1947ರಲ್ಲಿ ದೇಶದ ವಿಭಜನೆಗೆ ಕಾರಣರಾದವರು ಯಾರು ಎಂಬುದರ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದ್ದು, ಕಾಂಗ್ರೆಸ್ ವಿಡಿಯೊವೊಂದನ್ನು ಬಿಡುಗಡೆ ಮಾಡಿ ಬಿಜೆಪಿಗೆ ತಿರುಗೇಟು ನೀಡಿದೆ.
ಪಂಡಿತ್ ಜವಹರಲಾಲ್ ನೆಹರೂ ಅವರನ್ನು ಕೇಂದ್ರೀಕರಿಸಿ, ದೇಶ ವಿಭಜನೆಗೆ ಸಂಬಂಧಿಸಿದ ವಿಡಿಯೊವನ್ನು ಬಿಜೆಪಿ ಆಗಸ್ಟ್ 14ರಂದು ಬಿಡುಗಡೆ ಮಾಡಿತ್ತು. ಅದಕ್ಕೆ ಕಾಂಗ್ರೆಸ್ ವಿಡಿಯೊ ಮೂಲಕವೇ ಪ್ರತಿಕ್ರಿಯೆ ನೀಡಿದೆ.
14 अगस्त 1947 वो दिन है जब भारत की सदियों पुरानी संस्कृति को चंद लोगों ने काग़ज़ पर लकीरें खींच कर बाँट दिया और इस त्रासदी ने देश की आत्मा को रक्तरंजित कर दिया।
पंजाब को फाड़ा, सिंध उजाड़ा,
ढाका का भी माहौल बिगाड़ा,
कल तक था जो आंगन हमारा,
किसने वहां सरहद बनाई?#विभाजन_विभीषिका pic.twitter.com/bVfoOqmJwx— BJP (@BJP4India) August 14, 2022
ಬಿಜೆಪಿಯ ರಾಜಕೀಯ ಐಕಾನ್‌ಗಳಾದ ವಿನಾಯಕ ದಾಮೋದರ್ ಸಾವರ್ಕರ್ ಮತ್ತು ಎಸ್‌ಪಿ ಮುಖರ್ಜಿಯತ್ತ ಬೆರಳು ತೋರಿಸಿದ ಕಾಂಗ್ರೆಸ್ ದೇಶ ವಿಭಜನೆಗೆ ಇವರೇ ಕಾರಣ ಎಂದು ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎಸ್‌ಪಿ ಮುಖರ್ಜಿಯವರು ಬಂಗಾಳದ ವಿಭಜನೆಗೆ ಬೆಂಬಲವನ್ನು ತೋರಿಸಿದ ಮೂರು ದಶಕಗಳ ನಂತರ ಸಾವರ್ಕರ್ ಅವರು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮಂಡಿಸಿದರು ಎಂದು ಕಾಂಗ್ರೆಸ್ ತನ್ನ ವೀಡಿಯೊದಲ್ಲಿ ವಾದಿಸಿದೆ. ಸಾವರ್ಕರ್ ಮಂಡಿಸಿದ ದ್ವಿರಾಷ್ಟ್ರ ಸಿದ್ಧಾಂತವನ್ನು ನಂತರದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಮುಂದುವರಿಸಿದರು ಎಂದು ಕಾಂಗ್ರೆಸ್ ಆರೋಪಿಸಿದೆ.
“ಎಷ್ಟೇ ವಿಚಿತ್ರವಾಗಿ ಕಂಡರೂ ಸಾವರ್ಕರ್ ಮತ್ತು ಜಿನ್ನಾ ಅವರು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಪರಸ್ಪರ ವಿರೋಧಿಸುವ ಬದಲು ಪರಸ್ಪರ ಬೆಂಬಲಿಸಿದ್ದಾರೆ” ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿರುವುದಾಗಿ ವಿಡಿಯೊದಲ್ಲಿ ಉಲ್ಲೇಖಿಸಲಾಗಿದೆ.
