Homeಕರ್ನಾಟಕಪ್ರಯಾಣಿಕನ ಸೊಂಟಕ್ಕೆ ಕಂಪ್ಯೂಟರ್ ನಲ್ಲೇ ಬೆಲ್ಟ್ ಬಾಂಬ್ ಕಟ್ಟಿದ ಚಾನೆಲ್‍ಗಳು 

ಪ್ರಯಾಣಿಕನ ಸೊಂಟಕ್ಕೆ ಕಂಪ್ಯೂಟರ್ ನಲ್ಲೇ ಬೆಲ್ಟ್ ಬಾಂಬ್ ಕಟ್ಟಿದ ಚಾನೆಲ್‍ಗಳು 

ಮಾಧ್ಯಮ ಭಯೋತ್ಪಾದಕರಿಗೆ ಶಿಕ್ಷೆಯಿಲ್ಲವೇ? ನಮ್ಮ ಬೆಂಗಳೂರಿನಲ್ಲಿ ನಡೆದ ಆತಂಕಕಾರಿ ವಿದ್ಯಮಾನ

- Advertisement -
- Advertisement -

| ನಾನುಗೌರಿ ಡೆಸ್ಕ್ |

ತಮ್ಮ ಬದುಕಿನ ಜಂಜಾಟಗಳಲ್ಲಿ ಮುಳುಗಿ ಹೋಗಿರುವ ವ್ಯಕ್ತಿಗಳಿಬ್ಬರು ಎಲ್ಲೋ ಪ್ರಯಾಣಿಸುತ್ತಿರುತ್ತಾರೆ. ಎಲ್ಲರಂತೆ ಉದ್ಯೋಗ, ಸಂಸಾರ, ಕಷ್ಟ ಸುಖ ಎಲ್ಲ ಇರುವ ಸಾಮಾನ್ಯ ಜನ ಅವರು. ಇದ್ದಕ್ಕಿದ್ದಂತೆ ಅವರ ಕುರಿತು ಟಿವಿ ವಾಹಿನಿಗಳಲ್ಲಿ ಅವರು ಭಯೋತ್ಪಾದಕ ಎಂಬ ಸುದ್ದಿ ಬರುತ್ತಿದೆ ಎಂಬುದನ್ನು ನೆರೆಮನೆಯವರು ತಿಳಿಸುತ್ತಾರೆ. ಅಷ್ಟೇ ಅಲ್ಲದೇ ಅಂದಿನ ಹೊಟ್ಟೆಪಾಡಿನ ಕೆಲಸ ಮುಗಿಸಿ ತಮ್ಮಂತೆ ತಾವೇ ರೈಲಿನಲ್ಲಿ ಪ್ರಯಾಣ ಮಾಡಿ ಮನೆ ಸೇರಿಕೊಂಡವರ ವಿಡಿಯೋ ಚಿತ್ರದಲ್ಲಿನ ಆಕೃತಿಯ ಸೊಂಟಕ್ಕೆ ಬೆಲ್ಟ್ ಬಾಂಬನ್ನು ಕಂಪ್ಯೂಟರ್‍ನಲ್ಲಿ ಜೋಡಿಸಿ, ಇವರು ಬಾಂಬ್ ಕಟ್ಟಿಕೊಂಡು ಬಂದಿದ್ದರು ಎಂಬ ಸುದ್ದಿ ಪ್ರಕಟವಾದರೆ? ಅದರಲ್ಲೂ ಆ ವ್ಯಕ್ತಿ ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿದ್ದು, ಸಮಾಜದಲ್ಲಿ ಈಗಾಗಲೇ ಅಶಾಂತಿ ಇದ್ದು ಟಿವಿ ನೋಡಿದ ಜನ ರೊಚ್ಚಿಗೇಳುವ ಸಾಧ್ಯತೆ ಇರುವಾಗ ಇಂತಹ ಕೆಲಸ ಮಾಡಿದರೆ ನಾಗರಿಕ ಸರ್ಕಾರವೊಂದು ಏನು ಮಾಡಬೇಕು? ಈ ಪ್ರಶ್ನೆಗಳು ನಮ್ಮ ಬೆಂಗಳೂರಿನ ನಮ್ಮ ಮೆಟ್ರೋದಲ್ಲೇ ನಡೆದಿದೆ. ವಿವರಗಳು ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸುತ್ತವೆ.

