Homeಮುಖಪುಟಮಾದರಿ ಪುಸ್ತಕಪ್ರೇಮಿ: ಕಟಿಂಗ್ ಶಾಪ್ ನಲ್ಲಿ ಪುಟ್ಟ ಗ್ರಂಥಾಲಯ, ಪುಸ್ತಕ ಓದು ಅಭಿಯಾನ

ಮಾದರಿ ಪುಸ್ತಕಪ್ರೇಮಿ: ಕಟಿಂಗ್ ಶಾಪ್ ನಲ್ಲಿ ಪುಟ್ಟ ಗ್ರಂಥಾಲಯ, ಪುಸ್ತಕ ಓದು ಅಭಿಯಾನ

- Advertisement -
- Advertisement -

ತರಾವರಿ ಪುಸ್ತಕಗಳ ಗ್ರಂಥಾಲಯವಿರುವ ಕಟಿಂಗ್ ಶಾಪಿನ ಫೋಟೋವೊಂದು ವೈರಲ್ ಆಗಿ ಓಡಾಡುತ್ತಿತ್ತು. ಮೇಲುನೋಟಕ್ಕೆ ಇದೊಂದು ಪೋಟೋಶಾಪ್ ಮಾಡಿದ ಫೇಕ್ ಫೋಟೋ ಇರಬೇಕು ಅಂದುಕೊಂಡೆ. ನಂತರ ಇದನ್ನು ಪರಿಶೀಲಿಸಲು ಗೂಗಲ್ ಮಾಡಿದಾಗ,  ಈ ಫೋಟೋದ ನಿಜದ ಕಥೆ ಹೇಳುವ ಹಿಂದೂ ಪತ್ರಿಕೆಯ ವರದಿಯೊಂದು ಕಾಣಿಸಿತು. ಈ ಫೋಟೋದ ಬಗೆಗಿನ ಕುತೂಹಲಕಾರಿ ಸಂಗತಿ ತಿಳಿಯಲೆಂದು ವರದಿಯನ್ನು ಅನುವಾದಿಸಿದ್ದೇನೆ.

ಪೊನ್ನ ಮರಿಯಪ್ಪ ಹದಿನೆಂಟು ವರ್ಷ ದಿನಗೂಲಿ ಮಾಡಿ ಅದರಲ್ಲಿ ಒಂದಷ್ಟು ಹಣವನ್ನು ಉಳಿತಾಯ ಮಾಡುತ್ತಾನೆ. ಈ ಹಣದಲ್ಲಿ ತನ್ನ ಬಹುದಿನದ ಕನಸಾದ ತನ್ನದೇ `ಸುರೇಶ್ ಬ್ಯೂಟಿ ಸೆಂಟರ್’ ಹೆಸರಿನ ಕಟಿಂಗ್ ಶಾಪೊಂದನ್ನು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮಿಲ್ಲೆರ್ ಪುರಂ ನಲ್ಲಿ 2014 ರಲ್ಲಿ ತೆರೆಯುತ್ತಾನೆ.

ಸಹಜವಾಗಿ ಕಟಿಂಗ್ ಮಾಡಿಸಲು ಬಂದವರು ತಮ್ಮ ಸರತಿ ಬರುವ ತನಕ ಕಾಯಬೇಕಾಗಿತ್ತು. ಈ ಅವಧಿಯಲ್ಲಿ ಎಲ್ಲರೂ ತಮ್ಮ ಮೊಬೈಲಿನಲ್ಲಿ ಮುಳುಗಿರುತ್ತಿದ್ದರು. ಕೆಲವರು ಶಾಪಲ್ಲಿನ ಟಿವಿ ನೋಡುತ್ತಿದ್ದರು. ಹೀಗಿರುವಾಗ ಮರಿಯಪ್ಪನಿಗೆ ಸರತಿ ಬರುವ ತನಕ ಕಾಯುವವರ ಕೈಗೆ ಪುಸ್ತಕಗಳನ್ನು ಯಾಕೆ ಕೊಡಬಾರದು ಎನ್ನುವ ಯೋಚನೆ ಹೊಳೆಯುತ್ತದೆ. ಮರುದಿನವೇ ತನ್ನ ಶಾಪಿನಿಂದ ಟಿ.ವಿಯನ್ನು ತೆಗೆಯುತ್ತಾನೆ. ಆಗ ಟಿವಿ ಇಟ್ಟಿದ್ದ ಜಾಗದಲ್ಲಿ  ದಿನ ಪತ್ರಿಕೆಗಳ ಜತೆ 5 ಪುಸ್ತಕಗಳನ್ನು ಇಡುತ್ತಾರೆ. ಈ ಐದೂ ಪುಸ್ತಕಗಳು ಕಾರ್ಲ್ ಮಾರ್ಕ್ಸ್, ಅಬ್ರಾಹಂ ಲಿಂಕನ್, ಪೆರಿಯಾರ್, ಅಣ್ಣಾದೊರೈ, ಅಬ್ದುಲ್ ಕಲಾಮ್ ಕುರಿತಾದ ಆತ್ಮಕಥನ/ಜೀವನ ಚರಿತ್ರೆಗಳು.  ಕೆಲವೇ ದಿನಗಳಲ್ಲಿ ಮೊಬೈಲ್ ನೋಡುವವರು ಈ ಪುಸ್ತಕಗಳನ್ನು ಹಿಡಿದು ತಿರುವಿಹಾಕಿ ಹಾಗೆ ಪುಸ್ತಕದ ಜಾಗಕ್ಕೆ ಇಡತೊಡಗಿದರು, ಕೆಲವರು ಚೂರು ಚೂರು ಓದತೊಡಗಿದರು. ಇದು ಮರಿಯಪ್ಪನ ಖುಷಿಯನ್ನು ಇಮ್ಮಡಿಗೊಳಿಸಿತು.

