Homeಮುಖಪುಟಸಾಹಿತ್ಯ, ಸಾಂಸ್ಕೃತಿಕ ಹೆಗ್ಗುರುತಾಗಿದ್ದ ಶಿವಮೊಗ್ಗ ಕರ್ನಾಟಕ ಸಂಘದ ಮಾನ ಬೀದಿಗೆ ಬಂದಿದ್ದೇಕೆ!

ಸಾಹಿತ್ಯ, ಸಾಂಸ್ಕೃತಿಕ ಹೆಗ್ಗುರುತಾಗಿದ್ದ ಶಿವಮೊಗ್ಗ ಕರ್ನಾಟಕ ಸಂಘದ ಮಾನ ಬೀದಿಗೆ ಬಂದಿದ್ದೇಕೆ!

ಕರ್ನಾಟಕ ಸಂಘದ ನಿರಂತರ ಕಾರ್ಯಕ್ರಮಗಳ ಮೂಲಕ ಶಿವಮೊಗ್ಗೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ಗಟ್ಟಿಯಾಗಿ ಬೆಳದಿರುವುದಂತೂ ಸತ್ಯ. ಶಿವಮೊಗ್ಗೆಯ ಬಹುಪಾಲು ರಂಗತಂಡಗಳಿಗೆ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದು ಆಸರೆಯಾಗಿತ್ತು.

- Advertisement -
- Advertisement -

ರಾಜ್ಯದಾದ್ಯಂತ 65ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಿಂದ ಅಚರಿಸಲಾಗುತ್ತಿದೆ. ಕರೋನಾ ನಡುವೆಯೂ ಎಲ್ಲೆಡೆ ಕನ್ನಡದ ವಾತಾವರಣ ಸಂಭ್ರಮಿಸುತ್ತಿದೆ. ಆದರೆ, ಕನ್ನಡ ನುಡಿ ಸೇವೆ. ಸಾಂಸ್ಕೃತಿಕ ಹೆಗ್ಗಳಿಕೆಯಾಗಿ 90 ವರ್ಷಗಳ ಇತಿಹಾಸವಿರುವ ನಾಡಿನ ಪ್ರತಿಷ್ಟಿತ ಶಿವಮೊಗ್ಗೆಯ ಕರ್ನಾಟಕ ಸಂಘದ ಘನತೆ ಈಗ ಆಡಳಿತ ಮಂಡಳಿಯೊಳಗಿನ ಕಿತ್ತಾಟದಿಂದ ಬೀದಿಗೆ ಬಂದಿದೆ.

ನಾಡಿನ ಸಾಹಿತ್ಯ, ಸಾಂಸ್ಕೃತಿಕ ವಲಯಕ್ಕೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅನನ್ಯ. ಸಾಮಾಜಿಕ ಚಳವಳಿಯ ಜೊತೆಗೆ ಸಾಹಿತ್ಯ ಚಳವಳಿಯ ಧ್ಯೋತಕ ಈ ಜಿಲ್ಲೆ. ಈ ಹಿನ್ನಲೆಯಲ್ಲೇ ನಾಡಿನ ಆಸ್ತಿಯೆಂದೆ ಕರೆಯಲ್ಪಡುವ ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ. ರಾ. ಬೇಂದ್ರೆಯವರ ಸಲಹೆಯಂತೆ 8 ನೇ ನವೆಂಬರ್ 1930 ರಲ್ಲಿ ಶಿವಮೊಗ್ಗದಲ್ಲಿ ಕರ್ನಾಟಕ ಸಂಘವನ್ನು ಸ್ಥಾಪಿಸಲಾಯಿತು. ಇದೇ ನವೆಂಬರ್ 08 ಕ್ಕೆ ಬರೋಬ್ಬರಿ 90 ವರ್ಷಗಳು ತುಂಬಲಿದ್ದು, ನಾಡಿನ ಗಮನ ಸೆಳೆಯುವಂತೆ ಶತಮಾನೋತ್ಸವದ ಸಡಗರ, ಸಂಭ್ರಮ ಮನೆ ಮಾಡಬೇಕಿತ್ತು. ಆದರೀಗ ಇದೇ ಕರ್ನಾಟಕ ಸಂಘ, ಸ್ವಾರ್ಥ, ಜಾತಿ ಪಿತೂರಿಗಳಿಗೆ ತುತ್ತಾಗಿ ಸೂತಕದ ಛಾಯೆ ಆವರಿಸಿದೆ.