ಘಟನೆ 1: ಮೇ 6ರ ಸೋಮವಾರ ಸಂಜೆ 7.18ಕ್ಕೆ ರಾಜಸ್ಥಾನ ಮೂಲದ ಸಾಜಿದ್ ಖಾನ್ ಎಂಬುವವರು ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೊದಲ್ಲಿ ಪ್ರಯಾಣಿಸಲು ಬಂದಿದ್ದಾರೆ. ಇವರು ಪ್ರತಿ ವರ್ಷ ರಂಜಾನ್ ಸಮಯದಲ್ಲಿ ಮಸೀದಿಗಳ ಎದುರು ದಾನ (ಝಕಾತ್) ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ. ಈ ರೀತಿ ದಾನವಾಗಿ ಪಡೆದಿದ್ದ ಕೆಲವು ನಾಣ್ಯಗಳು ಮತ್ತು ತಾಯತ ಇವರ ಜೇಬಿನಲ್ಲಿದ್ದ ಕಾರಣ ಮೆಟ್ರೊ ಪ್ರವೇಶದ್ವಾರದಲ್ಲಿ ಬೀಪ್ ಶಬ್ದ ಬಂದಿದೆ. ಸೆಕ್ಯುರಿಟಿ ಗಾರ್ಡ್‍ಗಳು ಹೆಚ್ಚಿನ ತಪಾಸಣೆ ನಡೆಸಲು ಮುಂದಾದಾಗ ಸಾಜಿದ್‍ರವರಿಗೆ ಕನ್ನಡ ಭಾಷೆ ಬಾರದ ಕಾರಣ ಗೊಂದಲ ಉಂಟಾಗಿದೆ. ಇದರಿಂದ ಸಾಜಿದ್‍ರವರು ಮೆಟ್ರೊ ಪ್ರವೇಶಿಸದೇ ವಾಪಸ್ ಹೋಗಿದ್ದಾರೆ.

ಇದರ ಮಾರನೆಯ ದಿನ ಎಲ್ಲಾ ಪತ್ರಿಕೆ ಮತ್ತು ಟಿ.ವಿಗಳಲ್ಲಿ ಭಯೋತ್ಪಾದನೆ ಆರಂಭವಾಯಿತು. ಈತ ಆತ್ಮಾಹುತಿ ಬಾಂಬರ್ ಇರಬೇಕು, ಈತನ ಬಳಿ ಗನ್ ಇತ್ತು, ಮೆಟ್ರೊ ಸ್ವಚ್ಚತ ಸಿಬ್ಬಂದಿಗೆ ಸಹಕರಿಸಿದರೆ ಒಂದು ಕೋಟಿ ರೂ ಕೊಡುವುದಾಗಿ ಹೇಳಿದ್ದ, ಶ್ರೀಲಂಕಾದಿಂದ ಉಗ್ರರು ಬೆಂಗಳೂರಿಗೆ ಬಂದಿದ್ದಾರೆ ಎಚ್ಚರವಾಗಿರಿ, ಗಡ್ಡಬಿಟ್ಟ, ಜುಬ್ಬ ಧರಿಸಿದ ವ್ಯಕ್ತಿಗಳು ಕಂಡರೆ ಪೊಲೀಸರಿಗೆ ತಿಳಿಸಿ ಅಥವಾ ನಮಗೆ ತಿಳಿಸಿ ಎಂದೆಲ್ಲಾ ಟಿ.ವಿಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಮೆಟ್ರೊ ಸಿಬ್ಬಂದಿಗಳು ಸಹ ಟಿವಿಯಲ್ಲಿ ಬರುವ ಕೀಳುಮಟ್ಟದ ಆಸೆಗೆ ಹೌದು ಆತನ ಮುಖಕ್ಕೆ ಬಟ್ಟೆ ಕಟ್ಟಿದ್ದ, ಆತ ಭಯೋತ್ಪದಾಕನೇ ಇರಬೇಕು ಎಂದೆಲ್ಲಾ ಬೂಸಿ ಬಿಟ್ಟಿದ್ದಲ್ಲದೇ ಸಿಸಿಟಿವಿಯ ಫೂಟೇಜ್‍ಗಳನ್ನು ಟಿ.ವಿ ಮಾಧ್ಯಮದವರಿಗೆ ನೀಡಿ ತಾವೇನೊ ಮಹಾನ್ ಸಾಧನೆ ಮಾಡಿದವರಂತೆ ಸಂಭ್ರಮಿಸಿದ್ದಾರೆ.

