Homeನಿಜವೋ ಸುಳ್ಳೋ‘ಡುಪ್ಲಿಕೇಟ್ ಗಂಭೀರ್’ ಪ್ರಕರಣ: ಸತ್ಯವನ್ನು ಸುಳ್ಳಾಗಿಸಲು ಬಿಜೆಪಿ ಹರಸಾಹಸ

‘ಡುಪ್ಲಿಕೇಟ್ ಗಂಭೀರ್’ ಪ್ರಕರಣ: ಸತ್ಯವನ್ನು ಸುಳ್ಳಾಗಿಸಲು ಬಿಜೆಪಿ ಹರಸಾಹಸ

ಫೇಸ್‍ಬುಕ್ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದೆಯ

- Advertisement -
- Advertisement -

| ನಾನುಗೌರಿ ಡೆಸ್ಕ್ |

ದೆಹಲಿ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿಯ ಗೌತಮ್ ಗಂಭೀರ್ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತೀರಾ ಹೊಸ ವಿವಾದವೆಂದರೆ ಅವರ ಡುಪ್ಲಿಕೇಟ್ ಗಂಭೀರ್ ಪ್ರಕರಣ. ಬಿಸಿಲಿನ ಝಳ ತಡೆಯಲಾರದೇ ಗೌತಮ್ ಕಾರಿನ ಒಳಗೆ ಕುಳಿತಿದ್ದರೆ, ಕಾರಿನ ತೆರೆದ ಮೇಲ್ಭಾಗದಲ್ಲಿ ಗೌತಮ್ ಗಂಭೀರ್‍ನ್ನು ಹೋಲುವ ಇನ್ನೊಬ್ಬ ವ್ಯಕ್ತಿ ಮತಯಾಚನೆ ಮಾಡುತ್ತಿರುವುದು ಫೋಟೊ ಒಂದು ಸೆರೆಯಾಗಿದೆ. ಇದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ.


ಆಮ್ ಆದ್ಮಿ ಪಕ್ಷದ ಮನೀಶ್ ಸಿಸೋಡಿಯಾ ಸೇರಿದಂತೆ ನೂರಾರು ಜನರು ಆ ಫೋಟೊವನ್ನು ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ಪ್ರಕಟಿಸಿ ‘ಬಿಸಿಲಿಗೆ ಹೆದರುವ ಗಂಭೀರ್, ಯಾವ ರೀತಿ ಜನರ ಕಷ್ಟಗಳನ್ನು ಅರಿಯುತ್ತಾರೆ?’ ಎಂದು ವ್ಯಂಗ್ಯವಾಡಿದ್ದರು. ಇದರಿಂದಾಗುವ ಅಪಾಯವನ್ನರಿತ ಬಿಜೆಪಿ ತಕ್ಷಣ ಎಚ್ಚೆತ್ತುಕೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಗೌತಮ್ ಗಂಭೀರ್ ‘ಸೋಲಿನ ಭಯದಿಂದ ಆಪ್ ಪ್ರತಿದಿನ ನನ್ನ ಮೇಲೆ ಒಂದೊಂದು ಆರೋಪ ಮಾಡುತ್ತದೆ’ ಎಂದು ಆರೋಪಿಸಿದ್ದಾರೆ.

ಈಗ ಅಸಲಿ ವಿಚಾರ ಏನೆಂದರೆ ಯಾರಾದರೂ ಆ ಫೋಟೊವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಅದರ ಮೇಲೇಯೇ ಇದು ಫೇಕ್ ಫೋಟೊ ಎಂದು ಬರುತ್ತಿದೆ. ಆ ಪೋಸ್ಟಿನ ಕೆಳಗಡೆಯೇ ರಿಲೇಟೆಡ್ ಆರ್ಟಿಕಲ್ ಎಂದು ಬೂಮ್‍ನವರು ನಡೆಸಿರುವ ಫ್ಯಾಕ್ಟ್ ಚೆಕ್‍ನ ಲಿಂಕ್ ಬರುತ್ತದೆ. ಇದನ್ನು ಬಿಜೆಪಿಯವರು ಫೇಸ್ ಬುಕ್‍ನಿಂದ ಮಾಡಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಏಳುತ್ತದೆ. ಫೇಸ್‍ಬುಕ್ ಈ ರೀತಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದೆಯೇ ಎಂದು ಭಾವನೆ ಬಂದರೆ ಆಶ್ಚರ್ಯವಿಲ್ಲ. ಏಕೆಂದು ತಿಳಿಯಲು ಮುಂದೆ ಓದಿ.


