟೆಯನ್ನು ಸೀಳಿದ ಚಾಕು ಸೀಳುತ್ತಾ ಬಂದು ಪೈಜಾಮದ ಲಾಡಿ ಬಿಚ್ಚಿಸಿತು…
ಅಯ್ಯೋ ಎಂತಹಾ ‘ಮಿಸ್ಟೇಕ್’ ಮಾಡಿ ಬಿಟ್ಟೆನೆಲ್ಲಾ”

ಈ ಕತೆಯನ್ನು ಇನ್ನೊಮ್ಮೆ ಓದಿ. ಒಂದು ವೇಳೆ ಸತ್ತವನು ಮುಸ್ಲಿಮನಾದರೆ ಕೊಂದವನೂ ಮುಸ್ಲಿಂ. ಒಂದು ವೇಳೆ ಸತ್ತವನು ಹಿಂದೂವಾದರೆ ಕೊಂದವನೂ ಹಿಂದೂ.

ಕೊಲೆಗಾರ ಸತ್ತವನ ಜನನಾಂಗ ನೋಡಿ ನಿರ್ಧರಿಸುತ್ತಾನೆ. ಇದರಲ್ಲಿ ಮಂಟೋನ ತಂತ್ರಗಾರಿಕೆಯೂ ಅಡಗಿದೆ. ಅವನೊಳಗಿನ ಅತ್ಯಂತ ಆರ್ದ್ರ ಹೃದಯದೊಳಗಿನ ತಲ್ಲಣವೂ ಇದೆ. ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು. ಈ ಕತೆಯನ್ನು ಬರೆದಾಗ ಮಂಟೋ ಇನ್ನೂ ಭಾರತದಲ್ಲೇ ಇದ್ದ.

ಕೆಲದಿನಗಳ ಹಿಂದಷ್ಟೇ ಓರಗೆಯವರಾಗಿದ್ದವರು, ಗೆಳೆಯರಾಗಿದ್ದವರು ಇಂದು ಪರಸ್ಪರರನ್ನು ಕೊಲ್ಲುವ ಮಟ್ಟಿಗೆ ಅತಿಮಾನುಷ ಕ್ರೌರ್ಯವನ್ನು ಒಪ್ಪಿಕೊಂಡದ್ದಾದರೂ ಹೇಗೆ ಎಂದು ಯೋಚಿಸುತ್ತಲೇ ಆತ ಮಾನಸಿಕವಾಗಿ ಜರ್ಜರಿತನಾಗಿ ಬಿಟ್ಟಿದ್ದ.

ಹಿಂದೂ ಮುಸಲ್ಮಾನ ಸೋದರರ ಯುದ್ಧ ಉಚ್ಚ್ರಾಯ ಸ್ಥಿತಿಗೆ ತಲುಪಿದ್ದ ಆ ದಿನಗಳಲ್ಲಿ ಮಂಟೋ ಮತ್ತು ಆತನ ಆತ್ಮೀಯ ಗೆಳೆಯನಾದ ಅಂದಿನ ಪ್ರಸಿದ್ಧ ಹಿಂದಿ ಸಿನಿಮಾ ನಟ ಶ್ಯಾಮ್‌ ಜೊತೆಗಿದ್ದಾಗ ಪಾಕಿಸ್ತಾನದ ರಾವಲ್ಪಿಂಡಿಯಿಂದ ಜೀವದ ಹಂಗು ತೊರೆದು ಬಂದಿದ್ದ ಸಿಖ್ಖ್ ಪರಿವಾರ ಶ್ಯಾಮ್‌ ಜೊತೆ ಮಾತಿಗೆ ನಿಂತಿತು. ಆ ಪರಿವಾರದ ಮುಖ್ಯಸ್ಥ ತಾನು ಕಂಡಿದ್ದ ಭೀಕರ ಹಿಂಸಾಚಾರದ ಕತೆಗಳನ್ನು ಇವರ ಮುಂದೆ ನಿರೂಪಿಸುತ್ತಿದ್ದಾಗ ಅದನ್ನು ಕೇಳುತ್ತಾ ಶ್ಯಾಮ್ ರೋಷದಿಂದ ಕುದಿಯುತ್ತಿದ್ದ. ಅತ್ಯಂತ ಸೂಕ್ಷ್ಮ ಮನಸ್ಸಿನ ಮಂಟೋ ತನ್ನ ಪ್ರಾಣ ಸ್ನೇಹಿತ ಶ್ಯಾಮ್‌ನ ಮುಖದಲ್ಲಾದ ಏರಿಳಿತಗಳನ್ನೆಲ್ಲಾ ಗಮನಿಸಿದ್ದ. ಅವರು ಅಲ್ಲಿಂದ ಹೊರಟು ಹೋದ ಎಷ್ಟೋ ಹೊತ್ತಿನ ಬಳಿಕ ಮಂಟೋ “ನಾನೂ ಒಬ್ಬ ಮುಸಲ್ಮಾನ, ನಿನಗೆ ನನ್ನನ್ನು ಕೊಲ್ಲಬೇಕೆಂದೆನಿಸುವುದಿಲ್ಲವೇ…?”

