Homeಮುಖಪುಟಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷಕ್ಕೆ ಉಡುಪಿ ಆಯ್ದುಕೊಂಡು ತಪ್ಪು ಮಾಡಿದರು: ಸಸಿಕಾಂತ್ ಸೆಂಥಿಲ್

ಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷಕ್ಕೆ ಉಡುಪಿ ಆಯ್ದುಕೊಂಡು ತಪ್ಪು ಮಾಡಿದರು: ಸಸಿಕಾಂತ್ ಸೆಂಥಿಲ್

ನೀವು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೀರಿ. ಅವರಿಗಾಗಿ ಆಸ್ತಿ ಮಾಡುತ್ತಿದ್ದೀರಿ. ಆದರೆ ಸಮಾಜದಲ್ಲಿ ಉತ್ತಮ ಸೌಹಾರ್ದ ವಾತವಾರಣ ಇಲ್ಲದೆ ಇದ್ದರೆ ಏನು ಪ್ರಯೋಜನ? ದ್ವೇಷಮಯ ಸಮಾಜದಲ್ಲಿ ಅವರು ಹೇಗೆ ಬದುಕಬೇಕು? ಸೆಂಥಿಲ್ ಪ್ರಶ್ನೆ

- Advertisement -
- Advertisement -

ನೀವು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೀರಿ. ಅವರಿಗಾಗಿ ಆಸ್ತಿ ಮಾಡುತ್ತಿದ್ದೀರಿ. ಆದರೆ ಸಮಾಜದಲ್ಲಿ ಉತ್ತಮ ಸೌಹಾರ್ದ ವಾತವಾರಣ ಇಲ್ಲದೆ ಇದ್ದರೆ ಏನು ಪ್ರಯೋಜನ? ದ್ವೇಷಮಯ ಸಮಾಜದಲ್ಲಿ ಅವರು ಹೇಗೆ ಬದುಕಬೇಕು? ಹಾಗಾಗಿ ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ದನಿಯೆತ್ತಿ ಮಾತನಾಡಿ. ನಿಮಗೆ ಮಾತನಾಡದೆ ಬೇರೆ ಆಯ್ಕೆಯೇ ಇಲ್ಲ. ಅವರ ಬದುಕನ್ನು ಸುಂದರಗೊಳಿಸಲು ಸಹೋದರತ್ವವನ್ನು, ಭಾರತೀಯತೆಯನ್ನು ಆಚರಿಸಿ ಎಂದು ಮಾಜಿ ಐಎಸ್‌ಐ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಕರೆ ನೀಡಿದರು.

ಉಡುಪಿಯ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ನಡೆದ ಸಹಬಾಳ್ವೆ ಸಮಾವೇಶದ ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು, “ಇಂದು ನಡೆಯುತ್ತಿರುವುದು ಧರ್ಮಗಳ ಸಮಸ್ಯೆಯಲ್ಲ. ಇದು ಹಿಂದೂ ಮುಸ್ಲಿಂ ಸಮಸ್ಯೆಯೂ ಅಲ್ಲ. ಆದರೆ ಇದು ಎರಡು ಮನಸ್ಥಿತಿಗಳ ನಡುವಿನ ಸಮಸ್ಯೆಯಾಗಿದ್ದು, ಭಾರತದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ತಾವು ಎಲ್ಲರಿಗಿಂತ ಮೇಲೆಂಬ ಮನಸ್ಥಿತಿಯೊಂದಿದೆ. ಅದು ಸಮಾಜ ಎಂದರೆ ಮೇಲು ಕೀಳು ಇರಬೇಕೆಂದು ಬಯಸುತ್ತದೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಭಯ, ದ್ವೇಷ ಹುಟ್ಟುಹಾಕುತ್ತದೆ. ಅವರು ದೇಶವನ್ನು ತಮ್ಮ ಆಸ್ತಿಯಾಗಿ ಆಗಿ ನೋಡುತ್ತಾರೆ. ಈ ಮನಸ್ಥಿತಿಯು ಭಾರತೀಯತೆಗೆ ವಿರುದ್ಧವಾಗಿದೆ. ಈ ಸಮಸ್ಯೆಯು ಭಾರತವನ್ನು ನಂಬದೆ ಇರುವವರಿಂದ ಹುಟ್ಟಿದೆ” ಎಂದು ವಿಶ್ಲೇಷಿಸಿದರು.