ಆ ನಂತರ ಮರಿಯಪ್ಪ ಹಳೆ ಪುಸ್ತಕ ಮಾರುವವರಲ್ಲಿ, ಹೆಚ್ಚು ರಿಯಾಯಿತಿ ದರದಲ್ಲಿ ಮಾರುವ ಪುಸ್ತಕ ಮೇಳಗಳಲ್ಲಿ ಪುಸ್ತಕಗಳನ್ನು ಕೊಂಡು ತನ್ನ ಶಾಪಿಗೆ ತರತೊಡಗುತ್ತಾನೆ. 2015 ರ ಕೊನೆಗೆ ಶಾಪಿನ ಒಂದು ಗೋಡೆಯನ್ನು ಪುಸ್ತಕಗಳ ಕಪಾಟಿಗಾಗಿ ಸಿದ್ದಗೊಳಿಸುತ್ತಾನೆ. ತತ್ವಶಾಸ್ತ್ರ, ವಿಜ್ಞಾನ, ಜನಪದ ಕತೆ, ಧರ್ಮ, ನೀತಿಕತೆಗಳು, ಮಕ್ಕಳಿಗೆ ಬೇಕಾಗುವ ರಮ್ಯ ಕಥೆಗಳು ಹೀಗೆ ಹಲವು ವೈವಿಧ್ಯಮಯ 250 ಪುಸ್ತಗಳು ಸೇರ್ಪಡೆಗೊಳ್ಳುತ್ತವೆ.

“ಶಾಪಿಗೆ ಬಂದು ಅವರ ಸರತಿ ಬರುವವರೆಗೆ ಕಾಯುವ ಗಿರಾಕಿಗಳನ್ನು ದಯವಿಟ್ಟು ಮೊಬೈಲ್ ಬಳಸಬೇಡಿ, ಇಲ್ಲಿ ಒಳ್ಳೊಳ್ಳೆ ಪುಸ್ತಕಗಳಿವೆ ಕಟಿಂಗ್ ಮಾಡಿಸಿಕೊಳ್ಳುವ ತನಕ ಪುಸ್ತಕ ಓದಿ” ಎಂದು ಆತ್ಮೀಯವಾಗಿ ಕೇಳಿಕೊಳ್ಳುವೆ. ಈ ತನಕ ಯಾರೂ ನನ್ನ ಮಾತನ್ನು ಮೀರಿಲ್ಲ. ಅದು ನನಗೆ ಖುಷಿಕೊಡುತ್ತದೆ ಎನ್ನುತ್ತಾನೆ ಮರಿಯಪ್ಪ.