ಶ್ಯಾಮ್ ತುಂಬಾ ಗಂಭೀರವಾಗಿ “ಇಲ್ಲ ಈಗ ಕೊಲ್ಲಲಾರೆ, ಆ ಸಿಖ್ಖನ ಬಾಯಿಯಿಂದ ಮುಸಲ್ಮಾನರು ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದ ಕತೆಯನ್ನು ಕೇಳುತ್ತಿದ್ದಾಗ ನಿನ್ನನ್ನು ನಾನು ಕೊಲ್ಲಬಹುದಿತ್ತು”. ತನ್ನ ಪ್ರಾಣ ಸ್ನೇಹಿತ ಶ್ಯಾಮ್‌ನ ಬಾಯಿಯಿಂದ ಇಂತಹ ಮಾತುಗಳನ್ನು ಕೇಳಿಸಿದ ಮಂಟೋನಿಗೆ ಹೃದಯಾಘಾತವಾದಂತೆನಿಸುತ್ತದೆ. ಮುಂದೆ ಮಂಟೋ ಭಾರತ ತೊರೆಯಲು ಇದೇ ಕಾರಣವಾಗುತ್ತದೆ.

ಒಮ್ಮೆ ಇದ್ದಕ್ಕಿದ್ದಂತೆ ಮಂಟೋ ದೇಶ ತೊರೆಯುವ ವಿಚಾರ ಹೇಳಿದಾಗ ಶ್ಯಾಮ್ ಮತ್ತು ಮಂಟೋನ ಇನ್ನೋರ್ವ ಆತ್ಮೀಯ ಗೆಳೆಯನೂ ಆದ ಇನ್ನೋರ್ವ ಪ್ರಸಿದ್ಧ ನಟನೂ ಆದ ಅಶೋಕ್ ಕುಮಾರ್ ದಂಗಾಗಿಬಿಟ್ಟರು. ಮಂಟೋನ ಈ ದಿಡೀರ್ ತೀರ್ಮಾನಕ್ಕೆ ಕಾರಣವೇನೆಂದು ಅವರು ಕೇಳಿದಾಗ ಮಂಟೋ ತನ್ನ “ಪುರುಷಾರ್ಥ” ಕತೆಯನ್ನು ಓದುವಂತೆ ತಿಳಿಸುತ್ತಾನೆ. ಆತನ ಪುರುಷಾರ್ಥ ಕತೆ ಬೇರೇನೂ ಅಲ್ಲ.. ಅದು ಪಾಕಿಸ್ತಾನದಿಂದ ಜೀವದ ಹಂಗು ತೊರೆದು ಓಡಿ ಬಂದ ಸಿಖ್ ಪರಿವಾರ ಹೇಳಿದ ಕತೆ ಮತ್ತು ಶ್ಯಾಮ್ -ಮಂಟೋನ ನಡುವೆ ನಡೆದ ಮಾತುಕತೆಯೇ ಆಗಿದೆ. ಕಥಾ ನಾಯಕ ಮುಮ್ತಾಝ್ ಮತ್ತು ಆತನ ಸ್ನೇಹಿತ ಜುಗಲ್ ಮಧ್ಯೆ ನಡೆಯುವ ಮಾತುಕತೆಯಲ್ಲಿ “ಮಂಟೋ-ಶ್ಯಾಮ್‌ಗೆ ಕೇಳಿದ ಪ್ರಶ್ನೆಯನ್ನೂ, ಶ್ಯಾಮ್ ನೀಡಿದ ಉತ್ತರವನ್ನೂ” ಮಂಟೋ ಅತ್ಯಂತ ತಂತ್ರಪೂರ್ವಕವಾಗಿ ತಂದು ಕತೆ ಹೆಣೆದಿದ್ದ.