ಇನ್ನೊಂದು ಮನಸ್ಥಿತಿ ಇದೆ. ಅದು ನಮ್ಮ ನಮ್ಮ ಮನಸ್ಥಿತಿ. ತಾರತಮ್ಯವಿಲ್ಲದ ಸಮಾನತೆಯ ಕನಸು ಹೊತ್ತಿರುವ ಮನಸ್ಥಿತಿ. ಅಂದರೆ ದೇಶವನ್ನು ನಂಬುವ ಭಾರತೀಯ ಎಂಬ ಚಿಂತನೆಯನ್ನು ಆಧರಿಸಿರುವ ಮನಸ್ಥಿತಿ. ದೇಶವೆಂದರೆ ಅಲ್ಲಿನ ಜನರು ಎಂದು ನಂಬಿ ಭಾರತದ ಜನತೆಗೆ ಜಯವಾಗಲಿ ಎಂದು ಕೂಗುತ್ತೇವೆ. ಈ ಎರಡು ಮನಸ್ಥಿತಿಗಳ ನಡುವೆ ಹೋರಾಟ ನಡೆಯುತ್ತಿದೆ. ಹಾಗಾಗಿ ಇದನ್ನು ಭಾರತವನ್ನು ನಂಬದ ಅವರ ಮತ್ತು ಭಾರತವನ್ನು ನಂಬುವ ನಮ್ಮ ಮನಸ್ಥಿತಿಗಳ ನಡುವಿನ ಹೋರಾಟವನ್ನಾಗಿ ನೋಡಬೇಕು ಎಂದರು.

“ನಮ್ಮ ಸಮಸ್ಯೆ ಎಂದರೆ ಭಾರತೀಯತೆ ಎಂಬ ಚಿಂತನೆಯನ್ನು ಆಚರಿಸುವುದನ್ನು ಮರೆತುಬಿಟ್ಟಿದ್ದೇವೆ. 50 ವರ್ಷಗಳಿಂದ ನಿಜವಾದ ಭಾರತವನ್ನು ಆಚರಣೆ ಮಾಡುವುದನ್ನು ನಾವು ಮರೆತಿದ್ದೇವೆ. ನಾವು ಇನ್ನು ಮುಂದೆ ಆಚರಣೆ ಮಾಡಬೇಕಾಗಿದೆ. ಈ ಆಚರಣೆ ಇಲ್ಲಿಂದ ಶುರುವಾಗಬೇಕಿದೆ ಅದಕ್ಕೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಎಲ್ಲಾ ಕಡೆ ಈ ಸಹೋದರತ್ವ, ಬಂಧುತ್ವವನ್ನು ಆಚರಿಸಬೇಕಿದೆ” ಎಂದು ತಿಳಿಸಿದರು.

ಭಾರತವನ್ನು ನಂಬದೆ ಇರುವವರು ಕೇವಲ ಶೇ. 10-15 ಮಾತ್ರ ಇದ್ದಾರೆ. ಆದರೆ ನಾವು ಶೇ. 85% ಕ್ಕಿಂತ ಹೆಚ್ಚಿದ್ದರೂ ಸುಮ್ಮನಿದ್ದೇವೆ. ಇಂದು ’ದ್ವೇಷ‘ ಹರಡುತ್ತಿರುವುದು ಸಮಸ್ಯೆಯಲ್ಲ. ಆದರೆ ಅದನ್ನು ನೋಡಿಕೊಂಡು ಸುಮ್ಮನಿರುವುದು ಸಮಸ್ಯೆಯಾಗಿದೆ. ಎಲ್ಲರೂ ಒಳ್ಳೆಯವರೇ ಆದರೆ ಅವರು ಮಾತನಾಡುತ್ತಿಲ್ಲ. ನಮ್ಮನ್ನು ಎಲ್ಲಿ ಸಿಕ್ಕಿ ಹಾಕಿಸುತ್ತಾರೊ ಎಂಬ ಭಯ ಅವರದು. ಎಚ್.ಎಸ್ ದೊರೆಸ್ವಾಮಿಯವರು ಯಾರಿಗೆ ಸಮಸ್ಯೆಯಾದರೂ ನಾವು ಅವರ ಜೊತೆ ನಿಲ್ಲಬೇಕೆಂದು ಹೇಳುತ್ತಿದ್ದರು ಮತ್ತು ಹೋರಾಡುತ್ತಿದ್ದರು. ಅವರು ನಮಗೆ ಮಾದರಿಯಾಗಬೇಕು. ದಲಿತರಿಗೆ, ಅಲ್ಪಸಂಖ್ಯಾತರಿಗೆ ಯಾರಿಗೆ ಸಮಸ್ಯೆಯಾದರೂ ನಾವು ಅವರ ಜೊತೆ ನಿಲ್ಲಬೇಕೆಂದು ಸೆಂಥಿಲ್ ಹೇಳಿದರು.

