ಆಸ್ತಿಗಳನ್ನು ಕೆಡವುವ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಂಭಾಲ್‌ನಲ್ಲಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ಒಂದು ವಾರದ ನಂತರ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ. ಸಂಭಾಲ್
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿದೆ. ಸಂಭಾಲ್
ಅರ್ಜಿದಾರರಾದ ಮೊಹಮ್ಮದ್ ಘಯೂರ್ ಪರ ವಕೀಲರು, ಪ್ರಕರಣದಲ್ಲಿ ವಾದಿಸುವ ವಕೀಲರು ವೈಯಕ್ತಿಕ ತೊಂದರೆಯಲ್ಲಿದ್ದು, ಸ್ವಲ್ಪ ಸಮಯ ಪ್ರಕರಣವನ್ನು ಮುಂದೂಡುವಂತೆ ಕೋರಿದ್ದಾರೆ. ಒಂದು ವಾರದ ನಂತರ ವಿಚಾರಣೆಯನ್ನು ಮುಂದೂಡುವಂತೆ ಅವರು ಪೀಠವನ್ನು ಕೋರಿದ್ದು, ಹಾಗಾಗಿ ಅರ್ಜಿಯು ಒಂದು ವಾರದ ನಂತರ ವಿಚಾರಣೆಗೆ ಬರಲಿದೆ ಎಂದು ಪೀಠ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಕೀಲ ಚಂದ್ ಖುರೇಷಿ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಕಳೆದ ವರ್ಷದ ನವೆಂಬರ್ 13 ರಂದು ಸುಪ್ರೀಂ ಕೋರ್ಟ್ ನೀಡಿದ ಭಾರತದಾದ್ಯಂತ ಅನ್ವಯಿಸುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ. ಆ ವೇಳೆ ಸುಪ್ರಿಂಕೋರ್ಟ್ ನೀಡಿದ್ದ ಆದೇಶದಲ್ಲಿ, ಪೂರ್ವ ಕಾರಣ ಸೂಚನೆ ಇಲ್ಲದೆ ಯಾವುದೇ ಆಸ್ತಿಯನ್ನು ಕೆಡವಬಾರದು ಮತ್ತು ಪೀಡಿತರಿಗೆ ಪ್ರತಿಕ್ರಿಯಿಸಲು 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಹೇಳಿತ್ತು.
ಜನವರಿ 10-11 ರಂದು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಅಧಿಕಾರಿಗಳು ಅರ್ಜಿದಾರರ ಆಸ್ತಿಯ ಒಂದು ಭಾಗವನ್ನು ತನಗೆ ಅಥವಾ ತನ್ನ ಕುಟುಂಬ ಸದಸ್ಯರಿಗೆ ಯಾವುದೇ ಪೂರ್ವ ಸೂಚನೆ ಮತ್ತು ಪ್ರತಿಕ್ರಿಯಿಸಲು ಅವಕಾಶ ನೀಡದೆ ನೆಲಸಮ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
“ಅರ್ಜಿದಾರರು ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರ ಬಳಿ ಆಸ್ತಿಯ ಎಲ್ಲಾ ಅಗತ್ಯ ದಾಖಲೆಗಳು, ಅನುಮೋದಿತ ನಕ್ಷೆಗಳು ಮತ್ತು ಇತರ ಸಂಬಂಧಿತ ದಾಖಲೆಗಳಿವೆ ಎಂದು ಹೇಳಿಕೊಂಡಿದ್ದಾರೆ. ಆದದೂ ಅಧಿಕಾರಿಗಳು ಅರ್ಜಿದಾರರ ಆಸ್ತಿಯ ಆವರಣಕ್ಕೆ ಬಂದು ಸದರಿ ಆಸ್ತಿಯನ್ನು ಕೆಡವಲು ಪ್ರಾರಂಭಿಸಿದರು” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
2024ರ ನವೆಂಬರ್ ತೀರ್ಪಿನ ವೇಳೆ ಹಲವಾರು ನಿರ್ದೇಶನಗಳನ್ನು ನೀಡಿದ್ದ ಸುಪ್ರೀಂ ಕೋರ್ಟ್, ರಸ್ತೆ, ಪಾದಚಾರಿ ಮಾರ್ಗ, ರೈಲು ಮಾರ್ಗ ಅಥವಾ ಯಾವುದೇ ನದಿ ಅಥವಾ ಜಲಮೂಲಗಳಂತಹ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ರಚನೆ ಇದ್ದರೆ ಮತ್ತು ನ್ಯಾಯಾಲಯದಿಂದ ಕೆಡವಲು ಆದೇಶವಿದ್ದರೆ ಅವುಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಇದನ್ನೂಓದಿ: ‘ಜೆಪಿಸಿ’ಯಲ್ಲಿ ಭಾರಿ ಗದ್ದಲ; ಓವೈಸಿ ಸೇರಿದಂತೆ 10 ಸಂಸದರು ಸಭೆಯಿಂದ ಅಮಾನತು
‘ಜೆಪಿಸಿ’ಯಲ್ಲಿ ಭಾರಿ ಗದ್ದಲ; ಓವೈಸಿ ಸೇರಿದಂತೆ 10 ಸಂಸದರು ಸಭೆಯಿಂದ ಅಮಾನತು


