Homeಚಳವಳಿಮಾಂಟೋನ ಈ ಕಥೆಗಳನ್ನು ಓದಿದರೆ, ನೀವು ಬೆಚ್ಚುತ್ತೀರಿ. ಓದಿ ನೋಡಿ

ಮಾಂಟೋನ ಈ ಕಥೆಗಳನ್ನು ಓದಿದರೆ, ನೀವು ಬೆಚ್ಚುತ್ತೀರಿ. ಓದಿ ನೋಡಿ

ಇವತ್ತು ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ಜನ್ಮದಿನ.

- Advertisement -
- Advertisement -

| ಪುನೀತ್ ಅಪ್ಪು |

ಇವತ್ತು ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ಜನ್ಮದಿನ. ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ ಜನರಿಗೋಸ್ಕರ ಮರುಗಿದ, ಭಾರತದ ಕನವರಿಕೆಯಲ್ಲಿಯೇ ಪ್ರಾಣ ತ್ಯಜಿಸಿದ ಮಾಂಟೋ ಬರಿಯ ಕಥೆಗಾರನಲ್ಲ, ಆತನ ಬದುಕೇ ಒಂದು ರೂಪಕ. ಆತನ ಸಾವು ಇನ್ನೂ ವಿಚಿತ್ರ. ಮಾಂಟೋ ಯಾರು ಎಂದು ಯಾರಾದರೂ ಕೇಳಿದರೆ ಮಾಂಟೋ ಅಂದರೆ ಕಳ್ಳಭಟ್ಟಿ ಸಾರಾಯಿ ಎನ್ನಬಯಸುತ್ತೇನೆ. ಮಾಂಟೋನ ಕಥೆಗಳು ಕೂಡಾ ಆ ಸಾರಾಯಿಯಂತೆ ಸುಡುತ್ತಲೇ ಒಳಗಿಳಿಯುತ್ತವೆ. ಆದರೆ ಅದನ್ನು ಮೋಹಿಸಿದವನಿಗೆ ಮಾತ್ರ ಗೊತ್ತು ಅದರ ಮತ್ತು ಮತ್ತು ಗತ್ತು. ಬದುಕಬೇಕೆಂದು ಯಾರೂ ಅದನ್ನು ಕುಡಿಯುವುದಿಲ್ಲ. ಇದು ಸತ್ತವರ ಕಥೆ. ಬದುಕಿದವರು ಕಥೆಯಾಗುವುದಿಲ್ಲ. ನಾನು ಕುಡಿದರೂ ಸಾಯುತ್ತೇನೆ, ಕುಡಿಯದಿದ್ದರೂ ಸಾಯುತ್ತೇನೆ, ಅಮೇರಿಕಾದಿಂದ ಆಮದಾಗುವ ಈ ಗೋದಿಯ ಬೆಲೆ ನೋಡಿದರೆ ಮಾನ ಮರ್ಯಾದೆ ಇಲ್ಲದವರು ಮಾತ್ರ ಬದುಕಲು ಸಾಧ್ಯ ಎಂದಿದ್ದ ಮಾಂಟೋ.

ಸಾದತ್ ಹಸನ್ ಮಾಂಟೋ

ಮಾಂಟೋನ ಕೆಲವು ಸಣ್ಣ ಸಾಲುಗಳನ್ನು ಇಲ್ಲಿ ಕೊಟ್ಟಿರುವೆ.

1. ಶಾಶ್ವತ ರಜೆ.

.ಗಲಭೆಕೋರರ ಒಂದು ಗುಂಪು ಗಣಿಯತ್ತ ತೆರಳಿತು. ಸಿಕ್ಕಿ ಸಿಕ್ಕಿದವರನ್ನು ಹೊಡೆದು ಸಾಯಿಸ ತೊಡಗಿತು. ಒಬ್ಬ ಕಾರ್ಮಿಕ ಕೂಗಿಕೊಂಡ, ” ಅಯ್ಯೋ ನನ್ನ ಕೊಲ್ಲಬೇಡಿ, ನಾನು ರಜೆಯಲ್ಲಿ ಊರಿಗೆ ತೆರಳುತಿರುವೆ”.

2. ಪಠಾಣಿಸ್ತಾನ್

ಗಲಭೆಕೋರರ ತಂಡ ಒಬ್ಬನನ್ನು ತಡೆದು ನಿಲ್ಲಿಸಿತು.
“ಏಯ್ ಯಾರು ನೀನು ಇಂದೂವ ಅಥವಾ ಮುಸ್ಲಮೀನಾ”?
ವ್ಯಕ್ತಿ : ” ಹ್ಞಾಂ ಹ್ಞಾ.. ಮುಸ್ಲಮೀನ್ ಮುಸ್ಲಮೀನ್”
ತಂಡ : “ಓಹೋ ಹಾಗಾದರೆ ನಿನ್ನ ಪ್ರವಾದಿ ಯಾರು ಹೇಳು ನೋಡೋಣ”.
ವ್ಯಕ್ತಿ: “ಹ್ಞಾಂ? …. ಮಹಮ್ಮದ್ ಖಾನ್”
ತಂಡ : ” ಸರಿ, ಈತನನ್ನು ಬಿಟ್ಟು ಬಿಡೋಣ”.

