ಕೆನಡಾ ದೇಶದ ಬರ್ನಾಬಿ ನಗರವು ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಗೌರವಾರ್ಥವಾಗಿ ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ಡೇ” ಎಂದು ಘೋಷಿಸಿದೆ. ಗೌರಿ ಲಂಕೇಶ್ ಹತ್ಯೆಯಾಗಿ ಈ ಸೆಪ್ಟೆಂಬರ್‌ಗೆ ನಾಲ್ಕು ವರ್ಷಗಳು ತುಂಬುತ್ತದೆ. ಅವರನ್ನು ಬಲಪಂಥೀಯ ಉಗ್ರರು 2017 ರ ಸೆಪ್ಟೆಂಬರ್ 5 ರಂದು ಬೆಂಗಳೂರಿನ ಅವರ ನಿವಾಸದ ಮುಂದೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಬರ್ನಾಬಿ ನಗರವು ಈ ನಿರ್ಧಾರವನ್ನು ಆಗಸ್ಟ್ 27 ರ ಶುಕ್ರವಾರದಂದು ಘೋಷಿಸಿದೆ. ನಗರದ ಮೇಯರ್ ಮೈಕ್ ಹರ್ಲಿ ಅವರು ಹೊರಡಿಸಿರುವ ಘೋಷಣಾ ಪತ್ರದಲ್ಲಿ, “ಧೈರ್ಯಶಾಲಿ ಭಾರತೀಯ ಪತ್ರಕರ್ತೆ ಗೌರಿ ಲಂಕೇಶ್ ಸತ್ಯ ಮತ್ತು ನ್ಯಾಯದ ಪರವಾಗಿ ನಿಂತರು…ದಮನದ ವಿರುದ್ಧ ಮತ್ತು ಮಾನವ ಹಕ್ಕುಗಳ ಹೋರಾಟದಲ್ಲಿ ಅವರು ತಮ್ಮ ಜೀವವನ್ನೆ ಅರ್ಪಿಸಿದರು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸದ್ಯ ಯಾವ ಹಂತದಲ್ಲಿದೆ?
ಗೌರಿ ಲಂಕೇಶ್ ಅವರಿಗೆ ಮರಣೋತ್ತರವಾಗಿ ನೀಡಲ್ಪಡುತ್ತಿರುವ ಅಂತಾರಾಷ್ಟ್ರೀಯ ಗೌರವ ಇದು ಮೊದಲನೆಯದ್ದಲ್ಲ. ಅಕ್ಟೋಬರ್ 8, 2018 ರಂದು ಫ್ರಾನ್ಸ್‌ನ ಬೈಯಕ್ಸ್-ಕ್ಯಾಲ್ವಾಡೋಸ್ ಪ್ರಶಸ್ತಿಯನ್ನು ಗೌರಿ ಲಂಕೇಶ್‌ಗೆ ನೀಡಿ ಗೌರವಿಸಲಾಗಿತ್ತು.
ಬೈಯಕ್ಸ್-ಕ್ಯಾಲ್ವಾಡೋಸ್ ಪ್ರಶಸ್ತಿಗಳು ಯುದ್ಧ ವರದಿಗಾರರಿಗೆ 1994 ರಿಂದಲೂ ನೀಡುವ ಪ್ರಶಸ್ತಿಯಾಗಿದೆ. ಇದನ್ನು ಬೈಯಕ್ಸ್ ನಗರ ಮತ್ತು ಜನರಲ್ ಕೌನ್ಸಿಲ್ ಆಫ್ ಕ್ಯಾಲ್ವಾಡೋಸ್‌ನಿಂದ ಪ್ರತಿ ವರ್ಷ ನೀಡಲಾಗುತ್ತದೆ.
ಕಳೆದ ವರ್ಷ ಬರ್ನಾಬಿ ನಗರವು ಜಸ್ವಂತ್ ಸಿಂಗ್ ಖಲ್ರಾ ಅವರನ್ನು ಗೌರವಿಸಲು ಒಂದು ದಿನವನ್ನು ಘೋಷಿಸಿತ್ತು. ಮಾನವ ಹಕ್ಕುಗಳ ಹೋರಾಟಗಾರರಾಗಿರುವ ಅವರನ್ನು ಪೊಲೀಸರು ಕೊಂದು ಹಾಕಿದ್ದರು. ಖಲ್ರಾ ಅವರನ್ನು ಸೆಪ್ಟೆಂಬರ್ 6, 1995 ರಂದು ಅಮೃತಸರದಲ್ಲಿರುವ ಅವರ ಮನೆಯಿಂದ ಅಪಹರಿಸಿ, ನಂತರ ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ: ಗೌರಿ ಲಂಕೇಶ್ ಹುತಾತ್ಮ ದಿನ: ದೇಶಾದ್ಯಂತ ನೆನಪಿನ ಕಾರ್ಯಕ್ರಮಗಳು



??
ಸ್ವಾಗತಾರ್ಹ.
ಧೈರ್ಯಶಾಲಿ ಭಾರತೀಯ ಪತ್ರಕರ್ತೆ ಗೌರಿ ಲಂಕೇಶ್ Anta Heloke Nachike Agolwa..!