ಸಂದೇಶಖಾಲಿ ಘಟನೆಯಲ್ಲಿನ ಅತ್ಯಾಚಾರದ ಆರೋಪಗಳು ಹುದುಗಿದೆ ಎಂದು ಕೇಸರಿ ಪಕ್ಷದ ನಾಯಕರೊಬ್ಬರು ಕ್ಯಾಮೆರಾದಲ್ಲಿ “ತಪ್ಪೊಪ್ಪಿಕೊಂಡಿದ್ದಾರೆ” ಎಂದು ಆರೋಪಿಸಿ ಬಿಜೆಪಿಯ ಸುವೇಂದು ಅಧಿಕಾರಿ ಮತ್ತು ಇತರರ ವಿರುದ್ಧ ಟಿಎಂಸಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸಂದೇಶಖಾಲಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಕಯಲ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಧಿಕಾರಿ “ಇಡೀ ಪಿತೂರಿಯ ಹಿಂದೆ ಇದ್ದಾರೆ” ಎಂದು ಹೇಳಿರುವುದು ವಿಡಿಯೊದಲ್ಲಿ ಕೇಳಿಬಂದಿದೆ.
ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, “ಸ್ಟಿಂಗ್ ಆಪರೇಷನ್ ವೀಡಿಯೊದಲ್ಲಿ, ಅಧಿಕಾರಿಯ ಆದೇಶದ ಮೇರೆಗೆ ಲೈಂಗಿಕ ಕಿರುಕುಳದ ದೂರುಗಳನ್ನು ದಾಖಲಿಸಲಾಗಿದೆ ಎಂದು ಕಯಾಲ್ ಹೇಳಿದ್ದಾರೆ” ಎಂದು ದೂರಿದೆ.
ಇದೇ ವೇಳೆ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು, “ಸ್ಟಿಂಗ್ ಆಪರೇಷನ್ ನಕಲಿ” ಎಂದು ಆರೋಪಿಸಿದ್ದು, ಕೃತಕ ಬುದ್ಧಿಮತ್ತೆ (ಎಐ) ಬಳಸಿ ಇದನ್ನು ತಯಾರಿಸಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ‘ನನ್ನ ಮೇಲೆ ದೌರ್ಜನ್ಯ ನಡೆದಿಲ್ಲ..’; ಅತ್ಯಾಚಾರ ಆರೋಪ ಹಿಂತೆಗೆದುಕೊಂಡ ಸಂದೇಶಖಾಲಿ ಮಹಿಳೆ