3. ರೇಡಿಯೋ ವಾರ್ತೆ:

” ಪಂಜಾಬ್, ಗ್ವಾಲಿಯರ್ ಮತ್ತು ಮುಂಬಯಿಯ ಕೆಲವು ಗಲ್ಲಿಗಳಲ್ಲಿ ಜನರು ಸಿಹಿ ಹಂಚುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿದೆ”.

4. ಮೂರ್ಖ.

ಆತನ ಆತ್ಮಹತ್ಯೆಯ ಬಗ್ಗೆ ಆತನ ಸ್ನೇಹಿತ ಹೀಗೆ ಹೇಳಿದ್ದ, ‘ ಎಂತಹಾ ಮೂರ್ಖ! ನಾನು ಅವನಲ್ಲಿ ಹೇಳುತ್ತಲೆ ಇದ್ದೆ, ಆ ಉದ್ದನೆಯ ಗಡ್ಡವನ್ನು ಬೋಳಿಸಿ, ಕೂದಲಿಗೆ ಕತ್ತರಿ ಹಾಕಿದ ಕೂಡಲೇ ಆತನೇನು ಧರ್ಮಭ್ರಷ್ಟನಾಗೋದಿಲ್ಲ. ನಮ್ಮ ಸಚ್ಚೇ ಗುರುವಿಗೆ ಶರಣಾಗಿ ಆತನ ಅನುಗ್ರಹವಿದ್ದರೆ ಆತ ತನ್ನ ಮೊದಲ ಸ್ವರೂಪಕ್ಕೆ ಬದಲಾಗಿ ಬಿಡುತ್ತಿದ್ದ’.

5. ಧೃಡತೆ.

‘ಯಾವ ಕಾರಣಕ್ಕೂ ನಾನು ಸಿಖ್ ಆಗಿ ಮತಾಂತರವಾಗಲಾರೆ, ಮರ್ಯಾದೆಯಿಂದ ನನ್ನ ಕ್ಷೌರಕತ್ತಿ ವಾಪಾಸ್ ಕೊಡಿ’

5. ಮಾನವೀಯತೆ.

‘ ಅಯ್ಯೋ ದಯವಿಟ್ಟು ನನ್ನ ಮಗಳನ್ನು ನನ್ನ ಕಣ್ಣೆದುರಿನಲ್ಲೇ ಕೊಲ್ಲದಿರಿ’.
‘ಸರಿ, ಸರಿ, ಆಕೆಯ ಬಟ್ಟೆ ಬಿಚ್ಚಿ ಓಡಿಸಿ’.

6. ದೇವರು ದೊಡ್ಡವನು !

ಆ ಸಂಜೆ ಕೊನೆಗೂ ಮುಗಿಯಿತು ಮತ್ತು ಆ ಮುಜ್ರಾ ನರ್ತಕಿಯ ಗಿರಾಕಿಗಳು ಒಬ್ಬೊಬ್ಬರೇ ಮನೆಗೆ ತೆರಳಿದರು.

ಮುಜ್ರಾವನ್ನು ವ್ಯವಸ್ಥೆ ಮಾಡಿದ್ದ ಮುದುಕ ನಿಟ್ಟುಸಿರುಬಿಟ್ಟ, ‘ ಆ ದೇಶದಲ್ಲಿ ಎಲ್ಲವನ್ನೂ ಕಳೆದುಕೊಂಡು ಇಲ್ಲಿಗೆ ಬಂದೆವು, ಆದರೂ ಅಲ್ಲಾಹ್ ಕೈ ಬಿಡಲಿಲ್ಲ. ಕೆಲವೇ ದಿನಗಳಲ್ಲಿ ನಮಗೆ ಒಳ್ಳೆಯ ದಿನಗಳು ಲಭಿಸಿದವು’.

7.ವಿಶ್ರಾಂತಿ.

‘ನೋಡು ಅವನಿನ್ನೂ ಸತ್ತಿಲ್ಲ. ಜೀವ ಇದ್ದ ಹಾಗೆ ಕಾಣ್ತಾ ಇದೆ’.
‘ ಏಯ್ ಇರ್ಲಿ ಬಿಡೊ, ನನಗೂ ಕೈ ನೋಯ್ರಾ ಇದೆ’.

8. ನ್ಯಾಯ.

‘ನೋಡು ಇದು ಅನ್ಯಾಯ. ಕಾಳಸಂತೆ ಬೆಲೆಯಲ್ಲಿ ಕಳಪೆ ಪೆಟ್ರೋಲ್ ಮಾರಾಟ ಮಾಡಿದ್ದೀಯ ನೀನು, ಒಂದೇ ಒಂದು ಅಂಗಡಿಯನ್ನು ಸುಡೋಕಾಗಿಲ್ಲ’.

