Homeಕರ್ನಾಟಕಇವರದೊಂದು ಜನ್ಮನಾ, ನಾಯಿ ಜನ್ಮ: ಈಶ್ವರಪ್ಪ ವಿರುದ್ಧ ಸಂತೋಷ್‌ ಪತ್ನಿ ಆಕ್ರೋಶ

ಇವರದೊಂದು ಜನ್ಮನಾ, ನಾಯಿ ಜನ್ಮ: ಈಶ್ವರಪ್ಪ ವಿರುದ್ಧ ಸಂತೋಷ್‌ ಪತ್ನಿ ಆಕ್ರೋಶ

“ನನ್ನ ಸಂಸಾರವನ್ನೇ ಹಾಳು ಮಾಡಿಬಿಟ್ಟರು ಇವರು. ಮದುವೆಯಾಗಿ ಮೂರು ವರ್ಷ ಆಗಿದೆ ಸಾರ್‌. ಎರಡು ವರ್ಷದ ಮಗು ಇದೆ. ನನ್ನ ಗತಿ ಏನಿವಾಗ? ಸಂತೋಷ್ ಯಾರು ಅಂತ ಗೊತ್ತಿಲ್ವಂತೆ?”

- Advertisement -
- Advertisement -

‘‘ಎಲ್ಲ ವ್ಯವಸ್ಥೆ ಮಾಡಿ ಕೊಡ್ತೀನಿ ಅಂತ ಹೇಳಿದವನು- ಈಗ ಯಾರೆಂದೇ ಗೊತ್ತಿಲ್ಲ ಅಂತಿದ್ದಾನೆ. ಇಂಥವರೆಲ್ಲ ಸರ್ಕಾರ ನಡೆಸಿದರೆ ಹೆಂಗೆ ಸರ್‌?’’- ಹೀಗೆ ಟಿ.ವಿ.9 ಕನ್ನಡ ಮಾಧ್ಯಮದೊಂದಿಗೆ ಅಳುತ್ತಾ ಮಾತನಾಡಿದ್ದಾರೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ಜಯಶ್ರೀ.

40 ಪರ್ಸೆಂಟ್‌ ಕಮಿಷನ್‌ಗಾಗಿ ಸಚಿವ ಕೆ.ಎಸ್.ಈಶ್ವರಪ್ಪನವರು ಪೀಡಿಸುತ್ತಿದ್ದರು ಎಂದು ಆರೋಪಿಸಿ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಈಶ್ವರಪ್ಪನವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘ಸಂತೋಷ್ ಪಾಟೀಲ್‌ ಯಾರೆಂದೇ ಗೊತ್ತಿಲ್ಲ’ ಎಂದಿರುವುದು ನೋವಿನ ಕಡಲಲ್ಲಿರುವ ಕುಟುಂಬಕ್ಕೆ ಮತ್ತಷ್ಟು ಆಘಾತ ತಂದಿದೆ. ಮುಡುಗಟ್ಟಿದ ಶೋಕದಲ್ಲೇ ಮಾಧ್ಯಮದೊಂದಿಗೆ ಮಾತನಾಡಿರುವ ಸಂತೋಷ್‌ ಪತ್ನಿ ಜಯಶ್ರೀಯವರು ಈಶ್ವರಪ್ಪ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನನ್ನ ಸಂಸಾರವನ್ನೇ ಹಾಳು ಮಾಡಿಬಿಟ್ಟರು ಇವರು. ಮದುವೆಯಾಗಿ ಮೂರು ವರ್ಷ ಆಗಿದೆ ಸಾರ್‌. ಎರಡು ವರ್ಷದ ಮಗು ಇದೆ. ನನ್ನ ಗತಿ ಏನಿವಾಗ? ಯಾರು ಅಂತ ಗೊತ್ತಿಲ್ವಂತೆ? ಗೊತ್ತಿಲ್ಲ ಅಂದ್ರೆ ಫೋಟೋದಲ್ಲಿ ಇರುತ್ತಿದ್ದರಾ?” ಎಂದು ಪ್ರಶ್ನಿಸಿದ್ದಾರೆ.