ಆದರೆ ಇದು ಫೇಕ್ ಫೋಟೊ ಅಲ್ಲ. ಅದನ್ನು ತಿಳಿಯಲು ನೀವು ದೂರ ಹೋಗಬೇಕಿಲ್ಲ. ಅದರ ಕೆಳಗಡೆಯೇ ಕೊಟ್ಟಿರುವ ಲಿಂಕ್, ಬೂಮ್ ವೆಬ್‍ಸೈಟ್ ನೋಡಿದರೆ ಸಾಕು. ಬೂಮ್‍ನವರು ಹೇಳಿರುವಂತೆ ಅವರು ಗಂಭೀರ್‍ರವರ ತದ್ರೂಪವಲ್ಲ. ಅವರು ಗಂಭೀರ್‍ರವರ ಗೆಳೆಯ ಗೌರವ್ ಅರೋರ ಆಗಿದ್ದಾರೆ. ದೆಹಲಿಯ ಸ್ಥಳೀಯ ನಾಯಕರಾಗಿರುವ ಅರೋರ ಹಲವು ವರ್ಷಗಳಿಂದ ಗಂಭೀರ್ ಪರ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಈಗ ಇಬ್ಬರೂ ಸಹ ಒಟ್ಟಿಗೆ ರೋಡ್ ಶೋಗಳಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಆ ವ್ಯಕ್ತಿ ಯಾರು, ಏನು ಕೆಲಸ ಮಾಡುತ್ತಿದ್ದಾನೆ ಎಂಬುದನ್ನು ಬೂಮ್ ಪತ್ತೆ ಹಚ್ಚಿದೆಯೇ ವಿನಃ ಗೌತಮ್ ಗಂಭೀರ್ ಬಿಸಿಲು ತಡೆಯಲಾರದೇ ಕಾರಿನ ಒಳಗೆ ಕೂತಿರುವುದು ಸುಳ್ಳು ಎಂದಾಗಲಿ, ಅದು ಫೋಟೋ ಶಾಪ್ ಫೋಟೊ ಎಂದಾಗಲಿ ಎಲ್ಲಿಯೂ ಹೇಳಿಲ್ಲ.

ಹೀಗಿರುವಾಗ ಬಹಳಷ್ಟು ನೆಟ್ಟಿಗರು ಮಾಡಿರುವ ಟ್ರೋಲ್ ಸರಿಯಾಗಿಯೇ ಇದೆ. ಅವರ್ಯಾರು ಫೋಟೊದಲ್ಲಿರುವ ವ್ಯಕ್ತಿ ಗೌರವ್ ಅರೋರ ಅವರಲ್ಲ ಎಂದು ಹೇಳಿಲ್ಲ. ಗಂಭೀರ್ ಬಿಸಿಲಿಗೆ ಬಾರದೇ ಕಾರಿನಲ್ಲಿ ಕುಳಿತು ಅವರನ್ನು ಹೋಲುವವರಿಂದ ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಸರಿಯಾಗಿಯೇ ದೂರಿದ್ದಾರೆ. ವಾಸ್ತವದಲ್ಲಿ ಆಪ್ ಪಕ್ಷದವರು ಮೇಲೆ ನಿಂತಿರುವ ವ್ಯಕ್ತಿ ಗೌರವ್ ಅರೋರ ಎಂದೇ ಹೇಳಿದ್ದಾರೆ. ಆದರೂ ಫೇಸ್ ಬುಕ್ ಅದು ಫೇಕ್ ಫೋಟೊ ಅಂತಲೂ, ಅದರ ಮೇಲೆ ಮತ್ತು ಕೆಳಗೆ ಫ್ಯಾಕ್ಟ್ ಚೆಕ್ ಲಿಂಕ್ ಬರುವಂತೆಯೂ ಮಾಡಿದೆ. ಆ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿಗೆ ನೆರವಾಗಿದೆ.

