Homeಮುಖಪುಟದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ನಮ್ಮ ಕೈಯಲ್ಲಿ ಈ ದೇಶದ ಮಣ್ಣಿದೆ. ಸೂಫಿ ಪರಂಪರೆಯಿದೆ. ಬುದ್ದ, ಬಸವಣ್ಣ, ಭಗತ್ ಸಿಂಗ್, ಮೌಲಾನ ಆಜಾದ್ ಇದ್ದಾರೆ. ಅಂಬೇಡ್ಕರ್‌ರವರ ಸಂವಿಧಾನವಿದೆ.

- Advertisement -
- Advertisement -

ಯಾರು ಈ ದೇಶವನ್ನು ಕಟ್ಟುತ್ತಾರೋ, ಒಗ್ಗೂಡಿಸುತ್ತಾರೊ ಅವರು ದೇಶಪ್ರೇಮಿಗಳು. ಹಿಂದೂ – ಮುಸ್ಲಿಂ, ಹಿಂದೂ – ಸಿಖ್ಖರ ನಡುವೆ ಜಗಳ ತರುವವರು ದೇಶದ್ರೋಹಿಗಳು ಎಂದು ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶದಲ್ಲಿ ಮಾತನಾಡಿದ ಅವರು, “ಕೆಲವರು ಇಲ್ಲಿಯೇ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ. ನಾವು ಇಲ್ಲಿಯೇ ಸಾಮರಸ್ಯ ಮೂಡಿಸುತ್ತೇವೆ, ಸ್ನೇಹ ಬೆಳೆಸುತ್ತೇವೆ ಎನ್ನುತ್ತೇವೆ. ಅವರು ಒಡೆಯುತ್ತಾರೆ, ನಾವು ಕೂಡಿಸುತ್ತೇವೆ. ಅದು ದೆಹಲಿ‌ ತನಕ‌ ಕೇಳಿಸಲಿ. ಇದು ನನ್ನೊಬ್ಬನ ಹೃದಯದ ಮಾತಲ್ಲ, ನಿಮ್ಮೆಲ್ಲರ ಹೃದಯದ ಮಾತಾಗಿದೆ” ಎಂದರು.

ಈ ಸಮಾವೇಶಕ್ಕೆ ಉಡುಪಿಯನ್ನು ಆಯ್ದುಕೊಂಡಿದ್ದಕ್ಕೆ ಧನ್ಯವಾದಗಳು. ಏಕೆಂದರೆ ಇತ್ತೀಚಿನ ದ್ವೇಷದ ಅಲೆಗೆ ಉಡುಪಿಯನ್ನು ಆಯ್ದುಕೊಳ್ಳಲಾಗಿತ್ತು. ಉಡುಪಿಯ ಹೆಸರು ದೇಶದ ಎಲ್ಲಾ ಟಿವಿ ಚಾನೆಲ್‌ಗಳಲ್ಲಿ ಹರಡಿತು. ಕರಾವಳಿ ಕರ್ನಾಟಕ ಒಂದು ಸುಂದರ ತಾಣ. ಇಲ್ಲಿ ಎಲ್ಲವೂ ಬೆಳೆಯುತ್ತದೆ, ಇದು ಫಲವತ್ತಾದ ಸ್ಥಳವಾಗಿದೆ. ಹೀಗಾಗಿ ಇಲ್ಲೂ ಒಂದಿಷ್ಟು ದ್ವೇಷ ಬಿತ್ತೋಣ ಎಂದುಕೊಂಡಿದ್ದಾರೆ. ಆದರೆ ಅದರ ಫಸಲು ಬೆಳೆಯಲು ನಾವು ಬಿಡುವುದಿಲ್ಲ ಎಂದರು.