ಶಾಲಾ ಮಕ್ಕಳು ಬಂದಾಗ, ನೀವು ಪುಸ್ತಕ ಓದುವುದು ಮಾತ್ರವಲ್ಲ, ನೀವು ಓದಿದ ಭಾಗದ ಮುಖ್ಯಾಂಶಗಳನ್ನು ಬರೆದು ಹೋಗಿ ಎಂದು ಹೇಳುತ್ತಾರೆ. ಹೀಗೆ ವಿವರ ಟಿಪ್ಪಣಿ ಪರಿಚಯ ಬರೆಯುವುದಕ್ಕಾಗಿ 2018 ರಿಂದ ಒಂದು ದಾಖಲಾತಿ ಪುಸ್ತಕವನ್ನೂ ಇಟ್ಟಿದ್ದಾರೆ. ಅದರಲ್ಲಿ ಪುಸ್ತಕ ಓದಿದವರು ಅಭಿಪ್ರಾಯ ಬರೆದು ಹೋಗುತ್ತಾರೆ. ಈತನಕ 300 ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಬಗ್ಗೆ ಅಭಿಪ್ರಾಯ, ತಮ್ಮ ಹೆಸರು ಮತ್ತು ಶಾಲೆಯ ವಿಳಾಸವನ್ನು ಬರೆದು ಹೋಗಿದ್ದಾರೆ.

ಕನಿಷ್ಠ ಒಂದು ಪುಸ್ತಕದ 10 ಪುಟ ಓದಿ, ಅದರ ಬಗ್ಗೆ ಒಂದು ಟಿಪ್ಪಣಿ ಬರೆದರೆ ಹೇರ್ ಕಟ್ ಗೆ 80 ರೂ ಇದ್ದರೆ.  30 ರೂ ರಿಯಾಯಿತಿ ಕೊಡುವುದಾಗಿ ಹೇಳಿ 2020 ರ ಹೊಸ ವರ್ಷವನ್ನು ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮರಿಯಪ್ಪನವರ ಸಲೂನ್ ಲೈಬ್ರರಿಯ ಫೋಟೋ ವೈರಲ್ ಆಗುವುದಕ್ಕಿಂತ ಮೊದಲು ಆರು ವರ್ಷ ಯಾವುದೇ ಪ್ರಚಾರ ಬಯಸದೆ ಮರಿಯಪ್ಪ ತನ್ನ ಸಲೂನಲ್ಲಿ ಓದು ಅಭಿಯಾನ ಶುರುಮಾಡಿದ್ದರು. ಮರಿಯಪ್ಪನ ಪುಸ್ತಕ ಪ್ರೀತಿ ನೋಡಿ ಪ್ರಸಿದ್ಧ ಪುಸ್ತಕ ಪ್ರಕಾಶನ Hatchette Indiaದವರು ಒಂದಷ್ಟು ಇಂಗ್ಲೀಷ್ ಪುಸ್ತಕಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಇದರಿಂದ ಆ ತನಕ ಬರಿ ತಮಿಳು ಪುಸ್ತಕ ಇಟ್ಟಿದ್ದ ಮರಿಯಪ್ಪ ಇದೀಗ ಇಂಗ್ಲೀಷ್ ಪುಸ್ತಕಗಳನ್ನು ಇಟ್ಟಿದ್ದಾರೆ. ತೂತುಕುಡಿ ಎಂ.ಪಿ. ಕನಿಮೋಜಿ ಯವರು 50 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಮರಿಯಪ್ಪನ ಸಲೂನಿನಲ್ಲಿ 900 ರಷ್ಟು ವೈವಿಧ್ಯಮಯ ತಮಿಳು, ಇಂಗ್ಲೀಷ್ ಪುಸ್ತಕಗಳ ಸಂಗ್ರಹವಾಗಿದೆ. ನಿರಂತರವಾಗಿ ಓದುತ್ತಿದ್ದರೆ ಹೊಸ ಹೊಸ ಆಲೋಚನೆಗಳು ಬರುತ್ತವೆ ಎಂದು ಮರಿಯಪ್ಪ ಹೇಳುತ್ತಾರೆ.

ತನ್ನ ವಿದ್ಯಭ್ಯಾಸ ಕುಂಟಿತವಾದರೂ ಬೇರೆಯವರು ಓದಬೇಕು, ಓದಿ ಜ್ಞಾನ ಸಂಪಾದಿಸಬೇಕೆಂದು ಕನಸುವ ಪೊನ್ನ ಮರಿಯಪ್ಪನವರ ನಡೆಯಿಂದ  ಸೆಲೂನ್ ಶಾಪ್ ನ ಸ್ಥಾಪಿತ ಕಲ್ಪನೆಯನ್ನೆ ಹೊಡೆದು ಹಾಕಿದ್ದಾರೆ.

  • (ಕೃಪೆ): ದ ಹಿಂದು
  • ಮೂಲ: ಸೋಮ ಬಸು
  • ಅನುವಾದ: ಅರುಣ್ ಜೋಳದಕೂಡ್ಲಿಗಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...