1936 ರವರೆಗೆ ಬಾಡಿಗೆ ಕಟ್ಟಡಗಳಲ್ಲಿ ನುಡಿ ಸೇವೆಯ ಕಾರ್ಯನಿರ್ವಹಿಸುತ್ತಿದ್ದ ಈ ಕರ್ನಾಟಕ ಸಂಘಕ್ಕೆ ಒಂದು ಸುಸಜ್ಜಿತವಾದ ಕಟ್ಟಡವನ್ನು ಒದಗಿಸಿಕೊಟ್ಟವರು ಹಸೂಡಿ ವೆಂಕಟ ಶಾಸ್ತ್ರಿಯವರು.

ಅಂದಿನ ಪುರಸಭೆ ಒದಗಿಸಿದ ಜಾಗದಲ್ಲಿ, 40 ರ ದಶಕದಲ್ಲಿ, 30 ಸಾವಿರ ರೂಪಾಯಿಗಳನ್ನು ವ್ಯಯಿಸಿ, ಈ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದರು. ಈ ಕಟ್ಟಡಕ್ಕೆ ಬಿ. ಎಂ. ಶ್ರೀಕಂಠಯ್ಯರವರು 1942 ರಲ್ಲಿ ಶಿಲಾನ್ಯಾಸ ಮಾಡಿದ್ದರು. 11 ನೇ ಡಿಸೆಂಬರ್ 1943 ರಂದು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದರು.

ದ. ರಾ. ಬೇಂದ್ರೆಯವರು ಸಲಹೆಯಂತೆ, ಈ ಕಟ್ಟಡಕ್ಕೆ ದಾನಿಗಳಾದ ‘ಹಸೂಡಿ ವೆಂಕಟ ಶಾಸ್ತ್ರಿ ಸಾಹಿತ್ಯ ಭವನ’ ಎಂದು ಹೆಸರಿಡಲಾಗಿದ್ದರೂ, ಕರ್ನಾಟಕ ಸಂಘ ಎಂದೇ ಜನಜನಿತ.

ಈ ಕರ್ನಾಟಕ ಸಂಘಕ್ಕೆ 1942 ರಲ್ಲಿ ದ. ರಾ. ಬೇಂದ್ರೆಯವರ ಅಧ್ಯಕ್ಷತೆಯಲ್ಲಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮುಂದೆ 1979 ರಲ್ಲಿ ಡಾ. ಎಸ್. ವಿ. ರಂಗಣ್ಣರವರ ಅಧ್ಯಕ್ಷತೆಯಲ್ಲಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ 1989 ರಲ್ಲಿ ಡಾ. ಎಸ್. ತಿಪ್ಪೇರುದ್ರ ಸ್ವಾಮಿಯವರ ಅಧ್ಯಕ್ಷತೆಯಲ್ಲಿನ ಮೂರನೇ ಶಿವಮೊಗ್ಗ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆಯೂ ಇದೆ.

ಕರ್ನಾಟಕ ಸಂಘದ ನಿರಂತರ ಕಾರ್ಯಕ್ರಮಗಳ ಮೂಲಕ ಶಿವಮೊಗ್ಗೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ಗಟ್ಟಿಯಾಗಿ ಬೆಳದಿರುವುದಂತೂ ಸತ್ಯ. ಶಿವಮೊಗ್ಗೆಯ ಬಹುಪಾಲು ರಂಗತಂಡಗಳಿಗೆ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ಕರ್ನಾಟಕ ಸಂಘವೇ ಆಸರೆಯಾಗಿತ್ತು.

ಈ ನಾಡಿನ ಸಾಹಿತ್ಯ ದಿಗ್ಗಜರ, ಉದಯೋನ್ಮುಖ ಕವಿ, ಕತೆಗಾರರ ಗ್ರಂಥ ಪ್ರಕಟಣೆ, ಗೌರವ ಸದಸ್ಯತ್ವ ಪ್ರದಾನ, ಪುಸ್ತಕ ಬಹುಮಾನ, ತಿಂಗಳ ಅತಿಥಿ, ನನ್ನ ಪ್ರೀತಿಯ ಪುಸ್ತಕ, ಸುಸಜ್ಜಿತ ಗ್ರಂಥಾಲಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ, ಕರ್ನಾಟಕ ಸಂಘವು ಇಡೀ ಮಲೆನಾಡು ಅಷ್ಟೇ ಅಲ್ಲ, ರಾಜ್ಯದಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿದೆ ಎಂದರೆ, ಖಂಡಿತಾ ಉತ್ಪ್ರೇಕ್ಷೆಯಲ್ಲ.