ಈ ಸಿಸಿಟಿವಿ ಫೂಟೆಜ್ ಸಿಕ್ಕ ಕೂಡಲೇ ಆತನ ದೃಶ್ಯವನ್ನು ಎಡಿಟ್ ಮಾಡಿದ ಕೆಲ ಚಾನೆಲ್‍ಗಳು ಆತನ ಮುಖಕ್ಕೆ ಬಟ್ಟೆ ಕಟ್ಟಿರುವ ರೀತಿ ಎಡಿಟ್ ಮಾಡಿದರು. ಆತನ ಸೊಂಟಕ್ಕೂ ಕೂಡ ಬೆಲ್ಟ್ ಹಾಕಿ ಇದೇ ನೋಡಿ ಬಾಂಬ್ ಎಂದೆಲ್ಲಾ ಗಂಟೆಗಟ್ಟಲೇ ಪ್ರಸಾರ ಮಾಡಿದ್ದಾರೆ.

ವಿಶ್ವಾಸಾರ್ಹ ಪತ್ರಿಕೆ ಎಂದು ಕರೆದುಕೊಳ್ಳುವವರು ಸಹ ‘ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯು ಆತ್ಮಾಹುತಿ ಬಾಂಬರ್’ ಎಂದು ಮೆಟ್ರೊ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ, ‘ಪ್ರಯಾಣಿಕರ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಭದ್ರತಾ ತಪಾಸಣೆಗೆ ಒಳಗಾಗಲು ನಿರಾಕರಿಸಿ ಕಾಲ್ಕಿತ್ತಿದ್ದಾನೆ’, ಉತ್ತರ ದ್ವಾರದಲ್ಲಿ ಪ್ರವೇಶಿಸಲು ವಿಫಲವಾದ ಮೇಲೆ 15 ನಂತರ ಪಶ್ಚಿಮ ದ್ವಾರದಲ್ಲಿ ಕಾಣಿಸಿಕೊಂಡಿದ್ದ, ಆಟೋರಿಕ್ಷಾ ಚಾಲಕರು ಮತ್ತು ಮೆಟ್ರೋ ಭದ್ರತಾ ಸಿಬ್ಬಂದಿ ಹಿಡಿಯಲು ಯತ್ನಿಸಿದಾಗ ತಪ್ಪಿಸಿಕೊಂಡಿದ್ದಾನೆ ಎಂದೆಲ್ಲಾ ರೋಚಕ ವರದಿ ಮಾಡಿ ಆತಂಕ ಸೃಷ್ಟಿಸಿದರು.

ಪೊಲೀಸರು ತನಿಖೆ ನಡೆಸಿದಾಗ ಆತ ಅಮಾಯಕ. ಆತ ಎಲ್ಲಿಯೂ ಓಡಿ ಹೋಗಿಲ್ಲ ಬದಲಿಗೆ ಆರ್.ಟಿ ನಗರದ ಮಸೀದಿ ಎದುರು ದಾನ ಪಡೆಯಲು ಕೂತಿದ್ದ ಎಂದು ಸ್ಪಷ್ಟಪಡಿಸಿ ಆತಂಕಪಡಬೇಡಿ ಎಂದಿದ್ದಾರೆ. ಇದ್ಯಾವುದರ ಪರಿವೆಯೂ ಪಾಪ ಸಾಜಿದ್ ಖಾನ್‍ಗಿಲ್ಲ. ಒಂದು ವೇಳೆ ಆತ ಪೊಲೀಸರಿಗೆ ಸಿಗುವ ಬದಲು ಟಿವಿ ಚಾನಲ್‍ನವರಿಗೆ ಸಿಕ್ಕಿದ್ದರೆ ಖಂಡಿತಾ ಆತನನ್ನು ಸ್ಟುಡಿಯೋದಲ್ಲಿ ಕೂಡಿಹಾಕಿ ಏನೆಲ್ಲಾ ಅವಾಂತರ ಮಾಡುತ್ತಿದ್ದರೋ ಏನೋ?

