ಸೌದಿ ಅರೇಬಿಯಾದ ಉದ್ಯೋಗ ವೀಸಾಕ್ಕೆ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವ ಭಾರತೀಯ ಕಾರ್ಮಿಕರು ವೃತ್ತಿಪರ ಮತ್ತು ಶೈಕ್ಷಣಿಕ ಅರ್ಹತೆಗಳ ಪೂರ್ವ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗಿದೆ. ಜನವರಿ 14 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.
ಸೌದಿ ಅರೇಬಿಯಾದಲ್ಲಿ ಬಾಂಗ್ಲಾದೇಶದ ನಂತರ ಭಾರತೀಯರು ಎರಡನೇ ಅತಿದೊಡ್ಡ ವಲಸಿಗ ಸಮುದಾಯವಾಗಿದ್ದು, 2.4 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಆರು ತಿಂಗಳ ಹಿಂದೆ ಪ್ರಸ್ತಾಪಿಸಲಾದ ಈ ನಿಯಮಗಳು, ಸೀಮಿತ ಸಂಖ್ಯೆಯ ಅರ್ಹ ತರಬೇತಿ ಕೇಂದ್ರಗಳಿಂದಾಗಿ ಭಾರತೀಯ ಕಾರ್ಮಿಕರ ಒಳಹರಿವನ್ನು ಕಡಿಮೆ ಮಾಡಿ, ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ವಿಷನ್-2030ಗೆ ಅನುಗುಣವಾಗಿ ಸೌದಿ ಅರೇಬಿಯವು ಕಾರ್ಮಿಕ ವಲಯದಲ್ಲಿ ಹಲವು ಸುಧಾರಣೆಗಳನ್ನು ತರಲು ಮುಂದಾಗಿದೆ. ಈ ಪೈಕಿ ವಲಸಿಗರಿಗೆ ಉದ್ಯೋಗ ಒಪ್ಪಂದ (Employment Contract) ಮಾಡಿಕೊಳ್ಳಲು ಸುಲಭ ವ್ಯವಸ್ಥೆ ಮಾಡಿಕೊಡುವುದು ಮತ್ತು ಕೆಲವು ಉದ್ಯೋಗಗಳಿಗೆ ಕಠಿಣ ಪ್ರಮಾಣೀಕರಣ ಜಾರಿಗೊಳಿಸುವುದು ಸೇರಿದೆ.
ಭಾರತದಲ್ಲಿನ ಸೌದಿ ಮಿಷನ್ ಹೊರಡಿಸಿದ ಸುತ್ತೋಲೆಯ ಪ್ರಕಾರ ಉದ್ಯೋಗ ವೀಸಾಗಳನ್ನು ನೀಡುವ ವೃತ್ತಿಪರ ಪರಿಶೀಲನಾ ಕಾರ್ಯವಿಧಾನಗಳು ಜನವರಿ 14 ರಿಂದ ಜಾರಿಗೆ ಬರಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದ್ದರಿಂದ, ಉದ್ಯೋಗ ವೀಸಾಗಳನ್ನು ನೀಡಲು ವೃತ್ತಿಪರ ಪರಿಶೀಲನೆಯು ಕಡ್ಡಾಯ ಅವಶ್ಯಕತೆಗಳಲ್ಲಿ ಒಂದಾಗಲಿದೆ ಎಂದು ಅದು ಹೇಳಿದೆ.
ಸೌದಿ ಅರೇಬಿಯವು ವಲಸಿಗರು ತಮ್ಮ ಇಕಾಮಾ ಅಥವಾ ರೆಸಿಡೆನ್ಸಿ ಪರ್ಮಿಟ್ಸ್ ಅನ್ನು ನವೀಕರಿಸುವುದು ಮತ್ತು ನಿರ್ಗಮನ ಮತ್ತು ಮರು-ಪ್ರವೇಶ ವೀಸಾಗಳನ್ನು ( exit and re-entry visas) ವಿಸ್ತರಿಸುವುದಕ್ಕಾಗಿ ನಿಯಮಗಳನ್ನು ಬದಲಾಯಿಸಿದೆ.
ಎಕ್ಸ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸೌದಿ ಅರೇಬಿಯಾದ ಪಾಸ್‌ಪೋರ್ಟ್ ಜನರಲ್ ಡೈರೆಕ್ಟರೇಟ್, “ವಲಸಿಗರ ಅವಲಂಬಿತರು ಮತ್ತು ದೇಶದ ಹೊರಗೆ ಇರುವ ಗೃಹ ಕಾರ್ಮಿಕರು ಈಗ ತಮ್ಮ ಇಕಾಮಾವನ್ನು ನವೀಕರಿಸಬಹುದು” ಎಂದು ಘೋಷಿಸಿದೆ.
ಸೌದಿಯ ಹೊರಗಿನ ವಲಸಿಗರು ಏಕ ಅಥವಾ ಬಹು ನಿರ್ಗಮನ ಮತ್ತು ಮರು-ಪ್ರವೇಶ ವೀಸಾಗಳ ಅವಧಿಯನ್ನು ವಿಸ್ತರಿಸಬಹುದು.
ಡಿಯಾಗೋ ಗಾರ್ಸಿಯಾ ದ್ವೀಪದ ಬಳಿ ಭಾರತೀಯ ಮೀನುಗಾರರನ್ನು ಬಂಧಿಸಿದ ಬ್ರಿಟಿಷ್ ನೌಕಾಪಡೆ