ಇಂತಹ ಕನ್ನಡ ಸೇವೆಯ ಘನತೆಯಾಗಿದ್ದ ಕರ್ನಾಟಕ ಸಂಘ ಇಂದು ವಿವಾದಕ್ಕೆ ತುತ್ತಾಗಿ ಹಿರಿಯ ಚೇತನಗಳ ಆಶಯಗಳನ್ನು ಮಣ್ಣುಪಾಲು ಮಾಡುವತ್ತಾ ಸಾಗಿದೆ. ಕರ್ನಾಟಕ ಸಂಘದ ಆಡಳಿತ ಹಿಡಿತಕ್ಕೆ ನಡೆದ ಹುನ್ನಾರ ದ ಫಲವಾಗಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯಲ್ಲೇ ಭುಗಿಲೆದ್ದ ಅಸಮಾಧಾನ ಅಧ್ಯಕ್ಷರೂ ಸೇರಿದಂತೆ ಮೂವರು ಪದಾಧಿಕಾರಿಗಳು ಹಾಗೂ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮೂರು ಸಿಬ್ಬಂದಿಯ ರಾಜೀನಾಮೆಯೊಂದಿಗೆ ಒಳಗೊಳಗೆ ಕುದಿಯುತ್ತಿದ್ದ ಹಗೆ ಸ್ಫೋಟಗೊಂಡಿದೆ.

ಹಿರಿಯ ಸಜ್ಜನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಓಂಕಾರಪ್ಪ ನೇತೃತ್ವದಲ್ಲಿ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಸಮಿತಿ ನಿಜಕ್ಕೂ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲೇ, ನಡೆದಿರುವ ಈ ಅನಿರೀಕ್ಷಿತ ಬೆಳವಣಿಗೆ ಕರ್ನಾಟಕ ಸಂಘದ ಅಭಿವೃದ್ಧಿಗೆ ಇದುವರೆಗೆ ಬೆವರು ಹರಿಸಿದವರಿಗೆ ಬೇಸರ ಉಂಟು ಮಾಡಿದೆ. ಕರ್ನಾಟಕ ಸಂಘ ಉಪಾಧ್ಯಕ್ಷ ಉದಯಶಂಕರ ಶಾಸ್ತ್ರಿ ಮತ್ತವರ ಪಟಾಲಂನ ಹಿತಾಸಕ್ತಿ ಈಗ ಕರ್ನಾಟಕ ಸಂಘವನ್ನು ಮನಸ್ಸೋಃಇಚ್ಛೆ ಆಡಳಿತಕ್ಕೆ ಅಡ್ಡೆಯನ್ನಾಗಿಸಿಕೊಳ್ಳುವ ಸಂಚು ನಡೆಸಿರುವುದು ಸಾಹಿತ್ಯ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.

ಮಳೆಗಾಲದ ಸಂದರ್ಭದಲ್ಲಿ ಸೋರುತ್ತಿದ್ದ ಕರ್ನಾಟಕ ಸಂಘದ ಮೇಲ್ಚಾವಣಿಯ ನವೀಕರಣ ಕಾಮಗಾರಿಯೇ ಸಮಿತಿಯೊಳಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗಲು ಕಾರಣ ಎನ್ನಲಾಗುತ್ತಿದೆ. ಕರ್ನಾಟಕ ಸಂಘದ ಮೇಲ್ಚಾವಣಿ ಅಷ್ಟೇ ಸೋರುತ್ತಿಲ್ಲ. ಬದಲಾಗಿ ಪಟ್ಟಭದ್ರ ಹಿತಾಸಕ್ತಿಗಳ ಮನಸ್ಸೂ ಕೂಡಾ ಸೋರಲಾರಂಭಿಸಿರುವುದು ನಿಜಕ್ಕೂ ಕೂಡಾ ವಿಪರ್ಯಾಸದ ಸಂಗತಿ. ಈ ನವೀಕರಣ ಕಾಮಗಾರಿಯಲ್ಲಿ ಮಿತಿಮೀರಿದ ಹಣದ ಅಪವ್ಯಯ ತಡೆಗಟ್ಟಲು ಅಧ್ಯಕ್ಷ ಪ್ರೊ.ಕೆ.ಓಂಕಾರಪ್ಪ, ಖಚಾಂಚಿ ಕೆ.ಜಿ.ವೆಂಕಟೇಶ್, ಗೌರವ ಕಾರ್ಯದರ್ಶಿ ಪ್ರೊ.ಎಚ್.ಎಸ್.ನಾಗಭೂಷಣ ಮುಂದಾಗಿದ್ದು, ಇದು ಉಪಾಧ್ಯಕ್ಷ ಉದಯಶಂಕರ ಶಾಸ್ತ್ರಿ ಮತ್ತವರ ಟೀಮ್ ಗೆ ಅಪಥ್ಯವಾಗಿತ್ತು.