ಘಟನೆ 2: ಮೇ 7ರ ಮಂಗಳವಾರ ಸಂಜೆ 5.45ಕ್ಕೆ 57 ವರ್ಷದ ಗಡಿಯಾರ ವ್ಯಾಪಾರಿಯಾದ ರಿಯಾಝ್ ಅಹ್ಮದ್ ಎಂಬುವವರು ಮೆಜೆಸ್ಟಿಕ್‍ನ ಸುರಂಗ ಮಾರ್ಗದಲ್ಲಿ ಕೆಲಸ ಮುಗಿಸಿ ಮೆಟ್ರೊದಲ್ಲಿ ಮನೆಗೆ ಹೋಗಲು ಬಂದಿದ್ದಾರೆ. ತಪಾಸಣೆ ನಡೆಸಿದ್ದ ಸಿಬ್ಬಂದಿ ಜೇಬಿನಲ್ಲಿರುವುದನ್ನು ಹೊರತೆಗೆಯುವಂತೆ ಹೇಳಿದಾಗ ಅವರು ತೋರಿಸಿ ನಂತರ ಮೆಟ್ರೊದಲ್ಲಿ ಪ್ರಯಾಣಿಸಿ ನಾಯಂಡಹಳ್ಳಿಯ ಮನೆ ತಲುಪಿದ್ದಾರೆ.

ಆಗ ಸ್ವಲ್ಪ ಹೊತ್ತಿನಲ್ಲೇ ಮಾಧ್ಯಮ ಭಯೋತ್ಪಾದನೆ ಆರಂಭವಾಯಿತು. ಮುಖ್ಯವಾಗಿ ಪಬ್ಲಿಕ್ ಟಿ.ವಿ ಗಡ್ಡಬಿಟ್ಟು ಪೈಜಾಮ ಹಾಕಿ ವ್ಯಕ್ತಿ, ಆಹ್ಮಾಹುತಿ.. ಬ್ಲ ಬ್ಲ ಬ್ಲ ಇತ್ಯಾದಿ ಅರಚಾಡಿ ಕೂಗಾಡಿದ್ದಾರೆ. ಟಿವಿ 5 ಎಂಬ ಅವಿವೇಕಿ ಚಾನಲ್ ತಾವು ಮಾಡಿದ ವರದಿಯಿಂದ ರಾ, ಐಬಿ, ಎನ್‍ಐಎ ಸೇರಿದಂತೆ ದೇಶದ ಪ್ರಮುಖ ತನಿಖಾ ಸುದ್ದಿ ಸಂಸ್ಥೆಗಳು ಹೈ ಅಲರ್ಟ್ ಆಗಿವೆ ಎಂದು ಅರಚಿಕೊಂಡಿದೆ. ಈ ಸುದ್ದಿ ನಾವೇ ಮೊದಲು ಪ್ರಸಾರ ಮಾಡಿದ್ದು ಎಂದು ಮತ್ತೆ ಪೈಪೋಟಿಗೆ ಬಿದ್ದಿವೆ.

ಅತ್ತ ಆ ವ್ಯಕ್ತಿ ರಿಯಾಝ್ ಅಹ್ಮದ್‍ರ ಪಕ್ಕದ ಮನೆಯ ವ್ಯಕ್ತಿ ಬಂದು ನಿಮ್ಮ ಪೋಟೊ ಟಿವಿಯಲ್ಲಿ ಬರುತ್ತಿದೆ, ಭಯೋತ್ಪಾದಕ ಎಂದೆಲ್ಲಾ ತೋರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಭಯಬಿದ್ದ ರಿಯಾಝ್‍ರವರು ಸ್ನೇಹಿತರ ಜೊತೆ ಸೇರಿ ನೇರ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್‍ಗೆ ತೆರಳಿ ಪಬ್ಲಿಕ್ ಟಿವಿಯ ವಿರುದ್ಧ ಕಂಪ್ಲೈಂಟ್ ನೀಡಿದ್ದಾರೆ. ತಾನು 30 ವರ್ಷಗಳಿಂದಲೂ ಮೆಜೆಸ್ಟಿಕ್ ಕೆಳಗೆ ರಸ್ತೆ ಬದಿಯಲ್ಲಿ ವಾಚ್ ವ್ಯಾಪಾರ ಮಾಡುತ್ತೇನೆ. ಬಿಬಿಎಂಪಿಯವರು ಕೊಟ್ಟಿರುವ ಪರವಾನಗಿ ಕಾರ್ಡ್ ಕೂಡ ನನ್ನ ಬಳಿ ಇದೆ. ಹೀಗೆಲ್ಲಾ ಇಲ್ಲಸಲ್ಲದ ಸುದ್ದಿ ಹಬ್ಬಿಸಿರುವುದರಿಂದ ನನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ. ಗಡ್ಡಬಿಟ್ಟು ಜುಬ್ಬಾ ಪೈಜಾಮ ಹಾಕಿದವರೆಲ್ಲಾ ಭಯೋತ್ಪಾದಕರ? ಎಂದು ಪ್ರಶ್ನಿಸಿದ್ದಾರೆ.