“ನಾನು ಪ್ರಗ್ನೆಂಟ್‌ ಇದ್ದಾಗ ಬಿಪಿ ಇತ್ತು. ನಾನು ಟೆನ್ಷನ್‌ ಮಾಡಿಕೊಳ್ಳುತ್ತೇನೆ ಅಂತ ನನ್ನ ಗಂಡ ನನ್ನೊಂದಿಗೆ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. 40 ಪರ್ಸೆಂಟ್‌ ಲಂಚ ಕೇಳ್ತಾರೆ ಅನ್ನೋ ವಿಷಯ ಮಾತ್ರ ಹೇಳುತ್ತಿದ್ದರು” ಎಂದು ತಿಳಿಸಿದ್ದಾರೆ.

“ಕಾಮಗಾರಿ ಮಾಡುತ್ತಿದ್ದನ್ನು ನಾವೇ ನಮ್ಮ ಕಣ್ಣಾರೆ ನೋಡಿದ್ದೇವೆ. ನನ್ನ ಗಂಡ ಸರಿಯಾಗಿ ಊಟ ಕೂಡ ಮಾಡುತ್ತಿರಲಿಲ್ಲ. ಮಧ್ಯಾಹ್ನ ಊಟ ಮಾಡದೆ ರಾತ್ರಿ ಮಾತ್ರ ಮಾಡುತ್ತಿದ್ದರು. ಅಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅದಕ್ಕೆ ಪ್ರತಿಫಲ ಸಿಗದಿದ್ದರೆ? ಯಾರು ಅಂತ ಗೊತ್ತೇ ಇರಲಿಲ್ಲವಂತೆ ಇವರಿಗೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಕೆಲಸ ಎಲ್ಲ ಮಾಡೋಕೆ ನಮಗೇನು ದುಡ್ಡು ಹೆಚ್ಚಾಗಿತ್ತಾ? ಸಾಲ ತಂದು ಕೆಲಸ ಮಾಡಿದ್ದಾರೆ. ನಮಗೆ ಗೊತ್ತಿಲ್ಲ ಅಂದ್ರೆ ಏನು ಹೇಳೋದು? ಇಂಥವರು ರಾಜಕಾರಣ ಮಾಡಬೇಕಾ? ಮಾಡಿದ ಕೆಲಸಕ್ಕೆ ಪ್ರತಿಫಲ ಕೊಡಲಿಲ್ಲ ಅಂದ್ರೆ ಏನ್‌ ಸಾರ್‌? ಇಂಥವರು ಅಧಿಕಾರದಲ್ಲಿದ್ದರೆ ಮುಗಿಯಿತು, ದೇಶ ಸಮಾಧಿನೇ. ನಮ್ಮ ಸಂಸಾರನಂತೂ ಸಮಾಧಿ ಮಾಡಿದ್ರು. ಇನ್ನು ದೇಶದ ಕಥೆ ಏನಿದೆಯೋ ಯಾರಿಗೆ ಗೊತ್ತು?” ಎಂದು ಪ್ರಶ್ನಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಈ ಹಿಂದೆ ಸಚಿವ ಈಶ್ವರಪ್ಪನವರನ್ನು ಭೇಟಿಯಾಗಿದ್ದರೆಂದು ಹೇಳಲಾಗುತ್ತಿರುವ ಈ ಫೋಟೋ ವೈರಲ್ ಆಗುತ್ತಿದೆ.

“ಕೆಲಸಕ್ಕೆ ಹೋಗುವಾಗ ಖುಷಿಯಿಂದ ಹೋಗುತ್ತಿದ್ದರು. ಟಿಫನ್‌ ಸಹಿತ ಬೇಡ, ಅಲ್ಲೇ ಎಲ್ಲಾದರೂ ತಿಂತೀನಿ ಅನ್ನುತ್ತಿದ್ದರು. ಅಷ್ಟು ಅವಸರ. ಬೆಳಿಗ್ಗೆ 6 ಗಂಟೆಗೆ ಎದ್ದು ಕೆಲಸಕ್ಕೆಂದು ಹೋದರೆ ರಾತ್ರಿ 11 ಗಂಟೆಯವರೆಗೂ ಬರುತ್ತಿರಲಿಲ್ಲ. ಕೆಲಸ ಚೆನ್ನಾಗಿ ನಡೆಯುತ್ತಿದೆ. ಸ್ವಲ್ಪ ರೆಸ್ಟ್ ತಗೊಳ್ಳಿ ಅನ್ನುತ್ತಿದ್ದೆ. ಎಲ್ಲಾ ಕಾಮಗಾರಿ ಪೂರ್ತಿ ಮಾಡಬೇಕು ಅನ್ನುತ್ತಿದ್ದರು. ಅಂಥವರು ಯಾರೆಂದು ಇವರಿಗೆ ಗೊತ್ತಿಲ್ಲವಂತೆ. ಅವರದ್ದು ಒಂದು ಜನ್ಮನಾ? ನಾಯಿ ಜನ್ಮ” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಜಯಶ್ರೀ.