ಆರ್ಥಿಕ ಶಿಸ್ತನ್ನು ಸಹಿಸದ ಗುಂಪು ಸಿಬ್ಬಂದಿ ಹಾಗೂ ಪದಾಧಿಕಾರಿಗಳ ನಡುವೆ ವೈಮನಸ್ಸು ಬೆಳೆಯುವಂತೆ ನೋಡಿಕೊಂಡಿತಲ್ಲದೆ , ಪದಾಧಿಕಾರಿಗಳ ವಿರುದ್ಧವೆ ಸಿಬ್ಬಂದಿಗಳ ಮೂಲಕ ಜಾತಿ ನಿಂದನೆ ದೂರು ದಾಖಲಿಸುವ ಷಡ್ಯಂತ್ರ ವೂ ನಡೆದು ಜಾತ್ಯಾತೀತವಾಗಿ ಸಾಹಿತ್ಯಿಕ ಕಾರ್ಯಕ್ರಮ ರೂಪಿಸುತ್ತಿದ್ದ ಸಂಸ್ಥೆಯೊಳಗೆ ಜಾತಿಯ ವಿಷ ಬೀಜ ಬಿತ್ತಲಾಯಿತು. ಅಷ್ಟೇ ಅಲ್ಲ, ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೋರ್ವರ ಬಗ್ಗೆ ಕೂಡಾ ಅನಗತ್ಯವಾಗಿ ನಿಂದನೆಯ ಪ್ರಸ್ತಾಪ ಮಾಡಲಾಗಿತ್ತು. ಆ ಸಿಬ್ಬಂದಿಯನ್ನು ಸಂಬಂಧ ಇಲ್ಲದಿದ್ದರೂ ಸಹ ಪ್ರಸ್ತಾಪಿಸಲಾಗಿತ್ತು. ಜೊತೆಗೆ ಹಿರಿಯ ಸಿಬ್ಬಂದಿಗಳ ಬಗ್ಗೆ ಅವಾಚ್ಯವಾಗಿ ಬರೆಯಲಾಗಿತ್ತು. ಈ ಎಲ್ಲಾ ಸಂಗತಿಗಳನ್ನು ಸಹ ಪೂರ್ವಾಗ್ರಹ ಪೀಡಿತವಾಗಿಯೇ ಬರೆದಿದ್ದು, ಇದಕ್ಕೆ ಸಂಘದ ಪದಾಧಿಕಾರಿಯೋರ್ವರ ಚಿತಾವಣೆ ಕೂಡಾ ಇದೆ ಎಂದೇ ಹೇಳಲಾಗಿದೆ.