ರಿಯಾಜ್ ಅಹ್ಮದ್

ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಮತ್ತು ರವಿ ಚನ್ನಣ್ಣನವರ್ ‘ಈ ವಿಚಾರದಲ್ಲಿ ಇವರಿಬ್ಬರು ಮುಗ್ಧರಾಗಿದ್ದು ಟಿವಿ ಚಾನೆಲ್‍ನವರೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇಂತ ಘೋರ ಅಪರಾಧ ನಡೆಸಿರುವ ಟಿವಿ ಚಾನೆಲ್‍ಗಳ ಮೇಲೆ ಕ್ರಮ ಕೈಗೊಂಡಿಲ್ಲ. ಯಾರೊಬ್ಬರ ಬಂಧನವೂ ಆಗಿಲ್ಲ.

ಆ ಸಿಸಿಟಿವಿ ದೃಶ್ಯಾವಳಿಗಳನ್ನು ಟಿವಿಯವರಿಗೆ ಕಾನೂನುಬಾಹಿರವಾಗಿ ಕೊಟ್ಟಿದ್ದು ಯಾರು ಮತ್ತು ಏಕೆ? ಈ ರೀತಿ ತಪ್ಪು ಸುದ್ದಿ ಪ್ರಕಟಿಸಿ ಜನರಲ್ಲಿ ಆತಂಕವನ್ನು ಹೆಚ್ಚಿಸುವುದಲ್ಲದೇ ಕೆಲವರು ರೊಚ್ಚಿಗೆದ್ದು ಶಂಕಿತರು ಎಂದು ಸಿಕ್ಕ ಸಿಕ್ಕವರನ್ನು ಥಳಿಸಿ ಕೊಲೆಗೈಯಲು ಮುಂದಾದರೆ ಗತಿ ಏನು? ಈ ಸಮಾಜದಲ್ಲಿ ಶಾಂತಿ ಸಾಮರಸ್ಯ ಉಳಿಯುತ್ತದೆಯೇ? ಈ ಮಾಧ್ಯಮಗಳ ಭಯೋತ್ಪಾದನೆಗೆ ಶಿಕ್ಷೆ ಇಲ್ಲವೇ ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ. ಹಾಗಾಗಿ ಕೆಲವು ಸಾಮಾಜಿಕ ಚಿಂತಕರನ್ನು ನಾನುಗೌರಿ.ಕಾಂ ಮಾತಾಡಿಸಿತು.

‘ಭಯವನ್ನು ಉತ್ಪಾದಿಸುವುದೇ ಭಯೋತ್ಪಾದನೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಧರ್ಮ – ಜಾತಿಯ ಹೆಸರಿನಲ್ಲಿ ಕೆಲವರು ಭಯವನ್ನು ಉತ್ಪಾದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳಲು, ಒಂದು ಸಮುದಾಯವನ್ನು ದೂಷಿಸಿ, ಆ ಸಮುದಾಯದ ಬಗ್ಗೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲು ಭಯವನ್ನು ಉತ್ಪಾದಿಸುತ್ತಾರೆ. ಇದು ಕೇವಲ ಟಿಆರ್‍ಪಿ ವಿಷಯ ಮಾತ್ರವಾಗಿರದೇ ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವೂ ಮಾಧ್ಯಮಗಳಿಗಿದ್ದಂತಿದೆ. ಅಂತಿಮವಾಗಿ ದೇಶ ಒಡೆದು ಹೋದರೂ ರಾಜಕೀಯ ಅಧಿಕಾರ ಗಿಟ್ಟಿಸುವುದು ಇವರ ಹಿಂದಿನ ಉದ್ದೇಶವಾಗಿದೆ. ಇದರಲ್ಲಿ ಅಮಾಯಕರು, ಮುಗ್ಧರು ಬಲಿಪಶುಗಳಾಗುವುದು ದುರಂತ.’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಮತ್ತು ಚಿಂತಕ ಕೆ.ಎಲ್.ಅಶೋಕ್.