हमारा लक्ष्य था- देश की आज़ादी और उनके इरादे थे- देश का विभाजन।
सत्ता में बैठकर वो आज भी वही कर रहे हैं और हम आज भी इस देश को उनके कुटिल इरादों से बचाने के लिए लड़ रहे हैं।
और हाँ… अंग्रेजों के मुख़बिर और माफीनामे के जनक कान खोलकर सुन लें- इरादे नापाक हैं और नाकाम किए जाएंगे। pic.twitter.com/elgQWaIr80
— Congress (@INCIndia) August 14, 2022
ಎರಡು ರಾಷ್ಟ್ರಗಳ ಸಿದ್ಧಾಂತದ ಮೇಲೆ ಮುಸ್ಲಿಂ ಲೀಗ್ ಅನ್ನು ಎದುರಿಸಬೇಕಾಗಿದ್ದ ಕಾಂಗ್ರೆಸ್ ನಾಯಕರು ರಾಷ್ಟ್ರದ ಜನರನ್ನು ಸಂಪರ್ಕಿಸದೆ ವಿಭಜನೆಯನ್ನು ಒಪ್ಪಿಕೊಂಡರು ಎಂದು ಬಿಜೆಪಿ ಆರೋಪಿಸಿದೆ. ಸಂಗ್ರಹ ಫೋಟೋಗಳನ್ನು ಬಳಸಲಾದ ವೀಡಿಯೊದಲ್ಲಿ ಜವಾಹರಲಾಲ್ ನೆಹರೂ ಮತ್ತು ಜಿನ್ನಾ ಅವರ ಫೋಟೋಗಳನ್ನೇ ಬಿಜೆಪಿ ಬಳಸಿದೆ.
“ಭಾರತದ ಸಾಂಸ್ಕೃತಿಕ ಪರಂಪರೆ, ನಾಗರಿಕತೆ, ಮೌಲ್ಯಗಳು, ತೀರ್ಥಯಾತ್ರೆಗಳ ಬಗ್ಗೆ ತಿಳಿದಿಲ್ಲದವರು, ಶತಮಾನಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಜನರ ನಡುವೆ ಕೇವಲ ಮೂರು ವಾರಗಳಲ್ಲಿ ಗಡಿಗಳನ್ನು ನಿರ್ಮಿಸಿದರು” ಎಂದು ಬಿಜೆಪಿ ದೂರಿದೆ.
ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆಗರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ , “ಆಗಸ್ಟ್ 14ರಂದು ವಿಭಜನೆಯ ಭೀಕರ ಸಂಸ್ಮರಣಾ ದಿನವನ್ನಾಗಿ ಆಚರಿಸುವುದು ಏತಕ್ಕೆ? ಪ್ರಸ್ತುತ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಐತಿಹಾಸಿಕ ಘಟನೆಯನ್ನು ಬಳಸಿಕೊಳ್ಳುವುದೇ ಪ್ರಧಾನಿಯವರ ನಿಜವಾದ ಉದ್ದೇಶವಾಗಿದೆ” ಎಂದು ಟೀಕಿಸಿದ್ದಾರೆ.