ಹಾಗೇ ನೋಡಿದರೆ ಫೇಕ್ ಫೋಟೊಶಾಪ್‍ಗಳನ್ನು ಶುರುಮಾಡಿದ್ದು, ದೊಡ್ಡ ಮಟ್ಟದಲ್ಲಿ ಸುಳ್ಳು ಹರಡಿದ್ದು ಬಿಜೆಪಿಯ ಕಾರ್ಯಕರ್ತರೆ ಎಂಬುದು ಎಲ್ಲರಿಗೂ ಗೊತ್ತಿದೆ. ವಾಟ್ಸಾಪ್ ಯೂನಿವರ್ಸಿಟಿ ಎಂದು ವ್ಯಂಗ್ಯದಿಂದ ಕರೆಸಿಕೊಳ್ಳುವುದನ್ನು ಆರಂಭಿಸಿರುವುದು ಸಹ ಬಿಜೆಪಿಯೇ. ಹೀಗಿರುವಾಗ ಒಂದು ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ದವಿಲ್ಲ. ಅದು ಏನಾದರೂ ಮಾಡಿ ಆ ಸತ್ಯ ಹರಡದಂತೆ ತಡೆಯಲು ಮುಂದಾಗುತ್ತಿದೆ ಎಂಬುದಕ್ಕೆ ಗಂಭೀರ್ ಪ್ರಕರಣ ಒಂದು ಉದಾಹರಣೆ. ಈ ಹಿಂದೆ ಪಟೇಲ್ ಪ್ರತಿಮೆ ಅನಾವರಣವಾದಾಗ ಒಂದು ಕಡೆ ದೊಡ್ಡ ಪಟೇಲ್ ಪ್ರತಿಮೆ ಇನ್ನೊಂದು ಕಡೆ ಬಡಕುಟುಂಬ ಹೊಟ್ಟೆಗಿಲ್ಲದೆ ಇರುವ ಫೋಟೊವೊಂದನ್ನು ಫೋಟೊಶಾಪ್ ಮಾಡಲಾಗಿತ್ತು. ಆಗಲೂ ಇದೇ ರೀತಿ ಆ ಫೋಟೊವನ್ನು ಯಾರಾದರೂ ಷೇರ್ ಮಾಡಿದರೆ ಅದು ಫೇಕ್ ಪೋಟೊ ಅಂತ ಬರುತ್ತಿತ್ತು. ಕೆಳಗೆ ಬೂಮ್ ಫ್ಯಾಕ್ಟ್ ಚೆಕ್ ಸಹ. ಆಗ ಅದು ಫೋಟೊಶಾಪ್ ಆದ್ದರಿಂದ ಪರವಾಗಿಲ್ಲ ಎನ್ನಬಹುದು. ಆದರೆ ಈಗ ನಿಜ ಫೋಟೊಗೂ ಫೇಕ್ ಎಂದು ಬರುತ್ತಿರುವುದು ಅಕ್ಷಮ್ಯವಾಗಿದೆ.
ಇದರಿಂದ ಫೇಸ್‍ಬುಕ್ ಬಿಜೆಪಿ ಪರವಾಗಿ, ಮೋದಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿ ಹೇಳುತ್ತದೆ. ಏಕೆಂದರೆ ಬಿಜೆಪಿಯ ಸುಳ್ಳುಗಳಿಗೆ ಯಾವುದೇ ಕಡಿವಾಣ ಹಾಕದೇ ಇತರ ಪಕ್ಷಗಳ ಸತ್ಯಗಳನ್ನು ಸಹ ಸುಳ್ಳು ಎಂದು ಹೇಳುವುದು ಯಾವ ರೀತಿ ಸರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read