‘ಇತ್ತೀಚೆಗಿನ ದಿನಗಳಲ್ಲಿ ಈ ಮಾಧ್ಯಮ ಭಯೋತ್ಪಾದನೆ ತೀವ್ರ ರೀತಿಯ ವೇಗವನ್ನು ಪಡೆದುಕೊಳ್ಳುತ್ತಿದೆ. ಎರಡು ಘಟನೆಗಳು ಅದನ್ನು ನಿರೂಪಿಸುತ್ತವೆ. ಇದನ್ನು ಇಲ್ಲಿಯೇ ನಿಯಂತ್ರಿಸದಿದ್ದರೆ ಯಾರ ಹಿಡಿತಕ್ಕೂ ಸಿಗದೇ ದೊಡ್ಡ ಅರಾಜಕ ವಾತಾವರಣ ಸೃಷ್ಟಿಯಾಗಿಬಿಡುತ್ತದೆ. ನೈತಿಕತೆ ಕಳೆದುಕೊಂಡು ಜೀವವಿರೋಧಿಗಳಂತೆ ವರ್ತಿಸುತ್ತಿರುವ ಇವರಿಗೆ ಶಿಕ್ಷೆಯಾಗದೆ ಹೋದರೆ ಈ ರೀತಿಯ ಪತ್ರಿಕೋದ್ಯಮವೆ  ಮಾದರಿಯಾಗಿವ ಅಪಾಯವಿದೆ  ಹಾಗಾಗಿ ಕೂಡಲೇ ಆ ಚಾನೆಲ್‍ನವರ ಮೇಲೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಪರಿಶೀಲಿಸದೇ, ಸಮರ್ಪಕ ದಾಖಲೆಗಳಿಲ್ಲದೇ ಸುದ್ದಿ ಪ್ರಕಟಿಸಬಾರದೆಂದು ಎಚ್ಚರಿಕೆ ನೀಡುವ ಅಗತ್ಯವಿದೆ’ ಎಂದು ರಾಜಕೀಯ ವಿಶ್ಲೇಷಕ ಮತ್ತು ಬರಹಗಾರ ಬಿ. ಶ್ರೀಪಾದ್ ಭಟ್ ಹೇಳುತ್ತಾರೆ.

‘ಜೊತೆಗೆ ಮುಸ್ಲಿಂ ಸಮುದಾಯಕ್ಕೂ ಸಾಂತ್ವನ ನೀಡಬೇಕಿದೆ. ನೊಂದ ಆ ವ್ಯಕ್ತಿಗಳಿಗೆ ಧೈರ್ಯ ತುಂಬಬೇಕಿದೆ. ಸಮಾಜದಲ್ಲಿ ದೊಡ್ಡ ಜಾಗೃತಿ ಮೂಡಿಸಬೇಕಿದೆ. ವದಂತಿಗಳು ಹರಡದಂತೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪೊಲೀಸರು ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸುವುದಿಲ್ಲ. ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ಅಂಥದನ್ನು ಮಾಡುವುದಿಲ್ಲ, ಬದಲಿಗೆ ಅಲ್ಪಸಂಖ್ಯಾತರ ಓಟುಗಳು ಸಿಕ್ಕರೆ ಸಾಕು ಎಂಬ ಮಾನಸಿಕತೆ ಅವರದ್ದು’ ಎಂದು ಎಸ್‍ಐಓದ ಅಧ್ಯಕ್ಷ ನಿಹಾಲ್ ನೊಂದು ನುಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಹಿಂಗೆ ಟೈಪ್ ಮಾಡುವ ಬದಲು ಹೋಗಿ ಕಂಪ್ಲೇಂಟ್ ಕೊಡಿ.ಓಹ್ ನಮ್ಮದೇನಿದ್ದರೂ ಬರೀ ತೋರ್ಪಡಿಕೆ ಅಲ್ಲವೇ ?
    ಸತ್ಯತೆ ಇದ್ದರೆ ಹೋಗಿ ಚಾನೆಲ್ ಗಳ ವಿರುದ್ಧ ಕಂಪ್ಲೇಂಟ್ ಮಾಡಿ …….