ಕರ್ನಾಟಕ ಸಂಘದ ಯಾವ ಚಟುವಟಿಕೆಯಲ್ಲೂ ಭಾಗವಹಿಸದ, ನವೀಕರಣ ಸಂದರ್ಭದಲ್ಲೂ ಮೌನವಾಗಿದ್ದ ಸಂಘದ ಉಪಾಧ್ಯಕ್ಷ ಉದಯಶಂಕರ ಶಾಸ್ತ್ರಿ ಏಕಾಏಕಿ ಸಕ್ರಿಯರಾಗಿದ್ದು, ತಮ್ಮ ಪೂರ್ವಿಕರಾದ ಹಸೊಡಿ ವೆಂಕಟಶಾಸ್ತ್ರಿ ಅವರು ಕರ್ನಾಟಕ ಸಂಘ ಭವನ ನಿರ‍್ಮಾಣಕ್ಕೆ ಕಾರಣ ಕರ್ತರು ಎಂಬುದನ್ನೆ ಮುಂದಿಟ್ಟುಕೊಂಡು ಸಂಘದ ಆಡಳಿತದಲ್ಲಿ ಸರ್ವಾಧಿಕಾರಿಧೋರಣೆ ಮೆರೆಯುವ ಆ ಮೂಲಕ ಸಂಘವನ್ನು ತಮ್ಮದೇ ಗುಂಪಿನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನಗಳು ಮುಂದುವರೆದಿವೆ ಎಂಬ ಆರೋಪಗಳು ಸಾಹಿತ್ಯ ವಲಯದಲ್ಲೇ ಕೇಳಿ ಬರುತ್ತಿದೆ.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಪಾಧ್ಯಕ್ಷರಾಗಿರುವ ಉದಯಶಂಕರ ಶಾಸ್ತ್ರಿ ಅವರ ಸರ್ವಾಧಿಕಾರಿ ಧೋರಣೆ ಪ್ರಶ್ನಿಸಿದ್ದರಿಂದಲೇ ಸಂಘದ ಗೌರವ ಕಾರ್ಯದರ್ಶಿ ಡಾ. ಹೆಚ್. ಎಸ್ ನಾಗಭೂಷಣ. ಖಜಾಂಚಿ ಕೆ.ಜಿ ವೆಂಕಟೇಶ್ ಹಾಗೂ ಮೂವರು ಸಿಬ್ಬಂದಿಗಳ ರಾಜೀನಾಮೆಯೊಂದಿಗೆ ಒಂದು ಹಂತ ತಲುಪಿದ್ದು, ಇದನ್ನೆ ಬಯಸಿದ್ದ ಸಾಹಿತ್ಯ, ಸಂಸ್ಕೃತಿಯ ಗಂಧಗಾಳಿ ಗೊತ್ತಿಲ್ಲದ ಉದಯಶಂಕರಶಾಸ್ತ್ರಿ ತಾವೇ ಸಂಘದ ಅಧ್ಯಕ್ಷರೆಂಬುದನ್ನು ಸ್ವಯಂ ಘೋಷಿಸಿಕೊಂಡು ಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಿಕೊಳ್ಳುವ ಮೂಲಕ ಸಂಘವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ನಾಡಿನ ಸಾಹಿತ್ಯ, ಸಾಂಸ್ಕೃತಿಕ ಹೆಗ್ಗುರುತಾಗಿ ಹಿರಿಮೆ ಹೊಂದಿದ್ದ ಶಿವಮೊಗ್ಗ ಕರ್ನಾಟಕ ಸಂಘದ ಮಾನ ಹಾದಿ ಬೀದಿಯಲ್ಲಿ ಹರಾಜಾಗುತ್ತಿದೆ.

“ಕರ್ನಾಟಕ ಸಂಘದ ಈಗಿನ ಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಇಷ್ಟವಿರಲಿಲ್ಲ. ಅಲ್ಲಿನ ವ್ಯವಸ್ಥೆಯಲ್ಲಿ ಮುಕ್ತವಾಗಿ ಕೆಲಸ ಮಾಡಲಾರದ ಸ್ಥಿತಿಯಿದೆ. ಅದೇ ಸಮಯಕ್ಕೆ ನನಗೆ ಆರೋಗ್ಯ ಸಮಸ್ಯೆಯೂ ಇರುವುದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ.” -ಪ್ರೊ.ಕೆ.ಓಂಕಾರಪ್ಪ, ಸಾಹಿತಿ.
—–

“ಕರ್ನಾಟಕ ಸಂಘದ ನವೀಕರಣ ಸಂದರ್ಭದಲ್ಲಿ ನಮ್ಮ ವಿರುದ್ಧ ಪಿತೂರಿ ಹೆಚ್ಚಾಯಿತು. ಕಳೆದ ಎರಡು ವರ್ಷಗಳಿಂದ ಎಲ್ಲವನ್ನೂ ಸಂಯಮದಿಂದ ನಿಭಾಯಿಸಿದ್ದೇನೆ. ಆದರೆ ಇನ್ನು ಪಿತೂರಿಯನ್ನು ಸಹಿಸುವುದು ಸಾದ್ಯವಿಲ್ಲ. ನಡೆಯುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾದ್ಯವಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ.” -ಪ್ರೊ.ಎಚ್.ಎಸ್.ನಾಗಭೂಷಣ.

                                                              —-

  • ವರದಿ: ಎನ್.ರವಿಕುಮಾರ್ ಟೆಲೆಕ್ಸ್

ಇದನ್ನೂ ಓದಿ: ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಿಸದ ಸರ್ಕಾರದ ನಡೆಗೆ ಕನ್ನಡಿಗರ ಆಕ್ರೋಶ: ಟ್ವಿಟರ್ ಆಂದೋಲನಕ್ಕೆ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...