“ವಿಭಜನೆಯ ದುರಂತವನ್ನು ದ್ವೇಷ ಮತ್ತು ಪೂರ್ವಾಗ್ರಹವನ್ನು ಉತ್ತೇಜಿಸಲು ದುರುಪಯೋಗ ಮಾಡಿಕೊಳ್ಳಬಾರದು. ಸತ್ಯವೆಂದರೆ ಸಾವರ್ಕರ್ 2 ರಾಷ್ಟ್ರದ ಸಿದ್ಧಾಂತವನ್ನು ಹುಟ್ಟುಹಾಕಿದರು. ಜಿನ್ನಾ ಅದನ್ನು ಪರಿಪೂರ್ಣಗೊಳಿಸಿದರು. ಸರ್ದಾರ್ ಪಟೇಲ್ ಅವರು ಈ ಕುರಿತು ಬರೆಯುತ್ತಾ, -ನಾವು ವಿಭಜನೆಯನ್ನು ಒಪ್ಪಿಕೊಳ್ಳದಿದ್ದರೆ, ಭಾರತವು ಅನೇಕ ಭಾಗಗಳಾಗಿ ವಿಭಜನೆಯಾಗುತ್ತದೆ ಮತ್ತು ಸಂಪೂರ್ಣವಾಗಿ ನಾಶವಾಗುತ್ತದೆ- ಎಂದಿದ್ದಾರೆ” ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿರಿ: ಹರ್ ಘರ್ ತಿರಂಗ ಬಹಿಷ್ಕರಿಸಿ, ಕೇಸರಿ ಧ್ವಜ ಹಾರಿಸಿ: ಯತಿ ನರಸಿಂಗಾನಂದ
“ಆಧುನಿಕ ಕಾಲದ ಸಾವರ್ಕರ್‌ಗಳು ಮತ್ತು ಜಿನ್ನಾಗಳು ರಾಷ್ಟ್ರವನ್ನು ವಿಭಜಿಸುವ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದಾರೆ. ರಾಷ್ಟ್ರವನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ದಣಿವರಿಯದೆ ಹೋರಾಡಿದ ಗಾಂಧಿ, ನೆಹರೂ, ಪಟೇಲ್ ಮತ್ತು ಇತರ ಅನೇಕರ ಪರಂಪರೆಯನ್ನು ಕಾಂಗ್ರೆಸ್ ಎತ್ತಿಹಿಡಿಯುತ್ತದೆ. ದ್ವೇಷದ ರಾಜಕೀಯ ಸೋಲಲಿದೆ” ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ, “ಎರಡು ರಾಷ್ಟ್ರ ಸಿದ್ಧಾಂತವನ್ನು ಮೊದಲು ಪ್ರತಿಪಾದಿಸಿದ್ದು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್. ಅವರು 1876ರಲ್ಲಿ ಸಾವರ್ಕರ್ ಹುಟ್ಟುವ ಮೊದಲೇ (1883) ಈ ಕಲ್ಪನೆಯನ್ನು ನೀಡಿದ್ದರು. ಸಾವರ್ಕರ್ ಮತ್ತು ಹಿಂದೂ ಮಹಾಸಭಾವು ವಿಭಜನೆಯ ಕಲ್ಪನೆಯನ್ನು ಕೊನೆಯವರೆಗೂ ವಿರೋಧಿಸಿತು” ಎಂದು ವಾದಿಸಿದ್ದಾರೆ.



ಮನುವಾದಿಗಳ ಸುಳ್ಳು ಪ್ರಚಾರಕ್ಕೆ ಪ್ರಜ್ಞಾವಂತರು ಸೂಕ್ತ ರೀತಿಯಲ್ಲಿ ತಿರುಗೇಟು ನೀಡದಿದ್ದರೆ, ವರ್ತಮಾನ ಮತ್ತು ಬವಿಶ್ಯದಲ್ಲಿ, ಈ ಮಾನವ ವಿರೋಧಿ ಮನುವಾದಿಗಳು ಹೇಳಿದ್ದೇ “ನಿಜ” ಎಂಬಂತೆ ಆಗುತ್ತದೆ. ಏಕೆಂದರೆ ಇವರು ಒಂದು ಸುಳ್ಳನ್ನು ನೂರಾರು ಬಾರಿ ಹೇಳಿದರೆ, ಆ ಸುಳ್ಳನ್ನು ಜನ ‘ನಿಜ’ ಎಂದು ನಂಬುತ್ತಾರೆ ಎಂಬ ಹಿಟ್ಲರನ ಶಿಶ್ಯ ಗೋಬೆಲ್ಸನ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ.
It has proved that Savarkar and Jinna both are responsible for the division of the nation.