ಅವರು ಎರಡು ದರ್ಜೆಯ ಜನರನ್ನಾಗಿ ವಿಂಗಡಿಸಲು ಯತ್ನಿಸುತ್ತಾರೆ. ಪ್ರಥಮೆ, ಎರಡನೇ ದರ್ಜೆಯ ನಾಗರಿಕರನ್ನಾಗಿ ವಿಭಜಿಸಲು ಅವರು ಯತ್ನಿಸುತ್ತಾರೆ. ಮನೆಯ ಮಾಲಿಕ ಮತ್ತು ಮನೆಯ ಬಾಡಿಗೆದಾರ ಎಂಬ ವರ್ಗಗಳನ್ನು ಸೃಷ್ಟಿಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಕೆಲವರು ಹೇಳುತ್ತಾರೆ. ಹಿಂದಿ ಇನ್ನೂರು ವರ್ಷ ಹಳೆಯದು. ಆದರೆ ಕನ್ನಡ ಎರಡೂವರೆ ಸಾವಿರ ವರ್ಷ ಹಳೆಯದು. ಹೀಗಿರುವಾಗ ಹಿಂದಿ ಮಾತನಾಡುವ ಜನರು ಮನೆಯ ಮಾಲೀಕರು ಮತ್ತು ಕನ್ನಡ ಮಾತನಾಡುವ ಜನರು ಹೇಗೆ ಬಾಡಿಗೆದಾರರಾಗಲು ಸಾಧ್ಯ? ಅವರು ಒಂದು ಧರ್ಮದ ಜನರು ಮಾಲೀಕರಾಗಲು ಮತ್ತು ಉಳಿದ ಧರ್ಮದ ಜನರು ಬಾಡಿಗೆದಾರರಾಗುವಂತೆ ಮಾಡುತ್ತಿದ್ದಾರೆ. ನಾವು ಉಡುಪಿಯಲ್ಲಿ ಘೋಷಿಸುತ್ತೇವೆ. ಯಾರ್ಯಾರ ಪೂರ್ವಿಕರ ರಕ್ತ ಇಲ್ಲಿದೆಯೋ ಅವರೆಲ್ಲರೂ ಈ ದೇಶದ ಮಾಲೀಕರು. ನಾವು ಯಾರ ಗುಲಾಮರಲ್ಲ ಎಂದು ಯಾದವ್ ತಿಳಿಸಿದರು.

ಸೆಕ್ಯುಲರಿಸಂ ಎಂಬ ಪದ ಇಂದಿರಾಗಾಂಧಿ ಸಂವಿಧಾನದಲ್ಲಿ ಸೇರಿಸುವ ಮೊದಲು ಇರಲಿಲ್ಲ ಎಂದು ಅವರು ಹೇಳುತ್ತಾರೆ. ಸಮಾನತೆಯ ಹಕ್ಕು, ಸಾಂಸ್ಕೃತಿಕ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್‍ಯದ ಹಕ್ಕು 1950 ರ ಸಂವಿಧಾನದಲ್ಲಿಯೇ ಇತ್ತು. ಅದೇ ಸೆಕ್ಯುಲರಿಸಂ. ಸಂವಿಧಾನದ ಕರಡು ರಚನೆ ಸಂದರ್ಭದಲ್ಲಿಯೇ ಈ ಆಶಯಗಳನ್ನು ಸೇರಿಸಲಾಗಿತ್ತು, ಅವು ಸ್ವಾತಂತ್ರ್‍ಯ ಹೋರಾಟದ ಫಲಗಳು ಎಂದು ಯಾದವ್ ಹೇಳಿದರು.

ಗೌತಮ ಬುದ್ಧ ಮೈತ್ರಿ ಬಗ್ಗೆ ಹೇಳುತ್ತಾರೆ. ಅಶೋಕ ಮತ್ತು ಅಕ್ಬರ್ ಕೂಡ ಮೈತ್ರಿ ಬಗ್ಗೆ ಮಾತನಾಡುತ್ತಾರೆ. ಇದು ಭಾರತದ ಪರಂಪರೆ. ಸೆಕ್ಯುಲರಿಸಂ ಬ್ರಿಟಿಷರ ಕೊಡುಗೆ ಅಲ್ಲ. ಐದು ಸಾವಿರ ವರ್ಷಗಳಿಂದ ಈ ದೇಶ ಹೀಗೆಯೇ ನಡೆಯುತ್ತಿದೆ. ಸಿಂಹಾಸನದ ಮೇಲೆ ಕುಳಿತಿರುವವರು ತಾವೇ ದೇವರು ಎಂದು ನಂಬಿದ್ದಾರೆ. ಅವರ ಮುಂಚೆಯೂ ಈ ದೇಶ ಇತ್ತು, ಅವರ ನಂತರವೂ ಈ ದೇಶ ಇರುತ್ತದೆ. ಎಲ್ಲರನ್ನೂ ಗೌರವಿಸುವ, ಒಟ್ಟಿಗೆ ಕರೆದೊಯ್ಯುವುದು ಈ ದೇಶದ ಧರ್ಮ ಎಂಬುದನ್ನು ಅವರು ಮರೆಯಬಾರದು ಎಂದರು.