    ಕೈಲಾಗದ ಕಡಿಮೆ nistaru

  2. ನೀವ್ ರಿಪೋರ್ಟ್ ಮಾಡ್ತಿರೋದು ಎಲ್ಲಾ ಕ್ಲಾರಿಫಿಕೇಷನ್ ಸಿಕ್ಕ‌ಮೇಲೆ. ಟಿವಿ ಅವರು ರಿಪೋರ್ಟ್ ಮಾಡಿದ್ದು ಅನುಮಾನ ಬಂದ ಕೂಡಲೇ. ವ್ಯತ್ಯಾಸ ಇಲ್ಲೇ ಇರೋದು. ನೀವು ಬರೆದಿದ್ದು ನೋಡದಿದ್ರೂ ಜನ ಕಳೆದುಕೊಳ್ಳೋದು ಏನೂ ಇಲ್ಲ.‌ ಆದ್ರೆ‌ ಒಂದು ವೇಳೆ, ಬಂದಿದ್ದ ಆಗುಂತಕ ನಿಜಕ್ಕೂ ಸಮಸ್ಯೆ ಆಗಿದ್ದರೆ ಆಗೇನು ಮಾಡ್ತಿದ್ರಿ? ಆ ಆಗುಂತಕ ಬಂದು ಹೋದ ನಂತರ ಶ್ವಾನದಳ, ಬಾಂಬ್ ಸ್ಕ್ವಾಡ್ ಮತ್ತು ಡಿಸಿಪಿ ಸ್ಪೆಷಲ್ ಸ್ಕ್ವಾಡ್ ಮೆಟ್ರೋ ನಿಲ್ದಾಣಕ್ಕೆ ಬಂದು‌ ಕಡ್ಲೇಪುರಿ ತಿನ್ನೋಕೆ ಬಂದಿದ್ರಾ? ಅಷ್ಟಕ್ಕೂ ಆತ ಭಯೋತ್ಪಾದಕ ಇಲ್ಲದೇ ಇರಬಹುದು. ಆದ್ರೆ ಅದರಿಂದ ಒಳ್ಳೇಯದೇ ಆಗಿದೆ‌. ಭದ್ರತೆ ಇಲ್ಲದೇ ಇದ್ದ ಮಜೆಸ್ಟಿಕ್ ನಲ್ಲಿ ಈಗ ಫುಲ್ ಸೆಕ್ಯುರಿಟಿ ಕೊಡೋ ಯೋಜನೆ ಬಂದಿದೆ. ಬೆಂಗಳೂರು ಸ್ಲೀಪರ್ ಸೆಲ್ ಗಳ ತವರು ಅನ್ನೋದು ನಿಮ್ಮಂತ ಚಿಂತಕರಿಗೆ ಹೇಗೆ ಗೊತ್ತಾಗಬೇಕು. ನಿಜವಾಗ್ಲೂ ಉಗ್ರರು ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದಾಗ ನೀವು ಮಾತಾಡಿದ್ರಾ? ಹಂತಕರು ಅರೆಸ್ಟ್ ಆದಾಗಲೂ‌ ಅವರನ್ನ ಅಮಾಯಕರು ಎಂದು ಕರೆದವರು ನೀವು. ತನಿಖಾಧಿಕಾರಿಗಳನ್ನೆ ಅನುಮಾನದ ದೃಷ್ಟಿಯಿಂದ ನೋಡುವವರು‌ ನೀವು. ನಿಮ್ಮಿಂದ ಹೆಚ್ಚಿನದ್ದೇನನ್ನು‌ ನಿರೀಕ್ಷೆ ಮಾಡಲು ಸಾಧ್ಯ.
    ಸುಖಾಸುಮ್ನೆ ಕೈ ಫ್ರೀ ಇದೆ ಅಂತ‌ ಏನೇನೋ‌ ಗೀಚೋದಲ್ಲ. ಸಮಸ್ಯೆ ಆದ ಮೇಲೆ ವ್ಯವಸ್ಥೆಯ ಬಗ್ಗೆ ಗೂಬೆ ಕೂರಿಸೋದು ಬಿಟ್ಟು ಸಮಸ್ಯೆ ಆಗದಂತೆ ತಡೆಯೋದರ ಬಗ್ಗೆ ಯೋಚಿಸಿ. ಒಳ್ಳೆಯದಾಗುತ್ತೆ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....