ವಾಸ್ತವದಲ್ಲಿ ಇಂತಹ ಮಾತುಕತೆಯಿಂದಾಗಿ ಮಂಟೋ ದೇಶ ತೊರೆಯಬಹುದೆಂಬ ಸಣ್ಣದೊಂದು ಸುಳಿವು ಸಿಕ್ಕಿದ್ದರೂ ಶ್ಯಾಮ್ ತನ್ನ ಮನದೊಳಗಿನ ರೋಷವನ್ನು ಮಂಟೋನ ಮುಂದೆ ಹೊರಗೆಡಹುತ್ತಿರಲಿಲ್ಲ. ಮಂಟೋ ದೇಶ ತೊರೆದ ಬಳಿಕ ತನ್ನ ಪ್ರೀತಿಯ ತಾಯ್ನಾಡನ್ನು, ಜೀವದ ಗೆಳೆಯರಾದ ಶ್ಯಾಮ್ ಮತ್ತು ಅಶೋಕ್ ಕುಮಾರರನ್ನು ನೆನೆದು ಬಹಳಷ್ಟು ಪರಿತಪಿಸಿದ. ಆತ ಇವರೊಂದಿಗೆ ಪತ್ರ ಸಂಪರ್ಕವಿಟ್ಟುಕೊಂಡಿದ್ದ. ಮಂಟೋ ಭಾರತ ತೊರೆದ ಬಳಿಕ ಆರ್ಥಿಕವಾಗಿ ಮತ್ತಷ್ಟು ಜರ್ಜರಿತನಾದ. ಶ್ಯಾಮ್ ಮತ್ತು ಅಶೋಕ್ ಕುಮಾರ್ ಮಂಟೋನಿಗೆಂದು ಆಗಾಗ ತುಸು ದುಡ್ಡನ್ನೂ ಕಳುಹಿಸುತ್ತಿದ್ದರು.

ಅಂದು ಮಂಟೋನ ಮುಂದೆ ಪಾಕಿಸ್ತಾನವೆಂಬ ಆಯ್ಕೆಯಿತ್ತು… ಇಂದು ನನ್ನ ಮುಂದಿರುವುದು ಡಿಟೆಂಶನ್‌ ಕ್ಯಾಂಪ್‌ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ.‌ ತೆರೆದರೂ ನನ್ನ ಆಯ್ಕೆ ಖಂಡಿತಾ ಅದಾಗದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. “ಇಂದು ನನ್ನೆದುರಿಗಿರುವುದು ಡಿಟಿಂಶನ್ ಕ್ಯಾಂಪ್ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ.” ಇದು ಸಹೃದಯರ ಮನ ಕಲಕುವ ಬರವಣಿಗೆ.

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...