ಇಂದು ದೇಶದಲ್ಲಿ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ. ಕೇವಲ ಕಟ್ಟಡಗಳ ಮೇಲೆ ಅಲ್ಲ ಹಿಂದೂಸ್ಥಾನದ ಮೇಲೆ, ಸಂವಿಧಾನದ ಮೇಲೆ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ. ಮೀಡಿಯಾ ಪ್ರಾಮಾಣಿಕವಾಗಿದ್ದರೆ ಈ ಉಡುಪಿ ಸಮಾವೇಶ ನಾಳೆ ಮುಖಪುಟದ ಹೆಡ್ಲೈನ್ ಆಗುತ್ತದೆ. ನಾನು ಪತ್ರಕರ್ತರನ್ನು ದೂರುವುದಿಲ್ಲ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಯಾರ ಬಳಿ ಹಣ ಮತ್ತು ಅಧಿಕಾರವಿದೆಯೇ ಅವರು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದರು.

ನಮ್ಮ ಕೈಯಲ್ಲಿ ಈ ದೇಶದ ಮಣ್ಣಿದೆ. ಸೂಫಿ ಪರಂಪರೆಯಿದೆ. ಬುದ್ದ, ಬಸವಣ್ಣ, ಭಗತ್ ಸಿಂಗ್, ಮೌಲಾನ ಆಜಾದ್ ಇದ್ದಾರೆ. ಅಂಬೇಡ್ಕರ್‌ರವರ ಸಂವಿಧಾನವಿದೆ. ಪ್ರಶ್ನೆ ಇರುವುದು ನಾವು ಗೆದಿಲ್ಲ ಎನ್ನುವುದಲ್ಲ, ಹೇಗೆ ಮತ್ತು ಯಾವಾಗ ಗೆಲ್ಲುತ್ತೇವೆ ಎನ್ನುವುದಾಗಿದೆ. ದೊಡ್ಡ ಪರಂಪರೆ ನಮಗಿರುವುದರಿಂದ ಹೋರಾಡುತ್ತೇವೆ ಮತ್ತು ನಾವು ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ; ಏಳು ಬಣ್ಣಗಳ ಬಾವುಟ ಬೀಸಿ ಬಹುತ್ವ ಸಂದೇಶದೊಂದಿಗೆ ಉಡುಪಿಯ ಸಾಮರಸ್ಯ ನಡಿಗೆ ಆರಂಭ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕಮ್ಯೂನಿಸ್ಟ್ ಉಗ್ರರು ಯಾವಾಗಲೂ ಮಾಡಿರುವ ದಾಖಲೆ ದೇಶ ಒಡೆಯುವ ಕೆಲಸವೇ ಅಲ್ಲವೇ ಪ್ರಪಂಚದ ಇತಿಹಾಸದಲ್ಲಿ

  2. ದ್ವೇಷದ ಹೋರಾಟ ಹೇಗೆ ಇಡೀ ಪ್ರಪಂಚಕ್ಕೆ ಸುದ್ದಿ ಮಾದ್ಯಮಗಳಲ್ಲಿ ಬಿತ್ತರವಾಯಿತೋ ಹಾಗೆಯೆ ಸಾಮರಸ್ಯದ ಹೋರಾಟವೂ ಪ್ರಪಂಚದೆಲ್ಲೆಡೆ ಪ್ರಸಾರವಾಗಲಿ ಎಂದು ಆಶಿಸುತ್ತೇನೆ. ಪ್ರಜಾಪ್ರಭಹತ್ವ=ಜಾತ್ಯಾತೀತತೆ, ಇದಕ್ಕೆ ಮತ್ತೊಂದು ವಿವರಣೆಯ ಅವಶ್ಯಕತೆ ಇಲ್ಲ. ಪ್ರಜೆ ಎಂದರೆ ಜಾತಿ, ಧರ್ಮ, ಭಾಷೆ, ಪ್ರದೇಶ, ಇತರೆ ಎಲ್ಲವನ್ನೂ ಮೀರಿದ ಭಾರತೀಯ. ಆನಂತರ ಅವೆಲ್ಲವನ್ನೂ ಪರಿಗಣಿಸ ಬಹುದು. ಈ ವಿಚಾರದಲ್ಲಿ ವಿದ್ಯಾವಂತರನ್ನೂ ತಪ್ಪು ದಾರಿಗೆಳೆಯಲಾಗುತ್ತಿದೆ. ಇದರಿಂದ ದೇಶ ಸರ್ವನಾಶದ ಕಡೆಗೆ ಹೆಜ್ಜೆ ಇಡುತ್ತಿದೆ. ಈ ಸಾಮರಸ್ಯದ ಸಮಾವೇಷ ಸಹಬಾಳ್ವಗೆ ಮತ್ತು ದೇಶದ ಏಳಿಗೆಯ ಆರಂಬ. ಇದನ್ನು ಆಯೋಜಿಸಿದವರೆಲ್ಲರಿಗೂ ವಂದನೆಗಳು.

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...