9. ಅದೃಷ್ಟ.

‘ಏನ್ ದುರಾದೃಷ್ಟ ನೋಡೋ ನಂದು, ಅಷ್ಟೆಲ್ಲಾ ಕಷ್ಟಪಟ್ಟು ನನಗೆ ಸಿಕ್ಕಿದ್ದು ಈ ಒಂದು ಪೆಟ್ಟಿಗೆ ಮಾತ್ರ…. ಅದರಲ್ಲಿ ಕೂಡಾ ಸಿಕ್ಕಿದ್ದು ಹಂದಿ ಮಾಂಸ’.

10. ಕೇಳೋರೇ ಇಲ್ಲ

‘ಎಂತಹಾ ದರಿದ್ರ ಜನಗಳಪ್ಪಾ ಇವ್ರು, ಮಸೀದಿಯೊಳಗೆ ಬಿಸಾಡೋಕೆ ಅಂತ ಕಷ್ಟ ಪಟ್ಟು ಒಂದೈವತ್ತು ಹಂದಿಗಳನ್ನು ಕಡ್ದು ಕಾಯ್ತಾ ಇದ್ದೀನಿ, ಒಂದೇ ಒಂದು ಗಿರಾಕಿ ಸಿಗ್ತಾ ಇಲ್ಲ, ಗಡಿಯಾಚೆ ನೋಡು, ಅಲ್ಲಿನ ಜನ ದನದ ಮಾಂಸಕ್ಕೊಸ್ಕರ ಕ್ಯೂ ನಿಂತಿದ್ದಾರೆ, ಇಲ್ಲಿ ಹಂದಿ ಮಾಂಸನ ಕೇಳೋರೇ ಇಲ್ಲ’.

11. ತಪ್ಪನ್ನು ತಿದ್ದಲಾಯಿತು.

‘ಯಾರಯ್ಯ ನೀನು’

‘ಹರ್ ಹರ್ ಮಹಾದೇವ್, ಹರ್ ಹರ್ ಮಹದೇವ್, ಹರ್ ಹರ್ ಮಹಾದೇವ್’!
‘ನೀನು ಅದೇ ಎಂದು ಹೇಳೋದಕ್ಕೆ ಸಾಕ್ಷಿ ಏನಿದೆ’
‘ನನ್ನ ಹೆಸರು ಧರಮ್ ಚಂದ್’
‘ಅದು ಸಾಕ್ಷಿಯಾಗೋದಿಲ್ಲ’
‘ಸರಿ ಸರಿ, ನನಗೆ ನಾಲಕ್ಕು ವೇದಗಳೂ ಬಾಯಿಪಾಠ ಬರುತ್ತವೆ, ಬೇಕಿದ್ದರೆ ಪರೀಕ್ಷಿಸಿ’
‘ನಮಗೆ ವೇದ ಗೀದ ಎಲ್ಲಾ ಬರೋದಿಲ್ಲ, ಸಾಕ್ಷಿ ಕೊಡು’
‘ಏನೂ?!’
‘ನಿನ್ನ ಪೈಜಾಮ ಕೆಳಗೆ ಮಾಡು’
ಆತ ತನ್ನ ಪೈಜಾಮ ಕೆಳಗೆ ಜಾರಿಸಿದ ತಕ್ಷಣ ಅಲ್ಲೊಂದು ಬೊಬ್ಬೆ ಕೇಳಿಸಿತು,’ಕೊಲ್ಲಿ ಕೊಲ್ಲಿ ಆತನನ್ನು’.
‘ಅಯ್ಯೋ ದಯವಿಟ್ಟು ನಿಲ್ಲಿ, ನಾನು ನಿಮ್ಮ ಸಹೋದರ, ದೇವರಾಣೆಗೂ..’
‘ಹಾಗಾದರೆ ಇದೇನು?’
‘ನಾನು ಹಾದು ಬರಬೇಕಾಗಿದ್ದ ಆ ದಾರಿ ಶತ್ರುಗಳ ನಿಯಂತ್ರಣದಲ್ಲಿತ್ತು, ನಾನು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಅದಿಕ್ಕೆ ಇದೊಂದೇ ತಪ್ಪು ನಾನು ಮಾಡಿದ್ದು ನಮ್ಮ ಜೀವ ಉಳಿಸುವುದಕ್ಕೋಸ್ಕರ, ಮತ್ತೆಲ್ಲವೂ ಸರಿ ಇದೆ, ಇದೊಂದೇ ತಪ್ಪು ನಾನು ಮಾಡಿದ್ದು’.
‘ಸರಿ, ತಪ್ಪನ್ನು ತಿದ್ದಿ ಬಿಡಿ’.
ಹಾಗೆ, ತಪ್ಪು ನಿವಾರಿಸಲ್ಪಟ್ಟಿತು, ಜೊತೆಗೆ ಧರಮ್ ಚಂದನು ಕೂಡಾ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....