ನಾವು ಸಮಾಜದ ಸಮಸ್ಯೆಗಳನ್ನು ಹಿಂದೂ ಮುಸ್ಲಿಂ ಸಮಸ್ಯೆ ಎಂದು ಪರಿಗಣಿಸಬಾರದು. ಇದು ಧರ್ಮದ ಒಳಗಿನ ಜಗಳವಲ್ಲ. ಭಾರತೀಯರು ಮತ್ತು ಭಾರತವನ್ನು ಒಪ್ಪದೆ ಇರುವವರ ಸಮಸ್ಯೆ ಎಂದು ಮಾತನಾಡಬೇಕು, ಅದರನ್ನು ಸರಿಪಡಿಸಲು ಹೋರಾಡಬೇಕು. ನಮ್ಮಲ್ಲಿರುವ ಸಹೋದರತ್ವ, ಪ್ರೀತಿಯನ್ನು ಆಚರಿಸೋಣ, ಹಂಚೋಣ. ಅದೇ ಸರಿಯಾದ ಉತ್ತರವಾಗಿರುತ್ತದೆ. ಆಗ ಮಾತ್ರ ಭಾರತದ ಆತ್ಮವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಇದನ್ನೂ ಓದಿ: ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷ ಹರಡಲು ಉಡುಪಿ ಆಯ್ದುಕೊಂಡು ತಪ್ಪು ಮಾಡಿದ್ದಾರೆ. ಅದಕ್ಕೆ ಈಗ ಭಾರತೀಯ ಜನರಿಂದಲೇ ದೊಡ್ಡ ಪ್ರತಿಕ್ರಿಯೆ ಬರುತ್ತಿದೆ. ಈ ಸಮಾವೇಶ ಸಂಪೂರ್ಣ ಯಶಸ್ವಿಯಾಗಿದೆ. ಈ ಯಶಸ್ಸನ್ನು ಎಲ್ಲಾ ಜಿಲ್ಲೆಗಳಿಗೂ ತೆಗೆದುಕೊಂಡು ಹೋಗಬೇಕು. ಇಲ್ಲಿನ ಆಶಯವನ್ನು ಹಳ್ಳಿಹಳ್ಳಿಗೆ ತಲುಪಿಸಬೇಕು. ಅದಕ್ಕೆ ಯುವಶಕ್ತಿ ಸಜ್ಜುಗೊಳ್ಳಬೇಕು ಎಂದರು.

ತಾವು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಸಮಯವನ್ನು ಸ್ಮರಿಸಿಕೊಂಡ ಅವರು, ಆಗ ನಾನು ಅತಿ ಹೆಚ್ಚಿನ ಮಳೆಯಿಂದಾಗಿ ಶಾಲಾ ಮಕ್ಕಳಿಗೆ 13 ದಿನ ರಜೆ ಕೊಟ್ಟಿದೆ. ನನ್ನ ಮಕ್ಕಳ ಸುರಕ್ಷತೆಯ ಬಗ್ಗೆ ನನಗೆ ಭಯ ಇತ್ತು. ಅದಕ್ಕಾಗಿ ಇಂದಿಗೂ ಮಕ್ಕಳು ನನ್ನನ್ನು ನೆನೆಸಿಕೊಳ್ಳುತ್ತಾರೆ. ಆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಮಾತನಾಡಬೇಕಿದೆ. ವಯಕ್ತಿಕ ನೆಲೆಯಲ್ಲಾದರೂ ನೀವು ಮಾತನಾಡಿ, ಫೇಸ್‌ಬುಕ್‌ನಲ್ಲಿ ಸಹಬಾಳ್ವೆಯ ಸ್ಟೇಟಸ್ ಹಾಕಿ, ಹಾಡು ಹಾಡಿ ಮತ್ತು ಭಾರತೀಯತೆಯನ್ನು ಆಚರಿಸಿ ಎಂದು ಸೆಂಥಿಲ್ ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...