“ಆರ್ಡರ್‌ ಪಾಸ್ ಮಾಡಿ ಅಂತ ಶಿವಮೊಗ್ಗಕ್ಕೆ ನನ್ನ ಗಂಡ ಹೋಗಿದ್ದರು. ಆರು ದಿನ ಅಲ್ಲೇ ಇದ್ದರು. ಬೆಳಿಗ್ಗೆ ಹೋದ್ರೆ ಸಾಯಂಕಾಲ ಬಾ, ಸಾಯಂಕಾಲ ಹೋದರೆ ಬೆಳಿಗ್ಗೆ ಬಾ ಎಂದು ಸಚಿವರು ಹೇಳುತ್ತಿದ್ದರು ಎಂದು ನನಗೆ ಕರೆ ಮಾಡಿ ತಿಳಿಸಿದ್ದರು. ಬರೀ ಆಟ ಆಡಿಸೋದೆ ಆಯ್ತು” ಎಂದು ನೋವು ತೋಡಿಕೊಂಡಿದ್ದಾರೆ.

“ಎಲ್ಲ ಕೆಲಸ ಮಾಡಿಸಿ, ನಾನಿದ್ದೀನಿ ಅಂದ್ರು. ಮಿನಿಸ್ಟರ್ ಹೇಳಿದ ಮೇಲೆ ಯಾರಾದರೂ ನಂಬುತ್ತಾರೆ ಅಲ್ವಾ ಸರ್‌? ಅವರ ಕೈಯಲ್ಲೇ ಆಡಳಿತ ಇರುತ್ತೆ. ನಂಬಿಕೆ ಇಟ್ಟು ಕೆಲಸ ಮಾಡಿದರೆ ನಂಬಿಕೆ ದ್ರೋಹ ಮಾಡೋದಾ? ನನ್ನ ಸಂಸಾರವಂತೂ ಸಮಾಧೀನೆ. ಮದುವೆಯಾಗಿ ಮೂರು ವರ್ಷ ಆಗಿಲ್ಲ. ಎರಡು ವರ್ಷದ ಮಗು ಇದೆ. ಹೇಗೆ ಸಮಾಧಾನ ಮಾಡಿಕೊಳ್ಳಲಿ ನಾನು?” ಎಂದು ಪ್ರಶ್ನಿಸಿದ್ದಾರೆ.

“ಕೈ ಸಾಲ ಎಲ್ಲ ಮಾಡಿಕೊಂಡಿದ್ದಾರೆ. ನನ್ನ ಎರಡು ಸರ, ಬಳೆ ಎಲ್ಲ ಒತ್ತೆ ಇಟ್ಟಿದ್ದಾರೆ. ಇಲ್ಲೇ ಹೋಗಿ ಬರ್ತೀನಿ ಅಂತ ಉಡುಪಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿರಿ: 40% ಕಮಿಷನ್‌: ಆತ್ಮಹತ್ಯೆ ಮಾಡಿಕೊಂಡ ಸಂತೋಷ್‌ ಯಾರೆಂದೇ ಗೊತ್ತಿಲ್ಲ- ಈಶ್ವರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಶ್ರೀಮಾನ್ ನರೇಂದ್ರ ಮೋದಿಯವರು… ನ ಖಾಯೇಗಾ… ನ ಖಿಲಾಯೆಗಾ ಅಂದಿದ್ದು ಬರೀ ಜನಗಳನ್ನ ಮೆಚ್ಚಿಸಗೊಸ್ಕರ್…. ಅಕ್ಕ ಪಕ್ಕದಲ್ಲಿರೋರಿಗೆ ತಿನ್ನಲು ಅವಕಾಶ ಮಾಡಿಕೊಟ್ಟಿದ್ದರು…..

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...